Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Tuesday, March 26, 2019

ರಾಜ್ಯ ಕಾಂಗ್ರೆಸ್​ನ 13 ಅಭ್ಯರ್ಥಿಗಳ ಪಟ್ಟಿ ಫೈನಲ್​

0

‘ಲೋಕ’ಸಮರಕ್ಕೆ ರಾಜ್ಯ ಕಾಂಗ್ರೆಸ್​ನ 13 ರಣಕಲಿಗಳ ಪಟ್ಟಿ ಫೈನಲ್ ಆಗಿದೆ. ಒಟ್ಟು 28 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳನ್ನು ದೋಸ್ತಿ ಜೆಡಿಎಸ್​ಗೆ ಬಿಟ್ಟು ಕೊಟ್ಟಿರುವುದರಿಂದ ಕಾಂಗ್ರೆಸ್ ಇನ್ನು 7 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಮಾತ್ರ ಬಾಕಿ ಉಳಿದಿದೆ.
13 ರಣಕಲಿಗಳು ಯಾರ‍್ಯಾರು?
ಚಿಕ್ಕಬಳ್ಳಾಪುರ – ವೀರಪ್ಪ ಮೊಯ್ಲಿ
ಕೋಲಾರ – ಕೆ.ಎಚ್​.ಮುನಿಯಪ್ಪ
ರಾಯಚೂರು – ಬಿ.ವಿ.ನಾಯ್ಕ್​​
ಬೆಂಗಳೂರು ಕೇಂದ್ರ – ರಿಜ್ವಾನ್ ಅರ್ಷದ್
ಬಾಗಲಕೋಟೆ – ವೀಣಾ ಕಾಶಪ್ಪನವರ್​
ಬೀದರ್ – ಈಶ್ವರ್ ಖಂಡ್ರೆ
ಕಲಬುರಗಿ – ಮಲ್ಲಿಕಾರ್ಜುನ್ ಖರ್ಗೆ
ಬೆಂಗಳೂರು ಗ್ರಾಮಾಂತರ – ಡಿ.ಕೆ.ಸುರೇಶ್
ಚಾಮರಾಜ ನಗರ – ಧ್ರುವ ನಾರಾಯಣ್​​
ಬಳ್ಳಾರಿ – ವಿ.ಎಸ್​.ಉಗ್ರಪ್ಪ
ಚಿಕ್ಕೋಡಿ – ಪ್ರಕಾಶ್ ಹುಕ್ಕೇರಿ
ಮೈಸೂರು-ಕೊಡಗು – ವಿಜಯ್ ಶಂಕರ್​
ಚಿತ್ರದುರ್ಗ – ಬಿ.ಎನ್​​.ಚಂದ್ರಪ್ಪ

ಕರ್ನಾಟಕದಿಂದ ಸ್ಪರ್ಧಿಸುತ್ತಿರೋ ಹೊರಗಿನ ನಾಯಕರಲ್ಲಿ ಮೋದಿಯೇ ಮೊದಲಿಗರಲ್ಲ..!

0

ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದಿಂದ ‘ಲೋಕ’ಕಣಕ್ಕಿಳಿಯುತ್ತಿದ್ದಾರೆ. ಬೆಂಗಳೂರು ದಕ್ಷಿಣದಿಂದ ಮೋದಿ ಸ್ಪರ್ಧಿಸುತ್ತಿರುವ ಸೂಪರ್ ಎಕ್ಸ್​ಕ್ಲೂಸಿವ್ ನ್ಯೂಸ್ ಅನ್ನು ನಿಮ್ಮ ಪವರ್​ ಟಿವಿ ಬ್ರೇಕ್​ ಮಾಡಿದೆ.
ಅಂದಹಾಗೆ ಕರ್ನಾಟಕದಿಂದ ಸ್ಪರ್ಧಿಸುತ್ತಿರುವವರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಮೊದಲಿಗರಲ್ಲ. ಈ ಹಿಂದೆಯೂ ಹೊರಗಿನ ನಾಯಕರು ಕರ್ನಾಟಕದಿಂದ ಸ್ಪರ್ಧಿಸಿದ್ದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1978ರಲ್ಲಿ ನಡೆದ ಉಪಚುನಾವಣೆಯಲ್ಲಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಅಂದು ಡಿ.ಬಿ ಚಂದ್ರೇಗೌಡರು ಇಂದಿರಾ ಗಾಂಧಿ ಅವರಿಗೆ ಸೀಟು ಬಿಟ್ಟುಕೊಟ್ಟು ಚಿಕ್ಕಮಗಳೂರಿಂದ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದರು.
ಕಾಂಗ್ರೆಸ್​ ನಾಯಕಿ ಸೋನಿಯಾಗಾಂಧಿ ಅವರು 1999ರಲ್ಲಿ ನಮ್ಮ ಕರ್ನಾಟಕದ ಬಳ್ಳಾರಿ ಮತ್ತು ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸಿ ಎರಡೂ ಕಡೆ ಗೆಲುವು ಸಾಧಿಸಿದ್ರು. ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸುಷ್ಮಾ ಸ್ವರಾಜ್​ ಅವರು ಕಣದಲ್ಲಿದ್ದರು. ಸೋನಿಯಾ ಅವರ ಎದುರು ಸುಷ್ಮಾ ಸ್ವರಾಜ್ ಪರಾಭವಗೊಂಡಿದ್ದರು.
ಇಂದಿರಾ ಗಾಂಧಿ ಅವರ ಆಪ್ತ ಸಿ.ಎಂ ಸ್ಟಿಫನ್ ಅವರು 1980ರಲ್ಲಿ ಕಲಬುರಗಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 1980ರಲ್ಲಿ ಕಲಬುರಗಿಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದ ಧರಂಸಿಂಗ್ ಅವರು ಚುನಾವಣೆಯಲ್ಲಿ ಗೆದ್ದು ಕೇವಲ ಒಂದೇ ಒಂದು ತಿಂಗಳಿಗೆ ರಾಜೀನಾಮೆ ನೀಡಿ ಸ್ಟಿಫನ್ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು.

ಪ್ರಜ್ವಲ್ ನಾಮಪತ್ರ ಸಲ್ಲಿಕೆ – ಸೂಚಕರಾಗಿ ಸಹಿ ಹಾಕಿದ್ರು ಸಿಎಂ..!

0

ಹಾಸನ: ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್​ ರೇವಣ್ಣ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಪ್ರಜ್ವಲ್ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದ್ದಾರೆ.

ಸಾವಿರಾರು ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರಜ್ವಲ್ ಅವರು ಪಕ್ಷದ ವರಿಷ್ಠರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಪ್ರಜ್ವಲ್​ ಬೆಂಬಲಿಗರು ಭರ್ಜರಿ ರೋಡ್ ಶೋ ನಡೆಸಿದರು. ಇದರಲ್ಲಿ ಕಾಂಗ್ರೆಸ್​ ಕಾರ್ಯಕರ್ತರೂ ಭಾಗಿಯಾಗಿದ್ದರು.  ಈ ಸಂದರ್ಭ ಮಾಜಿ ಪ್ರಧಾನಿ ದೇವೇಗೌಡರು, ಸಚಿವ ರೇವಣ್ಣ, ಭವಾನಿ ರೇವಣ್ಣ, ಜಿ.ಟಿ.ದೇವೇಗೌಡ, ಶಾಸಕರಾದ ಎ.ಟಿ.ರಾಮಸ್ವಾಮಿ, ಕುಮಾರಸ್ವಾಮಿ, ಲಿಂಗೇಶ್, MLC ಗೋಪಾಲಸ್ವಾಮಿ, ಗಾಯತ್ರಿ ಶಾಂತೇಗೌಡ ಭಾಗಿಯಾಗಿದ್ದಾರೆ. 

ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್ ಬಿಜೆಪಿಗೆ ಸೇರ್ಪಡೆ..!

0

ನವದೆಹಲಿ: ಲೋಕಸಭಾ ಚುನಾವಣೆ ಸಮೀಪದಲ್ಲಿರುವಾಗಲೇ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. “ಪ್ರಧಾನಿ ಮೋದಿ ಅವರ ದೇಶದ ಕುರಿತಾದ ನಿಲುವುಗಳಿಂದಾಗಿ ನಾನು ಬಿಜೆಪಿ ಸೇರುವ ನಿರ್ಧಾರ ಮಾಡಿದೆ. ದೇಶ ಸೇವೆ ಮಾಡಲು ಇದೊಂದು ಉತ್ತಮ ವೇದಿಕೆ” ಅಂತ ಗೌತಮ್ ಗಂಭೀರ್​ ಹೇಳಿದ್ದಾರೆ.

ಕೇಂದ್ರ ಸಚಿವರಾದ ಅರುಣ್​ ಜೇಟ್ಲಿ, ರವಿ ಶಂಕರ್ ಪ್ರಸಾದ್​ ಅವರ ಸಮ್ಮುಖದಲ್ಲಿ ಗೌತಮ್ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಿನ್ನೆಯಷ್ಟೇ ಬಿಜೆಪಿ ವರಿಷ್ಠರು ಸುದ್ದಿಗೋಷ್ಠಿ ನಡೆಸಿ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಮಾಡಿದ್ದರು. ಇನ್ನೂ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲು ಬಾಕಿ ಇದ್ದು, ಗೌತಮ್​ ಗಂಭೀರ್​ ಅವರು ಬಿಜೆಪಿ ಸೇರ್ಪಡೆಯಾಗಿರುವುದು ಮಹತ್ವ ಪಡೆದಿದೆ. ಲೋಕಸಭಾ ಚುನಾವಣೆಯಲ್ಲೂ ಗೌತಮ್​ ಗಂಭೀರ್ ದೆಹಲಿಯಿಂದ​ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.

ಕರ್ನಾಟಕದಿಂದ ಪ್ರಧಾನಿ ಮೋದಿ ಸ್ಪರ್ಧೆ..! ಕ್ಷೇತ್ರ ಯಾವ್ದು ಗೊತ್ತಾ?

0

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಕರ್ನಾಟಕದಿಂದ ಸ್ಪರ್ಧೆ ಮಾಡಲಿದ್ದಾರೆ ಅನ್ನೋ ಸೂಪರ್ ಡೂಪರ್ ಎಕ್ಸ್​ಕ್ಲೂಸಿವ್​ ನ್ಯೂಸ್​ ಅನ್ನು ಪವರ್​ ಟಿವಿ ಬ್ರೇಕ್ ಮಾಡಿದೆ.
ಇದು ಲೋಕಸಭಾ ಚುನಾವಣೆಯ ಅತೀ ದೊಡ್ಡ ಎಕ್ಸ್​ಕ್ಲೂಸಿವ್​ ಸುದ್ದಿಯಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮೋದಿ ಕಣಕ್ಕೆ ಇಳಿಯುತ್ತಿದ್ದಾರೆ. ಇಂದು ಸಂಜೆ ವೇಳೆಗೆ ಅಧಿಕೃತ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ.
ಬೆಂಗಳೂರು ದಕ್ಷಿಣ ಬಿಜೆಪಿಯ ಭದ್ರಕೋಟೆ. ಇದು ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್​ ಕುಮಾರ್ ಅವರು 1996ರಿಂದ 2014ರವರೆಗೆ ಸತತವಾಗಿ ಜಯ ಸಾಧಸಿದ್ದ ಕ್ಷೇತ್ರ.
ಮೋದಿ ಸ್ಪರ್ಧೆ ಮೂಲಕ ‘ಮೈತ್ರಿ’ ಪಾಳಯಕ್ಕೆ ಬಿಜೆಪಿ ಸವಾಲೆಸೆದಿದೆ. ಕರ್ನಾಟಕದಿಂದ ಮೋದಿ ಕಣಕ್ಕಿಳಿಯುವ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬಲಪಡಿಸುವ ರಣತಂತ್ರ ಬಿಜೆಪಿಯದ್ದಾಗಿದೆ.
ಬೆಂಗಳೂರು ದಕ್ಷಿಣದಿಂದ ದಿ.ಅನಂತ್​ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ​ಕುಮಾರ್​ ಅವರು ಕಣಕ್ಕಿಳಿಯುತ್ತಾರೆ ಅನ್ನೋದು ಬಹುತೇಕ ಕನ್ಫರ್ಮ್ ಆಗಿತ್ತು. ಹೈಕಮಾಂಡ್​ಗೆ ರಾಜ್ಯ ನಾಯಕರು ತೇಜಸ್ವಿನಿ ಅನಂತ್​ಕುಮಾರ್​ ಅವರ ಹೆಸರನ್ನೇ ನೀಡಿದ್ದರು. ಆದರೆ, ನಿನ್ನೆ ಬಿಡುಗಡೆಯಾದ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಈ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಕಣಕ್ಕಿಳಿಯುವುದರಿಂದ ನಿನ್ನೆ ಅಭ್ಯರ್ಥಿಯ ಹೆಸರನ್ನು ಅನೌನ್ಸ್ ಮಾಡಿರಲಿಲ್ಲ. ಇಂದು ಮೋದಿ ಸ್ಪರ್ಧೆ ಘೋಷಣೆ ಆಗಲಿದೆ.

ರಾಜ್ಯದ ಬಿಜೆಪಿ ರಣಕಲಿಗಳು ಯಾರ‍್ಯಾರು..? ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ..!

0

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೇಶಾದ್ಯಂತ ಒಟ್ಟು 543 ಕ್ಷೇತ್ರಗಳ ಪೈಕಿ 184 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ 21 ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ. ಅಲ್ಲಿ ಬಿಜೆಪಿಯ ಕರಡಿ ಸಂಗಣ್ಣ ಹಾಲಿ ಸಂಸದರಾಗಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್​ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್​ ಕುಮಾರ್​ ಅವರೇ ಅಭ್ಯರ್ಥಿ ಎನ್ನಲಾಗಿತ್ತು. ಆದರೆ ಅವರ ಹೆಸರನ್ನೂ ಘೋಷಿಸಿಲ್ಲ. ನಿನ್ನೆ ಮೊನ್ನೆ ಪಕ್ಷಕ್ಕೆ ಸೇರಿರುವ ಉಮೇಶ್ ಜಾಧವ್, ಎ. ಮಂಜು ಅವರಿಗೆ ಪಕ್ಷ ಮಣೆ ಹಾಕಿದೆ. ಆದ್ರೆ, ಪಕ್ಷಕ್ಕಾಗಿ ಹತ್ತಾರು ವರ್ಷದಿಂದ ದುಡಿದವರಿಗೆ ಟಿಕೆಟ್ ನೀಡಿಲ್ಲ ಅನ್ನೋ ಆರೋಪಕ್ಕೂ ಪಕ್ಷ ತುತ್ತಾಗಿದೆ. ಇನ್ನು ಮಂಡ್ಯ ರಣಕಣದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಮರನಾಥ್ ಅವರಿಗೆ ಬೆಂಬಲ ಸೂಚಿಸುವುದು ಬಹುತೇಕ ಖಚಿತ.

ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ:

ಬೆಂಗಳೂರು ಉತ್ತರ : ಡಿ.ವಿ.ಸದಾನಂದ ಗೌಡ

ಬೆಂಗಳೂರು ಕೇಂದ್ರ : ಪಿ.ಸಿ. ಮೋಹನ್

ತುಮಕೂರು : ಜಿ.ಎಸ್.ಬಸವರಾಜ್

ಉಡುಪಿ-ಚಿಕ್ಕಮಗಳೂರು : ಶೋಭಾ ಕರಂದ್ಲಾಜೆ

ಚಿಕ್ಕಬಳ್ಳಾಪುರ : ಬಿ.ಎನ್. ಬಚ್ಚೇಗೌಡ

ಬೀದರ್ : ಭಗವಂತ್​ ಖೂಬಾ

ಹಾವೇರಿ : ಶಿವಕುಮಾರ್‌ ಉದಾಸಿ

ಬಾಗಲಕೋಟೆ : ಪಿ.ಸಿ.ಗದ್ದೀಗೌಡರ್

ಬೆಳಗಾವಿ : ಸುರೇಶ್ ಅಂಗಡಿ

ದಕ್ಷಿಣ ಕನ್ನಡ : ನಳಿನ್ ಕುಮಾರ್ ಕಟೀಲ್

ಮೈಸೂರು-ಕೊಡಗು: ಪ್ರತಾಪ್ ಸಿಂಹ

ಕಲಬುರಗಿ: ಡಾ. ಉಮೇಶ್ ಜಾಧವ್

ವಿಜಯಪುರ: ರಮೇಶ್ ಜಿಗಜಿಣಗಿ

ಶಿವಮೊಗ್ಗ: ಬಿ.ವೈ.ರಾಘವೇಂದ್ರ

ಧಾರವಾಡ: ಪ್ರಹ್ಲಾದ್ ಜೋಶಿ

ಬಳ್ಳಾರಿ: ದೇವೇಂದ್ರಪ್ಪ

ದಾವಣಗೆರೆ: ಜಿ.ಎಂ. ಸಿದ್ದೇಶ್ವರ್​

ಚಿತ್ರದುರ್ಗ: ನಾರಾಯಣಸ್ವಾಮಿ

ಹಾಸನ: ಎ.ಮಂಜು

ಚಾಮರಾಜನಗರ: ಶ್ರೀನಿವಾಸ್ ಪ್ರಸಾದ್

ಉತ್ತರ ಕನ್ನಡ: ಅನಂತ್​ಕುಮಾರ್ ಹೆಗಡೆ

ಪಟ್ಟಿ ರಿಲೀಸ್ ಆಗದ 7 ಕ್ಷೇತ್ರಗಳು

1) ಬೆಂಗಳೂರು ದಕ್ಷಿಣ

2) ಬೆಂಗಳೂರು ಗ್ರಾಮಾಂತರ

3) ರಾಯಚೂರು

4) ಚಿಕ್ಕೋಡಿ

5) ಕೋಲಾರ

6) ಕೊಪ್ಪಳ

7) ಮಂಡ್ಯ 

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ದಿ. ಅನಂತಕುಮಾರ್​ ಪತ್ನಿ ತೇಜಸ್ವಿನಿ ಅಭ್ಯರ್ಥಿ ಎನ್ನಲಾಗಿತ್ತು. ಆದರೆ ಅಭ್ಯರ್ಥಿ ಪಟ್ಟಿಯಲ್ಲಿ ಅವರ ಹೆಸರಿನ್ನೂ ಫೈನಲ್ ಆಗಿಲ್ಲ. ಬೆಂಗಳೂರು ಗ್ರಾಮಾಂತರದಿಂದ ನಿಶಾ ಯೋಗೇಶ್ವರ್, ರಾಯಚೂರಿನಿಂದ ಅಮರೇಗೌಡ ನಾಯಕ್, ತಿಪ್ಪರಾಜು, ಚಿಕ್ಕೋಡಿಯಲ್ಲಿ ರಮೇಶ್ ಕತ್ತಿ, ಅಪ್ಪಾ ಸಾಹೇಬ್ ಜೊಲ್ಲೆ , ಕೋಲಾರದಿಂದ ಡಿ.ಎಸ್.ವೀರಯ್ಯ, ಛಲವಾದಿ ನಾರಾಯಣಸ್ವಾಮಿ, ಕೊಪ್ಪಳದಿಂದ ಹಾಲಿ ಸಂಸದ ಕರಡಿ ಸಂಗಣ್ಣ, ಮಂಡ್ಯದಲ್ಲಿ ಅಶ್ವಥ್ ನಾರಾಯಣ್ ಟಿಕೆಟ್​ ನಿರೀಕ್ಷೆಯಲ್ಲಿದ್ದಾರೆ.

ಶಾಸಕ ನಾರಾಯಣ ಗೌಡ ವಿರುದ್ಧ ದೂರು..!

0

ಬೆಂಗಳೂರು: ಶಾಸಕ ನಾರಾಯಣಗೌಡ ಆವರ ವಿರುದ್ಧ ವಕೀಲ ನಾರಾಯಣ ಸ್ವಾಮಿ ಅವರು ಚುನಾವಣ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. “ಚಿತ್ರರಂಗದವರು ರಾಜಕೀಯಕ್ಕೆ ತಲೆ ಹಾಕಬಾರದು. ಪ್ರಚಾರಕ್ಕೆ ಬಂದ್ರೆ ನಿಮ್ಮ ಆಸ್ತಿ ಬಗ್ಗೆ ತನಿಖೆ ಮಾಡಿಸಬೇಕಾಗುತ್ತೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ” ಎಂದು ಗರ್ವದ ಮಾತಾಡಿದ್ದ ನಾರಾಯಣಗೌಡ ವಿರುದ್ಧ ದೂರು ದಾಖಲಿಸಲಾಗಿದೆ. ಸುಮಲತಾ ಪರ ನಟ ಯಶ್ ಹಾಗೂ ದರ್ಶನ್​ ಪ್ರಚಾರಕ್ಕೆ ಹೋಗಿದ್ದ ಬಗ್ಗೆ ಶಾಸಕರು ಬೆದರಿಕೆ ಹಾಕಿದ್ದರು.

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ನಟ ಯಶ್ ಹಾಗೂ ದರ್ಶನ್ ಅವರು ಬೆಂಬಲ ಸೂಚಿಸಿದ್ದಾರೆ. ಮಾರ್ಚ್ 20ರಂದು ಸುಮಲತಾ ಅವರು ನಾಮಪತ್ರ ಸಲ್ಲಿಸಿದ್ದು, ಬೃಹತ್ ಸಮಾವೇಶ್ ನಡೆಸಿದ್ದರು. ಸಮಾವೇಶದಲ್ಲಿ ನಿರ್ಮಾಪಕ ರಾಕ್​​ಲೈನ್​ ವೆಂಕಟೇಶ್, ನಟ ದೊಡ್ಡಣ್ಣ ಸೇರಿ ಚಿತ್ರರಂಗದ ಪ್ರಮುಖರು ಭಾಗವಹಿಸಿದ್ದರು.

ಕಮಲದ ತೆಕ್ಕೆಗೆ ಮತ್ತೊಬ್ಬ ಕಾಂಗ್ರೆಸ್ ನಾಯಕ..!

0

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಹಲವು ಕಾಂಗ್ರೆಸ್ ನಾಯಕರು ಪಕ್ಷ ತೊರೆದು ಬಿಜೆಪಿಗೆ ಸೇರುತ್ತಿದ್ದಾರೆ. ಮಾಜಿ ಸಚಿವ ಡಾ. ಎ.ಬಿ. ಮಾಲಕರೆಡ್ಡಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್​. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಾಳೆ  ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಲಕರೆಡ್ಡಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಇತ್ತೀಚೆಗಷ್ಟೇ ಉಮೇಶ್ ಜಾಧವ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ ಜಾಧವ್ ಅವರ ರಾಜೀನಾಮೆ ಮಾತ್ರ ಇನ್ನೂ ಅಂಗೀಕಾರವಾಗಿಲ್ಲ. ರಾಜೀನಾಮೆಗೆ ಸ್ಪಷ್ಟ ಕಾರಣ ನೀಡದ ಹಿನ್ನೆಲೆಯಲ್ಲಿ ರಾಜೀನಾಮೆ ಅಂಗೀಕರಿಸಲಾಗಿಲ್ಲ ಅಂತ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ಕೊನೇ ಕ್ಷಣದಲ್ಲಿ ನಿಖಿಲ್ ನಿರ್ಧಾರ ಬದಲು..!

0

ಮಂಡ್ಯ : ನಿಖಿಲ್​ ಕುಮಾರಸ್ವಾಮಿ ಅವರು ಕೊನೇ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಿಸಿದ್ದಾರೆ..! ಇಂದು ಅವರು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದರು. ಆದರೆ, ದಿಢೀರ್ ಅಂತ ನಾಮಪತ್ರ ಸಲ್ಲಿಕೆಯನ್ನು ಮುಂದೂಡಿದ್ದಾರೆ.
ಜ್ಯೋತಿಷಿಯೊಬ್ಬರ ಮಾತಿನಂತೆ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದರು. ಬಳಿಕ ಮಾರ್ಚ್ 25ಕ್ಕೆ ಅದ್ಧೂರಿ ಸಮಾವೇಶ ನಡೆಸಲು ಪ್ಲಾನ್ ಮಾಡಿದ್ದರು. ಇದೀಗ ಅವರು ತಮ್ಮ ತೀರ್ಮಾನ ಬದಲಿಸಿದ್ದು, 25ರಂದೇ ನಾಮಪತ್ರ ಸಲ್ಲಿಸಿ, ರ್ಯಾಲಿ ಹಾಗೂ ಸಮಾವೇಶ ನಡೆಸಲಿದ್ದಾರೆ.
ಇನ್ನು ನಿನ್ನೆಯಷ್ಟೇ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಮರನಾಥ್ ಅವರು ನಾಮಪತ್ರ ಸಲ್ಲಿಸಿ ತನ್ನ ಶಕ್ತಿಪ್ರದರ್ಶನ ಮಾಡಿದ್ದರು. ಸುಮಲತಾ ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಕೂಡ ಸಾಥ್ ನೀಡಿದ್ದರು. ಪುತ್ರ ಅಭಿಷೇಕ್, ಹಿರಿಯ ನಟ ದೊಡ್ಡಣ್ಣ, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ಉಪಸ್ಥಿತರಿದ್ರು. ಸ್ಥಳೀಯ ಕಾಂಗ್ರೆಸ್​ ಮುಖಂಡರು, ಕಾರ್ಯಕರ್ತರೂ ಪಾಲ್ಗೊಂಡು ಬೆಂಬಲ ಸೂಚಿಸಿದ್ರು.

ಸುಮಲತಾ ಯಾವ ಹೆಸರಲ್ಲಿ ನಾಮಪತ್ರ ಸಲ್ಲಿಸಿದ್ರು? ಅವರ ಒಟ್ಟಾರೆ ಆಸ್ತಿ ಎಷ್ಟು?

0

ಮಂಡ್ಯ : ಸುಮಲತಾ ಅಂಬರೀಶ್ ಅವರು ನಾಮಪತ್ರ ಸಲ್ಲಿಸಿ, ಬೃಹತ್ ರ್ಯಾಲಿ ಹಾಗೂ ಸಮಾವೇಶದ ಮೂಲಕ ಲೋಕ ಸಮರದ ರಣಕಹಳೆ ಊದಿದ್ದಾರೆ. ಅವರಿಗೆ ಚಾಲಿಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಚಿತ್ರರಂಗದ ಭಾರಿ ಬೆಂಬಲ ಸಿಕ್ಕಿದೆ. ಅಂಬರೀಶ್ ಅವರ ಅಭಿಮಾನಿಗಳು ಮಾತ್ರವಲ್ಲದೆ ಕಾಂಗ್ರೆಸ್​ನ ಸ್ಥಳೀಯ ಮುಖಂಡರು, ಕಾರ್ಯಕರ್ತರ ಬೆಂಬಲ ಕೂಡ ಸಿಕ್ಕಿದೆ.
ಸುಮಲತಾ ಅವರು ಸುಮಲತಾ ಅಂಬರೀಶ್ ಎನ್ನುವ ಹೆಸರಲ್ಲಿ ನಾಮಪತ್ರ ಸಲ್ಲಿಸಿರುತ್ತಾರೆ ಅಂತ ಬಹುತೇಕರು ಅಂದುಕೊಂಡಿರ್ತೀವಿ…ಆದರೆ, ಸುಮಲತಾ ಅವರು ಸುಮಲತಾ ಅಂಬರೀಶ್​ ಅನ್ನೋ ಹೆಸರಲ್ಲಿ ನಾಮಪತ್ರ ಸಲ್ಲಿಸಿಲ್ಲ. ಸುಮಲತಾ ಅಮರನಾಥ್ ಎನ್ನುವ ಹೆಸರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ..! ಅಂಬರೀಶ್ ಅವರ ಮೊದಲ ಹೆಸರು ಅಮರ್​ನಾಥ್​ ಅಂತ.
ಇನ್ನು ನಾಮಪತ್ರ ಸಲ್ಲಿಸುವಾಗ ಆಸ್ತಿ ವಿವರನ್ನು ನೀಡಬೇಕು. ಹಾಗಾದ್ರೆ ಸುಮಲತಾ ಅವರ ಒಟ್ಟಾರೆ ಆಸ್ತಿ ಎಷ್ಟಿರಬಹುದು ಅನ್ನೋ ಕುತೂಹಲ ಸಾಮಾನ್ಯವಾಗಿ ಇರುತ್ತೆ.
ಒಟ್ಟಾರೆ 42.49ಕೋಟಿ ರೂ ಆಸ್ತಿಯನ್ನು ಸುಮಲತಾ ಘೋಷಿಸಿದ್ದಾರೆ. ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಗಳಲ್ಲಿ ₹ 1.33 ಕೋಟಿ, ದಿ.ಅಂಬರೀಷ್‌ ಖಾತೆಯಲ್ಲಿ ₹ 82 ಲಕ್ಷ ಹಣವಿದೆ. ಸುಮಲತಾ ಕೈಯಲ್ಲಿ ₹ 13 ಲಕ್ಷ ಹಣ ಇದೆ. ಎಚ್‌ಡಿಎಫ್‌ಸಿ, ಸಿಟಿ ಬ್ಯಾಂಕ್‌, ಎಸ್‌ಬಿಐ ಬ್ಯಾಂಕ್‌ಗಳಲ್ಲಿ ₹ 2 ಕೋಟಿ ಠೇವಣಿ ಇಟ್ಟಿದ್ದಾರೆ. ವಿವಿಧೆಡೆ ₹ 1 ಕೋಟಿ ತೊಡಗಿಸಿದ್ದಾರೆ ಎಂದು ಘೋಷಿಸಿದ್ದಾರೆ.
₹ 1.66 ಕೋಟಿ ಮೌಲ್ಯದ 5.6 ಕೆ.ಜಿ ಚಿನ್ನದ ಒಡವೆ. ₹ 13 ಲಕ್ಷ ಮೌಲ್ಯದ 31 ಕೆ.ಜಿ ಬೆಳ್ಳಿ ಇದೆ. ಬೆಂಗಳೂರಿನಲ್ಲಿ ₹ 18 ಕೋಟಿ ಮೌಲ್ಯದ ಮೂರು ಫ್ಲ್ಯಾಟ್‌ಗಳು ಇವೆ. ₹ 16 ಕೋಟಿ ಮೊತ್ತದ ಪಿತ್ರಾರ್ಜಿತ ಆಸ್ತಿ ಇರುವುದಾಗಿ ದಾಖಲಿಸಿದ್ದಾರೆ. ₹ 1.42 ಕೋಟಿ ಸಾಲ ಮಾಡಿದ್ದಾರೆ. ಹಲವರಿಗೆ ₹ 55 ಲಕ್ಷ ಸಾಲ ಕೊಟ್ಟಿದ್ದು, ಅದರಲ್ಲಿ ಪುತ್ರ ಅಭಿಷೇಕ್‌ಗೌಡಗೆ ₹ 39 ಲಕ್ಷ ಸಾಲ ನೀಡಿರುವುದಾಗಿ ಪ್ರಮಾಣಪತ್ರದಲ್ಲಿ ನಮೂದಿಸಿದ್ದಾರೆ.

Popular posts