Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Thursday, June 27, 2019

ರೋಷನ್​ ಬೇಗ್ ಸೇರಿ 25 ಶಾಸಕರು ‘ಕೈ’ಗೆ ಗುಡ್​ಬೈ ಹೇಳ್ತಾರಾ?

0

ಕಲಬುರಗಿ : 20 ರಿಂದ 25 ಶಾಸಕರು ಬಿಜೆಪಿಗೆ ಬರುವ ಲಕ್ಷಣ ಕಾಣುತ್ತಿದೆ ಅಂತ ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ”20 ರಿಂದ 25 ಶಾಸಕರು ಬಿಜೆಪಿಗೆ ಬರುವ ಲಕ್ಷಣ ಕಾಣುತ್ತಿದೆ. ರೋಷನ್​ ಬೇಗ್​ ಸೇರಿದಂತೆ ಇತರರು ಬಿಜೆಪಿಗೆ ಸೇರ್ಪಡೆ ಸಾಧ್ಯತೆ ಇದೆ” ಎಂದರು.
”ರೋಷನ್ ಬೇಗ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಸುಭದ್ರ ಸರ್ಕಾರಕ್ಕಾಗಿ ಶಾಸಕರು ಬಿಜೆಪಿಗೆ ಬರಲಿದ್ದಾರೆ. ಕುಂದಗೋಳ, ಚಿಂಚೋಳಿಯಲ್ಲಿ ಬಿಜೆಪಿ ಗೆಲ್ಲುತ್ತೆ” ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಿನಬೆಳಗಾದ್ರೆ ಮಂಡ್ಯದ್ದೇ ಸುದ್ದಿ – ಮಾಧ್ಯಮಗಳ ಬಗ್ಗೆ ಸಿಎಂ ಅಸಮಾಧಾನ

0

ಮಂಡ್ಯ: ದಿನ ಬೆಳಗಾದ್ರೆ ಮಂಡ್ಯದ್ದೇ ಸುದ್ದಿ. ನೀವು ಏನೇ ಪ್ರಯತ್ನಪಟ್ಟರೂ,ಎಷ್ಟೇ ಅಪಪ್ರಚಾರ ಮಾಡಿದ್ರೂ ಮಂಡ್ಯ ಜನತೆಯನ್ನ ಬದಲಾವಣೆ ಮಾಡಲು ಸಾದ್ಯವಿಲ್ಲ ಅಂತ ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಹಾಸನ- ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಬಾಲಕೃಷ್ಣ ಮನೆಯಲ್ಲಿ ಉಪಹಾರ ಸೇವಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ  ಅವರು ಮಾದ್ಯಮಗಳ ಬಗ್ಗೆ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.

“ವಾಹಿನಿಗಳ ಮಾಲೀಕರು ನಿರಾಸೆಗೊಳಗಾಗುತ್ತೀರಾ. ನಾನೇನು ಗಾಬರಿಯಾಗಿಲ್ಲ,ಆತಂಕಗೊಂಡಿಲ್ಲ. ಮೇ 23ಕ್ಕೆ ಫಲಿತಾಂಶ ಬಂದಾಗ ಎಲ್ಲವೂ ಗೊತ್ತಾಗಲಿದೆ. ಮಂಡ್ಯದಲ್ಲಿ ಕೆಲವು ಸಮಸ್ಯೆಗಳಾಗುತ್ತಿವೆ. ಇದರಿಂದ ಅಕ್ಕಪಕ್ಕದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಮಸ್ಯೆ ಆಗದಂತೆ ನಾನೇ ಖುದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸುತ್ತಿದ್ದೇನೆ. ನರೇಂದ್ರ ಮೋದಿಗೂ ಇದು ಸುಲಭದ ಚುನಾವಣೆ ಅಲ್ಲ. 2014 ಕ್ಕು 2019 ಕ್ಕೂ ಸಾಕಷ್ಟು ಬದಲಾವಣೆ ಆಗಿದೆ. ನಮ್ಮನ್ನ ಕಿಚಡಿ ಪಾರ್ಟಿ ಅಂತಾರೆ. ಅವರು ಕಳೆದ ಐದು ವರ್ಷದಲ್ಲಿ ಅಭಿವೃದ್ಧಿ ಮಾಡಿದ್ರೆ ಪ್ರಾದೇಶಿಕ ಪಕ್ಷಗಳ ಮುಂದೆ ಹೋಗಿ ನಿಲ್ಲಬೇಕಿರಲಿಲ್ಲ. ರೈತರು ಈ ಬಿಜೆಪಿ ಅಧಿಕಾರದಿಂದ ನೊಂದಿದ್ದಾರೆ. ದೇವೇಗೌಡರರಿಗೆ ರಾಷ್ಟ್ರ ರಾಜಕಾರಣದಲ್ಲಿ ವಿಶೇಷ ಶಕ್ತಿ ಬರೋ ವಾತಾವರಣ ಬರಲಿದೆ. ಹಾಗಂತ ಪ್ರದಾನಿ ಆಗ್ತಾರೆ ಅಂತಾ ನಾನು ಹೇಳುತ್ತಿಲ್ಲ” ಅಂತ ಹೇಳಿದ್ದಾರೆ.

ಹಕ್ಕು ಚಲಾಯಿಸಿದ 90ರ ವೃದ್ಧ..!

0

ದಾವಣಗೆರೆ: ದಾವಣಗೆರೆಯಲ್ಲಿ 90 ವರ್ಷದ ವೃದ್ಧರೊಬ್ಬರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ನಡೆಯಲು ಅಶಕ್ತರಾಗಿದ್ದರೂ ವೀಲ್ ಚೇರ್​​​ನಲ್ಲಿ ಬಂದು ಮತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

90 ವರ್ಷ ವಯಸ್ಸಿನ ಎಸ್.ಆರ್.ಅಗಡಿ ಎಂಬುವರು ಮತ ಚಲಾಯಿಸಿ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಜನ ಮತದಾನದ ಹಕ್ಕು ಚಲಾಯಿಸಲಿದ್ದಾರೆ. ಮತ ಚಲಾಯಿಸಿ ಮಾತನಾಡಿದ ಅಗಡಿಯವರು “ಮತದಾನ ನಮ್ಮ ಉಸಿರಿಗಿಂತ ಹೆಚ್ಚು. ಪ್ರತಿಯೊಬ್ಬರು ಮತದಾನ ಮಾಡಿ” ಎಂಬ ಸಂದೇಶ ನೀಡಿದ್ದಾರೆ.

ಟೂರಿಂಗ್ ಟಾಕೀಸ್ 18ರವರೆಗೆ, ಆ ಮೇಲೆ ಸುಮಕ್ಕನೂ ಇಲ್ಲ ಪಮಕ್ಕಾನೂ ಇಲ್ಲ: ಶಿವರಾಮೇ ಗೌಡ ವಾಗ್ದಾಳಿ

0

ಮಂಡ್ಯ: ಈಗ ಎಲ್ಲಾ ಫಿಲ್ಮಿ ಸ್ಟೈಲ್​ನಲ್ಲಿ ನಡೀತಿದೆ. ಸುಮಲತಾ ಟೂರಿಂಗ್ ಟಾಕೀಸ್ ಹದಿನೆಂಟನೇ ತಾರೀಕಿನವರೆಗೂ ನಡೆಯುತ್ತೆ. ಆ ಮೇಲೆ ಸುಮಕ್ಕನೂ ಇಲ್ಲ ಪಮಕ್ಕಾನೂ ಇಲ್ಲ ಅಂತ ಸಂಸದ ಎಲ್. ಆರ್. ಶಿವರಾಮೇಗೌಡ ಹೇಳಿದ್ದಾರೆ.

ಮದ್ದೂರು ತಾಲೂಕಿನ ಕೊಪ್ಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಿವರಾಮೇಗೌಡ ಅವರು ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಅಂಬರೀಶ್ ವಸತಿ ಸಚಿವರಾಗಿದ್ದಾಗ ಬಡವರಿಗೆ ಯಾಕ್ ಮನೆ ಕೊಡಿಸ್ಲಿಲ್ಲ..? ಆಗ ಗೌರಮ್ಮನ ಹಾಗೆ ಮನೆಲಿದ್ಬುಟ್ಟು, ಈಗ ಬಂದವ್ಳೇ ಈಯಮ್ಮ. ಇವರೆಲ್ಲಾ ಟೂರಿಂಗ್​ ಟಾಕೀಸ್​. ಇಲ್ಲಿ ಫಿಲ್ಮಿ ಶೂಟಿಂಗ್​ ನಡೀತಿದೆ. ಆಮೇಲೆ ಇವ್ರನ್ನೆಲ್ಲಾ ಹುಡುಕಲು ಗಾಂಧಿನಗರಕ್ಕೆ ಹೋಗ್ಬೇಕು. ಆಮೇಲೆ ಅವರನ್ನ ನೋಡಲು ಗಾಂಧಿನಗರಕ್ಕೆ ಹೋಗಬೇಕಾಗುತ್ತೆ. ಹುಡಕಲು ನೀವೆಲ್ಲಾ ಅಲ್ಲಿಗೆ ಹೋಗ್ತಿರಾ ಹೇಳೀ..? ಅಂತ ಪ್ರಶ್ನಿಸಿದ್ದಾರೆ.

ನಟ ದರ್ಶನ್​, ಯಶ್​, ರಾಕ್​ಲೈನ್​ ವಿರುದ್ಧವೂ ಶಿವರಾಮೇಗೌಡ ಅವರು ವಾಗ್ದಾಳಿ ನಡೆಸಿದ್ದು, “ದರ್ಶನ್ ನಾಯ್ಡು, ಸುಮಲತಾ ನಾಯ್ಡು, ರಾಕ್​ಲೈನ್ ವೆಂಕಟೇಶ್​ ಕೂಡ ನಾಯ್ಡು. ಮಂಡ್ಯ ನಾಯ್ಡುಮಯ ಮಾಡಲು ಬಿಡಬಾರದು. ಅವನ್ಯಾರೋ ರಾಕ್ ಲೈನ್ ಅಂತೆ. ಇವತ್ತು ದರ್ಶನ್ ಬಂದಿದ್ದಾನಲ್ಲಾ..? ಇವನೂ ನಾಯ್ಡು, ಸುಮಲತಾ ನಾಯ್ಡು ರಾಕ್ ಲೈನ್ ಮೆಂಟೇಶನ್ ನಾಯ್ಡು. ಲೇ ಗೌಡ್ರು ಕತೆ ಏನಾಗಬೇಕ್ರೋ? ಅವಳ ಗಂಡನ ನಂಬಿಕೊಂಡೆ ನಾನು 20 ವರ್ಷ ಹಾಳು ಮಾಡ್ಕೊಂಡೆ. 20 ವರ್ಷ ಅಧಿಕಾರ ವಂಚಿತರಾಗಿ ಕೂರಲು ಈ ಪುಣ್ಯಾತ್ಮನ ಪಾರ್ಟಿಗೆ ಕರೆತಂದ್ದು ಕಾರಣ” ಅಂತ ಟೀಕಿಸಿದ್ದಾರೆ.

ಮಂಡ್ಯದಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಹೆಚ್ಚಿದ ಆಕ್ರೋಶ..!

0

ಮಂಡ್ಯ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಸ್ಟಾರ್​ವಾರ್​ಗೆ ಸಾಕ್ಷಿಯಾಗಿರುವ ಮಂಡ್ಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ.
ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಕಣಕ್ಕಿಳಿಯುತ್ತಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿ ಪಕ್ಷೇತರರಾಗಿ ಸುಮಲತಾ ಅಂಬರೀಶ್ ಅವರು ಕಣಕ್ಕಿಳಿದಿದ್ದಾರೆ.
ಈ ನಡುವೆ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ದೇವೇಗೌಡರ ಕುಟುಂಬದ ವಿರುದ್ಧ ಮಂಡ್ಯದಲ್ಲಿ ಜನಾಕ್ರೋಶ ಹೆಚ್ಚುತ್ತಿದೆ. ಸಿಎಂ ಕುಮಾರಸ್ವಾಮಿ, ಸಚಿವ ಹೆಚ್​.ಡಿ ರೇವಣ್ಣ ಅವರು ನೀಡಿರುವ ಹೇಳಿಕೆಗೆಳು ನಿಖಿಲ್​ ಅವರಿಗೆ ಆಘಾತವನ್ನುಂಟು ಮಾಡುವ ಸಾಧ್ಯತೆ ಇದೆ. ಈ ಹಿಂದೆ ಗೋ ಬ್ಯಾಕ್​ ನಿಖಿಲ್ ಕ್ಯಾಂಪೇನ್ ಜೋರಾಗಿ ನಡೆದಿತ್ತು. ಈಗ ದೇವೇಗೌಡರ ಇಡೀ ಕುಟುಂಬದ ವಿರುದ್ಧ ನೆಟ್ಟಿಗರು ಮುಗಿ ಬಿದ್ದಿದ್ದಾರೆ.
ಕೆಆರ್​ಎಸ್​ಗೆ ಹೇಮಾವತಿ ನೀರು ಬಿಡುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ರು ದೇವೇಗೌಡ್ರು. ಆದ್ರೆ ಈಗ ಮಂಡ್ಯವನ್ನು ಗುತ್ತಿಗೆ ಪಡೆಯೋಕೆ ಬಂದಿದ್ದಾರೆ ಅಂತ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಚಿತ್ರರಂಗದ ವಿರುದ್ಧ ಸಿಎಂ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಬಗ್ಗೆ. ‘ನೀವೂ ಬಣ್ಣ ಹಚ್ಚಿದವರೇ ಮರೆಯಬೇಡಿ’ ಎಂದು ಕಿಡಿಕಾರಿದ್ದಾರೆ ನೆಟ್ಟಿಗರು.

ಸಿಎಂ ವಿರುದ್ಧವೇ ಐಟಿ ಅಧಿಕಾರಿಗಳ ದೂರು..!

0

ಬೆಂಗಳೂರು : ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧವೇ ಐಟಿ ಅಧಿಕಾರಿಗಳು ದೂರು ನೀಡಿದ್ದಾರೆ.
ತಮ್ಮ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಐಟಿ ಅಧಿಕಾರಿಗಳು ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಸಿಎಲ್​ಪಿ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಕಂಪ್ಲೇಂಟ್ ನೀಡಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ.
 ಮಂಡ್ಯ, ಹಾಸನ, ಮೈಸೂರು ಭಾಗಗಳಲ್ಲಿ ದಾಳಿ ನಡೆಸಿದ್ವಿ. ಕುಮಾರಸ್ವಾಮಿ, ಪರಮೇಶ್ವರ್​, ಸಿದ್ದರಾಮಯ್ಯ ಮೊದಲಾದ ನಾಯಕರು ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಅಂತ ದೂರು ನೀಡಿರೋ ಐಟಿ ಅಧಿಕಾರಿಗಳು ಐಪಿಸಿ ಸೆಕ್ಷನ್​​​​ 143,149, 504, 505, 506,186,187,189ರ ಅಡಿ ಕ್ರಮಕ್ಕೆ ಮನವಿ ಮಾಡಿದ್ದಾರೆ.

ದೇವೇಗೌಡ್ರು, ಕುಮಾರಸ್ವಾಮಿ, ರಾಹುಲ್​ ಗಾಂಧಿ ಟಿಕೆಟ್ ಹಂಚಿಕೆ ತೀರ್ಮಾನ ತಗೊಳ್ತಾರಂತೆ!

0

ಬೀದರ್ : ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ್ರು, ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಎಪಿಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಜಿಲ್ಲೆಯ ಲೋಕಸಭಾ ಸೀಟು ಹಂಚಿಕೆ ತೀರ್ಮಾನ ತೆಗೆದುಕೊಳ್ತಾರೆ ಅಂತ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದ್ರು. ಈ ಮೂಲಕ ‘ಲೋಕ’ ಸಮರದಲ್ಲಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸೂಚನೆ ನೀಡಿದ್ರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಟಿಕೆಟ್​ ಹಂಚಿಕೆಯಾಗಬೇಕು. ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ್ರು, ಸಿಎಂ ಕುಮಾರಸ್ವಾಮಿ ಹಾಗೂ ಎಐಸಿಸಿ ಅಧ್ಯಕ್ಷ್ಯ ರಾಹುಲ್ ಗಾಂಧಿ ಅವರು ಯಾವ ಜಿಲ್ಲೆ ಜೆಡಿಎಸ್​ಗೆ ಬಿಡಬೇಕು ಎಂದು ಟಿಕೆಟ್ ಹಂಚಿಕೆಯ ಬಗ್ಗೆ ತೀರ್ಮಾನ ತೆಗೆದು ಕೊಳ್ತಾರೆ. ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಕೂಡ ಇದೇ ಮಾದರಿಯಲ್ಲಿ ಕೆಲಸ ಮಾಡಲಾಗುವುದು ಎಂದು ಹೇಳಿದ್ರು.

‘ದೇಶಕ್ಕಾಗಿ ಬಿಜೆಪಿಯ ಒಂದು ನಾಯಿಯೂ ಸತ್ತಿಲ್ಲ’ : ಮಲ್ಲಿಕಾರ್ಜುನ ಖರ್ಗೆ

0

ಯಾದಗಿರಿ : ದೇಶಕ್ಕಾಗಿ ಬಿಜೆಪಿಯ ಒಂದು ನಾಯಿಯೂ ಸತ್ತಿಲ್ಲ ಅಂತ ಕಾಂಗ್ರೆಸ್​ನ ಹಿರಿಯ ನಾಯಕ, ರಾಜಕೀಯ ಮುತ್ಸದ್ಧಿ, ಸಂಸದ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಯಾದಗಿರಿಯ ಕೊಂಕಲ್​​ನಲ್ಲಿ ಭಾಷಣದ ಅಬ್ಬರದ ನಡುವೆ ಖರ್ಗೆಯವರು ಮನಸೋ ಇಚ್ಛೆ ಮಾತನಾಡಿದ್ದಾರೆ. ”ದೇಶದ ಸ್ವಾತಂತ್ರ್ಯದ ಬಗ್ಗೆ ಮೋದಿಗಿಂತ ಹೆಚ್ಚು ನನಗೆ ಗೊತ್ತು. ವಯಸ್ಸಿನಲ್ಲಿ ನನಗಿಂತ ಮೋದಿ ಚಿಕ್ಕವನು. ಸ್ವಾತಂತ್ರ್ಯ ಬಂದಾಗ ಮೋದಿ ಹುಟ್ಟಿರಲಿಲ್ಲ, ನಾನು ಹುಟ್ಟಿದ್ದೆ..! ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರೇ ಕಾಂಗ್ರೆಸ್​ನವರು. ಆದರೆ, ದೇಶಕ್ಕಾಗಿ ಬಿಜೆಪಿಯ ಒಂದು ನಾಯಿಯೂ ಸತ್ತಿಲ್ಲ. ಇಂಥವರು ನಮಗೆ ದೇಶಭಕ್ತಿಯ ಪಾಠ ಮಾಡುತ್ತಾರೆ” ಎಂದು ಮಲ್ಲಿಕಾರ್ಜುನ ಖರ್ಗೆ ಅವರು ನಾಲಗೆ ಹರಿಬಿಟ್ಟಿದ್ದಾರೆ.

ಸುಮಲತಾ ಗೆದ್ರೆ ಅಂಬರೀಶ್, ಅಂಬರೀಶ್​ ಗೆದ್ರೆ ಮಂಡ್ಯದ ಜನ ಗೆದ್ದಂತೆ: ದೊಡ್ಡಣ್ಣ

0

ಮಂಡ್ಯ: ಸುಮಲತಾ ಅವರು ಗೆಲ್ಲಬೇಕು. ಅವರು ಗೆದ್ರೆ ಅಂಬರೀಶ್ ಗೆಲ್ತಾರೆ. ಅಂಬರೀಶ್ ಗೆದ್ರೆ ಮಂಡ್ಯ ಗೆಲ್ಲುತ್ತೆ. ಮಂಡ್ಯದ ಸ್ವಾಭಿಮಾನಿ ಜನ ಗೆಲ್ತಾರೆ ಅಂತ ನಟ ದೊಡ್ಡಣ್ಣ ಹೇಳಿದ್ರು.

ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, “ಕೇಬಲ್ ಕಟ್​ ಮಾಡ್ಸಿದ್ದಾರೆ ಅಂತ ಯಾರೋ ಹೇಳಿದ್ರು. ಸೂರ್ಯನಿಗೆ ಛತ್ರಿ ಹಿಡಿದು ಭೂಮಿಗೆ ಕತ್ತಲು ಮಾಡಕ್ಕಾಗುತ್ತಾ..? ದೇವರಾಣೆಗೂ ಇಲ್ಲ. ಕೇಬಲ್ ಕಟ್​ ಮಾಡ್ಸಿದವರು ಇದನ್ನು ತಿಳಿದುಕೊಳ್ಳಬೇಕು” ಅಂದ್ರು.

“ ಮಂಡ್ಯದ ಜನ ದರ್ಪ, ಅಧಿಕಾರದ ಹಿಂದೆ ಹೋಗ್ತಾರಾ..? ಅವರು ಗಂಡುಮೆಟ್ಟಿನ ನಾಡಿನ ಜನ. ಅವರಿಗೆ ಭಯವೇ ಗೊತ್ತಿಲ್ಲ. ಸೋಲು ಅನ್ನೋದು ಅವ್ರಿಗೆ ಗೊತ್ತಿಲ್ಲ. ಅಂಬರೀಶ್ ಅವರು ಅವರ ಮಗುವಿನ ಮನಸಿನಿಂದ ಜನರ ಪ್ರೀತಿ ಸಂಪಾದಿಸಿದ್ರು. ಸುಮಲತಾ ಅವರು ಗೆಲ್ಲಬೇಕು. ಶ್ರೀ ಶಕ್ತಿ, ನಮ್ಮ ತಾಯಂದಿರು ಸುಮಲತಾ ಅವರಿಗೆ ಓಟ್ ಹಾಕಿ. ಅವರು ನಿಮ್ಮ ಅಕ್ಕ, ತಂಗಿ, ನಿಮ್ಮ ಮನೆ ಮಗಳು” ಅಂತ ಹೇಳಿದ್ರು.

 

ತಾಜ್​ಮಹಲ್ ಶಿವಮಂದಿರವಾಗಿತ್ತು : ಅನಂತ್​ಕುಮಾರ್ ಹೆಗಡೆ

0

ಕೊಡಗು : ತಾಜ್​ಮಹಲ್​ ಹಿಂದೆ ಶಿವಮಂದಿರವಾಗಿತ್ತು ಎಂದು ಕೇಂದ್ರ ಸಚಿವ ಅನಂತ್​ ಕುಮಾರ್​ ಹೆಗಡೆ ಹೇಳಿದ್ದಾರೆ. ಸದಾ ಒಂದಿಲ್ಲೊಂದು ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುವ ಅನಂತ್​ಕುಮಾರ್ ಹೆಗಡೆಯವರು ಇಂದೂ ಒಂದಿಷ್ಟು ವಿವಾದಿತ ಹೇಳಿಕೆಗಳನ್ನು ನೀಡಿದ್ದಾರೆ.
ಕೊಡಗಿನ ಮಾದಾಪುರದಲ್ಲಿ ನಡೆದ ಹಿಂದೂ ಐಕ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ”ತಾಜ್​ಮಹಲ್​ ಅನ್ನು ಕಟ್ಟಿಸಿದ್ದು ಮುಸಲ್ಮಾನರಲ್ಲ. ಅದು ಶಿವಮಂದಿರವಾಗಿತ್ತು. ರಾಜಾ ಜಯಸಿಂಹನಿಂದ ಕೊಂಡುಕೊಂಡ ಕಟ್ಟಡವಾಗಿತ್ತು. ತೇಜೋ ಮಹಾಲಯ ನಂತರದಲ್ಲಿ ತಾಜ್​ಮಹಲ್ ಆಯ್ತು. ಷಹಜಹಾನ್​ನೇ ಸ್ವತಃ ಇದನ್ನು ತನ್ನ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾನೆ” ಎಂದರು.
”ಕುತುಬ್​​ ಮಿನಾರ್​ ಕಟ್ಟಿಸಿದ್ದು ಕುತು್ಬುದ್ದೀನ್ ಐಬಕ್ ಅನ್ನೋ ಸುಳ್ಳು ಇತಿಹಾಸ ಸೃಷ್ಟಿ ಮಾಡಲಾಗಿದೆ. ಆದ್ರೆ ಅದು ಜೈನರ 24ನೇ ತೀರ್ಥಂಕರ ಮಹಾವೀರರ ದೇವಾಲಯವಾಗಿತ್ತು” ಅಂತಲೂ ಹೆಗಡೆ ಹೇಳಿದ್ರು.
ಅಷ್ಟೇ ಅಲ್ಲದೆ ಇದೇ ವೇಳೆ ” ಕಮ್ಯೂನಿಸ್ಟರು ಸಮಾಜಕ್ಕೆ ಹಿಡಿದ ದೊಡ್ಡ ಗೆದ್ದಲು. ಹಿಂದೂ ಹುಡುಗಿ ಮೈ ಮುಟ್ಟಿದರೆ ಕೈ ಇರಬಾರದು. ಇತಿಹಾಸ ಬರೆಯೋದೆ ಹೀಗೆ, ಪೌರುಷ ಇದ್ರೆ ಇತಿಹಾಸ ಬರೆಯಿರಿ” ಎಂಬ ವಿವಾದಿತ ಹೇಳಿಕೆಯನ್ನೂ ನೀಡಿದ್ರು.
ಇನ್ನು ಶಬರಿಮಲೆಗೆ ಪ್ರವೇಶಿಸಿದ್ದ ಮಹಿಳೆಯರು ಕೊಡಗಿನಲ್ಲಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ,”ಕೊಡಗಿನಲ್ಲಿ ನಡೆಯುವ ಸಮಾಜಘಾತುಕ ಚಟುವಟಿಕೆ ಗಮನಿಸಿ, ಮನೆಮುರುಕರು ಕೊಡಗು ಪ್ರವೇಶಿಸಿದರೆ ಮಣ್ಣಲ್ಲಿ ಮಣ್ಣಾಗಿಸಿ” ಎಂದರು.

Popular posts