Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Tuesday, March 26, 2019

ತುಮಕೂರಲ್ಲಿ ದೇವೇಗೌಡ್ರಿಗೆ ಮತ್ತೊಂದು ಶಾಕ್..!

0

ತುಮಕೂರು : ಹಾಸನವನ್ನು ಮೊಮ್ಮಗ ಪ್ರಜ್ವಲ್​ ರೇವಣ್ಣ ಅವರಿಗೆ ಬಿಟ್ಟುಕೊಟ್ಟು ತುಮಕೂರಲ್ಲಿ ಕಣಕ್ಕಿಳಿಯಲು ಮುಂದಾಗಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ್ರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಕಾಂಗ್ರೆಸ್​ನ ಹಾಲಿ ಸಂಸದ ಎಸ್​.ಪಿ ಮುದ್ದಹನುಮೇಗೌಡ ಅವರು ಟಿಕೆಟ್ ಕೈ ತಪ್ಪಿರುವುದಕ್ಕೆ ಅಸಮಾಧಾನ ಸ್ಫೋಟಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದಾರೆ. ಎಸ್​.ಪಿ ಮುದ್ದಹನುಮೇಗೌಡರ ಸ್ಪರ್ಧೆ ದೇವೇಗೌಡರ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ. ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್​ನ ಮಾಜಿ ಶಾಸಕ ಕೆ.ಎನ್​ ರಾಜಣ್ಣ ದೊಡ್ಡಗೌಡರ ವಿರುದ್ಧ ತೊಡೆತಟ್ಟಿ ಅಖಾಡಕ್ಕಿಳಿಯಲು ನಿರ್ಧರಿಸಿದ್ದಾರೆ. ಮುದ್ದಹನುಮೇಗೌಡ ಅವರೊಡನೆ ತಾನೂ ಕೂಡ ನಾಮಪತ್ರ ಸಲ್ಲಿಕೆ ಮಾಡ್ತೀನಿ ಅಂತ ಹೇಳಿದ್ದಾರೆ. ರಾಜಣ್ಣ ಮತ್ತು ಮುದ್ದಹನುಮೇಗೌಡರು ಇಬ್ಬರೂ ದೇವೇಗೌಡರ ವಿರುದ್ಧ ಸ್ಪರ್ಧೆಗೆ ಇಳಿದರೆ ದೋಸ್ತಿಗೆ ದೊಡ್ಡ ಹೊಡೆತ ಬಿದ್ದಂತಾಗುತ್ತದೆ.
ಇಬ್ಬರ ಜಗಳ ಮೂರನೇಯವರಿಗೆ ಲಾಭ ಅನ್ನುವಂತೆ ‘ದೋಸ್ತಿ’ ಒಳ ಕಾಳಗದಿಂದ ಬಿಜೆಪಿ ಅಭ್ಯರ್ಥಿ, ಮಾಜಿ ಸಂಸದ ಜಿ.ಎಸ್​ ಬಸವರಾಜ್ ಅವರಿಗೆ ಅನುಕೂಲವಾಗಲಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್​ನ ಮತಗಳು ಮೂರು ಪಾಲಾಗಿ ಹಂಚಿ ಹೋದಲ್ಲಿ ಜಿಎಸ್​ಬಿ 5ನೇ ಬಾರಿ ಸಂಸತ್ ಪ್ರವೇಶಿಸಲು ಸುಲಭ ದಾರಿಯಾಗುವ ಸಾಧ್ಯತೆ ಇದೆ. ಜಿ.ಎಸ್ ಬಸವರಾಜ್ ಅವರು 3 ಬಾರಿ ಕಾಂಗ್ರೆಸ್​ನಿಂದ 1 ಬಾರಿ ಬಿಜೆಪಿಯಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.

‘ಪ್ರಧಾನಿ ಮೋದಿ ಕೊಲೆಗೆ ದೋಸ್ತಿಗಳಿಂದ ಸಂಚು’ : ಬಿಜೆಪಿ ಆರೋಪ

0

ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕೊಲೆಗೆ ದೋಸ್ತಿಗಳು ಸಂಚು ಮಾಡಿದ್ದಾರೆ ಅಂತ ಬಿಜೆಪಿ ಗಂಭೀರ ಆರೋಪ ಮಾಡಿದೆ.
‘ದೋಸ್ತಿಗಳು ಸಾರ್ವಜನಿಕವಾಗಿ ಪ್ರಧಾನಿ ಕೊಲೆಗೆ ಪ್ರಚೋದಿಸುತ್ತಿದ್ದಾರೆ. ಇದಕ್ಕೆ ಎಂಎಲ್​ ಶಿವಲಿಂಗೇಗೌಡರ ಹೇಳಿಕೆಯೇ ಸಾಕ್ಷಿ. ಜೆಡಿಎಸ್​​ ಎಂಎಲ್​ಎ ಪ್ರಧಾನಿಯನ್ನು ಕಲ್ಲಲ್ಲಿ ಹೊಡೀರಿ ಅಂತಾರೆ. ಪ್ರಜಾಪ್ರಭುತ್ವದ ಅಧಃಪತನದ ಮಾತುಗಳನ್ನಾಡ್ತಿದ್ದಾರೆ. ಹೆಚ್​ಡಿಕೆ ನಾಯಕತ್ವದಲ್ಲಿ ಸರ್ವಾಧಿಕಾರ ಜೋರಾಗಿದೆ ಎಂದು ಆರೋಪಿಸಿ ಬಿಜೆಪಿ ಟ್ವೀಟ್​ ಮಾಡಿದೆ.
ಶಾಸಕ ಶಿವಲಿಂಗೇವೌಡರು ‘ಮೋದಿ ಮೋದಿ ಅಂತ ಬರೋರಿಗೆ ಕಲ್ಲಿನಿಂದ ಹೊಡೀರಿ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ಟ್ವೀಟ್​ ಮೂಲಕ ಕಿಡಿಕಾರಿದೆ.

ಮೋದಿ ವಿರುದ್ಧ ಕಣಕ್ಕಿಳಿಯುತ್ತಾರಾ ಟ್ರಬಲ್​ ಶೂಟರ್​ ಡಿಕೆಶಿ?

0

ಬೆಂಗಳೂರು : ‘ಲೋಕ’ ರಣಕಣ ಕಾವೇರುತ್ತಿದೆ. ರಾಜ್ಯದ ಒಟ್ಟು 28 ಕ್ಷೇತ್ರಗಳಲ್ಲಿ ಬಿಜೆಪಿ ಸದ್ಯ 22 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮಂಡ್ಯದಲ್ಲಿ ತನ್ನ ಅಭ್ಯರ್ಥಿಯನ್ನು ಅಖಾಡಕ್ಕೆ ಇಳಿಸದೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದೆ. ಇನ್ನು 5 ಕ್ಷೇತ್ರಗಳ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಕಣಕ್ಕಿಳಿಸುವುದು ಬಾಕಿ ಇದೆ.
ಮೈತ್ರಿ ವಿಚಾರಕ್ಕೆ ಬರೋದಾದ್ರೆ 8 ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಟ್ಟು ಕೊಟ್ಟಿರೋ ಕಾಂಗ್ರೆಸ್​ 20 ಕ್ಷೇತ್ರಗಳಲ್ಲಿ ಮಾತ್ರ ತನ್ನ ಕಲಿಗಳನ್ನು ಕಣಕ್ಕಿಳಿಸಲಿದೆ. ತನ್ನ ಪಾಲಿನ ಕ್ಷೇತ್ರಗಳಲ್ಲಿ 18 ಕ್ಷೇತ್ರಗಳ ಕ್ಯಾಂಡಿಡೇಟ್​ಗಳನ್ನು ‘ಕೈ’ ಪಡೆ ಫೈನಲ್ ಮಾಡಿದೆ. ಬೆಂಗಳೂರು ದಕ್ಷಿಣ ಮತ್ತು ಧಾರವಾಡದ ಅಭ್ಯರ್ಥಿಯನ್ನು ಇನ್ನೂ ಘೋಷಿಸಿಲ್ಲ.
ಹೀಗಾಗಿ ಮುಖ್ಯವಾಗಿ ಬೆಂಗಳೂರು ದಕ್ಷಿಣದತ್ತ ಎಲ್ಲರ ಚಿತ್ತ ನೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ದಕ್ಷಿಣದಿಂದ ಕಣಕ್ಕಿಳಿಯುತ್ತಾರೆ ಎಂದು ತಿಳಿದುಬಂದಿದೆ. ಬಿಜೆಪಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದ ಬಳಿಕ ಕಾಂಗ್ರೆಸ್​ ತನ್ನ ಕಲಿಯನ್ನು ಅಖಾಡಕ್ಕೆ ಇಳಿಸುವ ಸಾಧ್ಯತೆ ಇದೆ. ಮೋದಿ ಬೆಂಗಳೂರು ದಕ್ಷಿಣದಲ್ಲಿ ಸ್ಪರ್ಧಿಸೋದು ಅಧಿಕೃತವಾಗಿ ಘೋಷಣೆ ಮಾಡಿದ ಮೇಲೆ ಕೈ ತನ್ನ ಅಭ್ಯರ್ಥಿಯನ್ನು ಪ್ರಕಟಿಸಲಿದೆ.
ಮೋದಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಪ್ರಭಾವಿ ಒಕ್ಕಲಿಗ ಮುಖಂಡರನ್ನೆ ರಣಕಣಕ್ಕಿಳಿಸೋ ಚಿಂತನೆ ಕಾಂಗ್ರೆಸ್​ನದ್ದಾಗಿದ್ದು, ಟ್ರಬಲ್ ಶೂಟರ್ ಎಂದೇ ಖ್ಯಾತಿ ಪಡೆದಿರುವ ಸಚಿವ ಡಿ.ಕೆ ಶಿವಕುಮಾರ್ ಅವರು ಸ್ಪರ್ಧಿಸೋ ಸಾಧ್ಯತೆ ಇದೆ. ‘ಕೈ’ ಹೈಕಮಾಂಡ್​ ಕೂಡ ಡಿಕೆಶಿಗೆ ರೆಡಿಯಾಗಿರುವಂತೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಕುತೂಹಲಗಳಿಗೆ ಶೀಘ್ರದಲ್ಲೇ ತೆರೆ ಬೀಳಲಿದೆ.

ರಾಜ್ಯ ಕಾಂಗ್ರೆಸ್​ನ ಅಭ್ಯರ್ಥಿಗಳ ಪಟ್ಟಿ
ಚಿಕ್ಕಬಳ್ಳಾಪುರ – ವೀರಪ್ಪ ಮೊಯ್ಲಿ
ಕೋಲಾರ – ಕೆ.ಎಚ್​. ಮುನಿಯಪ್ಪ
ರಾಯಚೂರು – ಬಿ.ವಿ. ನಾಯ್ಕ್​​
ಬೆಂಗಳೂರು ಕೇಂದ್ರ – ರಿಜ್ವಾನ್ ಅರ್ಷದ್
ಬಾಗಲಕೋಟೆ – ವೀಣಾ ಕಾಶಪ್ಪನವರ್​
ಬೀದರ್ – ಈಶ್ವರ್ ಖಂಡ್ರೆ
ಕಲಬುರಗಿ – ಮಲ್ಲಿಕಾರ್ಜುನ್ ಖರ್ಗೆ
ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್
ಚಾಮರಾಜ ನಗರ – ಧ್ರುವ ನಾರಾಯಣ್​​
ಬಳ್ಳಾರಿ – ವಿ.ಎಸ್​. ಉಗ್ರಪ್ಪ
ಚಿಕ್ಕೋಡಿ – ಪ್ರಕಾಶ್ ಹುಕ್ಕೇರಿ
ಮೈಸೂರು – ಕೊಡಗು – ವಿಜಯ್ ಶಂಕರ್​
ಚಿತ್ರದುರ್ಗ – ಬಿ.ಎನ್​​. ಚಂದ್ರಪ್ಪ
ಬೆಳಗಾವಿ – ವಿರುಪಾಕ್ಷಿ ಎಸ್​. ಸಾಧುನ್ನವರ್​​​
ದಾವಣಗೆರೆ – ಶಾಮನೂರು ಶಿವಶಂಕರಪ್ಪ
ದಕ್ಷಿಣ ಕನ್ನಡ – ಮಿಥುನ್​​​ ರೈ​​
ಕೊಪ್ಪಳ – ರಾಜಶೇಖರ್​ ಹಿಟ್ನಾಳ್​​
ಹಾವೇರಿ- ಡಿ.ಆರ್​​. ಪಾಟೀಲ್​​​​​​

ಪಟ್ಟಿ ಬಿಡುಗಡೆಗೆ ಬಾಕಿ ಇರುವ ಕ್ಷೇತ್ರಗಳು
ಬೆಂಗಳೂರು ದಕ್ಷಿಣ
ಧಾರವಾಡ
==
ರಾಜ್ಯದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ:

ಬೆಂಗಳೂರು ಉತ್ತರ – ಡಿ.ವಿ.ಸದಾನಂದ ಗೌಡ

ಬೆಂಗಳೂರು ಕೇಂದ್ರ – ಪಿ.ಸಿ. ಮೋಹನ್

ತುಮಕೂರು – ಜಿ.ಎಸ್.ಬಸವರಾಜ್

ಉಡುಪಿ-ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ

ಚಿಕ್ಕಬಳ್ಳಾಪುರ – ಬಿ.ಎನ್. ಬಚ್ಚೇಗೌಡ

ಬೀದರ್ – ಭಗವಂತ್​ ಖೂಬಾ

ಹಾವೇರಿ – ಶಿವಕುಮಾರ್‌ ಉದಾಸಿ

ಬಾಗಲಕೋಟೆ – ಪಿ.ಸಿ.ಗದ್ದೀಗೌಡರ್

ಬೆಳಗಾವಿ – ಸುರೇಶ್ ಅಂಗಡಿ

ದಕ್ಷಿಣ ಕನ್ನಡ – ನಳಿನ್ ಕುಮಾರ್ ಕಟೀಲ್

ಮೈಸೂರು-ಕೊಡಗು –ಪ್ರತಾಪ್ ಸಿಂಹ

ಕಲಬುರಗಿ – ಡಾ. ಉಮೇಶ್ ಜಾಧವ್

ವಿಜಯಪುರ – ರಮೇಶ್ ಜಿಗಜಿಣಗಿ

ಶಿವಮೊಗ್ಗ- ಬಿ.ವೈ.ರಾಘವೇಂದ್ರ

ಧಾರವಾಡ – ಪ್ರಹ್ಲಾದ್ ಜೋಶಿ

ಬಳ್ಳಾರಿ – ದೇವೇಂದ್ರಪ್ಪ

ದಾವಣಗೆರೆ – ಜಿ.ಎಂ. ಸಿದ್ದೇಶ್ವರ್​

ಚಿತ್ರದುರ್ಗ – ನಾರಾಯಣಸ್ವಾಮಿ

ಹಾಸನ – ಎ.ಮಂಜು

ಚಾಮರಾಜನಗರ – ಶ್ರೀನಿವಾಸ್ ಪ್ರಸಾದ್

ಉತ್ತರ ಕನ್ನಡ – ಅನಂತ್​ಕುಮಾರ್ ಹೆಗಡೆ

ಕೋಲಾರ – ಮುನಿಸ್ವಾಮಿ

ಮಂಡ್ಯ – ಅಭ್ಯರ್ಥಿಯುನ್ನು ಕಣಕ್ಕಿಳಿಸದೇ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ

ಪಟ್ಟಿ ರಿಲೀಸ್ ಆಗದ 7 ಕ್ಷೇತ್ರಗಳು
1) ಬೆಂಗಳೂರು ದಕ್ಷಿಣ
2) ಬೆಂಗಳೂರು ಗ್ರಾಮಾಂತರ
3) ರಾಯಚೂರು
4) ಚಿಕ್ಕೋಡಿ
6) ಕೊಪ್ಪಳ

ಗ್ರೌಂಡ್​ ರಿಪೋರ್ಟ್​ : ಮಂಡ್ಯದಲ್ಲಿ ಸ್ಟಾರ್​ವಾರ್ – ರಣಕಲಿಗಳ ಬಲಾಬಲವೇನು?

0

ಗ್ರೌಂಡ್​ ರಿಪೋರ್ಟ್ – 1 : ಮಂಡ್ಯ ಲೋಕಸಭಾ ಕ್ಷೇತ್ರ

ಬೆಂಗಳೂರು : ಲೋಕಸಭಾ ಚುನಾವಣೆ ಡೇಟ್​ ಅನೌನ್ಸ್ ಆಗುವ ಮುನ್ನವೇ ಚುನಾವಣಾ ಕಾವೇರಿದ್ದ ಕ್ಷೇತ್ರ ಕಾವೇರಿ ಸೀಮೆ ಮಂಡ್ಯ. ಆರಂಭದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್​ ಟಿಕೆಟ್ ಸಿಗುತ್ತೆ ಅನ್ನೋ ನಿರೀಕ್ಷೆ ಇತ್ತು. ಆದರೆ, ದೋಸ್ತಿ ಲೆಕ್ಕಾಚಾರದಿಂದ ಸುಮಲತಾಗೆ ‘ಕೈ’ಕೊಟ್ಟಿತು. ಕಾಂಗ್ರೆಸ್​ ಟಿಕೆಟ್ ಕೈ ತಪ್ಪಿದ್ರೂ ಪರವಾಗಿಲ್ಲ ನಾನು ಪಕ್ಷೇತರಳಾಗಿಯಾದರೂ ಸ್ಪರ್ಧೆ ಮಾಡೇ ಮಾಡ್ತೀನಿ. ಮಂಡ್ಯದ ಜನರಿಗಾಗಿ ಕಣಕ್ಕಿಳಿದೇ ಇಳಿಯತ್ತೇನೆ ಅಂತಿದ್ದ ಸುಮಲತಾ ಅವರು ತಾವು ಹೇಳಿದಂತೆಯೇ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಇನ್ನು ಮೈತ್ರಿ (ಜೆಡಿಎಸ್​) ಅಭ್ಯರ್ಥಿಯಾಗಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆಗೆ ರೆಡಿಯಾಗಿದ್ದಾರೆ.
ಕಾವೇರಿ ಸೀಮೆಯಲ್ಲಿ ಸ್ವಾಭಿಮಾನದ ಕಿಚ್ಚೆಬ್ಬಿಸಿದ್ದಾರೆ ಸುಮಲತಾ… ಪಂಚೆ ಸುತ್ತಿ ಅಖಾಡಕ್ಕಿಳಿದಿದ್ದಾರೆ ರೆಡಿಮೇಡ್ ‘ಮಣ್ಣಿನ ಮೊಮ್ಮಗ’ ನಿಖಿಲ್. ಸುಮಲತಾ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಬೆಂಬಲ ನೀಡಿದ್ದು, ‘ಗಜ’ಕೇಸರಿ ಬಲ ಸಿಕ್ಕಿದೆ. ನಿಖಿಲ್ ತನಗೆ ತನ್ನ ಕಾರ್ಯಕರ್ತರೇ ಸೈನಿಕರು ಅಂತ ಸವಾಲೆಸೆದು ಕಣಕ್ಕೆ ಧುಮುಕಿದ್ದಾರೆ.
ಇನ್ನು ಮಂಡ್ಯ ‘ಲೋಕ’ ಕಣದ ಚಿತ್ರಣವನ್ನು ನೋಡೋದಾದ್ರೆ, 8 ವಿಧಾನಸಭಾ ಕ್ಷೇತ್ರಗಳಿದ್ದು (ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್ ಪೇಟೆ, ಕೆ.ಆರ್ ನಗರ (ಮೈಸೂರು ಜಿಲ್ಲೆ) ಈ ಎಲ್ಲಾ 8 ಕ್ಷೇತ್ರಗಳಲ್ಲಿಯೂ ಜೆಡಿಎಸ್​ ಶಾಸಕರೇ ಇದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಇದುವರೆಗೆ ಕಾಂಗ್ರೆಸ್​ ಅಭ್ಯರ್ಥಿಗಳು 12 ಬಾರಿ, ಜೆಡಿಎಸ್​ ಅಭ್ಯರ್ಥಿಗಳು 3 ಬಾರಿ, ಇತರೆ (ಜನತಾ ದಳ) 3 ಬಾರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಇಲ್ಲಿಯವರೆಗೂ ಖಾತೆ ತೆರೆದಿಲ್ಲ. ಈ ಬಾರಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೇ ಸುಮಲತಾ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದೆ.
1951ರಿಂದ 2014ರವರೆಗಿನ ಮಂಡ್ಯದ ಸಂಸದರು
ಮೈಸೂರು ರಾಜ್ಯ
1951, 1957, 1962, 1967 : ಎಂ.ಕೆ ಶಿವನಂಜಪ್ಪ, ಕಾಂಗ್ರೆಸ್​
1971 : ಸೋಮನಹಳ್ಳಿ ಕೃಷ್ಣ, ಕಾಂಗ್ರೆಸ್
ಕರ್ನಾಟಕ ರಾಜ್ಯ
1977 : ಕೆ. ಚಿಕ್ಕಲಿಂಗಯ್ಯ, ಕಾಂಗ್ರೆಸ್​
1980 : ಎಸ್​.ಎಂ ಕೃಷ್ಣ, ಕಾಂಗ್ರೆಸ್​
1984 : ಕೆ.ವಿ ಶಂಕರಗೌಡ, ಜನತಾ ಪಾರ್ಟಿ
1989, 1991 : ಜಿ. ಮಾದೇಗೌಡ, ಕಾಂಗ್ರೆಸ್​
1996 :ಕೆ.ಆರ್​ ಪೇಟೆ ಕೃಷ್ಣ, ಜನತಾ ದಳ
1998, 1999,2004 : ಅಂಬರೀಶ್ (1998ರಲ್ಲಿ ಜನತಾ ಪಾರ್ಟಿಯಿಂದ, ಮತ್ತೆರಡು ಬಾರಿ ಕಾಂಗ್ರೆಸ್​ನಿಂದ)
2009 : ಎನ್. ಚಲುವನಾರಾಯಣ ಸ್ವಾಮಿ, ಜನತಾ ದಳ (ಸೆಕ್ಯುಲರ್)
2013 : ರಮ್ಯಾ, ಕಾಂಗ್ರೆಸ್ (ಉಪ ಚುನಾವಣೆ)
2014 : ಸಿ.ಎಸ್ ಪುಟ್ಟರಾಜ್​, ಜನತಾ ದಳ (ಸೆಕ್ಯುಲರ್)
2018 : ಎಲ್​.ಆರ್ ಶಿವರಾಮೇಗೌಡ, ಜನತಾ ದಳ (ಸೆಕ್ಯುಲರ್) (ಉಪಚುನಾವಣೆ)

ಕಳೆದ ಲೋಕಸಭಾ ಚುನಾವಣೆ (2014)ಯಲ್ಲಿ ಜೆಡಿಎಸ್​ನ ಸಿ.ಎಸ್​ ಪುಟ್ಟರಾಜು ಅವರು 5,24,370 ಮತಗಳನ್ನು ಪಡೆದು 5,518 ಮತಗಳ ಅಂತರದ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ರಮ್ಯಾ 5,18,852 ಮತಗಳನ್ನು, ಬಿಜೆಪಿಯ ಬಿ.ಶಿವಲಿಂಗೇಗೌಡ 86,993 ಮತಗಳನ್ನು ಪಡೆದಿದ್ದರು. 2018ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್​ನ ಶಿವರಾಮೇಗೌಡ ಅವರು 5,69,347 ಮತಗಳನ್ನು ಪಡೆದು ಬಿಜೆಪಿಯ ಡಾ. ಸಿದ್ದರಾಮಯ್ಯ ಅವರೆದುರು (2,44,404 ಮತ) 3,24,943 ಮತಗಳ ಅಂತರದ ಗೆಲವು ಪಡೆದಿದ್ದರು,

ಮಂಡ್ಯ ‘ಮತ’ಗಣಿತ

ಪುರುಷರು : 8,62,098
ಮಹಿಳೆಯರು : 8,59,519
ತೃತೀಯ ಲಿಂಗಿಗಳು : 717
ಒಟ್ಟು :   17,22,476

 

ಮಂಡ್ಯ ‘ಜಾತಿ’ಗಣಿತ

ಒಕ್ಕಲಿಗ : 7,85,420
ಎಸ್ಸಿ/ಎಸ್ಟಿ : 3,00,601
ಕುರುಬ : 1,70,854
ಲಿಂಗಾಯಿತ :  1,68,436
ಮುಸ್ಲಿಂ : 1,27,154
ಬೆಸ್ತರು : 55,219
ವಿಶ್ವಕರ್ಮ : 30,550
ಬ್ರಾಹ್ಮಣರು : 23,915
ಇತರರು : 65.254

ಮಂಡ್ಯ ಕದನ ಕಲಿಗಳ ಬಲಾಬಲ

ನಿಖಿಲ್​​ಗೆ ಪೂರಕ ಅಂಶಗಳು
ರಾಜ್ಯದಲ್ಲಿ ಅಧಿಕಾರದಲ್ಲಿರುವ ದೋಸ್ತಿ ಪಕ್ಷಗಳ ಒಮ್ಮತದ ಅಭ್ಯರ್ಥಿ
ತಂದೆ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆಗಿರುವುದು
ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು
ಮಂಡ್ಯ ಲೋಕಸಭಾ ವ್ಯಾಪ್ತಿಯಲ್ಲಿ ಮೂವರು ಸಚಿವರು
ಜೆಡಿಎಸ್ ಜೊತೆ ಕೈಜೋಡಿಸಿರುವ ಕಾಂಗ್ರೆಸ್ ಬೆಂಬಲ
ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲೂ ಜೆಡಿಎಸ್ ಆಡಳಿತ
5 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಸಿಎಂ ಚಾಲನೆ ಕೊಟ್ಟಿದ್ದು
ಚುನಾವಣೆ ಸಮೀಪಿಸುತ್ತಿದ್ದಂತೆ ತನ್ನ ಪರ ವಾತಾವರಣ ಸೃಷ್ಟಿಸುವ ಕುಟುಂಬದ ಚಾಣಾಕ್ಷತೆ
=

ನಿಖಿಲ್​​ಗೆ ಇರುವ ಆತಂಕಗಳು

ಜೆಡಿಎಸ್ ಅಭ್ಯರ್ಥಿ ನಿಖಿಲ್ ಗೆ ಕುಟುಂಬ ರಾಜಕಾರಣದ ಕಳಂಕ
ನಿಖಿಲ್ ಸ್ಥಳೀಯರಲ್ಲ, ಲೋಕಲ್ ಲೀಡರ್ಸ್ ಕಡೆಗಣನೆಗೆ ಒಳಗೊಳಗೇ ಆಕ್ರೋಶ
ಜೆಡಿಎಸ್ ಅಭ್ಯರ್ಥಿ ಬೆಂಬಲಿಸಲು ಕಾಂಗ್ರೆಸ್ನಲ್ಲಿ ಬಹಿರಂಗ ವಿರೋಧ
ಮೈತ್ರಿ ಸರ್ಕಾರ ಇದ್ರೂ, ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರ ಕಡೆಗಣನೆ
ಎದುರಾಳಿ ಸುಮಲತಾ ಅಂಬರೀಶ್ ಪರ ಅನುಕಂಪದ ಅಲೆ ಇರುವುದು
ಅಂಬರೀಶ್ ನಿಧನವನ್ನು ರಾಜಕೀಯವಾಗಿ ಬಳಕೆ ಮಾಡಿದ್ದಕ್ಕೆ ಆಕ್ರೋಶ
ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಟ್ರೋಲ್ ಅವಮಾನ

ಸುಮಲತಾಗೆ ಪೂರಕ ಅಂಶಗಳೇನು?
—————————-
ಮಂಡ್ಯ ಉದ್ದಗಲಕ್ಕೂ ಇರುವ ಮಂಡ್ಯದ ಗಂಡು ಅಂಬರೀಶ್ ಪರ ಅನುಕಂಪದ ಅಲೆ
ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಸದೇ ಬೆಂಬಲಿಸುವ ಸಾಧ್ಯತೆಯೂ ಇದೆ
ಬಹಿರಂಗವಾಗಿ ಅಲ್ಲದಿದ್ರೂ ರೈತ ಸಂಘದ ಮುಖಂಡರ ಆಂತರಿಕ ಬೆಂಬಲ
ಕುಟುಂಬ ರಾಜಕಾರಣದ ವಿರೋಧಿಸುವ ಜೆಡಿಎಸ್ ಮುಖಂಡರ ಆಂತರಿಕ ಬೆಂಬಲ
ಪಕ್ಷದ ಅಧಿಕೃತ ಅಭ್ಯರ್ಥಿ ಅಲ್ಲದಿದ್ರೂ ಕಾಂಗ್ರೆಸ್ ಮುಖಂಡರು ಬೆಂಬಲಿಸುವ ಸಾಧ್ಯತೆ
ಜೆಡಿಎಸ್ ಮುಖಂಡರ ಟೀಕೆಗಳಿಗೆ ಪ್ರಬುದ್ಧವಾಗಿ ಹೇಳಿಕೆ ನೀಡುತ್ತಿರುವುದು
ದರ್ಶನ್ ಸೇರಿದಂತೆ ಸ್ಟಾರ್ ನಟ ನಟಿಯರು ಸುಮಲತಾ ಪ್ರಚಾರ ಮಾಡುವ ಸಾಧ್ಯತೆ
ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಒಲವು ವ್ಯಕ್ತವಾಗುತ್ತಿರುವುದು

ಸುಮಲತಾಗೆ ಇರುವ ಆತಂಕಗಳೇನು?
—————————————-
ರಾಜಕೀಯದಲ್ಲಿ ಸುಮಲತಾಗೆ ಅನುಭವವಿಲ್ಲ. 
ಅಧಿಕೃತವಾಗಿ ಯಾವುದೇ ಪಕ್ಷದಿಂದಲೂ ಬೆಂಬಲ ಇಲ್ಲದಿರುವುದು
ಬೆಂಬಲದ ಮಾತಾಡಿರುವ ಮುಖಂಡರು ಕೊನೆ ಕ್ಷಣದಲ್ಲಿ ತಟಸ್ಥರಾಗಬಹುದು
ಸುಮಲತಾ ಬೆಂಬಲಿಗರಿಗೆ ಆಫರ್ ಕೊಟ್ಟು ಎದುರಾಳಿಗಳು ಓಲೈಸಬಹುದು

ಚುನಾವಣೆಯಲ್ಲಿ ಪ್ರಭಾವ ಬೀರುವ ಅಂಶಗಳು
——————————————–
ಕಾವೇರಿ ಜಲ ವಿವಾದ ಇಲ್ಲಿ ಸದಾ ಪ್ರಭಾವ ಬೀರುವ ವಿಚಾರ
12 ತಿಂಗಳ ನೀರಾವರಿಯಿದ್ರೂ ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆ ಮಂಡ್ಯ
ಕೈಗಾರಿಕಾ ಕ್ಷೇತ್ರದಲ್ಲಿ ಯಾವುದೇ ತರಹದ ಪ್ರಗತಿ ಕಾಣದ ಕ್ಷೇತ್ರ
ಪುನಶ್ಚೇತನಗೊಳ್ಳದ ಮೈಶುಗರ್ ಮತ್ತು ಪಿಎಸ್​ಕೆ ಸಕ್ಕರೆ ಕಾರ್ಖಾನೆಗಳ 
ಸಾಕಷ್ಟು ಪ್ರವಾಸಿ ತಾಣಗಳಿದ್ರೂ ದುರಸ್ಥಿ ಕಾಣದ ಕ್ಷೇತ್ರದ ಬಹುತೇಕ ರಸ್ತೆಗಳು
ಯುವ ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದರಲ್ಲೂ ಹಿಂದುಳಿದ ಕ್ಷೇತ್ರ

ಸಂಸದರು ಅನುದಾನ ಬಳಕೆ : ಸಂಸದರಾಗಿದ್ದ ಪುಟ್ಟರಾಜು 2014-15ನೇ ಸಾಲಿನಲ್ಲಿ ತಮ್ಮ ಕ್ಷೇತ್ರಕ್ಕೆ ತಂದ 4.86 ಕೋಟಿ ಅನುದಾನದಲ್ಲಿ 2.39 ಕೋಟಿ ಮೇಲುಕೋಟೆ ಸುರಿದಿದ್ದಾರೆ. 64 ಕಾಮಗಾರಿಗಳು ಪೂರ್ಣಗೊಂಡಿವೆ. 10 ಕಾಮಗಾರಿಗಳು ಪ್ರಗತಿಯಲ್ಲಿವೆ. 2015-16ರಲ್ಲಿ 4.57 ಕೋಟಿ ಅನುದಾನದಲ್ಲಿ ಮೇಲುಕೋಟೆಗೆ 2 ಕೋಟಿ ವಿನಿಯೋಗಿಸಿದ್ದಾರೆ. ಈ ಅನುದಾನದಲ್ಲಿ 75 ಕಾಮಗಾರಿ ಪೂರ್ಣಗೊಂಡಿದ್ದು, 14 ಕಾಮಗಾರಿ ಪ್ರಗತಿಯಲ್ಲಿವೆ. 2016-17ನೇ ಸಾಲಿನಲ್ಲಿ 2.61 ಕೋಟಿ ಬಿಡುಗಡೆಯಾಗಿದ್ದು, ಇದರಲ್ಲಿ ಮೇಲುಕೋಟೆಗೆ 2.37 ಕೋಟಿ ರೂ ಬಳಸಿದ್ದಾರೆ. ನಾಗಮಂಗಲ, ಮದ್ದೂರಿಗೆ 11 ಲಕ್ಷ, ಕೆ.ಆರ್.ಪೇಟೆಗೆ 2.62 ಲಕ್ಷ ಬಳಕೆ ಮಾಡಿದ್ದಾರೆ. ಇತರೆ ಕ್ಷೇತ್ರಗಳಿಗೆ ನಯಾಪೈಸೆ ಕೂಡ ನೀಡಿಲ್ಲ..!

ಕ್ಷೇತ್ರ ವಿಶೇಷ : ಮಂಡ್ಯ ಅಂದೊಡನೆ ಥಟ್​ ಅಂತ ನೆನಪಾಗೋದು ಕೆಆರ್​ಎಸ್ ಅಣೆಕಟ್ಟು. ಐತಿಹಾಸಿಕ, ಧಾರ್ಮಿಕ ಮತ್ತು ಸುಂದರ ಪ್ರವಾಸಿ ತಾಣಗಳ ಬೀಡಾಗಿರುವ ಮಂಡ್ಯದಲ್ಲಿ ಆದಿ ಚುಂಚನಗಿರಿ ಶ್ರೀ ಕ್ಷೇತ್ರ, ರಂಗನತಿಟ್ಟು ಪಕ್ಷಿಧಾಮ, ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ, ಗಂಜಾಂನ ನಿಮಿಷಾಂಭ ದೇವಾಲಯ, ಗಗನಚುಕ್ಕಿ ಫಾಲ್ಸ್, ಏಷ್ಯಾದ ಮೊದಲ ಶಿಂಷಾ ಜಲ ವಿದ್ಯುತ್ ಸ್ಥಾವರ, ಶಿವಪುರ ಸತ್ಯಾಗ್ರಹ ಸೌಧ, ಕೊಕ್ಕರೆ ಬೆಳ್ಳೂರು ಪಕ್ಷಿಧಾಮ ಸುಪ್ರಸಿದ್ಧವಾಗಿವೆ.

ಮಂಡ್ಯದಲ್ಲಿ ಸುಮಲತಾಗೆ ಬಿಜೆಪಿ ಬಲ..!

0

ಬೆಂಗಳೂರು : ಬಿಜೆಪಿ ಮಂಡ್ಯದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದೆ. ಸುಮಲತಾ ಅವರು ಕಣಕ್ಕಿಳಿಯುತ್ತಾರೆ ಎಂದು ತಿಳಿದಲ್ಲಿಂದಲೂ ಬಿಜೆಪಿ ಅವರಿಗೇ ಬೆಂಬಲ ನೀಡಲಿದೆ ಎಂದು ತಿಳಿದುಬಂದಿತ್ತು. ಸುಮಲತಾ ಅವರು ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ್ದರು. ಆದರೆ, ಬಿಜೆಪಿಯ ಅಂತಿಮ ನಿರ್ಧಾರ ಹೊರಬಂದಿರಲಿಲ್ಲ. ಇಂದು ನಿರ್ಧಾರ ಪ್ರಕಟಿಸಿದೆ.
ಇನ್ನು ಕೋಲಾರ ಕ್ಷೇತ್ರಕ್ಕೆ ಮುನಿಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು ಇದು ಬಿಜೆಪಿಯ ಅಚ್ಚರಿಯ ಆಯ್ಕೆಯಾಗಿದೆ. ಅಲ್ಲಿ ಛಲವಾದಿ ನಾರಾಯಣಸ್ವಾಮಿ, ಡಿ.ಎಸ್. ವೀರಯ್ಯ ಹೆಸರು ಕೇಳಿಬಂದಿತ್ತು.
ಇನ್ನು ಕೊಪ್ಪಳ, ರಾಯಚೂರು, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಚಿಕ್ಕೋಡಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸದೇ ಕಾದು ನೋಡುವ ತಂತ್ರವನ್ನು ಅನುಸರಿಸಿದೆ.

ರಾಜ್ಯದ ಬಿಜೆಪಿ ರಣಕಲಿಗಳು ಯಾರ‍್ಯಾರು..? ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ..!

ಕಾಂಗ್ರೆಸ್​​​ ಗೆಲ್ಲಿಸ್ತೀನಿ ಅಂತ ಶಪಥ ಮಾಡಿದ ಬಿಜೆಪಿ ಅಭ್ಯರ್ಥಿ..!

0

ಹಾಸನ : ಕಾಂಗ್ರೆಸ್​ ಗೆಲ್ಲಿಸ್ತೀನಿ ಅಂತ ಬಿಜೆಪಿ ಅಭ್ಯರ್ಥಿಯೊಬ್ಬರು ಶಪಥ ಮಾಡಿ ಯಡವಟ್ಟು ಮಾಡಿಕೊಂಡಿದ್ದಾರೆ…! ಈ ಯಡವಟ್ಟು ಮಾಡಿದವರು ಬೇರ್ಯಾರು ಅಲ್ಲ, ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಗೊಂಡು ಟಿಕೆಟ್ ಗಿಟ್ಟಿಸಿಕೊಂಡಿರುವ ಮಾಜಿ ಸಚಿವ ಎ. ಮಂಜು..!
ಬೇಲೂರು ಬಿಜೆಪಿ ಕಾರ್ಯರ್ತರ ಸಭೆಯಲ್ಲಿ ಮಾತನಾಡುತ್ತಾ ಎ.ಮಂಜು ಕಾಂಗ್ರೆಸ್​ ಗೆಲ್ಲಿಸೋದಾಗಿ ಶಪಥ ಮಾಡಿದ್ದಾರೆ. 2022ರ ಚುನಾವಣೆಯಲ್ಲಿ ಕ್ಷೇತ್ರದ 8 ಕಡೆಯೂ ಕಾಂಗ್ರೆಸ್ ಗೆಲ್ಲಿಸುತ್ತೇನೆ. ಹಾಸದಲ್ಲಿ ಬಿಜೆಪಿ ಗೆಲ್ಲಿಸೋ ಹೊಣೆ ನನ್ನದು ಎಂದು ಹೇಳಿದ್ದಾರೆ. ಬಿಜೆಪಿ ಗೆಲ್ಲಿಸುತ್ತೇನೆ ಎನ್ನುವ ಭರದಲ್ಲಿ ಎ. ಮಂಜು ಕಾಂಗ್ರೆಸ್​ ಗೆಲ್ಲಿಸುತ್ತೇನೆ ಎಂದಿದ್ದಾರೆ.

ದರ್ಶನ್, ಯಶ್ ಪ್ರಚಾರಕ್ಕೆ ಬಂದಿರೋದಕ್ಕೆ ಹೆದರಿ ದಾಳಿ ನಡೆಸಿದ್ದಾರೆ : ಸುಮಲತಾ

0

ಮಂಡ್ಯ : ನಟ ದರ್ಶನ್ ಮತ್ತು ಯಶ್ ಪ್ರಚಾರಕ್ಕೆ ಬರ್ತಾ ಇರೋದಕ್ಕೆ ಹೆದರಿ ದಾಳಿ ನಡೆಸಿದ್ದಾರೆ ಎಂದು ಮಂಡ್ಯ ‘ಲೋಕ’ಕಣದ ಪಕ್ಷೇತರ ಅಭ್ಯರ್ಥಿ ಸುಮಲತಾ ಹೇಳಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ‘ಉದ್ದೇಶ ಪೂರ್ವಕವಾಗಿಯೇ ಕಲ್ಲು ತೂರಾಟ ಮಾಡಿದ್ದಾರೆ. ನನ್ನ ಬೆಂಬಲಕ್ಕೆ ನಿಂತ ದರ್ಶನ್ ಮತ್ತು ಯಶ್​ ನೋಡಿ ಹೆದರಿಕೊಂಡು ಈ ಕೆಲಸ ಮಾಡಿದ್ದಾರೆ. ಹೆದರಿಕೆಯಿಂದಲೇ ಈ ದಾಳಿ ನಡೆದಿದೆ. ಆದರೆ, ಯಾರು ಏನೇ ಮಾಡಿದ್ರೂ ಫಲಿತಾಂಶದಲ್ಲಿ ಉತ್ತರ ಸಿಗುತ್ತೆ ಎಂದಿದ್ದಾರೆ.

ತುಮಕೂರಿನಿಂದ ದೇವೇಗೌಡರ ಸ್ಪರ್ಧೆ: ಶಕ್ತಿ ಪ್ರದರ್ಶನಕ್ಕೆ ಮುಂದಾದ ಹಾಲಿ ಸಂಸದ..!

0

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಹಾಲಿ ಸಂಸದರಾಗಿರುವ ಕಾಂಗ್ರೆಸ್​ನ ಎಸ್​ ಪಿ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ಕೈತಪ್ಪಿರುವ ಹಿನ್ನಲೆ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ಕರೆದಿರುವ ಮುದ್ದಹನುಮೇಗೌಡ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಲಿದ್ದಾರೆ. ಹೆಬ್ಬೂರು ಬಳಿಯ ತೋಟದ ನಿವಾಸದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ತುಮಕೂರು ಕಾಂಗ್ರೆಸ್ ಸಂಸದರು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಪಕ್ಷದ ವಿರುದ್ಧವೇ ಸಿಡಿದೆದ್ದ ಕಾಂಗ್ರೆಸ್ ಹಾಲಿ ಸಂಸದ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಟಿಕೆಟ್ ಕೈ ತಪ್ಪಿರುವ ಹಿನ್ನೆಲೆ ಸಂಸದರ ನಡೆ ಕುತೂಹಲ ಕೆರಳಿಸಿದೆ.

ಮುದ್ದಹನುಮೇಗೌಡರಿಗೆ ಟಿಕೆಟ್​ ತಪ್ಪಿದ್ದು ಇದೇ ಮೊದಲ ಬಾರಿಯಲ್ಲ. 2013ರಲ್ಲಿ ವಿಧಾನಸಭೆ ಚುನಾವಣೆಗೆ ಸ್ವತಃ ದೇವೇಗೌಡ್ರು ಬಿ ಫಾರಂ ಕೊಟ್ಟಿದ್ದರು. ಕೊನೆ ಕ್ಷಣದಲ್ಲಿ ಜೆಡಿಎಸ್​ ವರಿಷ್ಠರೇ ಮುದ್ದಹನುಮೇಗೌಡರಿಗೆ ಟಿಕೆಟ್​ ತಪ್ಪಿಸಿದ್ದರು. ಮುದ್ದಹನುಮೇಗೌಡರ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಲಾಗಿದೆ ಅಂತ ದೇವೇಗೌಡರ ವಿರುದ್ಧ ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಂಗಾಧರಯ್ಯ ಆರೋಪ ಮಾಡಿದ್ದಾರೆ. ವಿಧಾನಸಭೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ಮುದ್ದಹನುಮೇಗೌಡರಿಗೆ ಅಂದು ಬಿಗ್ ಶಾಕ್ ನೀಡಿದ್ರು. ಈಗ ಮತ್ತೋಮ್ಮೆ ಟಿಕೆಟ್ ಕೊಡದೇ ಮುದ್ದಹನುಮೇಗೌಡರನ್ನ ತುಳಿಯುತ್ತಿದ್ದಾರೆ ಅಂತ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸವರಾಜ್ ರಾಯರೆಡ್ಡಿ ಬೆಂಬಲಿಗರಿಂದ ಮೋದಿ ಪರ ಪೋಸ್ಟ್​​​..!

0

ಕೊಪ್ಪಳ: ಕಾಂಗ್ರೆಸ್​ ನಾಯಕ ಬಸವರಾಜ್ ರಾಯರೆಡ್ಡಿ ಬೆಂಬಲಿಗರು ಪ್ರಧಾನಿ ನರೇಂದ್ರ ಮೋದಿ ಪರ ಫೇಸ್​ಬುಕ್​​ನಲ್ಲಿ ಪೋಸ್ಟ್​ ಅಪ್​ಲೋಡ್ ಮಾಡಿದ್ದಾರೆ. ಕಾಂಗ್ರೆಸ್​​ ನಾಯಕರ ಬೆಂಬಲಿಗರು ಮೋದಿ ಪರ ಪೋಸ್ಟ್ ಹಾಕಿರುವುದು ಕೊಪ್ಪಳ‌‌ದಿಂದ ಬಸವರಾಜ್ ರಾಯರೆಡ್ಡಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸ್ತಾರಾ ಅನ್ನೋ ಅನುಮಾನಗಳನ್ನು ಹುಟ್ಟುಹಾಕಿದೆ. ” ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂಬ ಟ್ಯಾಗ್ ಲೈನ್​​ನಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕ ಬಸವರಾಜ್ ರಾಯರೆಡ್ಡಿ ಅವರ ಫೋಟೋ ಪೋಸ್ಟ್ ಮಾಡಲಾಗಿದೆ.

ಕೊಪ್ಪಳ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಸವರಾಜ ಅವರು ಟಿಕೆಟ್​ಗಾಗಿ ದೆಹಲಿ‌ ಮಟ್ಟದಲ್ಲಿ‌ ಲಾಭಿ ನಡೆಸಿದ್ದರು. ಕೊಪ್ಪಳ ಕಾಂಗ್ರೆಸ್ ಟಿಕೆಟ್ ಬಹುತೇಕ ರಾಜಶೇಖರ್ ಹಿಟ್ನಾಳ್ ಅವರಿಗೆ ಫಿಕ್ಸ್ ಆದ ಹಿನ್ನಲೆ ಬಸವರಾಜು ಬಿಜೆಪಿಯತ್ತ ಮುಖಮಾಡಿದ್ದಾರಾ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಟಿಕೆಟ್ ಕೊಟ್ರೆ  ಬಸವರಾಜ್ ರಾಯರೆಡ್ಡಿ ಅವರು ಬಿಜೆಪಿಗೆ ಬರೋ ಸಾಧ್ಯತೆಯ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಬಸವರಾಜ್ ರಾಯರೆಡ್ಡಿ ಈಗಾಗಲೇ ಒಂದು ಸುತ್ತಿನ‌ ಮಾತುಕತೆ ನಡೆಸಿದ್ದಾರೆ.

ತುಮಕೂರಿನಿಂದಲೇ ಮಾಜಿ ಪ್ರಧಾನಿ ದೇವೇಗೌಡರು ಕಣಕ್ಕೆ..!

0

ಬೆಂಗಳೂರು: ಮಾಜಿ ಪ್ರಧಾನಿ ಹೆಚ್​. ಡಿ. ದೇವೇಗೌಡ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸ್ತಾರೆ ಅನ್ನೋ ಬಗ್ಗೆ ಗೊಂದಲಗಳಿತ್ತು. ಜನರಲ್ಲಿ ಕುತೂಹಲವೂ ಇತ್ತು. ಈಗ ಇವೆಲ್ಲ ಗೊಂದಲಗಳಿಗೆ ತೆರೆಬಿದ್ದಿದ್ದು, ತುಮಕೂರಿನಿಂದಲೇ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಕಣಕ್ಕೆ ಇಳಿಯೋದು ಪಕ್ಕಾ ಆಗಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರು ಕಣಕ್ಕಿಳಿಯಲಿದ್ದಾರೆ. ಮಾ.25ರಂದು ಹೆಚ್​.ಡಿ ದೇವೇಗೌಡ ಅವರು ನಾಮಪತ್ರ ಸಲ್ಲಿಸಲಿದ್ದು ಜೆಡಿಎಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಇನ್ನಷ್ಟು ಚುರುಕುಗೊಂಡಿದೆ. ಅಂತೂ ಪಕ್ಷದ ಕಾರ್ಯಕರ್ತರ ಒತ್ತಾಯಕ್ಕೆ ಸ್ಪರ್ಧೆಗೆ ಒಪ್ಪಿರೋ ದೊಡ್ಡಗೌಡರು ಕ್ಷೇತ್ರವನ್ನೂ ಆರಿಸಿಕೊಂಡಾಗಿದೆ. ಶಾಸಕ ಗೌರಿಶಂಕರ್ ಅವರು ದೇವೇಗೌಡರನ್ನು ತುಮಕೂರಿನಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದರು.

Popular posts