Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Sunday, September 22, 2019

ಬೆಂಕಿ ಅವಘಡಕ್ಕೆ 22 ಬಲಿ

0

ಬೀಜಿಂಗ್: ಉತ್ತರ ಚೀನಾದ ಕೆಮಿಕಲ್​ ಪ್ಯಾಕ್ಟರಿ ಸಮೀಪ ಸ್ಫೋಟವಾಗಿದ್ದು ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ22 ಜನ ಮೃತಪಟ್ಟಿದ್ದು, 22 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಬಿ ಶೆಂಗ್ವಾ ಕೆಮಿಕಲ್​ ಕಂಪನಿಯ ಬಳಿ ಮಧ್ಯರಾತ್ರಿ 12.40ರ ವೇಳೆ ಸ್ಫೋಟ ಸಂಭವಿಸಿದ್ದು, ಸಣ್ಣವಾಹನಗಳು ಸೇರಿ 50 ಟ್ರಕ್​ಗಳು ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸ್ಫೋಟಕ್ಕೆ ಕಾರಣ ತಿಳಿದುಬಂದಿಲ್ಲ ಅಂತ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕೊನೆಗೂ ಮೌನ ಮುರಿದ ಮಿಥಾಲಿ..!

0

ಟಿ20 ವರ್ಲ್ಡ್ ಕಪ್ ಸೆಮಿಫೈನಲ್ ನಿಂದ ತಮ್ಮನ್ನು ಹೊರಗಿಟ್ಟಿದ್ದಕ್ಕೆ ಟೀಮ್ ಇಂಡಿಯಾದ ಒಡಿಐ ಕ್ಯಾಪ್ಟನ್ ಮಿಥಾಲಿ ರಾಜ್ ಕೊನೆಗೂ ಮೌನ ಮುರಿದಿದ್ದಾರೆ. ಕೋಚ್​ ರಮೇಶ್​ ಪವಾರ್​ ಹಾಗೂ ಆಡಳಿತ ಮಂಡಳಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಒಎ ಆಡಳಿತ ಮಂಡಳಿಯ ಸದಸ್ಯೆ ಹಾಗೂ ಟೀಮ್​ಇಂಡಿಯಾದ ಮಾಜಿ ನಾಯಕಿ ಡಯಾನ ಎಡುಲ್ಜಿ ಪಕ್ಷಪಾತದ ಧೋರಣೆ ಅನುಸರಿಸುತಿದ್ದು, ಕೋಚ್​​ ರಮೇಶ್​​ ಪೋವಾರ್​ ಸೇರಿದಂತೆ ಕೆಲವರು ಕರಿಯರ್ ಗೆ ತೊಂದ್ರೆ ಮಾಡ್ತಿದ್ದಾರೆ ಅಂತ ಗಂಭೀರ ಆರೋಪ ಮಾಡಿ, ಸಿಇಒ ರಾಹುಲ್​ ಜೊಹ್ರಿ ಮತ್ತು ಸಬಾ ಕರೀಂರವರಿಗೆ ಪತ್ರ ಬರೆದಿದ್ದಾರೆ. ಟಿ-20 ವರ್ಲ್ಡ್ ಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್​ನಲ್ಲಿ ಮಿಥಾಲಿರಾಜ್​ರನ್ನು ತಂಡದಿಂದ ಹೊರಗಿಡಲಾಗಿತ್ತು. ಪಂದ್ಯದ ಸೋಲಿನ ಬಳಿಕ ಅಭಿಮಾನಿಗಳು ಮಿಥಾಲಿರಾಜ್​ ರನ್ನು ಪ್ರಮುಖ ಮ್ಯಾಚ್ ನಿಂದ ಕೈ ಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಡಯಾನಾ ಎಡುಲ್ಜಿ, ಮಿಥಾಲಿ ರಾಜ್​ಯನ್ನ ಪಂದ್ಯದಿಂದ ಹೊರಗಿಟ್ಟ ಕ್ರಮವನ್ನ ಸಮರ್ಥಿಸಿಕೊಂಡಿದ್ರು. ಇನ್ನು ಈ ಬಗ್ಗೆ ಸ್ಪಷ್ಟಣೆಗೆಂದು ಹರ್ಮನ್ ​ಪ್ರೀತ್ ಕೌರ್​, ಮಿಥಾಲಿ ರಾಜ್​, ಕೋಚ್​ ರಮೇಶ್​​ ಪೋವಾರ್​​ ಹಾಗೂ ತಂಡದ ಮ್ಯಾನೇಜರ್​ರನ್ನ ಸಿಒಎ ಕಮಿಟಿ ಸಭೆ ಕರೆದಿದೆ.

ಮಿಥಾಲಿರಾಜ್​ ತಂಡದಿಂದ ಹೊರಕ್ಕೆ, ಬಿಸಿಸಿಐ ಅಸಮಾಧಾನ

0

ವುಮೆನ್ಸ್ ವರ್ಲ್ಡ್ ಕಪ್​​ನ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್​ನಲ್ಲಿ ಟೀಂ ಇಂಡಿಯಾದಿಂದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್‍ ಅವರನ್ನು ಹೊರಗಿಟ್ಟಿದ್ದು ಚರ್ಚೆಗೆ ಕಾರಣವಾಗಿದೆ. ಬಿಸಿಸಿಐ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದೆ.

ಗೆಲ್ಲಲೇಬೇಕಾದ ಮ್ಯಾಚ್​ನಿಂದ ನಂಬರ್​ 1 ಟಿ20 ಪ್ಲೇಯರ್​ ಮಿಥಾಲಿ ರಾಜ್​ ಅವರನ್ನು ಕೈಬಿಟ್ಟಿದ್ದರಿಂದ ಟೀಇಂಡಿಯಾ ಇಂಗ್ಲೆಂಡ್​ಗೆ ಸುಲಭ ತುತ್ತಾಗಿತ್ತು. ಇದ್ರೊಂದಿಗೆ ಚೊಚ್ಚಲ ಟಿ20 ವರ್ಲ್ಡ್​ಕಪ್​ ಗೆಲ್ಲುವ ಅವಕಾಶದಿಂದ ಭಾರತ ವಂಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಸಭೆ ನಡೆಸಿ ಸಂಬಂಧಪಟ್ಟವರಿಂದ ವರದಿ ಪಡೆಯಲಿದೆ ಎಂದು ತಿಳಿದುಬಂದಿದೆ.

ಬಿಸಿಸಿಐ ಮೂಲಗಳ ಪ್ರಕಾರ ಬಿಸಿಸಿಐ ಸಭೆ ನಡೆಸಿ ಕ್ಯಾಪ್ಟನ್​ ಹರ್ಮನ್‍ ಪ್ರೀತ್​ ಕೌರ್​, ಮಿಥಾಲಿ ರಾಜ್, ಕೋಚ್ ರಮೇಶ್ ಪವಾರ್, ಮ್ಯಾನೇಜರ್ ತೃಪ್ತಿ ಭಟ್ಟಾಚಾರ್ಯ, ಟೀಂ ಇಂಡಿಯಾದ  ಆಯ್ಕೆ ಸಮಿತಿ ಸದಸ್ಯೆ ಸುಧಾ ಶಾ ಅವರಿಂದ ವಿವರಣೆ ಪಡೆಯಲಿದೆ.

ಇನ್ನು ಮಿಥಾಲಿ ಅವ್ರನ್ನು ಪ್ಲೇಯಿಂಗ್ 11ನಿಂದ ಕೈಬಿಟ್ಟ ಬಗ್ಗೆ ಸಿಒಎ ಮುಖ್ಯಸ್ಧ ವಿನೋದ್ ರೈ “ಮಹಿಳಾ ತಂಡದಲ್ಲಿ ಏನೋ ಏರುಪೇರಾಗಿದೆ ಅದನ್ನ ಪರಿಶೀಲಿಸಬೇಕಿದೆ” ಅಂದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರು 8 ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿತ್ತು.

ಭಾರತಕ್ಕೆ 6 ವಿಕೆಟ್ ಜಯ ; ಸರಣಿ ಸಮಬಲ

0

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ 20 ಮ್ಯಾಚ್ ನಲ್ಲಿ ಟೀಮ್ಇಂಡಿಯಾ 6 ವಿಕೆಟ್ ಅಂತರದ ಜಯ ಸಾಧಿಸಿದೆ. ಕ್ಯಾಪ್ಟನ್ ವಿರಾಟ್ ಕೊಹ್ಲಿಯವರ ಆಕರ್ಷಕ ಅರ್ಧಶತಕದ ನೆರವಿನಿಂದ ಟೀಮ್ಇಂಡಿಯಾ 3 ಪಂದ್ಯಗಳ ಟಿ-20 ಸರಣಿಯನ್ನ 1-1ರ ಅಂತರದ ಸಮಬಲಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಯ್ತು. ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿತ್ತು. 2ನೇ ಮ್ಯಾಚ್ ಮಳೆಯಿಂದಾಗಿ ರದ್ದಾಗಿತ್ತು. ಇಂದಿನ ಪಂದ್ಯದಲ್ಲಿ ಟೀಮ್ಇಂಡಿಯಾ ಸೋತಿದ್ರೆ ಸರಣಿ ಕೈ ಜಾರುತಿತ್ತು. ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಪೇರಿಸಿತ್ತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಆ್ಯರೋನ್ ಫಿಂಚ್ ಹಾಗೂ ಡಾರ್ಸಿ ಶಾರ್ಟ್ ತಂಡಕ್ಕೆ ಅಬ್ಬರದ ಆರಂಭ ಒದಗಿಸಿದ್ರು. ಈ ಜೋಡಿ ಮೊದಲ ವಿಕೆಟ್ ಗೆ 8.3 ಓವರ್ ಗಳಲ್ಲಿ 68 ರನ್ ಪೇರಿಸಿದರು. ಆದರೆ, ಭಾರತದ ಪರ ನಿಖರ ದಾಳಿ ಸಂಘಟಿಸಿದ ಕುಲ್ದೀಪ್ ಯಾದವ್ ಹಾಗೂ ಕೃಣಾಲ್ ಪಾಂಡ್ಯ ಆಸೀಸ್ ರನ್ ಓಟಕ್ಕೆ ಕಡಿವಾಣ ಹಾಕಿದ್ರು. ಅಂತಿಮವಾಗಿ ಕಾಂಗರೂ ಪಡೆ 6 ವಿಕೆಟ್ ನಷ್ಟಕ್ಕೆ 164 ರನ್ ಗಳ ಸವಾಲಿನ ಮೊತ್ತ ಪೇರಿಸಿತು. ಭಾರತದ ಪರ ಕೃಣಾಲ್ ಪಾಂಡ್ಯ 4 ವಿಕೆಟ್, ಕುಲ್ದೀಪ್ ಯಾದವ್ 1 ವಿಕೆಟ್ ಪಡೆದುಕೊಂಡ್ರು. 165ರನ್ ಗಳು ಟಾರ್ಗೆಟ್ ಪಡೆದುಕೊಂಡ ಟೀಮ್ಇಂಡಿಯಾ ಉತ್ತಮ ಪ್ರದರ್ಶನ ನೀಡಿತು. ಟೀಮ್ಇಂಡಿಯಾ ಪರ ಶಿಖರ್ ಧವನ್ ಕೇವಲ 22 ಬಾಲ್ ಗಳಲ್ಲಿ 41 ರನ್, ರೋಹಿತ್ ಶರ್ಮಾ 23 ರನ್ ಗಳಿಸಿದ್ರು. ಕನ್ನಡಿಗ ಕೆಎಲ್ ರಾಹುಲ್ ಈ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಲಿಲ್ಲ. ಜೊತೆಗೆ ರಿಷಬ್ ಪಂತ್ ಕೂಡ ನಿರಾಸೆ ಮೂಡಿಸಿದರು. ಆದರೆ ಸಮಯೋಜಿತ ಇನ್ನಿಂಗ್ಸ್ ಕಟ್ಟಿದ ಕ್ಯಾಪ್ಟನ್ ಕೊಹ್ಲಿ ಭಾರತವನ್ನ ಗೆಲುವಿನ ದಡ ಸೇರಿಸಿದ್ರು. 41 ಎಸೆತಗಳಲ್ಲಿ ಕೊಹ್ಲಿ ಅಮೋಘ 61 ರನ್ ಮಾಡಿದ್ರು. ಇನ್ನು 4 ಪ್ರಮುಖ ವಿಕೆಟ್ ಉರುಳಿಸಿ ಭಾರತದ ಗೆಲುವಿಗೆ ಪಾತ್ರರಾದ ಕೃನಾಲ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರೆ, ಸರಣಿಯೂದ್ದಕ್ಕೂ ಬೆಸ್ಟ್ ಫರ್ಪಾಮೆನ್ಸ್ ನೀಡಿದ ಶಿಖರ್ ಧವನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.

ಫಸ್ಟ್ ಮ್ಯಾಚಲ್ಲೇ 5 ವಿಕೆಟ್ ಪಡೆದ 17ರ ಬೌಲರ್..!

0

ಕ್ರಿಕೆಟ್ ಜಗತ್ತೇ ಹಾಗೇ..ಲೆಕ್ಕವಿಲ್ಲದಷ್ಟು ದಾಖಲೆಗಳ ಆಗರ. ದಿನಕ್ಕೊಂದು ರೆಕಾರ್ಡ್ ಕ್ರಿಕೆಟ್ ಪುಸ್ತಕದಲ್ಲಿ ದಾಖಲಾಗುತ್ತಲೇ ಇರುತ್ತದೆ. ಅಂತೆಯೇ ಯುವ ಬೌಲರ್ ಒಬ್ಬರು ತಮ್ಮ ಫಸ್ಟ್ ಮ್ಯಾಚ್ ನಲ್ಲೇ ರೆಕಾರ್ಡ್ ಮಾಡಿದ್ದಾರೆ.
ಬಾಂಗ್ಲಾ ದೇಶದ ಯುವ ಸ್ಪಿನ್ನರ್ ನಯೀಮ್ ಹಸನ್ (17) ದಾಖಲೆ ನಿರ್ಮಿಸಿದವರು. ಚಿತ್ತಗಾಂಗ್ ನಲ್ಲಿ ನಡೆಯುತ್ತಿರೋ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮ್ಯಾಚ್ ನಲ್ಲಿ ಹಸನ್ 5 ವಿಕೆಟ್ ಪಡೆದಿದ್ದಾರೆ. ಚೊಚ್ಚಲ ಮ್ಯಾಚ್ ನಲ್ಲೇ 5 ವಿಕೆಟ್ ಪಡೆಯೋ ಮೂಲಕ ಕ್ರಿಕೆಟ್ ಜಗತ್ತಿನ ಭವಿಷ್ಯದ ಸ್ಟಾರ್ ಅಂತ ಸಾರಿದ್ದಾರೆ.
ನಯೀಮ್ ಹಸನ್ 14 ಓವರ್ ಗಳಲ್ಲಿ 61 ರನ್ ನೀಡಿ 5 ವಿಕೆಟ್ ಕಿತ್ತಿದ್ದಾರೆ. ಇದ್ರಿಂದ ಪ್ರವಾಸಿ ವಿಂಡೀಸ್ ಪ್ರಥಮ ಇನ್ನಿಂಗ್ಸ್ ನಲ್ಲಿ 246 ರನ್ ಗಳಿಗೆ ಆಲ್ ಔಟ್ ಆಗಿದೆ. ಆಸ್ಟ್ರೇಲಿಯಾದ ಪ್ಯಾಟ್​ ಕಮಿನ್ಸ್​ ಬಳಿಕ ಫಸ್ಟ್ ಮ್ಯಾಚ್ ನಲ್ಲೇ 5 ವಿಕೆಟ್​ ಪಡೆದ ವಿಶ್ವದ 2ನೇ ಮತ್ತು ಬಾಂಗ್ಲಾದ ಮೊದಲ ಬೌಲರ್​​ ಅನ್ನೋ ಕೀರ್ತಿಗೆ ನಯೀಮ್ ಹಸನ್ ಪಾತ್ರರಾಗಿದ್ದಾರೆ.

ವರ್ಲ್ಡ್ ಕಪ್ ನಲ್ಲಿ ನಾನೇಕೆ ಯುವಿಗಿಂತ ಮುಂಚೆ ಬ್ಯಾಟಿಂಗ್ ಗೆ ಇಳಿದೆ..? ಧೋನಿ ಬಿಚ್ಚಿಟ್ಟ ರಹಸ್ಯ..!

0

ಅದು 2011 ಏಪ್ರಿಲ್​ 2.. ಆ ಸಂಜೆಯನ್ನು ಭಾರತದ ಯಾವೊಬ್ಬ ಕ್ರಿಕೆಟ್​ ಅಭಿಮಾನಿಯೂ ಎಂದೂ ಮರೆಯಲ್ಲ, ಮರೆಯಲು ಸಾಧ್ಯವೂ ಇಲ್ಲ. ಅಂದು ಮುಂಬೈನ ವಾಂಖೆಡೆಯಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ನಲ್ಲಿ ಟೀಮ್ಇಂಡಿಯಾ ಶ್ರೀಲಂಕಾ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿತ್ತು. 28 ವರ್ಷಗಳ ಬಳಿಕ ಎಂ ಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ವರ್ಲ್ಡ್ ಕಪ್ ಗೆದ್ದಿತ್ತು.
ಆದ್ರೆ, ಅಂದಿನ ಮ್ಯಾಚ್ ನಲ್ಲಿ ಸ್ಪೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್​ ಅವರ ಮೊದಲು ಮಾಹಿ ಕಣಕ್ಕಿಳಿದಿದ್ರು. ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಯುವಿ ಬದಲು ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಧೋನಿ ಕಣಕ್ಕಿಳಿದಿದ್ಯಾಕೆ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಅಂದಿನಿಂದ ಎಲ್ರನ್ನೂ ಕಾಡ್ತಿದ್ದ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಸ್ವತಃ ಧೊನಿಯೇ ಆ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿರುವ ಧೋನಿ ‘ಅಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡದಲ್ಲಿದ್ದ ಹೆಚ್ಚಿನ ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಚೆನೈ ತಂಡದಲ್ಲಿ ನನ್ನ ಜೊತೆಗಾರರಾಗಿದ್ದರು ಮತ್ತು ಶ್ರೀಲಂಕಾದ ಎಲ್ಲಾ ಬೌಲರ್‌ಗಳ ತಂತ್ರಗಾರಿಕೆ ನನಗೆ ಗೊತ್ತಿತ್ತು’ ಈ ಕಾರಣದಿಂದ ನಾನು ಕಣಕ್ಕಿಳಿದೆ ಎಂದಿದ್ದಾರೆ.
ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದಿದ್ದು ಮಾತ್ರವಲ್ಲ ಪಂದ್ಯದಲ್ಲಿ ಧೋನಿ ಬೆಸ್ಟ್ ಫರ್ಫಾರ್ಮೆನ್ಸ್ ಕೂಡ ನೀಡಿದ್ರು. ಮ್ಯಾಚ್ ನಲ್ಲಿ 79 ಎಸೆತಗಳಲ್ಲಿ 91ರನ್ ಸಿಡಿಸಿ ಗೆಲುವಿಗೆ ಕಾರಣರಾಗಿದ್ರು. ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಅಲ್ ರೌಂಡಿಂಗ್ ಫರ್ಪಾಮೆನ್ಸ್ ನೀಡಿದ್ರು. ಟೂರ್ನಿಯ ಉದ್ದಕ್ಕೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಯುವಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ರು.

ಡ್ರಾನಲ್ಲಿ ಅಂತ್ಯವಾಯ್ತು ಕರ್ನಾಟಕ VS ಮುಂಬೈ ಮ್ಯಾಚ್

0

ಕರ್ನಾಟಕ ಮತ್ತು ಮುಂಬೈ ನಡುವಿನ ರಣಜಿ ಮ್ಯಾಚ್ ಡ್ರಾನಲ್ಲಿ ಅಂತ್ಯವಾಗಿದೆ. ಬೆಳಗಾವಿಯಲ್ಲಿ ನಡೆದ ಮ್ಯಾಚ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೇಯಸ್ ಗೋಪಾಲ್ ನಾಯಕತ್ವದ ಕರ್ನಾಟಕ, ಮೊದಲ ಇನ್ನಿಗ್ಸ್ ನಲ್ಲಿ ಕೃಷ್ಣಮೂರ್ತಿ ಸಿದ್ಧಾರ್ಥ್ (161) ಅವರ ಅಮೋಘ ಶತಕದ ನೆರವಿನಿಂದ 400 ರನ್ ಮಾಡಿತು.

ಇದಕ್ಕೆ ಉತ್ತರವಾಗಿ ತನ್ನ ಇನ್ನಿಂಗ್ಸ್ ಆರಂಭಿಸಿದ ಧವಳ್ ಕುಲಕರ್ಣಿ ಸಾರಥ್ಯದ ಮುಂಬೈ 205 ರನ್ ಗಳಿಗೆ ಸರ್ವಪತನವಾಯಿತು.
ನಂತರ ಎರಡನೇ ಇನ್ನಿಂಗ್ಸ್ ನಲ್ಲಿ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 170 ರನ್ ಮಾಡಿತು. ಗುರಿ ಬೆನ್ನತ್ತಿದ ಮುಂಬೈ 4 ವಿಕೆಟ್ ನಷ್ಟಕ್ಕೆ 173ರನ್ ಗಳಿಸಿತು. ಅಂತಿಮವಾಗಿ ಪಂದ್ಯ ನೀರಸ ಡ್ರಾನಲ್ಲಿ ಮುಕ್ತಾಯವಾಯಿತು.

ಕರ್ನಾಟಕ ತಂಡ ತನ್ನ ಮುಂದಿನ ಪಂದ್ಯವನ್ನ 28ರಂದುಮೈಸೂರಿನಲ್ಲಿ ಆಡಲಿದ್ದು, ಮಹಾರಾಷ್ಟ್ರವನ್ನು ಎದುರಿಸಲಿದೆ. ಪ್ರಸಕ್ತ ರಣಜಿ ಋತುವಿನಲ್ಲಿ ಕರ್ನಾಟಕದ ಎರಡನೇ ಮ್ಯಾಚ್ ಇದಾಗಿತ್ತು. ವಿದರ್ಭ ನಡುವಿನ ಮೊದಲ ಪಂದ್ಯವೂ ಕೂಡ ಡ್ರಾ ಆಗಿತ್ತು.

ಟೀಮ್ ಇಂಡಿಯಾಕ್ಕೆ ಮತ್ತೆ ಕೈ ಕೊಟ್ಟ ವರುಣ..!

0

ಆಸ್ಟ್ರೇಲಿಯಾ ಪ್ರವಾಸದಲ್ಲಿರೋ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾಕ್ಕೆ ಮಳೆ ಕೈ ಕೊಡುತ್ತಿದೆ. ಇಂದು ಮೇಲ್ಬೋರ್ನ್ ನಲ್ಲಿ ನಡೆಯಬೇಕಿದ್ದ 2ನೇ ಟಿ20 ಮ್ಯಾಚ್ ಗೆ ವರುಣ ಅಡ್ಡಿಪಡಿಸಿದ್ದಾನೆ.
ಟಾಸ್ ಗೆದ್ದ ಟೀಮ್ ಇಂಡಿಯಾ ಅತಿಥೇಯ ಆಸ್ಟ್ರೇಲಿಯಾಕ್ಕೆ ಬ್ಯಾಟಿಂಗ್ ಗೆ ಆಹ್ವಾನಿಸಿತು. ಆದರೆ, ವರುಣ ಸಂಪೂರ್ಣ ಆಟಕ್ಕೆ ಬಿಡಲಿಲ್ಲ. ಆಸೀಸ್ 19 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿರುವಾಗ ಮಳೆ ಕೈಕೊಟ್ಟಿತು.
ಎಡೆಬಿಡದೆ ಸುರಿದ ಮಳೆಯಿಂದಾಗಿ ಮೊದಲು ಭಾರತಕ್ಕೆ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ 11 ಓವರ್‌ಗಳಲ್ಲಿ 90 ರನ್ ಟಾರ್ಗೆಟ್ ನೀಡಲಾಗಿತ್ತು. ನಂತರ ಮತ್ತೆ 5 ಓವರ್‌ಗಳಗೆ 46 ರನ್ ಟಾರ್ಗೆಟ್ ನೀಡಲಾಯಿತು. ಆದರೆ, ಮತ್ತೆ ಮಳೆ ಆರ್ಭಟ ಶುರುವಾದ್ದರಿಂದ ಮ್ಯಾಚ್ ಅನ್ನು ರದ್ದು ಪಡಿಸಲಾಯಿತು. ಮೊದಲ ಮ್ಯಾಚ್ ಅನ್ನು ಸೋತಿದ್ದ ಭಾರತ ಈ ಮ್ಯಾಚ್ ಅನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ವಿಶ್ವಾಸದಲ್ಲಿತ್ತು. ಆದರೆ, ಇದು ಸಾಧ್ಯ ಆಗಲಿಲ್ಲ.

ಮೊದಲ ಮ್ಯಾಚ್ ನಲ್ಲೂ ಭಾರತಕ್ಕೆ ಕೈ ಕೊಟ್ಟಿದ್ದು ಮಳೆಯೇ. ಆ ಮ್ಯಾಚ್ ನಲ್ಲೂ ಆಸೀಸ್ ಮೊದಲು ಬ್ಯಾಟಿಂಗ್ ಮಾಡಿತ್ತು. 16.1 ಓವರ್ ಆಗುವಷ್ಟರಲ್ಲಿ ಸುರಿದ ಮಳೆ ಪಂದ್ಯಕ್ಕೆ ಅಡ್ಡಿಪಡಿಸಿತ್ತು. ಇದರಿಂದಾಗಿ 17 ಓವರ್ ಗಳಿಗೆ ಇನ್ನಿಂಗ್ಸ್ ಅನ್ನು ಸೀಮಿತಗೊಳಿಸಲಾಗಿತ್ತು. ನಿಗಧಿತ 17 ಓವರ್ ಗಳಲ್ಲಿ ಆಸೀಸ್ 158 ರನ್ ಗಳಿಸಿತ್ತು. ಡಕ್ ವರ್ತ್ ನಿಯಮದ ಪ್ರಕಾರ ಭಾರತಕ್ಕೆ 17 ಓವರ್ ಗಳಲ್ಲಿ 174 ರನ್ ಗುರಿ ನೀಡಲಾಗಿತ್ತು. ಗುರಿ ಬೆನ್ನತ್ತಿದ ಭಾರತ 7 ವಿಕೆಟ್ ಕಳ್ಕೊಂಡು ಕೇವಲ 169 ರನ್ ಗಳಿಸಲಷ್ಟೇ ಶಕ್ತವಾಯ್ತು.

ಟೀಮ್ ಇಂಡಿಯಾದ ವರ್ಲ್ಡ್ ಕಪ್ ಕನಸು ಭಗ್ನ..!

0

ಮಹಿಳಾ ಟಿ-20 ವರ್ಲ್ಡ್ ಕಪ್ ನ 2ನೇ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ಇಂಡಿಯಾ ಮುಗ್ಗರಿಸಿದೆ. ಪಂದ್ಯದಲ್ಲಿ 8 ವಿಕೆಟ್ ಗಳ ಜಯ ಸಾಧಿಸಿದ ಇಂಗ್ಲೆಂಡ್ ಫೈನಲ್ ಗೆ ಲಗ್ಗೆ ಇಟ್ಟಿದೆ. ಇದ್ರೊಂದಿಗೆ ಟೀಮ್ ಇಂಡಿಯಾದ ವರ್ಲ್ಡ್ ಕಪ್ ಕನಸು ಭಗ್ನವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್ ಪ್ರೀತ್ ಕೌರ್ ಪಡೆ ಹೀತರ್ ನೈಟ್ ಬಳಗದ ಬಿಗಿ ಬೌಲಿಂಗ್ ದಾಳಿಗೆ ತತ್ತರಿಸಿತು. ಬ್ಯಾಟ್ಸ್ ವುಮೆನ್ಸ್ ಒಬ್ಬರ ಹಿಂದೊಬ್ಬರು ಪೆವಿಲಿಯನ್ ಪೆರೇಡ್ ಮಾಡಿದ್ರು. ಪರಿಣಾಮವಾಗಿ 19.3 ಓವರ್ ಗಳಲ್ಲಿ 112 ರನ್ ಗಳಿಗೆ ಭಾರತದ ಇನ್ನಿಂಗ್ಸ್ ಅಂತ್ಯವಾಯಿತು.
113 ರನ್ ಗಳನ್ನು ಬೆನ್ನತ್ತಿದ ಇಂಗ್ಲೆಂಡ್ ಪಡೆ 17.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ನಿರಾಯಾಸವಾಗಿ ಗುರಿ ತಲುಪಿತು. ಆರಂಭಿಕ ಆಘಾತ ಎದುರಿಸಿದ್ದ ಆಂಗ್ಲ ಪಡೆ ವಿಕೆಟ್ ಕೀಪರ್ ಆ್ಯಮಿ ಎಲೆನ್ ಜಾನ್ಸ್ ಹಾಗೂ ನತಾಲೀ ಸೀವರ್ ಅರ್ಧಶತಕಗಳ ನೆರವಿನಿಂದ 8 ವಿಕೆಟ್ ಜಯ ಸಾಧಿಸಿತು.
ಫೈನಲ್ ನವೆಂಬರ್ 24ರಂದು ನಡೆಯಲಿದ್ದು, ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧ ವಿಶ್ವ ಚಾಂಪಿಯನ್ ಪಟ್ಟಕ್ಕೆ ಸೆಣಸಲಿದೆ.

ಒಡಿಐ ವರ್ಲ್ಡ್ ಕಪ್ ಸೇಡು ತೀರಿಸಿಕೊಳ್ಳುತ್ತಾ ಟೀಮ್ ಇಂಡಿಯಾ..?

0

ಕೆರಿಬಿಯನ್​ ನಾಡಿನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವರ್ಲ್ಡ್ ಕಪ್ ಸೋಲಿಲ್ಲದೆ ಮುನ್ನುಗುತ್ತಿರುವ ಟೀಮ್ ಇಂಡಿಯಾ ನಾಳೆ ನಡೆಯಲಿರೋ ಮೊದಲ ಸೆಮಿಫೈನಲ್ ನಲ್ಲಿ ಬಲಿಷ್ಠ ಇಂಗ್ಲೆಂಡ್​ ತಂಡವನ್ನು ಎದುರಿಸಲಿದೆ. ಆ್ಯಂಟಿಗಾದಲ್ಲಿ ನಡೆಯಲಿರೋ ಮ್ಯಾಚ್ ಗೆದ್ದು ಏಕದಿನ ವಿಶ್ವಕಪ್​ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಕೌರ್ ಪಡೆ. 2017ರ ಮಹಿಳಾ ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್​ ನಲ್ಲಿ ಇಂಗ್ಲೆಂಡ್​ ವನಿತೆಯರು ಟೀಮ್​ಇಂಡಿಯಾವನ್ನ 9ರನ್ ಗಳಿಂದ ಸೋಲಿಸಿದ್ದರು.
ಟೂರ್ನಿಯ ಲೀಗ್​ ಹಂತದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್​ ಸೇರಿದಂತೆ ಆಡಿದ ನಾಲ್ಕೂ ಪಂದ್ಯಗಳನ್ನೂ ಜಯಸಿರುವುದು ಟೀಮ್​ಇಂಡಿಯಾದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಅಲ್ಲದೇ ಇಂಜುರಿ ಸಮಸ್ಯೆಯಿಂದ ಕಳೆದ ಪಂದ್ಯದಿಂದ ಹೊರಗುಳಿದಿದ್ದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ನಾಳಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದರಿಂದ ಕೌರ್​ ಬಳಗಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂದಾನ, ನಾಯಕಿ ಹರ್ಮನ್ ಪ್ರೀತ್ ಕೌರ್, ಜೆಮಿಮಾ ರೊಡ್ರಿಗಸ್​, ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ ಉತ್ತಮ ಫಾರ್ಮ್​ನಲ್ಲಿರುವುದು ತಂಡದ ಬ್ಯಾಟಿಂಗ್​ ಶಕ್ತಿಯನ್ನ ಹೆಚ್ಚಿಸಿದೆ. ಟೀಮ್​ಇಂಡಿಯಾದ ಬೌಲಿಂಗ್​ ವಿಭಾಗ ಟೂರ್ನಿಯೂದ್ದಕ್ಕೂ ಬೆಸ್ಟ್​ ಪರ್ಫಾರ್ಮೆನ್ಸ್​ ನೀಡಿದೆ. ದೀಪ್ತಿ ಶರ್ಮಾ, ದಯಾಳನ್ ಹೇಮಲತಾ, ಪೂನಂ ಯಾದವ್ ಹಾಗೂ ರಾಧಾ ಯಾದವ್​ ಇಂಗ್ಲೆಂಡ್​ ಬ್ಯಾಟ್ಸ್​​ವುಮೆನ್​ಗಳನ್ನು ಕಟ್ಟಿಹಾಕುವ ವಿಶ್ವಾಸದಲ್ಲಿದ್ದಾರೆ.
ಎದುರಾಳಿ ಇಂಗ್ಲೆಂಡ್​ ತಂಡವೂ ಉತ್ತಮ ಫಾರ್ಮ್​ನಲ್ಲಿದೆ. ಆದ್ರೆ ನಾಯಕಿ ಹಿಥರ್​ ನೈಟ್​​ ಹಾಗೂ ​ತಂಡದ ಡ್ಯಾನಿ ವೈಟ್​​ ಮಧ್ಯಮ ಕ್ರಮಾಂಕದಲ್ಲಿ ವಿಫಲತೆಯನ್ನ ಅನುಭವಿಸುತ್ತಿರುವುದು ಆಂಗ್ಲ ಪಡೆಗೆ ತಲೆನೋವಾಗಿದೆ. ಟೂರ್ನಿಯಲ್ಲಿ ಇಂಗ್ಲೆಂಡ್​ ಪರ ಹೆಚ್ಚು ರನ್​ ಸಿಡಿಸಿರುವ ಎಮಿ ಜೋನ್ಸ್​ ಅಬ್ಬರಿಸುವ ವಿಶ್ವಾಸದಲ್ಲಿದ್ದಾರೆ. ಇನ್ನುಳಿದಂತೆ ನತಾಲೀ ಸಿವರ್, ಎನಿ ಶುಬ್ರ್ ಸೋಲ್ ಆಂಗ್ಲ ಪಡೆಯ ಬೌಲಿಂಗ್​ನ ಶಕ್ತಿಯಾಗಿದ್ದಾರೆ.
ಭಾರತ ಮಹಿಳಾ ತಂಡ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳು ಟಿ-20 ಮಾದರಿಯಲ್ಲಿ ಈವರೆಗೂ 13 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದೂ 10 ಪಂದ್ಯಗಳಲ್ಲಿ ಇಂಗ್ಲೆಂಡ್​ ಜಯಸಿದ್ರೆ, 3 ಮ್ಯಾಚ್​ಗಳಲ್ಲಿ ಟೀಮ್​ಇಂಡಿಯಾ ಜಯಸಿದೆ.
ನೂತನ ಕೋಚ್​ ರಮೇಶ್​ ಪವಾರ್​ ನೇತೃತ್ವದಲ್ಲಿ ಟೂರ್ನಿಯಲ್ಲಿ ಕೌರ್​ ಬಳಗ ಭರ್ಜರಿ ಪ್ರದರ್ಶನ ನೀಡಿದೆ. ಈ ಬಗ್ಗೆ ನಾಯಕಿ ಹರ್ಮನ್​ಪ್ರೀತ್​ ಕೌರ್​ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ದೊಡ್ಡ ಮೊತ್ತವನ್ನು ಬೆನ್ನತ್ತಲು ಶಕ್ತರಾಗಿದ್ದೇವೆ. ನಾವು ಸೆಮಿಪೈನಲ್​ ತಲುಪಿದ ಕ್ರೇಡಿಟ್​ ಅನ್ನು ರಮೇಶ್​ ಅವರಿಗೆ ನೀಡಲಿಚ್ಛಿಸುತ್ತೇವೆ” ಅಂದಿದ್ದಾರೆ.
ಆಟಗಾರ್ತಿಯರ ನಡುವಿನ ಮನಸ್ತಾಪದ ಕಾರಣದಿಂದ ಹಿಂದಿನ ಕೋಚ್ ತುಷಾರ್ ಅರೋತೆ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ರಮೇಶ್ ಪವಾರ್ ನೇಮಿಸಲಾಗಿತ್ತು.
ನಾಳಿನ ಪಂದ್ಯ ಭಾರತೀಯ ಕಾಲಮಾನ ಮುಂಜಾನೆ 5.30ಕ್ಕೆ ಪಂದ್ಯ ಆರಂಭವಾಗಲಿದ್ದು, ಸರ್ ವಿವಿಎನ್ ರಿಚರ್ಡ್ಸ್​​ ಮೈದಾನದಲ್ಲಿ ಪಂದ್ಯ ನಡೆಯಲಿದೆ.

Popular posts