Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Tuesday, March 26, 2019

ತಪ್ಪಾಯ್ತು ಕ್ಷಮಿಸಿ ಬಿಡಿ ಅಂತ ಸ್ಪೀಕರ್ ಕಚೇರಿಯಿಂದ ಹೊರಬಂದ ಬಿಜೆಪಿ ನಾಯಕರು!

0

ಬೆಂಗಳೂರು :  ಬಜೆಟ್​ ದಿನ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಸಿಡಿಸಿದ ‘ಆಪರೇಷನ್​ ಆಡಿಯೋ ಬಾಂಬ್​’ ಬಿಜೆಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸ್ಪೀಕರ್ ರಮೇಶ್ ಕುಮಾರ್ ಅವರ ಸಲಹೆಯಂತೆ ಎಸ್​ಐಟಿ ತನಿಖೆಗೆ ಮೈತ್ರಿ ಒಪ್ಪಿದ್ದು, ಎಸ್ಐಟಿ ತನಿಖೆಗೆ ಒಪ್ಪಿಸಿಯೇ ಸಿದ್ಧ ಅಂತ ಪಟ್ಟು ಹಿಡಿದಿದೆ. ಆದರೆ, ಬಿಜೆಪಿ ಎಸ್​ಐಟಿ ತನಿಖೆಯಲ್ಲಿ ನಂಬಿಕೆಯಿಲ್ಲ. ತನಿಖೆ ಆಗುವುದಾದರೆ ನ್ಯಾಯಾಂಗ ತನಿಖೆಯಾಗಲಿ ಇಲ್ಲವೇ ಸದನ ಸಮಿತಿಗೆ ಒಪ್ಪಿಸಬೇಕು ಅಂತ ಬಿಜೆಪಿ ಪಟ್ಟು ಹಿಡಿದಿದೆ.

ಈ ನಡುವೆ ಬಿಜೆಪಿ ನಾಯಕರು ನಮ್ಮಿಂದ ತಪ್ಪಾಗಿದೆ ಅಂತ ಮತ್ತೊಮ್ಮೆ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಆಗಿದ್ದಾಯ್ತು ಕ್ಷಮಿಸಿಬಿಡಿ ಅಂತ ಸ್ಪೀಕರ್​ ಅವರಲ್ಲಿ ವಿನಮ್ರವಾಗಿ ಮನವಿಯನ್ನೂ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ ಅವರ ಮನವಿ ಹಾಗೂ ಸಲಹೆಯಂತೆ ಇಂದು ಸ್ಪೀಕರ್ ರಮೇಶ್ ಕುಮಾರ್ ಅವರು ಮೂರು ಪಕ್ಷಗಳ ನಾಯಕರ ಸಭೆಯನ್ನು ಕರೆದಿದ್ದರು.  ಈ ವೇಳೆ ಸಭೆಗೆ ಹಾಜರಾದ ಬಿಜೆಪಿ ನಾಯಕರು ‘ನಮ್ಮಿಂದ ತಪ್ಪಾಯ್ತು. ಆಗಿದ್ದಾಗಿದೆ ದಯವಿಟ್ಟು ಕ್ಷಮಿಸಿ ಬಿಡಿ’ ಅಂತ  ಮನವಿ ಮಾಡಿ ಸಭೆಯನ್ನು ಅರ್ಧಕ್ಕೆ ಬಿಟ್ಟು ಸ್ಪೀಕರ್ ಕೊಠಡಿಯಿಂದ ಹೊರಬಂದಿದ್ದಾರೆ.  ಒಟ್ಟಾರೆ ಸ್ಪೀಕರ್​ ಕೊಠಡಿಯಲ್ಲಿ ನಡೆದ ಸಭೆ ವಿಫಲವಾಗಿದ್ದು, ಸರ್ಕಾರ ಎಸ್​ಐಟಿ ತನಿಖೆಗೆ ಒಪ್ಪಿಸೋದು ಬಹುತೇಕ ಖಚಿತ.

ಮಂಡ್ಯದಲ್ಲಿ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆಗೆ ವಿರೋಧ..!

0

ಮಂಡ್ಯ : ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಮಂಡ್ಯ ಲೋಕಸಭಾ ಕಣ ಸ್ಟಾರ್ ವಾರ್​ಗೆ ಸಾಕ್ಷಿಯಾಗುತ್ತಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಈಗಾಗಲೇ ಮಂಡ್ಯ ಕ್ಷೇತ್ರ ಎಲ್ಲರ ಚಿತ್ತವವನ್ನು ತನ್ನತ್ತ ಸೆಳೆದಿದೆ.
ಮೈತ್ರಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್​ ಕುಮಾರಸ್ವಾಮಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಜೊತೆಗೆ ಮೈತ್ರಿ ಟಿಕೆಟ್​ ಸಿಗದೇ ಇದ್ರೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ ಸುಮಲತಾ ಅಂಬರೀಶ್.
ಹೀಗೆ ಮಂಡ್ಯ ಚುನಾವಣಾ ಕಣ ಈಗಾಗಲೇ ರಂಗೇರಿದೆ. ಹೀಗಿರುವಾಗ ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿದೆ. ಮಂಡ್ಯದಲ್ಲಿ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ವಿರೋಧಿಸಿ ರೆಬಲ್​ ಸ್ಟಾರ್ ಅಂಬರೀಶ್​ ಅವರ ಅಭಿಮಾನಿಯೊಬ್ಬರು ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
‘ನಿಖಿಲ್​ ಬಿಟ್ಟು ಮತ್ಯಾವ ಆಕಾಂಕ್ಷಿಯೂ ಇರಲಿಲ್ಲವೇ..? ಜೆಡಿಎಸ್​ ಮುಖಂಡರಾದ ದಿ. ತೊಪ್ಪನಹಳ್ಳಿ ಪ್ರಕಾಶ್ ಅವರ ಪತ್ನಿಗೆ ಟಿಕೆಟ್ ಕೊಡಬಹುದಿತ್ತು. ಅಶೋಕ್​ ಜಯರಾಮ್​ ಸೇರಿ ಹಲವರು ಟಿಕೆಟ್​ ಆಕಾಂಕ್ಷಿಗಳಿದ್ದಾರೆ’ ಎಂದು ಹೇಳಿರುವ ಅಭಿಮಾನಿ, ಸುಮಲತಾ ಅವರ ಕೊಡುಗೆ ಏನು ಎಂದಿರೋ ಸಿಎಂಗೆ, ‘ನಿಮ್ಮ ಪತ್ನಿಯವರ ಕೊಡುಗೆಯಾದ್ರೂ ಏನು’ ಎಂದು ಪ್ರಶ್ನಿಸಿದ್ದಾರೆ.

ಶ್ರೀನಿವಾಸ್​ ಅಲ್ಲಿ ಇಲ್ದೇ ಇದ್ದಿದ್ರೆ ಅಹಿತಕರ ಘಟನೆ ನಡೀತಿತ್ತಂತೆ!

0

ದಾವಣಗೆರೆ : ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದಾಗ ಶ್ರೀ ಸಿದ್ಧಗಂಗಾ ಮಠದ ಬಂದೋಬಸ್ತ್​ನಲ್ಲಿದ್ದ ಐಪಿಎಸ್​ ಅಧಿಕಾರಿ ದಿವ್ಯಾ ಗೋಪಿನಾಥ್​ ಅವರನ್ನು ಸಚಿವ ಸಾ.ರಾ ಮಹೇಶ್ ನಿಂದಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಎಸ್​.ಆರ್​ ಶ್ರೀನಿವಾಸ್​ ಪ್ರತಿಕ್ರಿಯೆ ನೀಡಿದ್ದು, ”ತಾನು ಅಲ್ಲಿ ಇಲ್ಲದೇ ಇದ್ದಿದ್ದರೆ ಅಹಿತಕರ ಘಟನೆ ನಡೀತಿತ್ತು” ಅಂತ ಹೇಳಿದ್ದಾರೆ.
ದಾವಣಗೆರೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ ದಿವ್ಯಾ ಗೋಪಿನಾಥ್ ತುಂಬಾ ಒಳ್ಳೆಯ ಅಧಿಕಾರಿ. ಘಟನೆ ನಡೆದಾಗ ನಾನೂ ಅವರ ಹಿಂದೆ ಇದ್ದೆ. ಸರ್ಕಾರದ ನಿರ್ದೇಶನದಂತೆ ಅವರು ಕರ್ತವ್ಯ ಮಾಡುತ್ತಿದ್ದರು. 15 ಲಕ್ಷ ಜನರಲ್ಲಿ ಸಚಿವರನ್ನು ಗುರುತಿಸುವುದು ಅಸಾಧ್ಯ. ಐಡಿ ಕಾರ್ಡ್ ಇಲ್ಲದಿದ್ದರಿಂದ ಒಳಗಡೆ ಬಿಡದೆ ತಡೆದಿದ್ದರು. ಆಗ ಕೋಪಗೊಂಡ ಮಹೇಶ್ ಅಧಿಕಾರಿ ವಿರುದ್ಧ ಹರಿಹಾಯ್ದರು. ಅಲ್ಲಿ ಅಹಿತಕರ ಘಟನೆ ನಡೆಯೋ ಮುನ್ಸೂಚನೆ ಸಿಕ್ಕಿತು. ತಕ್ಷಣ ಮಧ್ಯ ಪ್ರವೇಶಿಸಿ ನಾನು ಪರಿಸ್ಥಿತಿ ತಿಳಿಗೊಳಿಸಿದೆ” ಅಂತ ಹೇಳಿದ್ರು.

ಸುಮಲತಾ ಬೆಂಬಲಕ್ಕೆ ಪುನೀತ್, ಸುದೀಪ್​..!

0

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚುತ್ತಿದೆ. ಮುಖ್ಯವಾಗಿ ಕನ್ನಡ ಚಿತ್ರರಂಗದ ಪ್ರಮುಖರು ಸಾಥ್ ನೀಡುತ್ತಿದ್ದಾರೆ. ಸುಮಲತಾ ಪರ ಪ್ರಚಾರಕ್ಕೆ ಬರಲು ರೆಡಿಯಾಗಿದ್ದಾರೆ.
ಈ ಹಿಂದೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್​ ಅವರು ಸುಮಲತಾ ಅವರಿಗೆ ತಮ್ಮ ಬೆಂಬಲ ಇದೆ ಅಂತ ಬಹಿರಂಗವಾಗಿಯೇ ಹೇಳಿದ್ದರು. ಇಂದು ಸುಮಲತಾ ಅವರು ನಡೆಸಿದ ಪ್ರೆಸ್​ಮೀಟ್​ನಲ್ಲಿಯೂ ದರ್ಶನ್, ಯಶ್ ಸುಮಲತಾಗೆ ಸಾಥ್ ನೀಡಿದ್ದರು.
ಈಗ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರೂ ಕೂಡ ಸುಮಲತಾ ಅವರ ಪರ ಪ್ರಚಾರಕ್ಕೆ ಬರಲು ರೆಡಿಯಾಗಿದ್ದಾರೆ ಅನ್ನೋದು ಗೊತ್ತಾಗಿದೆ. ಈ ವಿಷಯವನ್ನು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರು ಬಹಿರಂಗ ಪಡಿಸಿದ್ದಾರೆ.
ಪ್ರೆಸ್​ಮೀಟ್​ನಲ್ಲಿ ಮಾತನಾಡಿದ ರಾಕ್​ಲೈನ್​ ವೆಂಕಟೇಶ್​, ‘ನಾನು ನಿನ್ನೆ ಪುನೀತ್ ರಾಜ್​ಕುಮಾರ್ ಅವರಿಗೆ ಬರ್ತ್​ಡೇ ವಿಶ್ ಮಾಡೋಕೆ ಅಂತ ಕಾಲ್ ಮಾಡಿದ್ದೆ. ಆಗ ಅವರೇ ಸುಮಲತಾ ಅವರ ಬಗ್ಗೆ ಮಾತಾಡಿದ್ರು. ಅಕ್ಕನ ಜೊತೆಗೆ ನಾವಿದ್ದೇವೆ. ಯಾವ ಕರೆದರೂ ಬಂದು ಮಾತಾಡ್ತೀನಿ ಅಂತ ಅವರು ಹೇಳಿದ್ರು’ ಎಂದು ತಿಳಿಸಿದ್ರು. ಅಷ್ಟೇ ಅಲ್ಲದೆ ಸುದೀಪ್ ಅವರು ಕೂಡ ಬೆಂಬಲ ನೀಡುವುದಾಗಿ ಹೇಳಿದ್ದಾರೆ ಎಂದು ರಾಕ್​ಲೈನ್ ಹೇಳಿದ್ರು.

ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕೆ..!

ಲತಾ ಪ್ರೆಸ್​ಮೀಟ್​ – ದರ್ಶನ್​, ಯಶ್ ಸಾಥ್..!

ಮಾ.20ಕ್ಕೆ ನಾಮಪತ್ರ ಸಲ್ಲಿಸಿ ಸುಮಲತಾ ಅಂಬರೀಶ್ ಶಕ್ತಿ ಪ್ರದರ್ಶನ..!

ದರ್ಶನ್​, ಯಶ್ ವಿರುದ್ಧ ಗೋ ಬ್ಯಾಕ್​ ಕ್ಯಾಂಪೇನ್​..! ಕಾರಣ ಏನ್ ಗೊತ್ತಾ?

0

ಮಂಡ್ಯ : ಲೋಕಸಭಾ ಚುನಾವಣಾ ಕಣ ರಂಗೇರಿದೆ. ದಿನಕ್ಕೊಂದು, ಕ್ಷಣಕ್ಕೊಂದು ಬದಲಾವಣೆಗಳು ನಡೆಯುತ್ತಿವೆ. ಸ್ಟಾರ್​ ವಾರ್​ಗೆ ವೇದಿಕೆ ಆಗಲಿರುವ ಮಂಡ್ಯ ರಣಕಣವಂತೂ ಸಿಕ್ಕಾಪಟ್ಟೆ ಕಾವೇರಿದೆ.
ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ಪಕ್ಕಾ ಆಗಿದೆ. ಸುಮಲತಾ ಅಂಬರೀಶ್ ಪಕ್ಷೇತರರಾಗಿ ಕಣಕ್ಕಿಳಿಯಲು ರೆಡಿಯಾಗಿದ್ದಾರೆ.
ಮಂಡ್ಯದಲ್ಲಿ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ವಿರೋಧಿಸಿ, ಸುಮಲತಾ ಅವರಿಗೆ ಬೆಂಬಲ ಸೂಚಿಸಿ ಸುಮಲತಾ ಅಭಿಮಾನಿಗಳು ಗೋ ಬ್ಯಾಕ್​ ನಿಖಿಲ್​ ಕ್ಯಾಂಪೇನ್ ಶುರು ಮಾಡಿದ್ರು. ಈಗ ಅದಕ್ಕೆ ಪ್ರತಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಗೋ- ಬ್ಯಾಕ್​ ಕ್ಯಾಂಪೇನ್ ನಡೆಸುವ ಎಚ್ಚರಿಕೆಯನ್ನು ಜೆಡಿಎಸ್​ ಕಾರ್ಯಕರ್ತರು ನೀಡಿದ್ದಾರೆ.
ದರ್ಶನ್ ಮತ್ತು ಯಶ್ ಅವರ ಮೇಲೆ ಬಹಳ ಅಭಿಮಾನವಿದೆ. ಆದ್ರೆ, ಪ್ರಚಾರಕ್ಕೆ ಬಂದ್ರೆ ಮಾತ್ರ ಸಹಿಸಲ್ಲ. ಗೋ ಬ್ಯಾಕ್ ದರ್ಶನ್, ಗೋ ಬ್ಯಾಕ್​ ಯಶ್ ಅಂತ ಅಭಿಯಾನ ಶುರು ಮಾಡ್ತೀವಿ. ಪ್ರಚಾರಕ್ಕೆ ಬರಲೇ ಬಾರದು. ಬೇಕಾದ್ರೆ ಯಾವ್ದಾದ್ರು ಪಕ್ಷದಿಂದ ಕಣಕ್ಕಿಳಿಯಲಿ ಅಂತ ಜೆಡಿಎಸ್ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ನಿಖಿಲ್​ ಕುಮಾರಸ್ವಾಮಿ ಅವರು ಜೆಡಿಎಸ್​ ಅಭ್ಯರ್ಥಿತಿಯಾಗಿದ್ದು, ಸುಮಲತಾ ಅವರು ನಿಖಿಲ್ ವಿರುದ್ಧ ಕಣದಲ್ಲಿದ್ದಾರೆ. ಸುಮಲತಾ ಅವರ ಪರ ದರ್ಶನ್ ಮತ್ತು ಯಶ್ ಪ್ರಚಾರಕ್ಕೆ ಬಂದರೆ ತಮ್ಮ ಜೆಡಿಎಸ್​ ಅಭ್ಯರ್ಥಿಗೆ ದೊಡ್ಡ ಪೆಟ್ಟು ಅನ್ನೋ ಉದ್ದೇಶದಿಂದ ಜೆಡಿಎಸ್​ ಕಾರ್ಯಕರ್ತರು ಗೋ ಬ್ಯಾಕ್​ ದರ್ಶನ್, ಗೋ ಬ್ಯಾಕ್​ ಯಶ್ ಅಂತ ಕ್ಯಾಂಪೇನ್ ಶುರು ಮಾಡೋ ಎಚ್ಚರಿಕೆ ನೀಡಿದ್ದಾರೆ. ದರ್ಶನ್​, ಯಶ್ ಚುನಾವಣೆಗೆ ಸ್ಪರ್ಧಿಸೋದಕ್ಕೆ ಕಾರ್ಯಕರ್ತರ ಆಕ್ಷೇಪವಿಲ್ಲ. ಸುಮಲತಾ ಅವರ ಪರ ಪ್ರಚಾರಕ್ಕೆ ಮಾತ್ರ ವಿರೋಧವಿದೆ.

ಮಂಡ್ಯದಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಹೆಚ್ಚಿದ ಆಕ್ರೋಶ..!

0

ಮಂಡ್ಯ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಸ್ಟಾರ್​ವಾರ್​ಗೆ ಸಾಕ್ಷಿಯಾಗಿರುವ ಮಂಡ್ಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ.
ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಕಣಕ್ಕಿಳಿಯುತ್ತಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿ ಪಕ್ಷೇತರರಾಗಿ ಸುಮಲತಾ ಅಂಬರೀಶ್ ಅವರು ಕಣಕ್ಕಿಳಿದಿದ್ದಾರೆ.
ಈ ನಡುವೆ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ದೇವೇಗೌಡರ ಕುಟುಂಬದ ವಿರುದ್ಧ ಮಂಡ್ಯದಲ್ಲಿ ಜನಾಕ್ರೋಶ ಹೆಚ್ಚುತ್ತಿದೆ. ಸಿಎಂ ಕುಮಾರಸ್ವಾಮಿ, ಸಚಿವ ಹೆಚ್​.ಡಿ ರೇವಣ್ಣ ಅವರು ನೀಡಿರುವ ಹೇಳಿಕೆಗೆಳು ನಿಖಿಲ್​ ಅವರಿಗೆ ಆಘಾತವನ್ನುಂಟು ಮಾಡುವ ಸಾಧ್ಯತೆ ಇದೆ. ಈ ಹಿಂದೆ ಗೋ ಬ್ಯಾಕ್​ ನಿಖಿಲ್ ಕ್ಯಾಂಪೇನ್ ಜೋರಾಗಿ ನಡೆದಿತ್ತು. ಈಗ ದೇವೇಗೌಡರ ಇಡೀ ಕುಟುಂಬದ ವಿರುದ್ಧ ನೆಟ್ಟಿಗರು ಮುಗಿ ಬಿದ್ದಿದ್ದಾರೆ.
ಕೆಆರ್​ಎಸ್​ಗೆ ಹೇಮಾವತಿ ನೀರು ಬಿಡುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ರು ದೇವೇಗೌಡ್ರು. ಆದ್ರೆ ಈಗ ಮಂಡ್ಯವನ್ನು ಗುತ್ತಿಗೆ ಪಡೆಯೋಕೆ ಬಂದಿದ್ದಾರೆ ಅಂತ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಚಿತ್ರರಂಗದ ವಿರುದ್ಧ ಸಿಎಂ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಬಗ್ಗೆ. ‘ನೀವೂ ಬಣ್ಣ ಹಚ್ಚಿದವರೇ ಮರೆಯಬೇಡಿ’ ಎಂದು ಕಿಡಿಕಾರಿದ್ದಾರೆ ನೆಟ್ಟಿಗರು.

ಸುಮಲತಾ ಗೆದ್ರೆ ಅಂಬರೀಶ್, ಅಂಬರೀಶ್​ ಗೆದ್ರೆ ಮಂಡ್ಯದ ಜನ ಗೆದ್ದಂತೆ: ದೊಡ್ಡಣ್ಣ

0

ಮಂಡ್ಯ: ಸುಮಲತಾ ಅವರು ಗೆಲ್ಲಬೇಕು. ಅವರು ಗೆದ್ರೆ ಅಂಬರೀಶ್ ಗೆಲ್ತಾರೆ. ಅಂಬರೀಶ್ ಗೆದ್ರೆ ಮಂಡ್ಯ ಗೆಲ್ಲುತ್ತೆ. ಮಂಡ್ಯದ ಸ್ವಾಭಿಮಾನಿ ಜನ ಗೆಲ್ತಾರೆ ಅಂತ ನಟ ದೊಡ್ಡಣ್ಣ ಹೇಳಿದ್ರು.

ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, “ಕೇಬಲ್ ಕಟ್​ ಮಾಡ್ಸಿದ್ದಾರೆ ಅಂತ ಯಾರೋ ಹೇಳಿದ್ರು. ಸೂರ್ಯನಿಗೆ ಛತ್ರಿ ಹಿಡಿದು ಭೂಮಿಗೆ ಕತ್ತಲು ಮಾಡಕ್ಕಾಗುತ್ತಾ..? ದೇವರಾಣೆಗೂ ಇಲ್ಲ. ಕೇಬಲ್ ಕಟ್​ ಮಾಡ್ಸಿದವರು ಇದನ್ನು ತಿಳಿದುಕೊಳ್ಳಬೇಕು” ಅಂದ್ರು.

“ ಮಂಡ್ಯದ ಜನ ದರ್ಪ, ಅಧಿಕಾರದ ಹಿಂದೆ ಹೋಗ್ತಾರಾ..? ಅವರು ಗಂಡುಮೆಟ್ಟಿನ ನಾಡಿನ ಜನ. ಅವರಿಗೆ ಭಯವೇ ಗೊತ್ತಿಲ್ಲ. ಸೋಲು ಅನ್ನೋದು ಅವ್ರಿಗೆ ಗೊತ್ತಿಲ್ಲ. ಅಂಬರೀಶ್ ಅವರು ಅವರ ಮಗುವಿನ ಮನಸಿನಿಂದ ಜನರ ಪ್ರೀತಿ ಸಂಪಾದಿಸಿದ್ರು. ಸುಮಲತಾ ಅವರು ಗೆಲ್ಲಬೇಕು. ಶ್ರೀ ಶಕ್ತಿ, ನಮ್ಮ ತಾಯಂದಿರು ಸುಮಲತಾ ಅವರಿಗೆ ಓಟ್ ಹಾಕಿ. ಅವರು ನಿಮ್ಮ ಅಕ್ಕ, ತಂಗಿ, ನಿಮ್ಮ ಮನೆ ಮಗಳು” ಅಂತ ಹೇಳಿದ್ರು.

 

ರೇಣುಕಾಚಾರ್ಯ ಕೊಟ್ಟ ಸಿಡಿಯಲ್ಲಿ ಏನಿದೆ ಗೊತ್ತಾ?

0

ಬೆಂಗಳೂರು : ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಸಿಡಿಸಿದ ಆಡಿಯೋ ಬಾಂಬ್​ಗೆ ಪ್ರತಿಯಾಗಿ ಬಿಜೆಪಿ ಸಿಡಿ ಅಸ್ತ್ರವನ್ನು ಪ್ರಯೋಗಿಸಿದೆ.
ಶಾಸಕ ರೇಣುಕಾಚಾರ್ಯ ಸದನದಲ್ಲಿ ಸಿಡಿಯೊಂದನ್ನು ಪ್ರಸ್ತಾಪಿಸಿ ಇದು 40 ಕೋಟಿ ರೂಪಾಯಿಯ ಸಿಡಿ. ಈ ಬಗ್ಗೆಯೂ ಚರ್ಚೆಯಾಗಲಿ ಅಂತ ಹೇಳಿ ಸಿಡಿಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ನೀಡಿದ್ರು.
ಬಳಿಕ ಪವರ್ ಟಿವಿ ಜೊತೆ ಮಾತನಾಡಿದ ರೇಣುಕಾಚಾರ್ಯ, ”ಕುಮಾರಸ್ವಾಮಿ ಅವರು ತಾನೇ ಆಡಿಯೋ ಮಾಡಿಸಿದ್ದು ಎಂದು ಹೇಳಿದ್ದಾರೆ. ಹಾಗಾಗಿ ಆಡಿಯೋ ಮಾಡಿಸಿದ್ದೇ ಮೊದಲ ತಪ್ಪು. ಸಭಾಧ್ಯಕ್ಷರ ಬಗ್ಗೆ ಗೌರವವಿದೆ. ಅವರ ಗೌರವ ಕಾಪಾಡೋದು ನಮ್ಮೆಲ್ಲರ ಕರ್ತವ್ಯ. ಆದರೆ, ಅವರು ಈ ಆಡಿಯೋ ವಿಷಯವನ್ನು ಸದನ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬಹುದಿತ್ತು. ಸರ್ಕಾರಕ್ಕೆ ನೀಡಿರೋದು ಸರಿಯಲ್ಲ. ಮುಖ್ಯಮಂತ್ರಿಗಳಿಗೆ ನೈತಿಕತೆ ಇಲ್ಲ”ಎಂದರು.
”ಹಿಂದೆ ಕುಮಾರಸ್ವಾಮಿಯವರು ಜೆಡಿಎಸ್​ 40 ಜನ ಶಾಸಕರಿಗೆ ತಲಾ 1 ಕೋಟಿ ರೂ ಕೊಡಬೇಕು ಎಂದು ಹೇಳಿರುವ ಆಡಿಯೋ ಇದೆ. ಕಾರ್ಯಕರ್ತರು ಮತ್ತು ಮುಖಂಡರು ಕುಮಾರಸ್ವಾಮಿ ಅವರ ಬಳಿ ಬಂದಾಗ ನಂಗೆ ಹಣ ಬೇಕು ನಾನು ಏನು ಮಾಡೋಕೆ ಆಗಲ್ಲ. ಕಷ್ಟದಲ್ಲಿದ್ದೇನೆ. ಒಬ್ಬೊಬ್ಬ ಶಾಸಕರು ಒಂದೊಂದು ಕೋಟಿ ಕೊಡಬೇಕು ಅಂದಿದ್ದು ತಪ್ಪಲ್ವಾ? ಕುಮಾರಸ್ವಾಮಿ ಅವರು ಬ್ಲಾಕ್​ ಮೇಲ್ ರಾಜಕಾರಣ ಮಾಡ್ತಿದ್ದಾರೆ. ಸ್ವತಃ ಸಿಎಂ ಅವರೇ ಆರೋಪಿ ಸ್ಥಾನದಲ್ಲಿರೋದ್ರಿಂದ ಎಸ್​ಐಟಿ ತನಿಖೆಯಲ್ಲಿ ನಂಬಿಕೆ ಇಲ್ಲ. ಸ್ವತಃ ಅವರ ಅಣ್ಣನ ಮಗನೇ ಅವರನ್ನು ಸೂಟ್​ಕೇಸ್​ ಪಾರ್ಟಿ ಅಂದಿದ್ದರು ಎಂದು ಹೇಳಿದ್ರು.

ಕೊನೇ ಕ್ಷಣದಲ್ಲಿ ನಿಖಿಲ್ ನಿರ್ಧಾರ ಬದಲು..!

0

ಮಂಡ್ಯ : ನಿಖಿಲ್​ ಕುಮಾರಸ್ವಾಮಿ ಅವರು ಕೊನೇ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಿಸಿದ್ದಾರೆ..! ಇಂದು ಅವರು ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದರು. ಆದರೆ, ದಿಢೀರ್ ಅಂತ ನಾಮಪತ್ರ ಸಲ್ಲಿಕೆಯನ್ನು ಮುಂದೂಡಿದ್ದಾರೆ.
ಜ್ಯೋತಿಷಿಯೊಬ್ಬರ ಮಾತಿನಂತೆ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದರು. ಬಳಿಕ ಮಾರ್ಚ್ 25ಕ್ಕೆ ಅದ್ಧೂರಿ ಸಮಾವೇಶ ನಡೆಸಲು ಪ್ಲಾನ್ ಮಾಡಿದ್ದರು. ಇದೀಗ ಅವರು ತಮ್ಮ ತೀರ್ಮಾನ ಬದಲಿಸಿದ್ದು, 25ರಂದೇ ನಾಮಪತ್ರ ಸಲ್ಲಿಸಿ, ರ್ಯಾಲಿ ಹಾಗೂ ಸಮಾವೇಶ ನಡೆಸಲಿದ್ದಾರೆ.
ಇನ್ನು ನಿನ್ನೆಯಷ್ಟೇ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಮರನಾಥ್ ಅವರು ನಾಮಪತ್ರ ಸಲ್ಲಿಸಿ ತನ್ನ ಶಕ್ತಿಪ್ರದರ್ಶನ ಮಾಡಿದ್ದರು. ಸುಮಲತಾ ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಕೂಡ ಸಾಥ್ ನೀಡಿದ್ದರು. ಪುತ್ರ ಅಭಿಷೇಕ್, ಹಿರಿಯ ನಟ ದೊಡ್ಡಣ್ಣ, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ಉಪಸ್ಥಿತರಿದ್ರು. ಸ್ಥಳೀಯ ಕಾಂಗ್ರೆಸ್​ ಮುಖಂಡರು, ಕಾರ್ಯಕರ್ತರೂ ಪಾಲ್ಗೊಂಡು ಬೆಂಬಲ ಸೂಚಿಸಿದ್ರು.

ಬಸವರಾಜ್ ರಾಯರೆಡ್ಡಿ ಬೆಂಬಲಿಗರಿಂದ ಮೋದಿ ಪರ ಪೋಸ್ಟ್​​​..!

0

ಕೊಪ್ಪಳ: ಕಾಂಗ್ರೆಸ್​ ನಾಯಕ ಬಸವರಾಜ್ ರಾಯರೆಡ್ಡಿ ಬೆಂಬಲಿಗರು ಪ್ರಧಾನಿ ನರೇಂದ್ರ ಮೋದಿ ಪರ ಫೇಸ್​ಬುಕ್​​ನಲ್ಲಿ ಪೋಸ್ಟ್​ ಅಪ್​ಲೋಡ್ ಮಾಡಿದ್ದಾರೆ. ಕಾಂಗ್ರೆಸ್​​ ನಾಯಕರ ಬೆಂಬಲಿಗರು ಮೋದಿ ಪರ ಪೋಸ್ಟ್ ಹಾಕಿರುವುದು ಕೊಪ್ಪಳ‌‌ದಿಂದ ಬಸವರಾಜ್ ರಾಯರೆಡ್ಡಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸ್ತಾರಾ ಅನ್ನೋ ಅನುಮಾನಗಳನ್ನು ಹುಟ್ಟುಹಾಕಿದೆ. ” ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ಎಂಬ ಟ್ಯಾಗ್ ಲೈನ್​​ನಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕ ಬಸವರಾಜ್ ರಾಯರೆಡ್ಡಿ ಅವರ ಫೋಟೋ ಪೋಸ್ಟ್ ಮಾಡಲಾಗಿದೆ.

ಕೊಪ್ಪಳ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಸವರಾಜ ಅವರು ಟಿಕೆಟ್​ಗಾಗಿ ದೆಹಲಿ‌ ಮಟ್ಟದಲ್ಲಿ‌ ಲಾಭಿ ನಡೆಸಿದ್ದರು. ಕೊಪ್ಪಳ ಕಾಂಗ್ರೆಸ್ ಟಿಕೆಟ್ ಬಹುತೇಕ ರಾಜಶೇಖರ್ ಹಿಟ್ನಾಳ್ ಅವರಿಗೆ ಫಿಕ್ಸ್ ಆದ ಹಿನ್ನಲೆ ಬಸವರಾಜು ಬಿಜೆಪಿಯತ್ತ ಮುಖಮಾಡಿದ್ದಾರಾ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಟಿಕೆಟ್ ಕೊಟ್ರೆ  ಬಸವರಾಜ್ ರಾಯರೆಡ್ಡಿ ಅವರು ಬಿಜೆಪಿಗೆ ಬರೋ ಸಾಧ್ಯತೆಯ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಬಸವರಾಜ್ ರಾಯರೆಡ್ಡಿ ಈಗಾಗಲೇ ಒಂದು ಸುತ್ತಿನ‌ ಮಾತುಕತೆ ನಡೆಸಿದ್ದಾರೆ.

Popular posts