Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Sunday, February 24, 2019

ಪಾಕ್​ನ ಮೊದಲ ಹಿಂದೂ ನ್ಯಾಯಧೀಶೆಯಾಗಿ ಸುಮನ್ ಕುಮಾರಿ ನೇಮಕ

ಇಸ್ಲಾಮಾಬಾದ್: ಪಾಕಿಸ್ತಾನದ ಮೊದ ಹಿಂದೂ ನ್ಯಾಯಧೀಶೆಯಾಗಿ ಸುಮನ್​ ಕುಮಾರಿ ನೇಮಕವಾಗಿದ್ದಾರೆ. ಮೂಲತಃ ಖಂಬರ್-ಶಹದಾದ್ಕೋಟ್ ಜಿಲ್ಲೆಯವರಾದ ಸುಮನ್​ ಕುಮಾರಿಯವರು ಅದೇ ಜಿಲ್ಲೆಯ ಸಿವಿಲ್ ನ್ಯಾಯಧೀಶೆಯಾಗಿ ನೇಮಕವಾಗಿದ್ದಾರೆ ಅಂತ ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಸುಮನ್​ ಕುಮಾರಿ ಅವರು ಹೈದರಾಬಾದ್​ನಲ್ಲಿ ಎಲ್​ಎಲ್​ಬಿ ಪೂರೈಸಿದ್ದು, ಕರಾಚಿಯ ಸ್ಜಬಿಸ್ಟ್​ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪೂರ್ಣಗೊಳಿಸಿದ್ದಾರೆ.

ಟ್ರಂಪ್ ಆಡಳಿತಕ್ಕೆ ಗುಡ್​ ಬೈ ಹೇಳಿದ ಭಾರತೀಯ ಮೂಲದ ರಾಜ್​ ಶಾ!

ವಾಷಿಂಗ್ಟನ್ : ಅಮೆರಿಕಾ ಪ್ರೆಸಿಡೆಂಟ್ ಡೊನಾಲ್ಡ್ ಟ್ರಂಪ್ ಅವರ ಆಡಳಿತದಿಂದ ಬೇಸತ್ತು ಶ್ವೇತಭವನದ ಉನ್ನತ ವಕ್ತಾರ ಹುದ್ದೆಗೆ ಭಾರತದ ಮೂಲದ ರಾಜ್​ ಶಾ ಗುಡ್​ ಬೈ ಹೇಳಿದ್ದಾರೆ. ಶ್ವೇತಭವನದ ಉನ್ನತ ವಕ್ತಾರ ಹುದ್ದೆಗೆ ರಾಜೀನಾಮೆ ನೀಡಿದ ರಾಜ್​ ಶಾ ಅವರು, ಬಲ್ಲಾರ್ಡ್ ಪಾರ್ಟ್ನರ್ಸ್ ಗೆ ಸೇರಿದ್ದ ಮೀಡಿಯಾ ಗ್ರೂಪ್ಸ್ ನ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಟ್ರಂಪ್ ಅಮೆರಿಕಾ ಪ್ರೆಸಿಡೆಂಟ್ ಆದಲ್ಲಿಂದ 2017ರ ಜನವರಿಯಿಂದ ರಾಜ್​ ಶಾ ಶ್ವೇತಭವನದಲ್ಲಿ ಉನ್ನತ ವಕ್ತಾರರಾಗಿ, ರಿಪಬ್ಲಿಕನ್ ನ್ಯಾಷನಲ್ ಕಮಿಟಿಯಲ್ಲಿ ರಿಸರ್ಚರ್ ಆಗಿ ಸೇವೆ ಸಲ್ಲಿಸುತ್ತಿದ್ರು.

ವಿಶ್ವ ಬ್ಯಾಂಕ್​ ಅಧ್ಯಕ್ಷ ಸ್ಥಾನಕ್ಕೆ ಯಾಂಗ್​ ಕಿಮ್ ರಾಜೀನಾಮೆ

ವಾಷಿಂಗ್ಟನ್: ವಿಶ್ವ ಬ್ಯಾಂಕ್​ನ ಅಧ್ಯಕ್ಷ ಯಾಂಗ್​ ಕಿಮ್​ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. 58 ವರ್ಷದ ಯಾಂಗ್​ ಕಿಮ್​ ಅವರು ಎರಡನೇ ಅವಧಿಗೆ ವರ್ಲ್ಡ್ ಬ್ಯಾಂಕ್​ನ ಪ್ರೆಸಿಡೆಂಟ್ ಆಗಿ ಆಯ್ಕೆಯಾಗಿದ್ರು. ಇವರ ಅಧಿಕಾರ ಅವಧಿ 2022ರ ತನಕ ಇತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿದ್ದಾರೆ. ಫೆಬ್ರವರಿ 1ರಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡಿದ್ದು ಅಲ್ಲಿಯವರೆಗೆ ಜವಬ್ದಾರಿ ನಿಭಾಯಿಸಲಿದ್ದಾರೆ. ವಿಶ್ವ ಬ್ಯಾಂಕ್​ನ ಸಿಇಒ ಕ್ರಿಸ್ಟಲಿನಾ ಜಾರ್ಜಿಯಾ ಫೆಬ್ರವರಿ 1ರಿಂದ ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವರು.

ಮೇಲ್ವರ್ಗದವರಿಗೂ ಮೀಸಲಾತಿ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇಲ್ವರ್ಗದ ಆರ್ಥಿಕ ಹಿಂದುಳಿದ ಮಂದಿಗೆ ಮೀಸಲಾತಿ ನೀಡಲು ಮುಂದಾಗಿದೆ. ಮೇಲ್ವರ್ಗದಲ್ಲಿನ ಆರ್ಥಿಕ ಹಿಂದುಳಿದವರಿಗೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಮಹತ್ವದ ನಿರ್ಣಯವನ್ನು ಸೋಮವಾರ ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ವಾರ್ಷಿಕ ಆದಾಯ 8 ಲಕ್ಷ ರೂಗಳಿಗಿಂತ ಕಡಿಮೆ ಇರೋ ಮೇಲ್ವರ್ಗದ ಯುವ ಸಮುದಾಯ ಕೇವಲ ಜಾತಿ ಕಾರಣಕ್ಕಾಗಿಯೇ ಉದ್ಯೋಗದಿಂದ ವಂಚಿತರಾಗುವುದನ್ನು ತಪ್ಪಿಸಲು ಈ ನಿರ್ಣಯ ಕೈಗೊಳ್ಳಲಾಗಿದ್ದು, ಕೇಂದ್ರದ ಈ ಕ್ರಮವನ್ನು ಬಹುತೇಕರು ಸ್ವಾಗತಿಸಿದ್ದಾರೆ. ಮತ್ತೊಂದಿಷ್ಟು ಮಂದಿ ವಿರೋಧಿಸಿದ್ದಾರೆ.

ಉಗ್ರರನ್ನು ಹೊಡೆದುರುಳಿಸಿದ ಯೋಧರು

ಶ್ರೀನಗರ: ಬಡ್ಗಾಂ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ. ದಾಳಿ ವೇಳೆ ಮೂವರು ಯೋಧರು ಗಾಯಗೊಂಡಿದ್ದಾರೆ. ಉಗ್ರರ ಇರುವಿಕೆಯ ಖಚಿತ ಮಾಹಿತಿ ಲಭ್ಯವಾಗಿದ್ದರಿಂದ ಭದ್ರತಾ ಸಿಬ್ಬಂದಿ ಕುತ್​ಪೊರ ಗ್ರಾಮದಲ್ಲಿ ಹುಡುಕಾಟ ನಡೆಸಿದ್ದರು. ಯೋಧರ ಗುಂಡಿಗೆ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಉಗ್ರರ ಗುರುತು ಪತ್ತೆಹಚ್ಚಬೇಕಷ್ಟೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಬಡ್ಗಾಂ ಹಾಗೂ ಪುಲ್ವಾಮ ಜಿಲ್ಲೆಗಳಲ್ಲಿ ಮೊಬೈಲ್​ ಇಂಟರ್​ನೆಟ್​ ಸೇವೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಇಂದಿಗೆ ಮುಂಬೈ ದಾಳಿಗೆ 10 ವರ್ಷ..!

ಇಂದಿನ ಆ ದಿನ ಭಾರತದ ಇತಿಹಾಸದ ಕರಾಳ ದಿನಗಳಲ್ಲಿ ಒಂದು. ಆ ಮೂರು ದಿನಗಳನ್ನು ಭಾರತೀಯರು, ಅದ್ರಲ್ಲೂ ಮುಂಬೈ ಜನತೆ ಮಾತ್ರ ಯಾವತ್ತಿಗೂ ಮರೆಯಲ್ಲ..! ಹೌದು, ಇಂದಿಗೆ ಸರಿಯಾಗಿ 10 ವರ್ಷದ ಹಿಂದೆ, ಅಂದರೆ 2008ರ ನವೆಂಬರ್ 26 ರಂದು ಉಗ್ರರು ಮುಂಬೈ ಮೇಲೆ ದಾಳಿ ಮಾಡಿದ್ರು. ಪಾಕಿಸ್ತಾನದ ಲಷ್ಕರ್ - ಇ-ತೊಯ್ಬಾ ಉಗ್ರರು ಮೂರು ದಿನಗಳ ಕಾಲ ಮುಂಬೈನ ತಾಜ್ ಹೋಟೆಲ್, ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ ಒಳಗೊಂಡಂತೆ 10 ಕಡೆಗಳಲ್ಲಿ ಬಾಂಬ್ ಸ್ಪೋಟ ಮತ್ತು ಗುಂಡಿನ ದಾಳಿ ನಡೆಸಿದ್ರು. ಪರಿಣಾಮ...

ಪಾಕ್ ನಲ್ಲಿ ಚೀನಾ ರಾಯಭಾರಿ ಕಚೇರಿ ಮೇಲೆ ದಾಳಿ

ಕರಾಚಿ : ಪಾಕಿಸ್ತಾನದ ರಾಜಧಾನಿ ಕರಾಚಿಯಲ್ಲಿ ಚಿನಾ ರಾಯಭಾರಿ ಕಚೇರಿ ಮೇಲೆ ಬಂಧೂಕುದಾರಿಗಳು ದಾಳಿ ನಡೆಸಿದ್ದು, ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ 4.30ರ ಸುಮಾರಿಗೆ ದಾಳಿ ನಡೆದಿದ್ದು, ಭದ್ರತಾ ಸಿಬ್ಬಂದಿ ಕೂಡಲೇ ಎಚ್ಚೆತ್ತುಕೊಂಡು ಕಾರ್ಯಾಚರಣೆಗೆ ಇಳಿದಿದ್ದಾರೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ. ಭದ್ರತಾ ಸಿಬ್ಬಂದಿ ತಕ್ಷಣವೇ ಎಚ್ಚೆತ್ತುಕೊಂಡಿದ್ದರಿಂದ ಬಂಧೂಕು ದಾರಿಗಳ ಕಚೇರಿಯನ್ನು ಪ್ರವೇಶಿಸಿಲು ವಿಫಲರಾಗಿದ್ದಾರೆ. ಇದರಿಂದ ಹೆಚ್ಚಿನ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ಸ್ಪೋಟಗೊಂಡಿರೋ ಪರಿಣಾಮವಾಗಿ ಹೊಗೆ ಆವರಿಸಿಕೊಂಡಿದೆ.

ಆಸ್ಟ್ರೇಲಿಯಾದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ ಮಾಡಿದ ರಾಷ್ಟ್ರಪತಿ..!

ಪರಾಮಟ್ಟ : ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಸ್ಟ್ರೇಲಿಯಾದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ಅವರು ಪರಾಮಟ್ಟದ ಜುಬಿಲಿ ಪಾರ್ಕ್ ನಲ್ಲಿ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆಯನ್ನು ಅನಾವರಣ ಮಾಡಿದ್ರು. ಈ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೊರಿನ್ ಸನ್ ಮತ್ತು ಪಾರಮಟ್ಟ ಮೇಯರ್ ಆ್ಯಂಡ್ರೀವ್ ವಿಲ್ಸ್ ನ್ ಭಾಗವಹಿಸಿದ್ರು. ಇದೇ ವೇಳೆ ಕೋವಿಂದ್ ಅವರು ಗಾಂಧೀಜಿ ಅವರ 'ಹಿಂದ್ ಸ್ವರಾಜ್' ಪುಸ್ತಕವನ್ನು ಪ್ರಧಾನಿ ಸ್ಕಾಟ್ ಮೊರಿನ್ ಸನ್ ಮತ್ತು ಮೇಯರ್ ಆ್ಯಂಡ್ರೀವ್ ವಿಲ್ಸನ್ ಅವರಿಗೆ...

ವಿಮಾನವನ್ನೇ ಚೇಸ್ ಮಾಡಲು ಹೋದ ಮಹಿಳೆ..!

ಫ್ಲೈಟ್ ಮಿಸ್ ಆದಾಗ ಅದರ ಹಿಂದೆ ಓಡಿ ಚೇಸ್ ಮಾಡೋರನ್ನು ನೋಡಿದ್ದೀರಾ..? ಇದೇನ್ ಗುರು, ಬಸ್, ರೈಲು ಚೇಸ್ ಮಾಡೋರು ಇದ್ದೀವಿ..ನಾವು ಕೂಡ ಮಾಡಿದ್ದೀವಿ...ಮಾಡ್ತೀವಿ. ಆದ್ರೆ, ಫ್ಲೈಟ್ ಚೇಸ್ ಮಾಡೋದು ಸಾಧ್ಯವೇ..? ಸುಮ್ನೆ ಏನೇನೋ ಕಥೆ ಹೊಡಿಬೇಡಿ..! ಸಿನಿಮಾದಲ್ಲಿ ಕೂಡ ಇಂತಹದ್ದನ್ನು ತೋರಿಸಲ್ಲ ಅಂತಿದ್ದೀರಾ..? ಆದ್ರೆ, ಇಲ್ಲೊರ್ವ ಮಹಿಳೆ ಫ್ಲೈಟ್ ಅನ್ನೇ ಚೇಸ್ ಮಾಡಲು ಹೋಗಿದ್ದಾಳೆ..! ಈ ವಿಚಿತ್ರ ನಡೆದಿರೋದು ಇಂಡೋನೇಷ್ಯಾದಲ್ಲಿ. ಇಂಡೋನೇಷ್ಯಾದ ಬಾಲಿಯ ನಗುರಾ ರೈ ವಿಮಾನ ನಿಲ್ದಾಣದಲ್ಲಿ ಹಾನಾ ಅನ್ನೋ ಮಹಿಳೆ ಫ್ಲೈಟ್ ಚೇಸ್ ಮಾಡೋ ಅಸಾಧ್ಯ ಸಾಹಸಕ್ಕೆ ಕೈ...

ವೇಶ್ಯಾಗೃಹಗಳ ಮಾಲೀಕಗೆ ಸತ್ತ ಮೇಲೆ ಸಿಕ್ತು ಭರ್ಜರಿ ಜಯ..!

ನೆವಾಡಾ : ಅಮೆರಿಕ ಪ್ರಾಂತೀಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಮೃತ ವ್ಯಕ್ತಿಗೆ ಜಯ ಲಭಿಸಿದೆ..! ವೇಶ್ಯಾಗೃಹಗಳ ಮಾಲೀಕ, ರಿಪಬ್ಲಿಕನ್ ಪಾರ್ಟಿಯ ಕ್ಯಾಂಡಿಡೇಟ್ ಡೆನ್ನಿಸ್ ಹೋಫ್ ಸಾವನ್ನಪ್ಪಿದ ಮೇಲೆ ಎಲೆಕ್ಷನ್ ನಲ್ಲಿ ಗೆದ್ದವರು. 72 ವರ್ಷದ ಡೆನ್ನಿಸ್ ಹೋಫ್ ನೆವಾಡಾದ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಗೆದ್ದಿದ್ದಾರೆ. ದಿವಗಂತ ಡೆನ್ನಿಸ್ ಹೋಫ್ ಶಿಕ್ಷಣ ತಜ್ಞೆ ಲಿಸಿಯಾ ರೋಮನೋವ್ ವಿರುದ್ಧ ಜಯಗಳಿಸಿದ್ದಾರೆ. ಡೆನ್ನಿಸ್ ಶೇ.68ರಷ್ಟು ವೋಟ್ ಗಳನ್ನು ಪಡೆದು ಗೆದ್ದಿದ್ದಾರೆ. ಈಗ ಅವರ ಸ್ಥಾನಕ್ಕೆ ರಿಪಬ್ಲಿಕನ್ ಪಾರ್ಟಿಯ ಬೇರೆ ಕ್ಯಾಂಡಿಡೇಟ್ ಅನ್ನು ನೇಮಕ ಮಾಡಲಾಗುವುದು ಅಂತ ಸಂಬಂಧಪಟ್ಟ...

Popular posts