Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Thursday, February 27, 2020

ಕನ್ನಡಿಗ ರಾಹುಲ್ ನಾಯಕತ್ವದಲ್ಲಿ ಗೆದ್ದು ಬೀಗಿದ ಭಾರತ  ; ಸರಣಿ ಕ್ಲೀನ್ ಸ್ವೀಪ್ – ಸೃಷ್ಟಿಯಾಯ್ತು ಇತಿಹಾಸ..!

0

ಮೌಂಟ್​​ ಮಾಂಗ್ನುಯಿ : ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಇದರೊಂದಿಗೆ ಕಿವೀಸ್ ನೆಲದಲ್ಲಿ ಚೊಚ್ಚಲ ಹಾಗೂ ಐತಿಹಾಸಿಕ ಟಿ20 ಸರಣಿಯನ್ನು 5-0 ಅಂತರದಲ್ಲಿ ಗೆದ್ದ ಭಾರತ, 5 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ವಿಶ್ವದ ಮೊದಲ ತಂಡ ಎಂಬ ಕೀರ್ತಿಗೆ ಪಾತ್ರವಾಗಿದೆ. ಭಾರತದ ಫೀಲ್ಡಿಂಗ್ ವೇಳೆ ಕನ್ನಡಿಗ ಕೆ.ಎಲ್​ ರಾಹುಲ್​ ತಂಡವನ್ನು ಚೊಚ್ಚಲ ಬಾರಿಗೆ ತಂಡವನ್ನು ಮುನ್ನೆಡೆಸಿದ್ದು ವಿಶೇಷ.
ಮೌಂಟ್​ ಮಾಂಗ್ನುಯಿಯಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕ್ಯಾಪ್ಟನ್ ವಿರಾಟ್ ಕೊಹ್ಲಿ ವಿಶ್ರಾಂತಿ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಸಾರಥ್ಯವಹಿಸಿದ್ರು. ರಾಹುಲ್ ಜೊತೆ ಮೊದಲು ಬ್ಯಾಟಿಂಗ್​ಗಿಳಿದ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಎಡವಿದ್ರು. ಬಳಿಕ ಒಂದಾದ ರಾಹುಲ್ ಮತ್ತು ಹಿಟ್ ಮ್ಯಾನ್ ರೋಹಿತ್ ಶರ್ಮಾ ಕಿವೀಸ್ ಬೌಲರ್​​ಗಳನ್ನು ಇನ್ನಿಲ್ಲದಂತೆ ಕಾಡಿದ್ರು. ಮತ್ತೊಮ್ಮೆ ಮಿಂಚಿದ ರಾಹುಲ್ 45ರನ್ ಮಾಡಿ ಪೆವಿಲಿಯನ್ ಸೇರಿದ್ರೆ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ( ಅಜೇಯ 60) ಬಾರಿಸಿ ಆಡುತ್ತಿದ್ದಾಗ ಗಾಯಗೊಂಡು ಪೆವಿಲಿಯನ್ ಕಡೆಗೆ ಮುಖಮಾಡಿದ್ರು. ದುಬೆ ಕೇವಲ 5ರನ್ ಮಾಡಿ ನಿರಾಸಿ ಮೂಡಿಸಿದ್ರೆ, ಶ್ರೇಯಸ್ ಅಯ್ಯರ್ ಅಜೇಯ 33ರನ್ ಹಾಗೂ ಮತ್ತೊಬ್ಬ ಕನ್ನಡಿಗ ಮನೀಷ್ ಪಾಂಡೆ ಅಜೇಯ 11ರನ್ ಮಾಡಿ ತಂಡಕ್ಕೆ ನೆರವಾದ್ರು. ಅಂತಿಮವಾಗಿ ಭಾರತ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ಕಳ್ಕೊಂಡು 163 ರನ್ ಮಾಡಿತು.
ಗುರಿ ಬೆನ್ನತ್ತಿದ ನ್ಯೂಜಿಲೆಂಡ್​ ಪರ ವಿಕೆಟ್ ಕೀಪರ್ ಟಿಮ್ ಸೀಫರ್ಟ್ (50) ಹಾಗೂ ರಾಸ್ ಟೇಲರ್ (53) ಹೋರಾಟ ನಡೆಸಿದ್ದು ಬಿಟ್ಟರೆ, ಬೇರೆ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಲಿಲ್ಲ. ಅಂತಿಮವಾಗಿ ನಿಗದಿತ 20 ಓವರ್​ಗಳಲ್ಲಿ ಕಿವೀಸ್​ 9 ವಿಕೆಟ್ ಕಳ್ಕೊಂಡು ಕೇವಲ 156ರನ್ ಮಾಡಲಷ್ಟೇ ಶಕ್ತವಾಯಿತು. ಭಾರತ 7ರನ್​ಗಳಿಂದ ಭರ್ಜರಿ ಜಯ ದಾಖಲಿಸಿತು.

ಟೀಮ್ ಇಂಡಿಯಾ ನಾಯಕನೂ ಆದ ಕನ್ನಡಿಗ ಕೆ.ಎಲ್ ರಾಹುಲ್..! ದ್ರಾವಿಡ್ ಹಾದಿಯಲ್ಲಿ ಕರಾವಳಿ ಕುವರ..!

0

ಮೌಂಟ್​​ ಮಾಂಗ್ನುಯಿ : ವಿಶ್ವಕ್ರಿಕೆಟ್ ಕಂಡ ಸರ್ವ ಶ್ರೇಷ್ಠ ಆಟಗಾರ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ಹಾದಿಯಲ್ಲಿ ಮತ್ತೊಬ್ಬ ಕನ್ನಡಿಗ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ವಿಶೇಷವೂ, ಕಾಕತಾಳಿಯವೂ ಎಂಬಂತೆ ಆ ಯುವ ಆಟಗಾರನ ಹೆಸರೂ ಕೂಡ ರಾಹುಲ್..!
ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಖಾಡೆಮಿಯ ನಿರ್ದೇಶಕರಾಗಿರೋ ರಾಹುಲ್ ದ್ರಾವಿಡ್ 15 ವರ್ಷಗಳ ಕಾಲ ಟೀಮ್ ಇಂಡಿಯಾದ ಆಪತ್ಬಾಂಧವರಾಗಿದ್ದವರು. ದಿ ವಾಲ್ ಎಂದೇ ಖ್ಯಾತರಾಗಿರೋ ದ್ರಾವಿಡ್​ ತಂಡ ಬಯಸಿದ್ದೆಲ್ಲವನ್ನೂ ಧಾರೆ ಎರೆದ ಅದ್ಭುತ ಕ್ರಿಕೆಟಿಗ.
ಓಪನ್ನಿಂಗ್ ಬೇಕೆಂದಾಗ ಓಪನರ್ ಆಗಿ, ಒನ್​ಡೌನ್ ಬೇಕೆಂದಾಗ ಒನ್​ಡೌನ್ ಬ್ಯಾಟ್ಸ್​ಮನ್​ ಆಗಿ, 4, 5, 6, 7 ಹೀಗೆ ಯಾವ ಕ್ರಮಾಂಕಕ್ಕೆ ಅವಶ್ಯಕತೆ ಇದೆಯೋ ಆ ಎಲ್ಲಾ ಕ್ರಮಾಂಕದಲ್ಲೂ ಕ್ರೀಸ್​ಗಿಳಿದು ಜವಬ್ದಾರಿ ನಿಭಾಯಿಸಿದ ಹಿರಿಮೆ ದ್ರಾವಿಡ್ ಅವರದ್ದು. ತಂಡಕ್ಕೆ ಇನ್ನೊಬ್ಬ ಹೆಚ್ಚುವರಿ ಬ್ಯಾಟ್ಸ್​ಮನ್ ಬೇಕು, ಸಮರ್ಥ ವಿಕೆಟ್ ಕೀಪರ್ ಇಲ್ಲ ಎಂದಾಗ ವಿಕೆಟ್ ಕೀಪರ್ ಆಗಿ ತಂಡಕ್ಕೆ ಬಲ ತಂದವರು ದ್ರಾವಿಡ್​..! ಬೌಲಿಂಗ್ ಕೂಡ ಮಾಡಿದ ಉದಾಹರಣೆಯೂ ಇದೆ..! ಒಬ್ಬ ಅತ್ಯುತ್ತಮ ಬ್ಯಾಟ್ಸ್​ಮನ್​ ಆಗಿ, ವಿಕೆಟ್ ಕೀಪರ್ ಆಗಿ, ಒಳ್ಳೆಯ ಫೀಲ್ಡರ್ ಆಗಿ ವಿಶ್ವ ಕ್ರಿಕೆಟಲ್ಲಿ ಮಿಂಚಿದ ಕನ್ನಡಿಗ ದ್ರಾವಿಡ್​ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿಯೂ ಮಹತ್ತರ ಹೊಣೆಗಾರಿಕೆಯನ್ನು ನಿಭಾಯಿಸಿದ್ರು.
ದ್ರಾವಿಡ್ ನಿವೃತ್ತಿ ಬಳಿಕ ಆ ಸ್ಥಾನ ತುಂಬ ಬಲ್ಲ ಒಬ್ಬನೇ ಒಬ್ಬ ಆಟಗಾರ ಸಿಕ್ಕಿರಲಿಲ್ಲ. ಆಗೊಮ್ಮೆ – ಹೀಗೊಮ್ಮೆ ಕೆಲವರ ಹೆಸರು ಕೇಳಿಬಂದಿತ್ತಾದರೂ ಅವರಾರು ದ್ರಾವಿಡ್ ಸ್ಥಾನದ ಹೆಸರಲ್ಲಿ ಗಟ್ಟಿಯಾಗಿ ನಿಂತಿಲ್ಲ. ಟೆಸ್ಟ್​ ಗೆ ಸೈ ಎನಿಸಿಕೊಂಡವರು ಒಡಿಐಗೆ, ಒಡಿಐನಲ್ಲಿ ಸದ್ದು ಮಾಡಿದವ್ರು ಟೆಸ್ಟ್​ಗೆ ಒಗ್ಗಿಕೊಂಡಿಲ್ಲ. ಆದರೆ, ಈಗ ಮತ್ತೊಬ್ಬ ಹೆಮ್ಮೆಯ ಕನ್ನಡಿಗನೇ ದ್ರಾವಿಡ್ ಹಾದಿಯಲ್ಲಿ ತಂಡಕ್ಕೆ ಬಹು ದೊಡ್ಡ ಆಸ್ತಿಯಾಗುತ್ತಿದ್ದಾರೆ.
ಹೌದು… ಕೆ.ಎಲ್ ರಾಹುಲ್ ಇದೀಗ ದ್ರಾವಿಡ್ ಹಾದಿಯಲ್ಲಿ ಮುನ್ನುಗ್ಗುತ್ತಿದ್ದಾರೆ. ಒಬ್ಬ ಬ್ಯಾಟ್ಸ್​ಮನ್ ಆಗಿ ಯಾವ್ದೇ ಕ್ರಮಾಂಕದಲ್ಲೂ ಬ್ಯಾಟ್​ ಬೀಸಲು ಸಿದ್ಧ ಅಂತ ಈಗಾಗಲೇ ಪ್ರೂವ್ ಮಾಡಿರೋ ರಾಹುಲ್, ಪರಿಪೂರ್ಣ ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ಬಹು ದೊಡ್ಡ ಶಕ್ತಿಯಾಗಿದ್ದಾರೆ. ಬ್ಯಾಟಿಂಗ್ ಮತ್ತು ಕೀಪಿಂಗ್ ಎರಡರಲ್ಲೂ ಜಬರ್ದಸ್ತ್​ ಪರ್ಫಾರ್ಮೆನ್ಸ್ ನೀಡ್ತಿರೋ ರಾಹುಲ್ ಇದೀಗ ಟೀಮ್ ಇಂಡಿಯಾದ ನಾಯಕನೂ ಆಗಿದ್ದಾರೆ…!
ಮೌಂಟ್​​ ಮಾಂಗ್ನುಯಿನಲ್ಲಿ ನಡೆಯುತ್ತಿರೋ ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ರಾಹುಲ್ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದಾರೆ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ಸಾರಥ್ಯವಹಿಸಿಕೊಂಡಿದ್ದ ಹಿಟ್​ ಮ್ಯಾನ್ ರೋಹಿತ್ ಶರ್ಮಾ ಬ್ಯಾಟಿಂಗ್ ವೇಳೆ ಗಾಯಗೊಂಡಿದ್ದರಿಂದ ಭಾರತದ ಫೀಲ್ಡಿಂಗ್ ವೇಳೆ ತಂಡದ ಬದಲಿ ನಾಯಕನಾಗಿ ಜವಬ್ದಾರಿ ಹೊತ್ತಿದ್ದಾರೆ ಕರಾವಳಿ ಕುವರ ರಾಹುಲ್ ..! ಇದರೊಂದಿಗೆ ರಾಹುಲ್ ಆಪತ್ಬಾಂಧವರಾಗಿದ್ದು, ಯಾವ ಹೊಣೆ ನಿಭಾಯಿಸಲು ತಾನು ರೆಡಿಯಿದ್ದೇನೆ ಅಂತ ಸಾರಿದ್ದಾರೆ.

ಸಚಿನ್, ಗಂಗೂಲಿ, ದ್ರಾವಿಡ್​ ಸಾಲಿಗೆ ಸೇರಿದ ರೋಹಿತ್ ಶರ್ಮಾ..!

0

ಮೌಂಟ್​​ ಮಾಂಗ್ನುಯಿ : ಹಿಟ್​​ಮ್ಯಾನ್​ ರೋಹಿತ್ ಶರ್ಮಾ ಮಾಸ್ಟರ್​ ಬ್ಲಾಸ್ಟರ್ ಸಚಿನ್​ ತೆಂಡೂಲ್ಕರ್, ದಿ ಗ್ರೇಟ್ ವಾಲ್ ರಾಹುಲ್ ದ್ರಾವಿಡ್ ಹಾಗೂ ಬಂಗಾಳದ ಹುಲಿ ಸೌರವ್​ ಗಂಗೂಲಿ ಅವರ ಸಾಲಿಗೆ ಸೇರಿದ್ದಾರೆ. ಅಲ್ಲದೆ ಸಮಕಾಲೀನ ಕ್ರಿಕೆಟಿಗರಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ ಎಲೈಟ್ ಪಟ್ಟಿಗೆ ಶರ್ಮಾ ಸೇರ್ಪಡೆಯಾಗಿದ್ದಾರೆ.
ಮೌಂಟ್ ಮಾಂಗ್ನುಯಿಯಲ್ಲಿ ನಡೆಯುತ್ತಿರೋ ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20ಯಲ್ಲಿ ಭರ್ಜರಿ ಅರ್ಧಶತಕ (ಅ.60/ ಗಾಯ) ಸಿಡಿಸಿದ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 14,000ರನ್​​ ಮೈಲುಗಲ್ಲು ದಾಟಿದರು. ಭಾರತದ ಪರ ಇಂಟರ್ನ್ಯಾಷನಲ್ ಕ್ರಿಕೆಟಲ್ಲಿ 14,000ಕ್ಕೂ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್, ವೀರೇಂದ್ರ ಸೆಹ್ವಾಗ್ ಹಾಗೂ ಹಾಲಿ ಕ್ರಿಕೆಟಿಗರಾದ ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಇದ್ದಾರೆ. ಈ ಪಟ್ಟಿಗೆ ಸೇರಲು ರೋಹಿತ್​​ಗೆ 31ರನ್ ಅಗತ್ಯವಿತ್ತು. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ ಶರ್ಮಾ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು ಭರ್ಜರಿ ಪ್ರದರ್ಶನ ನೀಡಿದರು. ಅವರಿಂದ ಮತ್ತಷ್ಟೂ ರನ್​ ಪ್ರಹಾರ ಹರಿಯುವ ಸಾಧ್ಯತೆ ಇತ್ತು. ಆದರೆ, ದುರಾದೃಷ್ಟವಶಾತ್ ಗಾಯಗೊಂಡು ಪೆವಿಲಿಯನ್ ಸೇರಿದ್ರು.

ರೋಹಿತ್ ನಾಯಕತ್ವದಲ್ಲಿ ಭಾರತ ಕಣಕ್ಕೆ – ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ

0

ಮೌಂಟ್​​ ಮಾಂಗ್ನುಯಿ : ನ್ಯೂಜಿಲೆಂಡ್ ವಿರುದ್ಧದ 5ನೇ ಹಾಗೂ ಕೊನೆಯ ಟಿ20 ಮ್ಯಾಚ್​ನಲ್ಲಿ ಟಾಸ್​ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಕ್ಯಾಪ್ಟನ್ ಕೊಹ್ಲಿ ವಿಶ್ರಾಂತಿ ಬಯಸಿದ್ದು, ಅವರ ಅನುಪಸ್ಥಿತಿಯಲ್ಲಿ ಹಿಟ್ ಮ್ಯಾನ್​ ರೋಹಿತ್ ಶರ್ಮಾ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಅತ್ತ ಕೇನ್​​​ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಟೀಮ್ ಸೌಥಿ ನ್ಯೂಜಿಲೆಂಡ್​ ತಂಡದ ಸಾರಥ್ಯವಹಿಸಿದ್ದಾರೆ.
ಇನ್ನುಳಿದಂತೆ ಕನ್ನಡಿಗ ಕೆ.ಎಲ್ ರಾಹುಲ್, ಸಂಜು ಸಾಮ್ಸನ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಶಿವಂದುಬೆ. ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಯುಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ ಭಾರತದ ಆಡುವ 11ರ ಬಳಗದಲ್ಲಿದ್ದಾರೆ. ಈಗಾಗಲೇ 4 ಮ್ಯಾಚ್​ಗಳನ್ನು ಗೆದ್ದಿರೋ ಭಾರತ ಈ ಪಂದ್ಯವನ್ನೂ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡೋ ಉತ್ಸಾಹದಲ್ಲಿದೆ.

ಭಾರತಕ್ಕೆ ಕ್ಲೀನ್​ ಸ್ವೀಪ್ ಗುರಿ

0

ಮೌಂಟ್​​ ಮಾಂಗ್ನುಯಿ : ಅತಿಥೇಯ ನ್ಯೂಜಿಲೆಂಡ್ ವಿರುದ್ಧ 5ನೇ ಹಾಗೂ ಕೊನೆಯ ಟಿ20 ಮ್ಯಾಚ್​ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡೋ ಗುರಿಯನ್ನು ಹೊಂದಿದೆ.
ಮೌಂಟ್ ಮಾಂಗ್ನುಯಿಯಲ್ಲಿ ಇಂದು ನಡೆಯಲಿರೋ ಪಂದ್ಯ ನ್ಯೂಜಿಲೆಂಡ್​ಗೆ ಪ್ರತಿಷ್ಠೆಯ ಪಂದ್ಯವಾಗಿದೆ. ಈಗಾಗಲೇ ಸರಣಿ ಸೋತಿರೋ ಕಿವೀಸ್ ಪಡೆ ಕೊನೆಯ ಮ್ಯಾಚನ್ನಾದರೂ ಗೆದ್ದು ಮುಖಭಂಗವನ್ನು ಕಮ್ಮಿ ಮಾಡಿಕೊಳ್ಳೋ ಒತ್ತಡದಲ್ಲಿದೆ. ಮೊದಲೆರಡು ಮ್ಯಾಚ್​ಗಳಲ್ಲಿ ಅಧಿಕಾರಯುತ ಗೆಲುವು ಪಡೆದ ಭಾರತ, ಮೂರು ಮತ್ತು ನಾಲ್ಕನೇ ಪಂದ್ಯದಲ್ಲಿ ಸೂಪರ್ ಗೆಲುವು ಪಡೆದಿದೆ.
ರೋಹಿತ್ ನಾಯಕ? : ಇನ್ನು ಸರಣಿ ಗೆದ್ದಿರೋದ್ರಿಂದ ನಾಲ್ಕನೇ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದರು. ಅವರ ಬದಲು ಸಂಜು ಸಾಮ್ಸನ್​​ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ರು. ಇಂದಿನ ಪಂದ್ಯದಲ್ಲಿ ಕ್ಯಾಪ್ಟನ್ ಕೊಹ್ಲಿ ವಿಶ್ರಾಂತಿ ಬಯಸಿದರೆ, ರೋಹಿತ್ ತಂಡವನ್ನು ಮುನ್ನಡೆಸಲಿದ್ದಾರೆ.

ಕಿವೀಸ್​ಗೆ ತಪ್ಪದ ‘ರಾಹು’ಲ್​​ ಕಾಟ , ‘ಪನಿಶ್​’ ಪಾಂಡೆ – ಕನ್ನಡಿಗರ ಆಟಕ್ಕೆ ಒಲಿದ ‘ಸೂಪರ್​’ ಗೆಲುವು..!

0

ವೆಲ್ಲಿಂಗ್ಟನ್ : ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮನೀಶ್ ಪಾಂಡೆ ಭರ್ಜರಿ ಆಟದ ನೆರವಿನಿಂದ ಟೀಮ್ ಇಂಡಿಯಾ ಅತಿಥೇಯ ನ್ಯೂಜಿಲೆಂಡ್ ವಿರುದ್ಧ ಮತ್ತೊಂದು `ಸೂಪರ್’ ಗೆಲುವು ಪಡೆದಿದೆ.
ವೆಲ್ಲಿಂಗ್ಟನ್​ನ ಸ್ಕೈ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್​ಗಳಲ್ಲಿ 165ರನ್​ ಮಾಡಿತು. ಭಾರತದ ಪರ ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಮತ್ತೊಬ್ಬ ಕನ್ನಡಿಗ ಮನೀಷ್ ಪಾಂಡೆ ಹೀರೋ ಆದರು. 26 ಬಾಲ್​ಗಳಲ್ಲಿ ಅಮೂಲ್ಯ 39ರನ್ ಸಿಡಿಸಿ ರಾಹುಲ್ ಮತ್ತೊಮ್ಮೆ ಮಿಂಚಿದ್ರೆ, ಮನೀಷ್​ ಪಾಂಡೆ ಅಜೇಯ 50ರನ್ ಸಿಡಿಸಿ ಸವಾಲಿನ ಗುರಿ ನೀಡುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದ್ರು.
ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಮನ್ರೋ (64) ಮತ್ತು ಟಿಮ್ ಸೀಫರ್ಟ್ (57) ಅತ್ಯುತ್ತಮ ಆಟವಾಡಿ ಸರಣಿಯ ಮೊದಲ ಗೆಲುವಿನ ಆಸೆಯನ್ನು ಚಿಗುರಿಸಿದ್ದರು. ಆದರೆ ಅಂತಿಮ ಓವರ್​ಗಳಲ್ಲಿ ಭಾರತದ ದಾಳಿ ಎದುರಿಸಲು ವಿಫಲವಾಗಿದ್ದರಿಂದ ಪಂದ್ಯ ಟೈ ಆಯ್ತು. ಹೀಗಾಗಿ 3ನೇ ಪಂದ್ಯದಂತೆ ಈ 4ನೇ ಪಂದ್ಯದಲ್ಲೂ ಸೂಪರ್ ಓವರ್ ಮೊರೆ ಹೋಗಲಾಯಿತು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 13ರನ್ ಮಾಡಿತು. ಭಾರತದ ಪರ ಕನ್ನಡಿಗ ರಾಹುಲ್ ಮತ್ತು ಕ್ಯಾಪ್ಟನ ಕೊಹ್ಲಿ ಮೊದಲು ಬ್ಯಾಟಿಂಗ್​ಗೆ ಇಳಿದರು. ರಾಹುಲ್ ಮೊದಲ ಬಾಲ್​ ಸಿಕ್ಸರ್​​​​​ಗೆ, ಎರಡನೇ ಬಾಲ್​ ಬೌಂಡರಿಗೆ ಅಟ್ಟಿದರು. ಬಳಿಕ ಮತ್ತೊಂದು ಭರ್ಜರಿ ಹೊಡೆತಕ್ಕೆ ಮುಂದಾಗಿ ಔಟಾದ್ರು. ನಂತರ ವಿರಾಟ್ ಕೊಹ್ಲಿ ಗೆಲುವಿನ ಔಪಚಾರಿಕತೆ ಪೂರೈಸಿದ್ರು. ಇದರೊಂದಿಗೆ ಸತತ ಎರಡನೇ ಸೂಪರ್ ಓವರ್ ಮ್ಯಾಚ್​​ನಲ್ಲಿ ಕಿವೀಸ್​ಗೆ ಅದೃಷ್ಟಕೈಕೊಟ್ಟಿತು.
5 ಪಂದ್ಯದ ಸರಣಿಯಲ್ಲಿ ಸತತ 4 ಪಂದ್ಯ ಗೆದ್ದಿರೋ ಭಾರತ ಸರಣಿ ಕ್ಲೀಲ್ ಸ್ವೀಪ್ ಮಾಡೋ ತವಕದಲ್ಲಿದೆ.

ಟಾಸ್​ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ; ಟೀಮ್ ಇಂಡಿಯಾದಲ್ಲಿ ಮಹತ್ತರ ಬದಲಾವಣೆ..!

0

ವೆಲ್ಲಿಂಗ್ಟನ್ : ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ 4ನೇ ಟಿ20 ಮ್ಯಾಚ್​ಗೆ ವೆಲ್ಲಿಂಗ್ಟನ್​ ನ ಸ್ಕೈ ಸ್ಟೇಡಿಯಂ ಸಿದ್ಧವಾಗಿದ್ದು, ಟಾಸ್ ಗೆದ್ದ ಕಿವೀಸ್​ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
5 ಮ್ಯಾಚ್​ಗಳ ಸರಣಿಯಲ್ಲಿ ಈಗಾಲೇ ಸತತ ಮೂರು ಮ್ಯಾಚ್​ಗಳನ್ನು ಗೆದ್ದು ಸರಣಿ ವಶ ಪಡಿಸಿಕೊಂಡಿರೋ ವಿರಾಟ್ ಕೊಹ್ಲಿ ಪಡೆ ಈ ಪಂದ್ಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಕಳೆದ ಮ್ಯಾಚ್​ ಹೀರೋ ರೋಹಿತ್ ಶರ್ಮಾ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಸಂಜು ಸಾಮ್ಸನ್ ಸ್ಥಾನ ಪಡೆದಿದ್ದು, ಕನ್ನಡಿಗ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಅದೇರೀತಿ ಆಲ್​ರೌಂಡರ್ ರವೀಂದ್ರ ಜಡೇಜಾ ಬದಲಿಗೆ ವಾಷಿಂಗ್​ಟನ್ ಸುಂದರ್ ಕಣಕ್ಕಿಳಿಯುತ್ತಿದ್ದಾರೆ. ಶಮಿ ಕೂಡ ವಿಶ್ರಾಂತಿ ಪಡೆದಿದಿದ್ದಾರೆ.
ಭಾರತ ತಂಡ (ಪ್ಲೇಯಿಂಗ್ -XI) : ಸಂಜು ಸ್ಯಾಮ್ಸನ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್) , ವಿರಾಟ್ ಕೊಹ್ಲಿ (ಕ್ಯಾಪ್ಟನ್ ), ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಶಿವಂದ ದುಬೆ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ.

ಇಂದು ನಾಲ್ಕನೇ ಟಿ20 ಕದನ – ಸರಣಿ ಸೋತಿರೋ ಕಿವೀಸ್​ಗೆ ಗೆಲ್ಲಲೇ ಬೇಕಾದ ಒತ್ತಡ

0

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್ ವಿರುದ್ಧದ 5 ಮ್ಯಾಚ್​ಗಳ ಟಿ20 ಸರಣಿಯನ್ನು ಈಗಾಗಲೇ ಗೆದ್ದಿರುವ ಭಾರತ ಕ್ಲೀನ್ ಸ್ವೀಪ್ ಉತ್ಸಾಹದಲ್ಲಿದ್ದು, ಇಂದು ವೆಲ್ಲಿಂಗ್ಟನ್​ನಲ್ಲಿ ನಡೆಯಲಿರೋ ನಾಲ್ಕನೇ ಪಂದ್ಯ ನಡೆಯಲಿದೆ.  ತವರಲ್ಲಿ ಸರಣಿ ಸೋತಿರೋ ನ್ಯೂಜಿಲೆಂಡ್ ಇಂದಿನ ಮ್ಯಾಚಲ್ಲಿ ಗೆದ್ದು ಮರ್ಯಾದೆ ಉಳಿಸಿಕೊಳ್ಳೋ ತವಕದಲ್ಲಿದೆ. 

ಈ ಪಂದ್ಯದಲ್ಲಿ ಇಲ್ಲಿಯ ತನಕ ಅವಕಾಶ ಪಡೆಯದ ಆಟಗಾರರಲ್ಲಿ ಕೆಲವರಿಗೆ ಕಣಕ್ಕಿಳಿಯಲು ಅವಕಾಶ ಸಿಗುವ ಸಾಧ್ಯತೆಯಿದೆ. ಭಾರತ ಈಗಾಗಲೇ ಸರಣಿ ಗೆದ್ದಿರುವುದರಿಂದ ಇಲ್ಲಿಯ ತನಕ ವೀಕ್ಷಕರಾಗಿಯೇ ಉಳಿದ ಕ್ರಿಕೆಟಿಗರನ್ನು ಆಡಿಸಲು ತಂಡದ ಆಡಳಿತ ಮಂಡಳಿ ಉತ್ಸುಕವಾಗಿದೆ. ಅಲ್ಲದೇ ಕಳೆದ ಮೂರೂ ಪಂದ್ಯಗಳಲ್ಲಿ ಭಾರತ ಬದಲಾಗದ ತಂಡದೊಂದಿಗೆ ಹೋರಾಟ ಸಂಘಟಿಸಿ ಭರಪೂರ ಯಶಸ್ಸು ಕಂಡಿತ್ತು. ಹಾಗಾಗಿ 4ನೇ ಪಂದ್ಯದಲ್ಲಿ  ಈ ಪ್ರಯೋಗಕ್ಕೆ ಟೀಮ್ ಇಂಡಿಯಾ ಕೈ ಹಾಕುವ ಯೋಚನೆ ಮಾಡಿದೆ.

ನವದೀಪ್‌ ಸೈನಿ, ಸಂಜು ಸ್ಯಾಮ್ಸನ್‌, ಪಂತ್‌, ಕುಲದೀಪ್‌, ವಾಷಿಂಗ್ಟನ್‌ ಸುಂದರ್‌ ಇಲ್ಲಿವರೆಗೆ ವೀಕ್ಷಕರ ಸಾಲಿನಲ್ಲೇ ಉಳಿದಿದ್ದರು. ಇವರಲ್ಲಿ ಒಂದಿಬ್ಬರಾದರೂ ವೆಲ್ಲಿಂಗ್ಟನ್‌ನಲ್ಲಿ ಅವಕಾಶ ಪಡೆಯಬಹುದೇ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ.

ಭಾರತದ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದಲಾವಣೆ ಸಂಭವಿಸುವುದು ಅನುಮಾನ. ರೋಹಿತ್‌, ರಾಹುಲ್‌, ಕೊಹ್ಲಿ, ಅಯ್ಯರ್‌, ಪಾಂಡೆ ಅವರನ್ನೊಳಗೊಂಡ ಬ್ಯಾಟಿಂಗ್‌ ಲೈನ್‌ಅಪ್‌ ಬಲಿಷ್ಠವಾಗಿದೆ. ಆದರೆ ಆಲ್‌ರೌಂಡರ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಇದೇ ಮಾತನ್ನು ಹೇಳುವಂತಿಲ್ಲ. ದುಬೆ ಬದಲು ವಾಷಿಂಗ್ಟನ್‌ ಸುಂದರ್‌, ಠಾಕೂರ್‌ ಬದಲು ಸೈನಿ ಅವಕಾಶ ಪಡೆಯುವ ಸಾಧ್ಯತೆಯಿದೆ.

ಇನ್ನೊಂದೆಡೆ ತವರಲ್ಲೇ ಮುಖಭಂಗ ಅನುಭವಿಸಿ ತೀವ್ರ ಒತ್ತಡದಲ್ಲಿರುವ ನ್ಯೂಜಿಲೆಂಡ್ ಉಳಿದೆರಡು ಪಂದ್ಯಗಳಲ್ಲಿ ಪ್ರತಿಷ್ಠೆಯನ್ನು ಪಣಕ್ಕೊಡ್ಡಲೇಬೇಕಿದೆ. ಗೆದ್ದು ಸರಣಿ ಸೋಲಿನ ಅಂತರವನ್ನು ಕಡಿಮೆಗೊಳಿಸಲು ಕಾರ್ಯತಂತ್ರ ರೂಪಿಸಬೇಕಿದೆ.

 

ರೋಹಿತ್ ‘ಸೂಪರ್​’ಹಿಟ್​ : ಕಿವೀಸ್​ ಉಡೀಸ್

0

ಹ್ಯಾಮಿಲ್ಟನ್​ : ಇಲ್ಲಿನ ಸೆಡ್ಡಾನ್​ ಪಾರ್ಕ್​ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್​ ನಡುವೆ ನಡೆದ ಮೂರನೇ ಟಿ ಟ್ವೆಂಟಿ ಪಂದ್ಯ ರೋಚಕತೆಗೆ ಸಾಕ್ಷಿಯಾಯಿತು.

ಟಾಸ್​ ಸೂತರೂ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ  ರೋಹಿತ್​ ಶರ್ಮಾ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 178 ರನ್​ ಗಳಿಸಿತು. ಭಾರತದ  ನೀಡಿದ 179 ರನ್​ ಗುರಿಯನ್ನು ಬೆನ್ನತ್ತಿದ ಆತಿಥೇಯ ಕಿವೀಸ್​ಗೆ ನಾಯಕ ಕೇನ್ ವಿಲಿಯಮ್ಸನ್​ ನೆರವಾದರು. ಭರ್ಜರಿ  ಬ್ಯಾಟಿಂಗ್​ ನಡೆಸಿದ ಕೇನ್​ ವಿಲಿಯಮ್ಸನ್ ​(95 ರನ್ ) ಕಿವೀಸ್​ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರೂ ಅಂತಿಮ ವಿಜಯ ಭಾರತಕ್ಕೆ ದಕ್ಕಿತು.

ಪಂದ್ಯ ಟೈ ಆದ್ದರಿಂದ ಅಂಪೈರ್​ಗಳು ಸೂಪರ್​ ಓವರ್​ ಮೊರೆ ಹೋದರು. ಕಿವೀಸ್​ ಪರ್ ಬ್ಯಾಟಿಂಗ್​ಗೆ ಇಳಿದ ವಿಲಿಯಮ್ಸನ್​ ಮತ್ತು ಮಾರ್ಟಿನ್​ ಗಫ್ಟಿಲ್​, ಎರಡು ಫೋರ್​ ಮತ್ತು ಒಂದು ಸಿಕ್ಸರ್​ ನೆರವಿನಿಂದ  17 ರನ್​ ಗಳಿಸಿದರು. ಗುರಿ ಬೆನ್ನತ್ತಿದ ರೋಹಿತ್​ ಮತ್ತು ರಾಹುಲ್​ ಜೋಡಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸಿ ಭಾರತದ ಮುಡಿಗೆ ಗೆಲುವಿನ ಕಿರೀಟವನ್ನು ಮುಡಿಸಿದರು. ಭಾರತದ ಪರ ಆಕರ್ಷಕ ಬ್ಯಾಟಿಂಗ್​ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ನಾಳೆ ಧೋನಿ ರೆಕಾರ್ಡ್ ಬ್ರೇಕ್ ಮಾಡ್ತಾರಾ ಕೊಹ್ಲಿ? ಒಂದಲ್ಲ ಎರಡಲ್ಲ ಮೂರು ದಾಖಲೆಗಳತ್ತ ವಿರಾಟ್ ಚಿತ್ತ ..!

0

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ದಾಖಲೆಗಳ ಸರದಾರ… ರನ್​ಮಷಿನ್​ ಕೊಹ್ಲಿ ನಾಳೆ ನ್ಯೂಜಿಲೆಂಡ್ ವಿರುದ್ಧ ನಡೆಯಲಿರೋ 3ನೇ ಟಿ20 ಮ್ಯಾಚ್​ನಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ರೆಕಾರ್ಡ್​ ಸೇರಿದಂತೆ ಮೂರು ದಾಖಲೆಗಳನ್ನು ಬ್ರೇಕ್ ಮಾಡುವ ಅವಕಾಶ ಹೊಂದಿದ್ದಾರೆ.
ಕೊಹ್ಲಿ 25ರನ್ ಮಾಡಿದ್ರೆ ಸಾಕು ಟಿ20 ಫಾರ್ಮೆಟ್​ನಲ್ಲಿ ಧೋನಿ ಮಾಡಿರೋ ದಾಖಲೆ ಮುರಿಯಲಿದ್ದಾರೆ. ಧೋನಿ ಕ್ಯಾಪ್ಟನ್ ಆಗಿ ಟಿ20ನಲ್ಲಿ 1,112ರನ್ ಮಾಡಿದ್ದು, ಅತೀ ಹೆಚ್ಚು ರನ್ ಸಿಡಿಸಿರುವ ನಾಯಕರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 25ರನ್​ ಮಾಡಿದ್ರೆ ಧೋನಿಯನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಲಿದ್ದಾರೆ.
ಮೊದಲ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಫಾಫ್​ ಡುಪ್ಲೆಸಿಸ್​ (1,273 ರನ್), ಎರಡನೇ ಸ್ಥಾನದಲ್ಲಿ ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್​​ ವಿಲಿಯಮ್ಸನ್​ (1,148) ಇದ್ದಾರೆ.

ನಂಬರ್ 1 ಪಟ್ಟ : ಕೊಹ್ಲಿ ಅರ್ಧಶತಕ ಸಿಡಿಸಿದರೆ 50+ ರನ್ ಮಾಡಿದ ನಾಯಕರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದ್ದಾರೆ. ಸದ್ಯ ಅವರು 8 ಅರ್ಧಶತಕ ಬಾರಿಸಿದ್ದು, ಫಾಫ್​ ಡುಪ್ಲೆಸಿಸ್ ಮತ್ತು ಕೇನ್ ವಿಲಿಯಮ್ಸನ್​ ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಇನ್ನೊಂದು ಅರ್ಧಶತಕ ಬಾರಿಸಿದ್ರೆ ಮೊದಲ ಸ್ಥಾನವನ್ನು ಒಬ್ಬರೇ ಅಲಂಕರಿಸುತ್ತಾರೆ.

ಸಿಕ್ಸರ್ ಕಿಂಗ್ : ಕೊಹ್ಲಿ 7 ಸಿಕ್ಸರ್ ಸಿಡಿಸಿದರೆ ಟಿ20ಯಲ್ಲಿ 50 ಸಿಕ್ಸರ್ ಬಾರಿಸಿದ ಎರಡನೇ ನಾಯಕ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಈ ಸಾಧನೆ ಮಾಡಿದ್ದಾರೆ.

Popular posts