Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Thursday, February 27, 2020

ಭಾರತಕ್ಕೆ ಸರಣಿ ಸೋಲಿನ ಆಘಾತ

0

ಆಕ್ಲಂಡ್: ರವೀಂದ್ರ ಜಡೇಜಾ ಮ್ತತು ನವದೀಪ್ ಸೈನಿ ಬ್ಯಾಟಿಂಗ್ ಸಾಹಸದ ಹೊರತಾಗಿಯೂ ಕಿವೀಸ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಸರಣಿಯ ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ ಸರಣಿಯನ್ನು ಕಳೆದುಕೊಂಡಿದೆ. ನ್ಯೂಜಿಲ್ಯಾಂಡ್ ನೀಡಿದ 274 ರನ್ ಗುರಿ ಬೆನ್ನಟ್ಟಿದ ಭಾರತದ ಪ್ರಮುಖ ಆಟಗಾರರು ವೈಫಲ್ಯ ಅನುಭವಿಸಿದ ಕಾರಣ 251 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿದೆ. ಭಾರತದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾ ಅರ್ಧ ಶತಕ ಹಾಗೂ ಸೈನಿ 45 ರನ್ ಗಳ ಹೋರಾಟದ ಹೊರತಾಗಿಯೂ ಭಾರತ ಸೋಲನುಭವಿಸಿದೆ..

ಟಾಸ್​ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಗೆ ಮಾರ್ಟಿನ್ ಗಪ್ಟಿಲ್ (79 ರನ್), ಹೆನ್ರಿ ನಿಕೋಲ್ಸ್ (41), ರಾಸ್ ಟೇಲರ್ (ಅಜೇಯ 73) ನೆರವಾದರು. ಅದರಲ್ಲೂ ಎಂಟನೇ ವಿಕೆಟ್ ಗೆ ಟೇಲರ್ ಮತ್ತು ಜಾಮಿಸನ್ 76 ರನ್ ಜೊತೆಯಾಟ ಆಡಿದರು.
ಎಂಟನೇ ವಿಕೆಟ್ ಗೆ ಜಡೇಜಾ ಮತ್ತು ನವದೀಪ್ ಸೈನಿ ಜೊತೆಯಾಟ ಭಾರತಕ್ಕೆ ಗೆಲುವಿನ ಭರವಸೆ ಮೂಡಿಸಿತ್ತು. ಉತ್ತಮ ಹೊಡೆತಗಳಿಂದ ಮಿಂಚಿದ ಸೈನಿ 45 ರನ್ ಬಾರಿಸಿದರು. ಜಡೇಜಾ 55 ರನ್ ಗಳಿಸಿದರು. ಅಂತಿಮವಾಗಿ ಭಾರತ 251 ರನ್​ಗಳಿಗೆ ಆಲೌಟಾಗುವ ಮೂಲಕ 22 ರನ್ ಗಳ ಅಂತರದ ಸೋಲನುಭವಿಸಿತು.

ಕಿವೀಸ್ ವಿರುದ್ಧ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ

0

ಆಕ್ಲೆಂಡ್: ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ನ್ಯೂಜಿಲೆಂಡ್​ಗೆ ತಿರುಗೇಟು ನೀಡಲು ಮುಂದಾಗಿರುವ ಭಾರತ ಪಂದ್ಯ ಗೆದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಇನ್ನು ಟೀಂ ಇಂಡಿಯಾದಲ್ಲಿ ಈ ಬಾರಿ ಬದಲಾವಣೆಯಾಗಿದ್ದು, ಮಹಮ್ಮದ್ ಶಮಿ ಹಾಗೂ ಕುಲ್ ದೀಪ್ ಯಾದವ್ ಅವರ ಸ್ಥಾನಕ್ಕೆ ನವದೀಪ್ ಸೈನಿ ಮತ್ತು ಯುಜುವೇಂದ್ರ ಚಹಾಲ್ ಬಂದಿದ್ದಾರೆ.  

ತಂಡಗಳು ಇಂತಿದೆ :

ಭಾರತ: ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೆಯಸ್ ಆಯ್ಯರ್, ಲೋಕೇಶ್ ರಾಹುಲ್, ಕೇದಾರ್ ಜಾದವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಯುಜುವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ

ನ್ಯೂಜಿಲೆಂಡ್: ಮಾರ್ಟಿನ್ ಗಪ್ಟಿಲ್,ಹೆನ್ರಿ ನಿಕೋಲ್ಸ್ , ಟಾಪ್ ಬ್ಲುಂಡೆಲ್, ರಾಸ್ ಟೇಲರ್, ಟಾಮ್ ಲಾಥಮ್, ಮಾರ್ಕ್ ಚಾಪ್ ಮನ್ , ಜೇಮ್ಸ್ ನೀಶಮ್, ಕಾಲಿನ್ ಡಿ ಗ್ರ್ಯಾಂಡ್ ಹೋಮ್, ಕೈಲ್ ಜಾಮೀಸನ್, ಟಿಮ್ ಸೌಥಿ, ಹ್ಯಾಮಿಶ್ ಬೆನೆಟ್

4 ರಾಷ್ಟ್ರಗಳ ಕ್ರಿಕೆಟ್ ಸರಣಿಗೆ ಮುನ್ನುಡಿ ಬರೆಯಲು ಇಂಗ್ಲೆಂಡ್​ಗೆ ದಾದಾ..!

0

ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಲ್ಲಿಂದಲೂ ನಾನಾ ರೀತಿಯ ಮಹತ್ತರ ಬದಲಾವಣೆಗಳಿಗೆ ಮುನ್ನುಡಿ ಬರೆಯುತ್ತಿರೋ ಬಂಗಾಳದ ಹುಲಿ ಸೌರವ್ ಗಂಗೂಲಿ ಇದೀಗ ಮತ್ತೊಂದು ಮಹತ್ವದ ಟೂರ್ನಿ ಆರಂಭಿಸಲು ಹೊರಟಿದ್ದಾರೆ. ಬಿಗ್​ಬಾಸ್ ಆದ ಆರಂಭದಲ್ಲಿಯೇ ಮೊದಲ ಪಿಂಕ್​ ಬಾಲ್​ ಟೆಸ್ಟ್​​​​​​ ಆಯೋಜಿಸಿದ್ದ, ನೋ ಬಾಲ್​ ವೀಕ್ಷಣೆಗೆ ಪ್ರತ್ಯೇಕ ಅಂಪೇರ್ ಸೇರಿದಂತೆ ನಾನಾ ರೀತಿಯ ಪ್ರಯೋಗಗಳನ್ನು ಮಾಡಿರುವ ಹೊಸತನದ ಹರಿಕಾರ ಗಂಗೂಲಿ ನಾಲ್ಕು ದೇಶಗಳ ಸರಣಿ ( 4 ನೇಷನ್ ಟೂರ್ನಮೆಂಟ್) ಆಯೋಜಿಸಲು ತೀರ್ಮಾನಿಸಿದ್ದಾರೆ.
ಭಾರತ, ಇಂಗ್ಲೆಂಡ್​, ಆಸ್ಟ್ರೇಲಿಯಾ ಹಾಗೂ ಮತ್ತೊಂದು ಪ್ರಬಲ ತಂಡಗಳ ಸರಣಿಯನ್ನು ನಡೆಸಲು ದಾದಾ ಉದ್ದೇಶಿಸಿದ್ದು ಅದಕ್ಕೆ ಕಾಲ ಕೂಡ ಸನ್ನಿಹಿತವಾಗಿದೆ. ನಿನ್ನೆಯಷ್ಟೇ ಕೋಲ್ಕತ್ತಾದಿಂದ ಇಂಗ್ಲೆಂಡ್​ಗೆ ಪ್ರಯಾಳ ಬೆಳೆಸಿರೋ ಅವರು, “ಇಂಗ್ಲೆಂಡ್​ ಅಂಡ್​ ವೇಲ್ಸ್ ಕ್ರಿಕೆಟ್​ ಬೋರ್ಡ್​ ‘ ಜೊತೆ ಮಾತುಕತೆ ನಡೆಸಲಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ)ಅಧಿಕಾರಿಗಳು ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಗಂಗೂಲಿ ನಾಲ್ಕು ದೇಶಗಳ ಸರಣಿ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆಂದು ತಿಳಿದುಬಂದಿದೆ.
”ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಇಂಥಾ ಇನ್ಹೋವೇಟಿವ್ ಪ್ಲ್ಯಾನ್​​ಗಳು ಮೂಡಿ ಬರ್ತಿವೆ. ಈಗ ಸೂಪರ್ ಸೀರಿಸ್​​ ಆಯೋಜನೆ ಬಗ್ಗೆ ಚಿಂತನೆ ನಡೆಸಿದ್ದಾರೆ. ಇದೊಂದು ಉತ್ತಮ ಬೆಳವಣಿಗೆ” ಅಂತ ಕ್ರಿಕೆಟ್ ಆಸ್ಟ್ರೇಲಿಯಾ ಚೀಫ್​​​​​​​​​ ಎಕ್ಸ್​ಕ್ಯೂಟಿವ್​ ಕೆವಿನ್ ರಾಬರ್ಟ್​ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.

ಗೆಲುವಿನ ಟ್ರ್ಯಾಕ್​​ಗೆ ನ್ಯೂಜಿಲೆಂಡ್ – ಶ್ರೇಯಸ್​, ರಾಹುಲ್ ಆಟ ವ್ಯರ್ಥ

0

ಹ್ಯಾಮಿಲ್ಟನ್ : ಟಿ20 ಸರಣಿಯಲ್ಲಿ ವೈಟ್​ವಾಶ್ ಅವಮಾನ ಅನುಭವಿಸಿದ ಅತಿಥೇಯ ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿದೆ.
ಹ್ಯಾಮಿಲ್ಟನ್​ನಲ್ಲಿ ನಡೆದ ಮೊದಲ ಒಡಿಐನಲ್ಲಿ ಕಿವೀಸ್ ರಾಸ್ ಟೇಲರ್ ಅಜೇಯ ಶತಕ (109), ಹೆನ್ರಿ ನಿಕೋಲ್ಸ್ (78) ಮತ್ತು ಕ್ಯಾಪ್ಟನ್ ಟಾಮ್ ಲತಮ್ (69) ಭರ್ಜರಿ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್​ ಗೆಲುವು ಪಡೆಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶ್ರೇಯಸ್ ಅಯ್ಯರ್ ಚೊಚ್ಚಲ ಶತಕ (103), ನಾಯಕ ವಿರಾಟ್ ಕೊಹ್ಲಿ (51) ಮತ್ತು ಕನ್ನಡಿಗ ಕೆ.ಎಲ್ ರಾಹುಲ್ (ಅಜೇಯ 88) ರನ್​ಗಳ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 347ರನ್ ಮಾಡಿತು. ಗುರಿಬೆನ್ನತ್ತಿದ ಕಿವೀಸ್​​ 48.1 ಓವರ್​ಗಳಲ್ಲಿ ಗೆಲುವಿನ ನಗೆ ಬೀರಿತು.

ಶ್ರೇಯಸ್​ ಅಯ್ಯರ್ ಚೊಚ್ಚಲ ಶತಕ ; ಮಿಂಚಿನಾಟ ಮುಂದುವರೆಸಿದ

0

ಟೀಮ್ ಇಂಡಿಯಾದ ಭರವಸೆಯ ಯುವ ಆಟಗಾರ ಶ್ರೇಯಸ್ ಅಯ್ಯರ್ ಚೊಚ್ಚಲ ಏಕದಿನ ಶತಕ ಬಾರಿಸಿದ್ದಾರೆ. ಹ್ಯಾಮಿಲ್ಟನ್​​ನಲ್ಲಿ ನಡೆಯುತ್ತಿರೋ ನ್ಯೂಜಿಲೆಂಡ್ ವಿರುದ್ಧದ ಮೊದಲ ಒಡಿಐನಲ್ಲಿ 54ರನ್​ ಗಳಿಗೆ ಇಬ್ಬರು ಆರಂಭಿಕರನ್ನು ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದಾಗ ಕ್ಯಾಪ್ಟನ್ ಕೊಹ್ಲಿ ಜೊತೆಗೂಡಿದ ಅಯ್ಯರ್ ಆಧಾರವಾಗಿ ನಿಂತರು. ತಾಳ್ಮೆಯ ಆಟವಾಡಿದ ಅವರು, 107ಬಾಲ್​ಗಳಿಗೆ 103ರನ್ ಮಾಡಿದರು.
ಹ್ಯಾಮಲ್ಟನ್​ ಅಂಗಳದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಪೃಥ್ವಿ ಶಾ (20) ಮತ್ತು ಕನ್ನಡಿಗ ಮಯಾಂಕ್​ ಅಗರ್​ವಾಲ್​ (32) ಜೊತೆ ಇನ್ನಿಂಗ್ಸ್ ಆರಂಭಿಸಿದರು. ಏಕದಿನ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ಶಾ ತಂಡದ ಮೊತ್ತ 50ರನ್ ಆಗಿದ್ದಾಗ ಡಿ ಗ್ರಾಂಡ್​ಹೋಮ್​​ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಪೃಥ್ವಿ ಬೆನ್ನಲ್ಲೇ ಮಯಾಂಕ್ ಅಗರ್​ವಾಲ್ ಕೂಡ ಪೆವಿಲಿಯನ್​​ ಕಡೆಗೆ ಮುಖಮಾಡಿದ್ರು. ಬಳಿಕ ಒಂದಾದ ನಾಯಕ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್​ ಅಯ್ಯರ್​ ನ್ಯೂಜಿಲೆಂಡ್ ಬೌಲರ್​​ಗಳನ್ನು ಕಾಡಿದರು. ಈ ಜೋಡಿ ಶತಕದ ಜೊತೆಯಾಟವಾಡಿತು. ಕೊಹ್ಲಿ 51ರನ್ ಹಾಗೂ ಅಯ್ಯರ್ 103ರನ್ ಮಾಡಿದರು.
ರಾಹುಲ್​ ಮಿಂಚಿನಾಟ : ಇನ್ನು ಟಿ20 ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಮಿಂಚಿದ್ದ ಕನ್ನಡಿಗ ಇಂದು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದರು. ಈಗಾಗಲೇ ಯಾವ್ದೇ ಕ್ರಮಾಂಕದಲ್ಲೂ ತಾನು ಬ್ಯಾಟ್ ಬೀಸಲು ರೆಡಿ ಅಂತ ಪ್ರೂವ್ ಮಾಡಿರೋ ಅವರು ಇಂದು ಕೂಡ ಮಿಂಚಿನಾಟ ಆಡಿದರು. 64 ಬಾಲ್​​ಗಳಲ್ಲಿ ಅಜೇಯ 88ರನ್ ಮಾಡಿ ಮತ್ತೊಮ್ಮೆ ನ್ಯೂಜಿಲೆಂಡ್ ಬೌಲರ್​ಗಳಿಗೆ ಸಿಂಹಸ್ವಪ್ನರಾದರು.
ಭಾರತ ನಿಗದಿತ 50 ಓವರ್​ಗಳಲ್ಲಿ 347ರನ್ ಗಳಿಸಿದೆ.

ಮಿಡಲ್​ ಆರ್ಡರ್​ಗೆ ಕೆ.ಎಲ್​​ ರಾಹುಲ್​​​ – ಓಪನರ್ಸ್​ ಯಾರು?

0

ನ್ಯೂಜಿಲೆಂಡ್​ ವಿರುದ್ಧದ 5 ಮ್ಯಾಚ್​ಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಇತಿಹಾಸ ಬರೆದಿರೋ ಟೀಮ್ ಇಂಡಿಯಾ 3 ಮ್ಯಾಚ್​ಗಳ ಒಡಿಐಗೆ ರೆಡಿಯಾಗಿದೆ. ಈ ನಡುವೆ ವಿಕೆಟ್ ಕೀಪಿಂಗ್ ಜೊತೆಗೆ ಆರಂಭಿಕ ಆಟಗಾರನಾಗಿ ಮಿಂಚಿರೋ ಕನ್ನಡಿಗ ಕೆ.ಎಲ್ ರಾಹುಲ್ ಬ್ಯಾಟಿಂಗ್ ಕ್ರಮಾಂಕ ಬದಲಾಗುವ ಸುದ್ದಿಯೂ ಹೊರ ಬಿದ್ದಿದೆ.
ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಇಬ್ಬರೂ ಗಾಯದ ಸಮಸ್ಯೆಯಿಂದ ಆಡದ ಕಾರಣ ಕೆ.ಎಲ್ ರಾಹುಲ್ ಜೊತೆ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್​ವಾಲ್ ಅಥವಾ ಪೃಥ್ವಿ ಶಾ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆ ಎನ್ನಲಾಗಿತ್ತು. ಆದರೆ, ಇದೀಗ ರಾಹುಲ್ ಅವರ ಸ್ಥಾನವೇ ಬದಲಾಗಿದೆ..! ಕ್ಯಾಪ್ಟನ್ ಕೊಹ್ಲಿಯೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಮಯಾಂಕ್ ಅಗರ್​ವಾಲ್ ಮತ್ತು ಪೃಥ್ವಿ ಶಾ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದು, ರಾಹುಲ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ.
ಟೂರ್ನಿ ಆರಂಭಕ್ಕೂ ಮುನ್ನ ಪ್ರೆಸ್​ಮೀಟಲ್ಲಿ ಮಾತನಾಡಿದ ಕೊಹ್ಲಿ, “ಶಿಖರ್ ಧವನ್ ಬದಲಿಗೆ ಪೃಥ್ವಿ ಶಾ, ರೋಹಿತ್ ಶರ್ಮಾ ಬದಲಿಗೆ ಮಯಾಂಕ್​ ಅವರನ್ನು ಆಯ್ಕೆ ಮಾಡಿಕೊಂಡಿದ್ದು, ಅವರಿಬ್ಬರೇ ಇನ್ನಿಂಗ್ಸ್​ ಆರಂಭಿಸಲಿದ್ದಾರೆ. ರಾಹುಲ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲಾಗುತ್ತೆ” ಅಂತ ತಿಳಿಸಿದ್ದಾರೆ.

ಇದು ಧೋನಿ ಕ್ರಿಕೆಟ್ ಬದುಕಿನ ಬಗ್ಗೆ ಕಪಿಲ್​​ ದೇವ್​​ ಬಿಚ್ಚಿಟ್ಟ ಕಟು ಸತ್ಯ..!

0

ನವದೆಹಲಿ : ಇಂಗ್ಲೆಂಡ್​ನಲ್ಲಿ ನಡೆದ ಒಡಿಐ ವರ್ಲ್ಡ್​ಕಪ್​ ಬಳಿಕ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಯಾವ ಸರಣಿಯಲ್ಲೂ ಕಾಣಿಸಿಕೊಂಡಿಲ್ಲ. ವಿಶ್ವಕಪ್​​ ನಂತ್ರ ಕ್ರಿಕೆಟಿಂದ ದೂರ ಇರೋ ಮಾಹಿ ನಿವೃತ್ತಿ ಕುರಿತ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ವಿಶ್ವಕ್ರಿಕೆಟ್​ನಲ್ಲೂ ಸದ್ಯ ಧೋನಿ ಕ್ರಿಕೆಟ್ ಭವಿಷ್ಯದ ಚರ್ಚೆ ನಡೀತಾ ಇದೆ. ಆದ್ರೆ, ಈ ಬಗ್ಗೆ ಧೋನಿ ಮಾತ್ರ ತುಟಿ ಬಿಚ್ಚಿಲ್ಲ.
ಭಾರತಕ್ಕೆ ಎರಡೆರಡು ವರ್ಲ್ಡ್​ಕಪ್​​​ (2007ರ ಟಿ20, 2011 ಒಡಿಐ) ತಂದುಕೊಟ್ಟ ಕ್ಯಾಪ್ಟನ್ ಧೋನಿ ನಿವೃತ್ತಿ ವಿಚಾರವಾಗಿ ಮೊದಲ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್​ ದೇವ್ ತುಟಿ ಬಿಚ್ಚಿದ್ದಾರೆ.
ಖಾಸಗಿ ಚಾನಲ್​​ವೊಂದರ ಜೊತೆ ಮಾತಾಡಿದ ಅವರು, `’ಧೋನಿ ಕಮ್​​ ಬ್ಯಾಕ್ ಕಷ್ಟವಿದೆ. ಐಪಿಎಲ್ ಬಾಕಿ ಇರೋದ್ರಿಂದ, ಅಲ್ಲಿ ಅವರ ಪ್ರದರ್ಶನ ಮುಖ್ಯವಾಗುತ್ತೆ. ಆಯ್ಕೆಗಾರರು ಅದನ್ನು ಗಮನಿಸಬೇಕಾಗುತ್ತೆ. ಅವರು ಅಪಾರ ಕೊಡುಗೆ ನೀಡಿದ್ದಾರೆ. ಆದ್ರೆ, ಆರೇಳು ತಿಂಗಳಿಂದ ಮೈದಾನಕ್ಕೆ ಇಳಿಯದ ಕಾರಣಕ್ಕೆ ಎಲ್ಲರ ಮನಸ್ಸಲ್ಲೂ ಅನುಮಾನ ಮೂಡುತ್ತೆ, ಚರ್ಚೆ ನಡೆಯುತ್ತೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಂದೇ ಮ್ಯಾಚಲ್ಲಿ ಬುಮ್ರಾ 2 ರೆಕಾರ್ಡ್​..! 

0

ಮೌಂಟ್ ಮೌಂಗನಿ : ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ನಿನ್ನೆ ನ್ಯೂಜಿಲೆಂಡ್ ವಿರುದ್ಧ ನಡೆದ 5ನೇ ಹಾಗೂ ಕೊನೆಯ ಟಿ20ಯಲ್ಲಿ ಎರಡು ವಿನೂತನ ದಾಖಲೆಗಳನ್ನು ಬರೆದಿದ್ದಾರೆ. 

ಸರಣಿಯ ಮೊದಲ ನಾಲ್ಕು ಮ್ಯಾಚ್​ಗಳಲ್ಲಿ ಹೇಳಿಕೊಳ್ಳುವಂಥಾ ಪ್ರದರ್ಶನ ನೀಡಿರದ ಬುಮ್ರಾ 5ನೇ ಮ್ಯಾಚಲ್ಲಿ ಗೆಲುವಿನಲ್ಲಿ ಪ್ರಮುಖಪಾತ್ರವಹಿಸಿ, ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ್ರು. ಅಲ್ಲದೆ ಈ ಮ್ಯಾಚಲ್ಲಿ ಬುಮ್ರಾ ಎರಡು ದಾಖಲೆಗಳನ್ನು ಕೂಡ ನಿರ್ಮಿಸಿದ್ರು. 

ತಾವು ಬೌಲಿಂಗ್ ಮಾಡಿದ್ದ ಮೊದಲ ಓವರ್​ನಲ್ಲೇ ವಿಕೆಟ್ ಪಡೆದು ಮೇಡನ್​ ಮಾ ಡಿದ ಜಸ್ಪ್ರೀತ್ ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅತೀ ಹೆಚ್ಚು ಮೇಡನ್ ಓವರ್​ ಮಾಡಿರುವ ಬೌಲರ್​ ಎಂಬ ಕೀರ್ತಿಗೆ ಪಾತ್ರರಾದ್ರು. 

ಅಂತರಾಷ್ಟ್ರೀಯ ಟಿ20ಯಲ್ಲಿ ಬುಮ್ರಾ ಒಟ್ಟು 178.1 ಓವರ್​ ಬೌಲಿಂಗ್​ ಮಾಡಿದ್ದು, ಅದರಲ್ಲಿ 7 ಓವರ್​ಗಳನ್ನು ಮೇಡನ್​  ಮಾಡುವ ಮೂಲಕ ಶ್ರೀಲಂಕಾದ ನುವಾನ್​  ಕುಲಶೇಖರ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. 205.1 ಓವರ್ ಬೌಲಿಂಗ್​ ಮಾಡಿರುವ ನುವಾನ್​ ಕುಲಶೇಖರ 6 ಮೇಡನ್ ಓವರ್​​ಗಳಲ್ಲಿ ರನ್​ ಬಿಟ್ಟುಕೊಟ್ಟಿಲ್ಲ..! 

ಈ ದಾಖಲೆ ಜೊತೆಯಲ್ಲಿ ಬುಮ್ರಾ ನಿನ್ನೆ ತನ್ನ 50ನೇ  ಅಂತರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದಾರೆ. ಎಂ.ಎಸ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತದ ಪರ ಈ ಸಾಧನೆ ಮಾಡಿದ ಇತರರಾಗಿದ್ದಾರೆ. 

ಟ್ವಿಟ್ಟರ್ ಟ್ರೆಂಡಿಂಗ್​ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್..! ವಿಶ್ವ ಕ್ರಿಕೆಟ್​​ನಲ್ಲೀಗ ಕರಾವಳಿ ಹುಡುಗನದ್ದೇ ಹವಾ..!

0

ಮೌಂಟ್​​ ಮಾಂಗ್ನುಯಿ : ಸದ್ಯ ಕನ್ನಡಿಗ ಕೆ.ಎಲ್ ರಾಹುಲ್ ಸಖತ್ ಫಾರ್ಮ್​​ನಲ್ಲಿದ್ದಾರೆ. ವಿಶ್ವ ಕ್ರಿಕೆಟ್​ನಲ್ಲೀಗ ಕರಾವಳಿ ಹುಡುಗ ನಮ್ಮ ರಾಹುಲ್​ ಅವರದ್ದೇ ಹವಾ..! ನ್ಯೂಜಿಲೆಂಡ್ ವಿರುದ್ಧದ 5 ಮ್ಯಾಚ್​ಗಳ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿರೋ ರಾಹುಲ್​ ಟೀಮ್ ಇಂಡಿಯಾದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ.
ಯಾವ ಕ್ರಮಾಂಕಕ್ಕೆ ಅವಶ್ಯಕತೆ ಇದೆಯೋ ಆ ಎಲ್ಲಾ ಕ್ರಮಾಂಕದಲ್ಲೂ ಬ್ಯಾಟ್​ ಬೀಸಲು ರೆಡಿ ಇರೋ ರಾಹುಲ್ ಇದೀಗ ವಿಕೆಟ್​ ಕೀಪರ್ ಆಗಿಯೂ ಯಶಸ್ಸು ಕಂಡಿದ್ದಾರೆ. ಇಂದು ನ್ಯೂಜಿಲೆಂಡ್ ವಿರುದ್ಧದ 5ನೇ ಮ್ಯಾಚ್​​​ನಲ್ಲೂ ಉತ್ತಮ ಪ್ರದರ್ಶನ ತೋರಿದ ಅವರು, ರೋಹಿತ್ ಶರ್ಮಾ ಗಾಯಗೊಂಡಿದ್ದರಿಂದ ಫೀಲ್ಡಿಂಗ್​ ವೇಳೆ ತಂಡವನ್ನು ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೀಗೆ ವಿಶ್ವ ಕ್ರಿಕೆಟ್​ನಲ್ಲಿ ತನ್ನದೇಯಾದ ಛಾಪು ಮೂಡಿಸುವತ್ತಿರೋ ಸ್ಟಾರ್ ರಾಹುಲ್, ಸದ್ಯ ಟ್ವಿಟ್ಟರ್ ಟ್ರೆಂಡಿಂಗ್​ನಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ..! ಕ್ರಿಕೆಟ್ ವಿಚಾರಕ್ಕೆ ಸಂಬಂಧಿಸಿದ ಟ್ವೀಟ್​ನಲ್ಲಿ ರಾಹುಲ್​ ಕುರಿತ ಟ್ವೀಟ್​ ಗಳದ್ದೇ ಸೌಂಡು. ಹೀಗೆ ರಾಹುಲ್ ಸಖತ್ ಸುದ್ದಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದೊಡ್ಡ ಸಕ್ಸಸ್ ಅವರದ್ದಾಗಲಿ ಅಂತ ಅಭಿಮಾನಿಗಳು ಆಶಿಸಿದ್ದಾರೆ.
ಯಾವ್ದೇ ಕ್ರಮಾಂಕದ ಬ್ಯಾಟಿಂಗ್ ಮಾತ್ರವಲ್ಲದೆ ವಿಕೆಟ್ ಕೀಪಿಂಗ್ ಹೊಣೆಯನ್ನೂ ನಿಭಾಯಿಸುತ್ತಿರೋ ರಾಹುಲ್ ಇಂದು ತಂಡವನ್ನೂ ಮುನ್ನಡೆಸಿದ್ದು ಪ್ರಶಂಸೆಗೆ ಪಾತ್ರವಾಗಿದೆ. ರಾಹುಲ್ ಸಾಮರ್ಥ್ಯವನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಕೊಂಡಾಡುತ್ತಿದ್ದಾರೆ.

ಚೊಚ್ಚಲ ಬಾರಿಗೆ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದ ರಾಹುಲ್..!

ಕನ್ನಡಿಗ ರಾಹುಲ್ ನಾಯಕತ್ವದಲ್ಲಿ ಗೆದ್ದು ಬೀಗಿದ ಭಾರತ  ; ಸರಣಿ ಕ್ಲೀನ್ ಸ್ವೀಪ್ – ಸೃಷ್ಟಿಯಾಯ್ತು ಇತಿಹಾಸ..!

ಟೀಮ್ ಇಂಡಿಯಾ ನಾಯಕನೂ ಆದ ಕನ್ನಡಿಗ ಕೆ.ಎಲ್ ರಾಹುಲ್..! ದ್ರಾವಿಡ್ ಹಾದಿಯಲ್ಲಿ ಕರಾವಳಿ ಕುವರ..!

ಚೊಚ್ಚಲ ಬಾರಿಗೆ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದ ರಾಹುಲ್..!

0

ಮೌಂಟ್​​ ಮಾಂಗ್ನುಯಿ : ಅತಿಥೇಯ ನ್ಯೂಜಿಲೆಂಡನ್ನು ಟಿ20 ಸರಣಿಯಲ್ಲಿ 5 -0 ಅಂತರದಿಂದ ಬಗ್ಗು ಬಡಿದ ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸಿದೆ. 5 ಪಂದ್ಯಗಳ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸರಣಿ ಉದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ ಕನ್ನಡಿಗ ಕೆ.ಎಲ್ ರಾಹುಲ್ ಚೊಚ್ಚಲ ಬಾರಿಗೆ ಸರಣಿ ಶ್ರೇಷ್ಠಗೌರವಕ್ಕೆ ಪಾತ್ರರಾಗಿದ್ದಾರೆ.
ಮೊದಲ ಮ್ಯಾಚ್​ನಲ್ಲಿ 56, ಎರಡನೇ ಮ್ಯಾಚಲ್ಲಿ ಅಜೇಯ 57, ಮೂರು, ನಾಲ್ಕು, ಐದನೇ ಮ್ಯಾಚಲ್ಲಿ ಕ್ರಮವಾಗಿ 27, 39 ಮತ್ತು 45ರನ್ ಬಾರಿಸಿರುವ ರಾಹುಲ್ ವಿಕೆಟ್ ಕೀಪರ್ ಆಗಿಯೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇಂದು ನಡೆದ ಮ್ಯಾಚಲ್ಲಿ ಫೀಲ್ಡಿಂಗ್ ವೇಳೆ ನಾಯಕನಾಗಿಯೂ ಗಮನ ಸೆಳೆದಿದ್ದಾರೆ.
ಇನ್ನು ಇಂದಿನ ಮ್ಯಾಚ್​ನಲ್ಲಿ 3 ವಿಕೆಟ್ ಕಿತ್ತು ಮಿಂಚಿದ ಜಸ್ಪ್ರೀತ್ ಬುಮ್ರಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.

ಕನ್ನಡಿಗ ರಾಹುಲ್ ನಾಯಕತ್ವದಲ್ಲಿ ಗೆದ್ದು ಬೀಗಿದ ಭಾರತ  ; ಸರಣಿ ಕ್ಲೀನ್ ಸ್ವೀಪ್ – ಸೃಷ್ಟಿಯಾಯ್ತು ಇತಿಹಾಸ..!

ಟೀಮ್ ಇಂಡಿಯಾ ನಾಯಕನೂ ಆದ ಕನ್ನಡಿಗ ಕೆ.ಎಲ್ ರಾಹುಲ್..! ದ್ರಾವಿಡ್ ಹಾದಿಯಲ್ಲಿ ಕರಾವಳಿ ಕುವರ..!

 

Popular posts