Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Monday, June 17, 2019

ನೀರು ಕೊಡದ ಅಧಿಕಾರಿಗಳ ಬೆವರಿಳಿಸಿದ ಮಾಜಿ ಮಿನಿಸ್ಟರ್​..!

0

ರಾಯಚೂರು: ಜಿಲ್ಲೆಯಲ್ಲಿ ಬರ ಪರಿಶೀಲನೆ ವೇಳೆ ಮಾಜಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡಿದ್ದಾರೆ. ಲಿಂಗಸುಗೂರು ತಾಲೂಕಿನ ಚತ್ತರ ತಾಂಡಾದಲ್ಲಿ ಘಟನೆ ನಡೆದಿದೆ. ಗ್ರಾಮಗಳಿಗೆ ಸರಿಯಾಗಿ ನೀರು ಪೂರೈಸದಿರುವುದಕ್ಕೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. ನೀರು ಪೂರೈಸದೇ ಕತ್ತೆ ಕಾಯ್ತೀರಾ ಅಂತ ತಹಶೀಲ್ದಾರ್​ ಚಂದ್ರಕಾಂತ್​ರನ್ನ ಗೋವಿಂದ ಕಾರಜೋಳ ತರಾಟೆ ತೆಗೆದುಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್​. ಯಡಿಯೂರಪ್ಪ ನೇತೃತ್ವದಲ್ಲಿ ಬರ ಪರಿಶೀಲನಾ ಪ್ರವಾಸ ನಡೆಯುತ್ತಿದ್ದು, ಮಾಜಿ ಸಚಿವ ಗೋವಿಂದ ಕಾರಜೋಳ ಅವರೂ ಭಾಗವಹಿಸಿದ್ದಾರೆ.

ಗುಂಡೂರಾವ್​ ಸಮ್ಮುಖದಲ್ಲೇ ಜಿಂದಾಲ್ ದಂಗಲ್​

0

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ಕಾಂಗ್ರೆಸ್ಸಿಗರ ಮಧ್ಯೆ ಸಂಧಾನ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಸಮ್ಮುಖದಲ್ಲೇ ಕೆ.ಜೆ. ಜಾರ್ಜ್​ ಮತ್ತು ಹೆಚ್​.ಕೆ. ಪಾಟೀಲ್​ ಸಂಧಾನ ನಡೆದಿದೆ. ಇಬ್ಬರಿಗೂ ಕೆಪಿಸಿಸಿ ಕಚೇರಿಗೆ ಬರುವಂತೆ ದಿನೇಶ್ ಗುಂಡೂರಾವ್ ಸೂಚಿಸಿದ್ದರು.

ಜಿಂದಾಲ್​ ಭೂಮಿ ನೀಡಿರುವುದಕ್ಕೆ ಹೆಚ್​.ಕೆ. ಪಾಟೀಲ್​ ಬಹಿರಂಗವಾಗಿ ಕಿಡಿಕಾರಿದ್ದರು. ಪಾಟೀಲ್​ ಅವರ ಬಹಿರಂಗ ಆಕ್ಷೇಪಕ್ಕೆ ಕೆ.ಜೆ. ಜಾರ್ಜ್​ ಬೇಸರ ತೋಡಿಕೊಂಡಿದ್ದರು. ಇದೀಗ ದಿನೇಶ್ ಗುಂಡೂರಾವ್ ಅವರು ಇಬ್ಬರನ್ನೂ ಮುಖಾಮುಖಿ ಕೂರಿಸಿ ಗೊಂದಲ‌ ನಿವಾರಣೆಗೆ ಮುಂದಾಗಿದ್ದಾರೆ. ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ಪರಭಾರೆ ವಿಚಾರವಾಗಿ ಸಚಿವ ಜಾರ್ಜ್ ಮತ್ತು ಹೆಚ್. ಕೆ. ಪಾಟೀಲ್ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ. ಜಿಂದಾಲ್​ಗೆ ಭೂಮಿ ನೀಡಿರುವ ಬಗ್ಗೆ ಜಾರ್ಜ್ ವಿವರಣೆಯನ್ನ ನೀಡಲಿದ್ದು, ಸಚಿವ ಹೆಚ್. ಕೆ. ಪಾಟೀಲ್ ಅವರಿಗಿರುವ ಗೊಂದಲ ನಿವಾರಣೆಗೆ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ.

ಗುರುವಾಯೂರಿನಲ್ಲಿ ತಾವರೆಗಳಿಂದ ಮೋದಿ ತುಲಾಭಾರ

0

ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಐತಿಹಾಸಿಕ ಶ್ರೀಕೃಷ್ಣ ದೇವಾಲಯ ಗುರುವಾಯೂರಿಗೆ ಭೇಟಿ ನೀಡಿದ್ದಾರೆ. ಗುರುವಾಯೂರು ಶ್ರೀಕೃಷ್ಣನ ದರ್ಶನ ಪಡೆದ ಪ್ರಧಾನಿ ತುಲಾಭಾರ ಸೇವೆಯನ್ನೂ ನಡೆಸಿದ್ದಾರೆ. ಬಿಜೆಪಿ ಚಿಹ್ನೆಯಾಗಿರುವ ತಾವರೆ ಹೂಗಳಿಂದ ತುಲಾಭಾರ ನಡೆಸಲಾಗಿದೆ. ದರ್ಶನದ ಬಳಿಕ ದೇಶದ ಅಭಿವೃದ್ಧಿಗಾಗಿ ಪ್ರಾರ್ಥಿಸಿರುವುದಾಗಿ ಮೋದಿ ಟ್ವೀಟ್​ ಮಾಡಿದ್ದಾರೆ.

ಇಂದಿನಿಂದ ಪ್ರಧಾನಿ ಮೋದಿ ಪ್ರವಾಸ ಕೈಗೊಂಡಿದ್ದು, ಮಾಲ್ಡೀವ್ಸ್​​​ ಸಂಸತ್​​​​ನಲ್ಲಿ ಭಾಷಣ ಮಾಡಲಿದ್ದಾರೆ. ಜೂನ್​ 9ಕ್ಕೆ ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದ್ದಾರೆ.

ಕಾಂಗ್ರೆಸ್ ಮಂತ್ರಿ ಸ್ಥಾನ ಕೊಟ್ರೂ ಮಂತ್ರಿಯಾಗಲ್ಲ: ಬಿ. ಸಿ. ಪಾಟೀಲ್

0

ಬೆಂಗಳೂರು: ಕಾಂಗ್ರೆಸ್​ ಪಕ್ಷ ಮಂತ್ರಿಗಿರಿ ಕೊಟ್ಟರೂ ನಾನು ಮಂತ್ರಿ ಆಗಲ್ಲ. ಪಕ್ಷದಲ್ಲಿ ಕೇವಲ ಚಮಚಾಗಳಿಗೆ ಮಾತ್ರ ಮಂತ್ರಿಗಿರಿ ನೀಡಲಾಗ್ತಿದೆ ಅಂತ ಶಾಸಕ ಬಿ. ಸಿ. ಪಾಟೀಲ್ ಹೇಳಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಪಕ್ಷದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. “ಸಚಿವ ಸ್ಥಾನ ಕೊಡೋದು ತೋಳ ಬಂತು ತೋಳ ಕಥೆಯಂತೆ ಆಗಿದೆ. ಸಚಿವ ಸ್ಥಾನಕ್ಕಾಗಿ ಯಾರ ಮನೆಗೂ ನಾನು ಹೋಗುವುದಿಲ್ಲ.  ಕಾಂಗ್ರೆಸ್​ ಪಕ್ಷದಲ್ಲೇ ನನಗೆ ಅವಮಾನ ಆಗಿದೆ” ಎಂದು ಬಿ.ಸಿ. ಪಾಟೀಲ್​ ಗರಂ ಆಗಿದ್ದಾರೆ.

87 ನೇ ವಯಸ್ಸಿನಲ್ಲೂ ಹೋರಾಟಕ್ಕೆ ಸಿದ್ಧ ಎಂದ್ರು ದೇವೇಗೌಡ್ರು..!

0

ಬೆಂಗಳೂರು : 87ನೇ ವಯಸ್ಸಿನಲ್ಲೂ ಹೋರಾಟಕ್ಕೆ ಸಿದ್ಧ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ್ರು ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್​ ಸಮಾವೇಶದಲ್ಲಿ ಮಾತನಾಡಿದ ಅವರು, ”ಬಿಳಿ, ಕರಿ ಕನ್ನಡಕ ಹಾಕಿಕೊಳ್ಳದೇ ಹೋರಾಡಿರುವೆ. ಸೋಲಿನಿಂದ ಕಂಗೆಡಲ್ಲ, ಯಾರು ಏನ್‌ ಮಾಡಿದ್ದಾರೆ ಅಂತ ಗೊತ್ತು. ನಾನ್ಯಾರ ಮನಸ್ಸು ನೋಯಿಸಲ್ಲ. 87ನೇ ವಯಸ್ಸಿನಲ್ಲೂ ಹೋರಾಟಕ್ಕೆ ಸಿದ್ಧ . ಧೂಳಿನಿಂದ ಎದ್ದು ಬರುವೆ. ನಿಷ್ಠಾವಂತ ಕಾರ್ಯಕರ್ತರನ್ನ ಗುರುತಿಸಿ ಪಕ್ಷ ಸಂಘಟನೆ ಮಾಡುವೆ. ಲಿಂಗಾಯತ, ಕುರುಬ ಯಾರೇ ಆಗ್ಲಿ, ಗೆದ್ದವರು ನಿಷ್ಠರಾಗಿರಿ” ಎಂದರು.
ಪ್ರಾದೇಶಿಕ ಪಕ್ಷ ಉಳಿಸಲು ಪಣ ತೊಟ್ಟಿರುವೆ. ‘ಸೋತಿರುವ ಬಗ್ಗೆ ಹೆಮ್ಮೆಯಿದ್ದು, ಪಕ್ಷ ಸಂಘಟನೆಗೆ ಒತ್ತು’. ದೇಶದ 17 ರಾಜ್ಯಗಳಲ್ಲಿ ಕಾಂಗ್ರೆಸ್​ ಇಲ್ಲ. ಇದ್ರಿಂದ ಕಾಂಗ್ರೆಸ್​ ಪಕ್ಷಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಅಂತ ಹೇಳಿದ್ರು.

ಸಂಸತ್ ಭವನದ ಎದುರಿನ ಫೋಟೋ ಹಾಕಿ ಸುಮಲತಾ ಮಾಡಿದ ಟ್ವೀಟೇನು?

0

ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಲೋಕಸಭೆಯ ಸದಸ್ಯತ್ವ ಪಡೆದಿದ್ದಾರೆ. ಸದಸ್ಯತ್ವ ಪಡೆದ ಬಳಿಕ ಸಂಸತ್ ಭವನದ ಎದುರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋವನ್ನು ಟ್ವೀಟರ್, ಫೇಸ್​ಬುಕ್, ಇನ್ಸ್ಟ್​ಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಾವು ಸಂಸತ್ ಭವನದ ಮುಂದೆ ನಿಂತಿರುವ ಫೋಟೋವನ್ನು ಅಪ್​ಲೋಡ್ ಮಾಡಿರುವ ಸುಮಲತಾ, ‘ ಪ್ರಜಾಪ್ರಭುತ್ವದ ದೇಗುಲಕ್ಕೆ ಇದೊಂದು ಸಧೀರ್ಘ ಪಯಣ. ಜೈ ಹಿಂದ್​, ಜೈ ಕರ್ನಾಟಕ. ಇದೊಂದು ಹೆಮ್ಮೆ, ಗೌರವದ ಸಂಗತಿ’ ಅಂತ ಬರೆದುಕೊಂಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟ್ವೀಟ್​ ತಿರುಗೇಟು..!

0

‘ಬಾಯಿ ಬಡಾಯಿ ಮೂಲಕ ದಲಿತರ ಉದ್ಧಾರ ಆಗುವುದಿಲ್ಲ’ ಅಂತ ಕೇಂದ್ರ ಸರ್ಕಾರ, ಬಿಜೆಪಿ ವಿರುದ್ಧ ಟ್ವೀಟ್ ಮೂಲಕ ಹರಿಹಾಯ್ದಿರೋ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಟ್ವೀಟ್​ ತಿರುಗೇಟು ನೀಡಿದೆ.
ದಲಿತರ ಮೇಲೆ ಕಾಳಜಿ ಇದ್ರೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಮಾಡಿ ತೋರಿಸಿ. ಟ್ವಿಟರ್​ ರಾಮಯ್ಯನವರೇ ದಲಿತರ ಮೇಲಿನ ನಿಮ್ಮ ಪ್ರೀತಿ ಟ್ವಿಟರ್​ನಲ್ಲಿ ತೋರಿಸ್ಬೇಡಿ . ಜಿ. ಪರಮೇಶ್ವರ್​ ದಲಿತರು ಎಂಬ ಕಾರಣಕ್ಕೆ ಸಿಎಂ ಸ್ಥಾನ ತಪ್ಪಿಸಿದ್ದು ತಾವೇ .ಈ ವಿಚಾರ ರಾಜ್ಯದ ಜನತೆಗೆ ಗೊತ್ತಿದೆ ಎಂದು ಸಿದ್ದು ಕಾಲೆಳೆದು ಬಿಜೆಪಿ ಟ್ವೀಟ್​ ಮಾಡಿದೆ.

‘ಬಾಯಿ ಬಡಾಯಿ ಮೂಲಕ ದಲಿತರ ಉದ್ಧಾರ ಆಗುವುದಿಲ್ಲ’ : ಸಿದ್ದರಾಮಯ್ಯ ಫುಲ್​ ಗರಂ..!

0

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಫುಲ್ ಗರಂ ಆಗಿದ್ದಾರೆ..! ಬಾಯಿ ಬಡಾಯಿ ಮೂಲಕ ದಲಿತರ ಉದ್ಧಾರ ಆಗಲ್ಲ ಅಂತ ಟ್ವೀಟ್​ ಮೂಲಕ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.
”ಬಾಯಿ ಬಡಾಯಿ ಮೂಲಕ ದಲಿತರ ಉದ್ಧಾರ ಆಗುವುದಿಲ್ಲ. ಮೊನ್ನೆ ನಡೆದ ಚುನಾವಣೆಯಲ್ಲಿ ರಾಜ್ಯದ ಮೀಸಲು ಕ್ಷೇತ್ರಗಳಲ್ಲಿ ಕೂಡಾ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಅವರಿಗೆ ಅಭಿನಂದನೆಗಳು. ಹೀಗಿದ್ದರೂ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಒಬ್ಬ ದಲಿತ ಸಂಸದನಿಗೂ ಅವಕಾಶ ಸಿಕ್ಕಿಲ್ಲ. ಇದಕ್ಕಿಂತ ದೊಡ್ಡ ಅನ್ಯಾಯ, ದ್ರೋಹ ಬೇರೇನಿದೆ?” ಅಂತ ಟ್ವೀಟ್ ಮಾಡಿದ್ದಾರೆ.
ಅಷ್ಟೇ ಅಲ್ಲದೆ ”ದಲಿತರ ಬಗ್ಗೆ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಭಾರತೀಯ ಜನತಾ ಪಕ್ಷ ಮತ್ತು ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಪ್ರಾಮಾಣಿಕವಾದ ಕಾಳಜಿ ಮತ್ತು ಬದ್ಧತೆ ಇದ್ದರೆ ಮೊದಲು ರಾಷ್ಟ್ರಮಟ್ಟದಲ್ಲಿ ಎಸ್‌ಸಿಪಿ-ಟಿಎಸ್‌ಪಿ ಕಾಯ್ದೆಯನ್ನು ರೂಪಿಸಿ ಜಾರಿಗೆ ತರುವ ಧೈರ್ಯವನ್ನು ತೋರಿಸಲಿ. ಇದನ್ನು ಬೇಕಾದರೆ ಸವಾಲಾಗಿ ಸ್ವೀಕರಿಸಲಿ” ಅಂತಲೂ ಮತ್ತೊಂದು ಟ್ವೀಟ್​​ನಲ್ಲಿ ಹೇಳಿದ್ದಾರೆ.

ಇದು ಸಿದ್ದರಾಮಯ್ಯ ಸ್ಟೈಲು ಕಣ್ರೀ – ‘ನಾನೇ ಸಿಎಂ, ನಾನೇ ಸಿಎಂ ಅಂತಿದ್ರಿ’..!

0

ದೋಸ್ತಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಕೋಪ ತಾಪ ಜಾಸ್ತಿಯಾಗಿದೆ. ಶಾಸಕ ರೋಷನ್ ಬೇಗ್ ಅವರು ಸಿದ್ದರಾಮಯ್ಯ ಸ್ಟೈಲ್​ನಲ್ಲೇ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ನಾನೇ ಸಿಎಂ, ನಾನೇ ಸಿಎಂ ಅಂತಿದ್ರಲ್ವಾ? ಫಲಿತಾಂಶ ಬಂದ್ಮೇಲೆ ಏಕೆ ಸುಮ್ಮನಾದ್ರು? ಅಪ್ಪನಾಣೆ ಅವರು ಸಿಎಂ ಆಗಲ್ಲ ಅಂತಿದ್ರು, ಈಗ ಅವರೇ ಮುಖ್ಯಮಂತ್ರಿ ಅಂತಾರೆ ಅಂತ ಸಿದ್ದರಾಮಯ್ಯ ವಿರುದ್ಧ ಬೇಗ್ ವ್ಯಂಗ್ಯವಾಡಿದ್ದಾರೆ.
ತಮಗೆ ನೀಡಿರುವ ನೋಟಿಸ್​ ಬಗ್ಗೆಯೂ ಕೆಂಡಾಮಂಡಲರಾಗಿರುವ ರೋಷನ್ ಬೇಗ್, ಮೊದಲು ಮಂಡ್ಯದಲ್ಲಿ ನಿಖಿಲ್ ಸೋಲಿಸಿದವರಿಗೆ, ತುಮಕೂರಲ್ಲಿ ದೇವೇಗೌಡರನ್ನು ಸೋಲಿಸಿದವರಿಗೆ ಮೊದಲು ನೋಟಿಸ್​ ನೀಡಲಿ. ಕಾಂಗ್ರೆಸ್​ ಪಕ್ಷದಲ್ಲಿ ಸತ್ಯಶೋಧನಾ ಸಮಿತಿ ಮಾಡಿರೋದೇ ದೊಡ್ಡ ಜೋಕ್. ​ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಫ್ಲಾಪ್​ ಶೋ ಎಂದು ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆ – ಸಿದ್ದರಾಮಯ್ಯ ‘ಸಮನ್ವಯ’ದ ವಿರುದ್ಧವೂ ಕೆಂಡಾಮಂಡಲ..!

0

ಹೆಚ್.ವಿಶ್ವನಾಥ್ ಅವರು ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸಮನ್ವಯ ಸಮಿತಿ ಸಿದ್ದರಾಮಯ್ಯ ಅವರ ಕೈಗೊಂಬೆ ಅಂತ ಅವರು ಗುಡುಗಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರಿಗೆ ಬರೆದಿರುವ ಪತ್ರವನ್ನು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದಾರೆ. ತಾವು ನನ್ನಲ್ಲಿ ವಿಶ್ವಾಸವಿಟ್ಟು ಜನತಾದಳದ ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದು, ನನ್ನ ರಾಜಕೀಯ ಜೀವನದ ಬಹುಮುಖ್ಯ ಘಟ್ಟ ಎಂದು ನಾನು ಭಾವಿಸಿದ್ದೇನೆ. ಸ್ವಾಭಿಮಾನದ ಸಂಕೇತವಾಗಿ ನನ್ನ ಮಾತೃ ಪಕ್ಷ ಕಾಂಗ್ರೆಸ್​ನಿಂದ ಹೊರ ಬರಬೇಕಾದ ಅನಿವಾರ್ಯತೆ ಎದುರಾಗಿ ಆಚೆ ಬಂದು ನಿಂತಾಗ ನನ್ನ ಅಭಿಲಾಷೆಯಂತೆ ನಂಗೆ ಹುಣಸೂರು ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗುವಂತೆ ಮಾಡಿ ರಾಜಕೀಯ ಪುನರ್​ಜನ್ಮಕ್ಕೆ ಆಶೀರ್ವದಿಸಿದ್ದೀರಿ. ಅದಕ್ಕೆ ನಾನು ಕೃತಜ್ಞನಾಗಿರ್ತೀನಿ ಅಂತಾ ದೇವೇಗೌಡ್ರಿಗೆ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಯ ಸೋಲಿಗೆ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿರುವ ವಿಶ್ವನಾಥ್, ಮೈತ್ರಿ ಸರ್ಕಾರದ ಆಡಳಿತದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕ ಸಮರದಲ್ಲಿ ಹಿನ್ನಡೆ ಕಾಣುತ್ತಲೇ ರಾಜೀನಾಮೆಗೆ ಮುಂದಾಗಿದ್ದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ತಕ್ಷಣ ರಾಜೀನಾಮೆ ಬೇಡ ಎಂದಿದ್ರು. ಹಾಗಾಗಿ ನಿಧಾನವಹಿಸಿ ರಾಜೀನಾಮೆ ನೀಡಿದ್ದೇನೆ ಅಂದಿದ್ದಾರೆ.
ಒಂದೆರಡು ಇಲಾಖೆ ಹೊರತುಪಡಿಸಿ ಸರ್ಕಾರದ ಸಾಧನೆ ಶೂನ್ಯವಾಗಿದೆ. ಮೈತ್ರಿ ಕಿರುಕುಳದ ಮಧ್ಯೆಯೂ ಕುಮಾರಸ್ವಾಮಿ ಉತ್ತಮ ಕೆಲಸಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಶಕ್ತಿ ಮೀರಿ ಸರ್ಕಾರ ಮುನ್ನಡೆಸುತ್ತಿದ್ದಾರೆ. ಅಧಿಕಾರ ಇದ್ದಾಗ ಪಕ್ಷ ಮತ್ತು ಪ್ರಭುತ್ವ ಜೋಡೆತ್ತಿನಂತೆ ಇರಬೇಕು. ಆದ್ರೆ ಮಂತ್ರಿಗಳು, ಶಾಸಕರು ಪಕ್ಷದ ಬಗ್ಗೆ ಅಷ್ಟೊಂದು ಆಸಕ್ತಿ ಹೊಂದಿಲ್ಲ . ಪಕ್ಷದಲ್ಲಿ ಇರುವ ಪ್ರತಿ ವ್ಯಕ್ತಿಗೂ ಸ್ವಾತಂತ್ರ್ಯ ಬೇಕು. ಪ್ರಶಂಸೆ ಬೇಕು ಎನ್ನುವ ಮೂಲಕ ಪಕ್ಷದಲ್ಲಿ ದೇವೇಗೌಡರ ಕುಟುಂಬದ ಪ್ರಾಬಲ್ಯಕ್ಕೆ ಪರೋಕ್ಷವಾಗಿ ಕಟುಕಿದ್ದಾರೆ. ಪಕ್ಷಕ್ಕೆ ಹೊಸ ಗಾಳಿ, ಹೊಸ ನೀರು ದೊರೆತು ಗಟ್ಟಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರ ವಿರುದ್ಧ ಗುಡಿದ ಅವರು, ”ಸಮನ್ವಯ ಸಮಿತಿ ಕೇವಲ ಹೆಸರಿಗೆ ಮಾತ್ರ. ಜೆಡಿಎಸ್ ಅಧ್ಯಕ್ಷನಾದ್ರೂ ಸಮನ್ವಯ ಸಮಿತಿಯಲ್ಲಿ ಸ್ಥಾನವಿಲ್ಲ. ಎರಡೂ ಪಕ್ಷಗಳಲ್ಲಿ ಸಮನ್ವಯ ಸಾಧಿಸುವಲ್ಲಿ ಸಿದ್ದು ವಿಫಲವಾಗಿದ್ದಾರೆ ” ಅಂತ ಕಿಡಿಕಾರಿದ್ದಾರೆ.

 

Popular posts