Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Sunday, September 22, 2019

ವರ್ಲ್ಡ್ ಕಪ್ ನಲ್ಲಿ ನಾನೇಕೆ ಯುವಿಗಿಂತ ಮುಂಚೆ ಬ್ಯಾಟಿಂಗ್ ಗೆ ಇಳಿದೆ..? ಧೋನಿ ಬಿಚ್ಚಿಟ್ಟ ರಹಸ್ಯ..!

0

ಅದು 2011 ಏಪ್ರಿಲ್​ 2.. ಆ ಸಂಜೆಯನ್ನು ಭಾರತದ ಯಾವೊಬ್ಬ ಕ್ರಿಕೆಟ್​ ಅಭಿಮಾನಿಯೂ ಎಂದೂ ಮರೆಯಲ್ಲ, ಮರೆಯಲು ಸಾಧ್ಯವೂ ಇಲ್ಲ. ಅಂದು ಮುಂಬೈನ ವಾಂಖೆಡೆಯಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ನಲ್ಲಿ ಟೀಮ್ಇಂಡಿಯಾ ಶ್ರೀಲಂಕಾ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿತ್ತು. 28 ವರ್ಷಗಳ ಬಳಿಕ ಎಂ ಎಸ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ವರ್ಲ್ಡ್ ಕಪ್ ಗೆದ್ದಿತ್ತು.
ಆದ್ರೆ, ಅಂದಿನ ಮ್ಯಾಚ್ ನಲ್ಲಿ ಸ್ಪೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್​ ಅವರ ಮೊದಲು ಮಾಹಿ ಕಣಕ್ಕಿಳಿದಿದ್ರು. ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಯುವಿ ಬದಲು ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಧೋನಿ ಕಣಕ್ಕಿಳಿದಿದ್ಯಾಕೆ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಅಂದಿನಿಂದ ಎಲ್ರನ್ನೂ ಕಾಡ್ತಿದ್ದ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಸ್ವತಃ ಧೊನಿಯೇ ಆ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಪ್ರತಿಕ್ರಿಯಿಸಿರುವ ಧೋನಿ ‘ಅಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡದಲ್ಲಿದ್ದ ಹೆಚ್ಚಿನ ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಚೆನೈ ತಂಡದಲ್ಲಿ ನನ್ನ ಜೊತೆಗಾರರಾಗಿದ್ದರು ಮತ್ತು ಶ್ರೀಲಂಕಾದ ಎಲ್ಲಾ ಬೌಲರ್‌ಗಳ ತಂತ್ರಗಾರಿಕೆ ನನಗೆ ಗೊತ್ತಿತ್ತು’ ಈ ಕಾರಣದಿಂದ ನಾನು ಕಣಕ್ಕಿಳಿದೆ ಎಂದಿದ್ದಾರೆ.
ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದಿದ್ದು ಮಾತ್ರವಲ್ಲ ಪಂದ್ಯದಲ್ಲಿ ಧೋನಿ ಬೆಸ್ಟ್ ಫರ್ಫಾರ್ಮೆನ್ಸ್ ಕೂಡ ನೀಡಿದ್ರು. ಮ್ಯಾಚ್ ನಲ್ಲಿ 79 ಎಸೆತಗಳಲ್ಲಿ 91ರನ್ ಸಿಡಿಸಿ ಗೆಲುವಿಗೆ ಕಾರಣರಾಗಿದ್ರು. ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಅಲ್ ರೌಂಡಿಂಗ್ ಫರ್ಪಾಮೆನ್ಸ್ ನೀಡಿದ್ರು. ಟೂರ್ನಿಯ ಉದ್ದಕ್ಕೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಯುವಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ರು.

40ನೇ ಶತಕ ಸಿಡಿಸಿ ರೆಕಾರ್ಡ್​ಗಳ ಸುರಿಮಳೆಗೈದ ಕಿಂಗ್ ಕೊಹ್ಲಿ..!

0

ನಾಗ್ಪುರ : ಟೀಮ್​ ಇಂಡಿಯಾ ಕ್ಯಾಪ್ಟನ್​ ರನ್ ಮಷಿನ್ ವಿರಾಟ್​ ಕೊಹ್ಲಿ ಸಾಮಾನ್ಯವಾಗಿ ಪ್ರತಿ ಮ್ಯಾಚ್​ನಲ್ಲೂ ಒಂದಲ್ಲ ಒಂದು ರೆಕಾರ್ಡ್ ಮಾಡ್ತಾರೆ. ಅಂತೆಯೇ ಇಂದು ನಾಗ್ಪುರದಲ್ಲಿ ನಡೆಯುತ್ತಿರೋ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಒಡಿಐನಲ್ಲೂ ಅಪರೂಪದ ದಾಖಲೆಯೊಂದನ್ನು ಮಾಡಿದ್ದಾರೆ.
40ನೇ ಶತಕ (116) ಬಾರಿಸಿದ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀವೇಗವಾಗಿ 9 ಸಾವಿರ ರನ್​ ಪೂರೈಸಿದ ನಾಯಕ (159) ಒಟ್ಟಾರೆ 9 ಸಾವಿರ ರನ್ ಪೂರೈಸಿದ 6ನೇ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 159 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ರೆ, ಆಸೀಸ್​ ಮಾಜಿ ಕ್ಯಾಪ್ಟನ್ ರಿಕಿಪಾಂಟಿಂಗ್ 204 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ರು. ಇನ್ನುಳಿದಂತೆ ಸೌತ್ ಆಫ್ರಿಕಾದ ಮಾಜಿ ಕ್ಯಾಪ್ಟನ್​ ಗ್ರೇಮ್​ ಸ್ಮಿತ್​ 220, ಕೂಲ್​ ಕ್ಯಾಪ್ಟನ್ ಧೋನಿ 253, ಆಸೀಸ್​ನ ಅಲನ್​ ಬಾರ್ಡರ್ 257, ನ್ಯೂಜಿಲೆಂಡ್​ನ ಸ್ಟೀಫನ್ ಫ್ಲೆಮಿಂಗ್ 272 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಇಷ್ಟೇ ಅಲ್ಲದೆ 4, 5, 6, 7, 8 ಸಾವಿರ ರನ್​ಗಳನ್ನು ವೇಗವಾಗಿ ಪೂರೈಸಿದ ನಾಯಕ ಎಂಬ ಹೆಗ್ಗಳಿಕೆಯೂ ಕೊಹ್ಲಿ ಬೆನ್ನಿಗಿದೆ. ಜೊತೆಗೆ ನಾಗ್ಪುರದಲ್ಲಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್​ಮನ್ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದಾರೆ. ಈ ಗ್ರೌಂಡ್​ನಲ್ಲಿ ಕೊಹ್ಲಿ 325 ರನ್ ಸಿಡಿ ಅಗ್ರ ಸ್ಥಾನದಲ್ಲಿದ್ರೆ, 268ರನ್​ಗಳಿಸಿರೋ ಎಂ.ಎಸ್​ ಧೋನಿ 2ನೇ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ಈ ಇನ್ನಿಂಗ್ಸ್​ನಲ್ಲಿ 10 ಬೌಂಡರ್ ಬಾರಿಸಿದ್ದಾರೆ. ಇದರೊಂದಿಗೆ ಏಕದಿನ ಮಾದರಿಯಲ್ಲಿ 1ಸಾವಿರ ಬೌಂಡರಿ ಬಾರಿಸಿದ ಸಾಧನೆಯನ್ನು ಕೊಹ್ಲಿ ಮಾಡಿದ್ದಾರೆ.

ಐಪಿಎಲ್ : ಫಸ್ಟ್​ ಮ್ಯಾಚ್​ನಲ್ಲೇ ಮುಗ್ಗರಿಸಿದ ಆರ್​ಸಿಬಿ..!

0

 12ನೇ ಆವೃತ್ತಿ ಐಪಿಎಲ್​ನಲ್ಲಿ ರನ್​ಮಷಿನ್ ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಆರಂಭದಲ್ಲೇ ಮುಗ್ಗರಿಸಿದೆ. ಕೂಲ್ ಕ್ಯಾಪ್ಟನ್ ಮಾಹಿ ನಾಯತ್ವದ ಚೆನ್ನೈಸೂಪರ್ ಕಿಂಗ್ಸ್​ ಭರ್ಜರಿ ಗೆಲುವು ಪಡೆದು ಶುಭಾರಂಭ ಮಾಡಿದೆ.

ರಾಯಲ್​ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದ್ಯದಲ್ಲೇ 7ವಿಕೆಟ್​ ಗಳ ಸೋಲುಂಡು ಅಭಿಮಾನಿಗಳಿಗೆ ಭಾರೀ ನಿರಾಸೆಯನ್ನು ಉಂಟು ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್​ ಚಾಂಪಿಯನ್​ಗೆ ತಕ್ಕಂತ ಆಟವಾಡಿ ಗೆಲುವಿನ ಕೇಕೆ ಹಾಕಿತು.

ಸೋಲು- ಗೆಲುವಿನ ನಡುವೆಯೂ ಈ ಬಾರಿ ಐಪಿಎಲ್ ಉದ್ಘಾಟನೆ ತುಂಬಾ ವಿಶೇಷವಾಗಿತ್ತು. ಅದ್ಧೂರಿ ಉದ್ಘಾಟನೆ ಬದಲು ಸರಳ ಕಾರ್ಯಕ್ರಮದ ಮೂಲಕ ಐಪಿಎಲ್​ಗೆ ಚಾಲನೆ ನೀಡಲಾಯಿತು. ಉದ್ಘಾಟನಾ ಸಮಾರಂಭಕ್ಕೆ ವಿನಿಯೋಗವಾಗಲಿದ್ದ ಬರೋಬ್ಬರಿ 20 ಕೋಟಿ ರೂಪಾಯಿಗಳನ್ನು ಕೇಂದ್ರ ರಕ್ಷಣಾ ನಿಧಿಗೆ ನೀಡಲಾಯಿತು. ಅದರಲ್ಲಿ 11 ಕೋಟಿ ರೂಗಳನ್ನು ಭಾರತೀಯ ಸೇನೆಗೆ, 7 ಕೋಟಿಯನ್ನು ಸಿಆರ್​ಪಿಎಫ್​ಗೆ ಮತ್ತು ತಲಾ 1 ಕೋಟಿ ರೂಗಳನ್ನು  ನೌಕದಳ ಮತ್ತು ವಾಯುಸೇನೆ ನೀಡಿತು ಜೊತೆಗೆ ಸಿಎಸ್​ಕೆ ಕೂಡ ಪಂದ್ಯದ ಮೊತ್ತವನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೀಡಿದರು. ಈ ಮೂಲಕ ಭಾರತೀಯ ಸೇನೆಗೆ ಗೌರವ ಸಲ್ಲಿಸಲಾಯಿತು.

 ಇನ್ನು ಪಂದ್ಯದ ವಿಚಾರಕ್ಕೆ ಬರೋದಾದ್ರೆ, ಚೆನ್ನೈನ ಎಂ ಚಿದಂಬಂರಂ ಸ್ಟೇಡಿಯಂ 12ನೇ ಆವೃತ್ತಿಯ ಮೊದಲ ಪಂದ್ಯದಕ್ಕೆ ಸಾಕ್ಷಿಯಾಯಿತು. ತವರಿನಲ್ಲಿ ನಡೆದ ಚೊಚ್ಚಲ ಪಂದ್ಯದಲ್ಲಿ ಸಿಎಸ್​ಕೆ ಅಧಿಕಾರಯುತ ಗೆಲುವು ಪಡೆಯಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್ ನಡೆಸಿದ ವಿರಾಟ್​ ಪಡೆ ಬಲಿಷ್ಠ ಬ್ಯಾಟಿಂಗ್​ ಲೈನ್​ಅಪ್ ಹೊಂದಿದ್ದರೂ ಕೇವಲ 70 ರನ್​ಗಳನ್ನು ಮಾತ್ರಗಳಿಸುವಲ್ಲಿ ಶಕ್ತವಾಯಿತು. 20 ಓವರ್​​ಗಳನ್ನು ಕಂಪ್ಲೀಟ್ ಮಾಡಲಾಗದೆ ಕೇವಲ 17.1 ಓವರ್ ಗಳಲ್ಲಿ ಆಲೌಟ್​ ಆಗುವುದರೊಂದಿಗೆ ಪ್ರಬಲ ಸಿಎಸ್​ಕೆಗೆ ಸುಲಭದ ಗುರಿಯನ್ನು ನೀಡಿತು.

 ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಕ್ಯಾಪ್ಟನ್ ಕೊಹ್ಲಿ 12 ಎಸತ ಎದುರಿಸಿ  ಬಾರಿಸಿದ್ದು ಕೇವಲ 6 ರನ್​ಗಳನ್ನು ಮಾತ್ರ. ಆರ್​ಸಿಬಿ ಪರ ಅತ್ಯಧಿಕ ರನ್ ಅಂದರೆ ಪಾರ್ಥಿವ್ ಪಟೇಲ್ ಗಳಿಸಿದ 29 ರನ್..! ಇನ್ನುಳಿದಂತೆ ಯಾವೊಬ್ಬ ಬ್ಯಾಟ್ಸ್​​ಮನ್ ಕೂಡ ಎರಡಂಕಿ ದಾಟಲಿಲ್ಲ.

ಚೆನ್ನೈ ಪರ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ , ಇಮ್ರಾನ್ ತಾಹಿರ್ ತಲಾ 3 ವಿಕೆಟ್​,  ರವೀಂದ್ರ ಜಡೇಜ 2  ಹಾಗೂ ಡ್ವೇನ್ ಬ್ರಾವೋ 1 ವಿಕೆಟ್​ ಪಡೆದು ಮಿಂಚಿದ್ರು.

ಸುಲಭ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್​ 17.4 ಓವರ್​ಗಳಲ್ಲಿ ಗೆಲುವಿನ ಕೇಕೆ ಹಾಕಿತು. ಸಿಎಸ್​ಕೆಗೆ ಆರಂಭದಲ್ಲೇ ಆಘಾತ ಎದುರಾಗಿತ್ತು, ತಂಡದ ಮೊತ್ತ ಕೇವಲ 8ರನ್ ಆಗಿದ್ದಾಗ ಆರಂಭಿಕ ಬ್ಯಾಟ್ಸ್​​ಮನ್ ಶೇನ್ ವ್ಯಾಟ್ಸನ್ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್ ಹೆಜ್ಜೆ ಹಾಕಿದ್ರು. ಅಂಬಟಿ ರಾಯುಡು 28 ರನ್, ಸುರೇಶ್ ರೈನಾ 19ರನ್ ಬಾರಿಸಿ ತಂಡಕ್ಕೆ ಆಧಾರವಾದ್ರು. ಅಂತಿಮವಾಗಿ ಕೇದಾರ್ ಜಾದವ್ ಅಜೇಯ 13 ಹಾಗೂ ರವೀಂದ್ರ ಜಡೇಜಾ ಔಟಾಗದೆ 6ರನ್ ಗಳಿಸಿ ಗೆಲುವಿನ ದಡ ಸೇರಿಸಿದ್ರು.

 

 

ನಂಬರ್ 1 ಪಟ್ಟ ಉಳಿಸಿಕೊಳ್ಳುತ್ತಾ ಟೀಮ್ ಇಂಡಿಯಾ..?

0

ಟೆಸ್ಟ್​ ಕ್ರಿಕೆಟ್​ ರ‍್ಯಾಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ಮೆರೆಯುತ್ತಿರೋ ಟೀಮ್​ಇಂಡಿಯಾಗೆ ​ಆಸೀಸ್​​ ಪ್ರವಾಸದಲ್ಲಿ ಅಗ್ನಿ ಪರೀಕ್ಷೆ ಎದುರಾಗಿದೆ. ಇದೇ ಡಿಸೆಂಬರ್​​ 6 ರಿಂದ  ಭಾರತ- ಆಸ್ಟ್ರೇಲಿಯಾ ನಡುವಿನ ಟೆಸ್ಟ್​​ ಸರಣಿ ಆರಂಭವಾಗಿಲಿದ್ದು, ಟೀಮ್​ಇಂಡಿಯಾದ ನಂ.1 ಸ್ಥಾನ ಉಳಿಸಿಕೊಳ್ಳೋಕೆ ಪ್ರಬಲ ಹೋರಾಟ ನಡೆಸಬೇಕಿದೆ.

ಒಂದು ವೇಳೆ ಸರಣಿಯ ಎಲ್ಲಾ 4 ಪಂದ್ಯಗಳಲ್ಲಿ ಕಾಂಗರೂ ಪಡೆ ಸಾಧಿಸಿದ್ದೇ ಆದ್ರೆ, ಕೊಹ್ಲಿ ಪಡೆ ನಂ.1 ಸ್ಥಾನ ಕಳೆದುಕೊಳ್ಳಲಿದೆ. ಆದ್ರೆ, ಸರಣಿಯ ಒಂದು ಪಂದ್ಯದಲ್ಲಿ ಟೀಮ್​ಇಂಡಿಯಾ ಡ್ರಾ ಸಾಧಿಸಿದ್ರೂ ನಂ.1 ಪಟ್ಟ ಭಾರತದ ಬಳಿಯೇ ಉಳಿಯಲಿದೆ.

ಪ್ರಸ್ತುತ ರ‍್ಯಾಂಕಿಂಗ್​ ಪಟ್ಟಿಯಲ್ಲಿ 116 ರೇಟಿಂಗ್ಸ್​​ನೊಂದಿಗೆ ಭಾರತ ಮೊದಲ ಸ್ಥಾನದಲ್ಲಿದ್ರೆ, 108 ರೇಟಿಂಗ್ಸ್​​ನಲ್ಲಿ ಇಂಗ್ಲೆಂಡ್​​, 106 ರೇಟಿಂಗ್ಸ್​ ನೊಂದಿಗೆ ಸೌತ್​​ಆಫ್ರಿಕಾ, 104 ಅಂಕಗಳೊಂದಿಗೆ ನ್ಯೂಜಿಲೆಂಡ್​ ಹಾಗೂ ಆಸ್ಟ್ರೇಲಿಯಾ  ಕ್ರಮವಾಗಿ 2,3,4,5ನೇ ಸ್ಥಾನದಲ್ಲಿವೆ.​​

ಒಂದು ವೇಳೆ ಈ ಸರಣಿಯಲ್ಲಿ ಭಾರತ ಕ್ಲೀನ್​​ಸ್ವೀಪ್​ ಸಾಧಿಸಿದ್ರೆ, ಭಾರತ 120 ರೇಟಿಂಗ್ಸ್​​ಗಳೊಂದಿಗೆ ಅಗ್ರಸ್ಥಾನಿಯಾಗಿ ಮುಂದುವರೆದ್ರೆ ಆಸೀಸ್​​ 97 ರೇಟಿಂಗ್ಸ್​​ ಅಂಕಗಳಿಗೆ ಕುಸಿಯಲಿದೆ.

 

ಪಂತ್​ -ಜಡೇಜಾ ಜೊತೆಯಾಟ – ಆಸೀಸ್​ ಪರದಾಟ

0

ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್​ನ 2ನೇ ದಿನದಾಟದಲ್ಲೂ ಟೀಮ್​ಇಂಡಿಯಾ ಮೇಲುಗೈ ಸಾಧಿಸಿದೆ. ದಿನದಾಟದ ಅಂತ್ಯಕ್ಕೆ ಅತಿಥೇಯ ತಂಡ ವಿಕೆಟ್​​ ನಷ್ಟವಿಲ್ಲದೇ 24 ರನ್​ ಪೇರಿಸಿದ್ದು, 598 ರನ್​ಗಳ ಹಿನ್ನಡೆಯಲ್ಲಿದೆ. ಆಸಿಸ್​ ಪರ ಇನ್ನಿಂಗ್ಸ್​ ಆರಂಭಿಸಿರುವ ಮಾರ್ಕಸ್​ ಹ್ಯಾರೀಸ್​​ ಹಾಗೂ ಉಸ್ಮಾನ್​ ಖವಾಜಾ ಕ್ರಮವಾಗಿ 19 ಹಾಗೂ 5 ರನ್​​ ಗಳಿಸಿದ್ದು ನಾಳೆಗೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮೊದಲು ದಿನದಾಟ ಆರಂಭಿಸಿದ ಭಾರತ ರಿಷಬ್​ ಪಂತ್​ ಹಾಗೂ ರವೀಂದ್ರ ಜಡೇಜಾರ ದ್ವಿಶತಕದ ಜೊತೆಯಾಟ ನೆರವಿನಿಂದ ಬೃಹತ್​ ಮೊತ್ತ ಕಲೆಹಾಕಿತು. ದಿನದಾಟ ಆರಂಭದಲ್ಲಿ ಹನುಮ ವಿಹಾರಿ ವಿಕೆಟ್​ ಕಳೆದುಕೊಂಡ ಭಾರತಕ್ಕೆ ಚೇತೇಶ್ವರ್​ ಪೂಜಾರ, ರಿಷಬ್​ ಪಂತ್​ ಜೋಡಿ ಭರ್ಜರಿ 89 ರನ್​ಗಳ ಜೊತೆಯಾಟ ನೀಡಿದ್ರು. ಆದರೆ ದ್ವಿಶತಕದ ಹಾದಿಯಲ್ಲಿ ಚೇತೇಶ್ವರ್​ ಪೂಜಾರ 193 ರನ್​ಗಳಿಗೆ ನಥಾನ್​ ಲಿಯಾನ್​ ಗೆ ವಿಕೆಟ್​​ ಒಪ್ಪಿಸಿದ್ರು. ಬಳಿಕ ಜೊತೆಯಾದ ರಿಷಬ್​ ಪಂತ್​​, ರವೀಂದ್ರ ಜಡೇಜಾ ಜೋಡಿ 204 ರನ್​ಗಳ ಜೊತೆಯಾಟದ ಕಾಣಿಕೆ ನೀಡಿದ್ರು. ಪಂತ್​ ಅಜೇಯ 159 ರನ್​ ಸಿಡಿಸಿದ್ರೆ, ಜಡೇಜಾ 81 ರನ್​ಗಳಿಸಿ ಔಟಾದ್ರು. ಜಡೇಜಾ ವಿಕೆಟ್​ ಪತನದೊಂದಿಗೆ ಭಾರತ ಇನ್ನಿಂಗ್ಸ್​ ಡಿಕ್ಲೇರ್​ ಮಾಡಿಕೊಳ್ತು.
ಇನ್ನು ಆಸಿಸ್​ ಪರ ಸ್ಪಿನ್ನರ್​ ನಾಥನ್​ ಲಿಯಾನ್​ 4 ವಿಕೆಟ್​ ಪಡೆದುಕೊಂಡ್ರೆ, ವೇಗಿಗಳಾದ ಜೋಶ್​ ಹ್ಯಾಜಲ್​ಹುಡ್ 2​ ಮತ್ತು ಮಿಚೆಲ್​ ಸ್ಟಾರ್ಕ್​ 1 ವಿಕೆಟ್​ ಪಡೆದುಕೊಂಡ್ರು.

ಆಸೀಸ್​ಗೆ ಮ್ಯಾಕ್ಸ್ ‘ವೆಲ್​’ -ಸರಣಿಯಲ್ಲಿ ಭಾರತ ಫೇಲ್

0

ಬೆಂಗಳೂರು : ಮ್ಯಾಕ್ಸ್​ವೆಲ್ ಅವರ ಅಮೋಘ ಅಜೇಯ ಶತಕ (113)ದ ನೆರವಿನಿಂದ ಆಸ್ಟ್ರೇಲಿಯಾ 7 ವಿಕೆಟ್​ಗಳ ಗೆಲುವು ಸಾಧಿಸುವುದರೊಂದಿಗೆ 2 ಮ್ಯಾಚ್​ಗಳ ಟಿ20 ಸರಣಿಯನ್ನು ಗೆದ್ದುಕೊಂಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2ನೇ ಟಿ20 ಮ್ಯಾಚ್​ನಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅವರ ಅಜೇಯ ಅರ್ಧಶತಕ (72)ದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 190ರನ್​ಗಳನ್ನು ಗಳಿಸಿತು. ಕೊಹ್ಲಿ ಅಲ್ಲದೆ, ಓಪನರ್ ಕನ್ನಡಿಗ ಕೆ.ಎಲ್ ರಾಹುಲ್ 47, ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ 40, ಶಿಖರ್ ಧವನ್ 14, ರಿಷಬ್​ ಪಂತ್ 1 ರನ್ ಹಾಗೂ ದಿನೇಶ್ ಕಾರ್ತಿಕ್ ಅಜೇಯ 8ರನ್​ ಕೊಡುಗೆ ನೀಡಿದ್ರು.
191ರನ್​ಗಳ ಗುರಿ ಬೆನ್ನಟ್ಟಿದ ಪ್ರವಾಸಿ ಆಸೀಸ್​ಗೆ ಮ್ಯಾಕ್ಸ್ ‘ವೆಲ್​’ ಭರ್ಜರಿ ಸೆಂಚುರಿ (113) ಸಿಡಿಸುವ ಮೂಲಕ ಗೆಲುವು ತಂದುಕೊಟ್ಟರು. ಇದರೊಂದಿಗೆ ಭಾರತ ಎರಡೂ ಮ್ಯಾಚ್​ಗಳಲ್ಲಿಯೂ ಗೆಲುವಿನ ಸನಿಹ ಹೋಗಿ ಸೋಲುಂಡು ಸರಣಿಯನ್ನು ಆಸೀಸ್​ಗೆ ಬಿಟ್ಟುಕೊಟ್ಟಿದೆ.

ರಾಹುಲ್​ ದ್ರಾವಿಡ್​ಗೆ ಸಿಐಡಿ ಬಿಸಿ..!

0

ವಿಕ್ರಮ್​ ಇನ್ವೆಸ್ಟ್​ಮೆಂಟ್​ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ರಿಕೆಟಿಗ ರಾಹುಲ್​ ದ್ರಾವಿಡ್​ ಗೆ ಸಿಐಡಿ ತನಿಖೆ ಬಿಸಿ ಮುಟ್ಟಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ದ್ರಾವಿಡ್​ ಸೇರಿದಂತೆ ಹಲವು ಕ್ರೀಡಾಪಟುಗಳ ಅಕೌಂಟ್​ ಫ್ರೀಜ್ ಮಾಡಲಾಗಿದೆ. ಒಟ್ಟಾರೆ ವಿಕ್ರಂ ಕಂಪನಿಯಿಂದ ದೊಡ್ಡದ ಮೊತ್ತ ಪಡೆದ 280 ಮಂದಿ ಬ್ಯಾಂಕ್​ ಫ್ರೀಜ್​ ಮಾಡಿದ್ದು, ಕರ್ನಾಟಕದ ಬಹುತೇಕ ಕ್ರೀಡಾಪಟುಗಳಿಗೆ ಕಂಪನಿ ವಂಚಿಸಿದೆ.
ವಿಕ್ರಂ ಇನ್ವೆಸ್ಟ್​ಮೆಂಟ್​, ವಿಕ್ರಂ ಗ್ಲೋಬಲ್​ ಸೆಲೂಷನ್ ಹೆಸರಲ್ಲಿ ಹಣ ಹೂಡಿಕೆ ಮಾಡಿದ್ದು, ರಾಘವೇಂದ್ರ ಶ್ರೀನಿವಾಸ್​ ಎಂಬಾತ ಕೋಟ್ಯಾಂತರ ರೂ ವಂಚಿಸಿದ್ದಾನೆ, ಹೂಡಿಕೆ ಹೆಸರಲ್ಲಿ ಕಂಪನಿ 417 ಕೋಟಿ ರೂಪಾಯಿ ಸಂಗ್ರಹ ಮಾಡಿತ್ತು ವಿಕ್ರಂ ಕಂಪನಿ. ಸಿಐಡಿ ಇದೀಗ 334 ಕೋಟಿ ರೂ ವಸೂಲಿ ಮಾಡಿದ್ದು, 562 ದೂರುಗಳ ಪೈಕಿ 26 ಎಫ್​ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ.
ರಾಹುಲ್ ದ್ರಾವಿಡ್​ ತನಗೆ ಮೋಸ ಆಗಿದೆ ಅಂತ ಸದಾಶಿವ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ದ್ರಾವಿಡ್​ ಹಲವು ಬಾರಿ ಹೂಡಿಕೆ ಮಾಡಿ ಲಾಭಾಂಶ ಪಡೆದಿದ್ದು, ತನಗೆ ಬರಬೇಕಾದ ಎಲ್ಲಾ ಹಣ ಕೊಡಿಸುವಂತೆ ದೂರಿನಲ್ಲಿ ಕೇಳಿದ್ದಾರೆ.

ಇಂದು ಬಲಿಷ್ಠ ಆಸೀಸ್​​ -ದೈತ್ಯ ವಿಂಡೀಸ್ ಫೈಟ್​

0

ವಿಶ್ವಕಪ್ ಮಹಾಸಮರದಲ್ಲಿ ಇಂದು ದೈತ್ಯ ವೆಸ್ಟ್​​ಇಂಡೀಸ್​ ಹಾಗೂ ಪ್ರಬಲ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಮೊದಲ ಪಂದ್ಯವನ್ನ ಜಯಿಸಿ, ಉತ್ಸಾಹದ ಅಲೆಯ ಮೇಲೆ ತೇಲುತ್ತಿರುವ ಉಭಯ ತಂಡಗಳಿಗೂ ಇಂದಿನ ಮ್ಯಾಚ್​​​ ಪ್ರತಿಷ್ಠೆಯ ಕದನವಾಗಿದೆ.
ಆಸಿಸ್​-ವಿಂಡೀಸ್​ ಮದಗಜಗಳ ಕಾದಾಟಕ್ಕೆ ನಾಟಿಂಗ್​ಹ್ಯಾಮ್​ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಈಗಾಗಲೇ ಟೂರ್ನಿಯಲ್ಲಿ ಆಡಿರುವ ಮೊದಲ ಪಂದ್ಯದಲ್ಲೇ ಗೆದ್ದು ಉಭಯ ತಂಡಗಳು ಶುಭಾರಂಭ ಮಾಡಿವೆ. ಉಭಯ ತಂಡಗಳು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಸ್ಟ್ರಾಂಗ್​​​​​​ ಆಗಿರುವುದರಿಂದ ಬ್ಯಾಟ್​​, ಬೌಲ್​ ನಡುವಿನ ಸಮರ ಕುತೂಹಲ ಮೂಡಿಸಿದೆ.
ಈಗಾಗಲೇ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ವೆಸ್ಟ್​ಇಂಡೀಸ್​​ ಬಳಗ ಪಾರಮ್ಯ ಮೆರೆದಿದೆ. ಪಾಕ್​ ವಿರುದ್ಧ ಉತ್ತಮ ಬೌಲಿಂಗ್​ ಸಂಘಟಿಸಿದ ಹೋಲ್ಡರ್​ ಪಡೆ, ಕೇವಲ 136 ರನ್​ಗಳಿಗೆ ಸರ್ಫರಾಜ್​ ಬಳಗವನ್ನ ಆಲೌಟ್​ ಮಾಡಿತ್ತು. ಅಲ್ಲದೇ ಈ ಗುರಿಯನ್ನ 13.4 ಓವರ್​ಗಳಲ್ಲೇ ಬೆನ್ನತ್ತಿದ್ದು ವೆಸ್ಟ್ ಇಂಡೀಸ್​ ಉತ್ಸಾಹವನ್ನ ಮತ್ತಷ್ಟು ಹೆಚ್ಚಿಸಿದೆ.
ಇತ್ತ ಆಸ್ಟ್ರೇಲಿಯಾ ಬಳಗ ಅಫ್ಘಾನಿಸ್ತಾನ ವಿರುದ್ಧ 7 ವಿಕೆಟ್​​ಗಳ ಗೆಲುವು ದಾಖಲಿಸಿದೆ. ಅಫ್ಘನ್​ ವಿರುದ್ಧ ಕೌಲ್ಟರ್​​ ನೈಲ್​ ಹೊರತುಪಡಿಸಿದ್ರೆ ಉಳಿದೆಲ್ಲಾ ಬೌಲರ್​ಗಳು ವಿಕೆಟ್​​ ಕೀಳುವಲ್ಲಿ ಸಫಲರಾಗಿದ್ದಾರೆ. ಅದಲ್ಲದೇ ಡೇವಿಡ್​​ ವಾರ್ನರ್ ಕಮ್​ಬ್ಯಾಕ್​ ಇನ್ನಿಂಗ್ಸ್​​​ ಹಾಗೂ ನಾಯಕ ಆ್ಯರೋನ್​ ಫಿಂಚ್​ ಉತ್ತಮ ಫಾರ್ಮ್​​​​​ ತಂಡದ ವಿಶ್ವಾಸ ಹೆಚ್ಚಿಸಿದೆ. ನಿಷೇಧದ ಬಳಿಕ ಕಮ್​ಬ್ಯಾಕ್​ ಮಾಡಿರುವ ಸ್ಟೀವ್​ ಸ್ಮಿತ್​ ಕೂಡ ಉತ್ತಮ ಇನ್ನಿಂಗ್ಸ್​​ ಕಟ್ಟಿದ್ರೆ ಆಸೀಸ್​​ ಮೇಲುಗೈ ಸಾಧಿಸಲಿದೆ.
ಟ್ರೆಂಟ್​​ ಬ್ರಿಡ್ಜ್​ ಮೈದಾನ ಬ್ಯಾಟಿಂಗ್​ ಸ್ನೇಹಿಯಾಗಿರುವುದು ಅಭಿಮಾನಿಗಳ ಕುತೂಹಲವನ್ನ ಇನ್ನಷ್ಟು ಹೆಚ್ಚಿಸಿದೆ. ವಿಂಡೀಸ್​ ಬಳಗದಲ್ಲಿ ಕ್ರಿಸ್ ​ಗೇಲ್, ಆಂಡ್ರೆ ರಸೆಲ್​​​​​​, ಡರೇನ್​ ಬ್ರಾವೋ, ಶಿಮ್ರೋನ್​ ಹೆಟ್ಮೆಯರ್​ ಮೇಲೆ ನಿರೀಕ್ಷೆ ಹೆಚ್ಚಿದೆ. ಆಸಿಸ್​ ಬಳಗದ ಆ್ಯರೋನ್​ ಫಿಂಚ್​​, ಡೇವಿಡ್ ವಾರ್ನರ್​​,​ ​ಸ್ಪೀವ್​ ಸ್ಮಿತ್​, ಗ್ಲೆನ್​​​​​​​​ ಮ್ಯಾಕ್ಸ್​ವೆಲ್​ ಮೇಲೆ ಕಾಂಗರೂ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.
ಬಲಿಷ್ಠ ಹಾಗೂ ದೈತ್ಯ ತಂಡಗಳ ನಡುವಿನ ಇಂದಿನ ಕದನ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ರನ್​ ಮಳೆಗಾಗಿ ಕಾದು ಕುಳಿತಿರುವ ಕ್ರಿಕೆಟ್ ಪ್ರೇಮಿಗಳ ಬಯಕೆ ಈಡೇರುತ್ತಾ ಅನ್ನೋದು ಕುತೂಹಲ ಮೂಡಿಸಿದೆ.

ಕೊನೆಯ ಮ್ಯಾಚ್​ಗೂ ಮುನ್ನ ಕೊಹ್ಲಿ, ಎಬಿಡಿ ಮನದಾಳದ ಮಾತು..!

0

ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು 12ನೇ ಆವೃತ್ತಿಯಲ್ಲೂ ನಿರಾಸ ಪ್ರದರ್ಶನವನ್ನು ನೀಡಿದೆ. ಇದರೊಂದಿಗೆ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಇಂದು ಕೊನೆಯ ಲೀಗ್​ ಮ್ಯಾಚ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಅನ್ನು ಎದುರಿಸಲು ರೆಡಿಯಾಗಿದೆ.
ಕೊನೆಯ ಮ್ಯಾಚ್​ಗೂ ಮುನ್ನ ಕ್ಯಾಪ್ಟನ್ ಕೊಹ್ಲಿ ಮತ್ತು ಸ್ಟಾರ್​ ಬ್ಯಾಟ್ಸ್​ಮನ್ ಎ ಬಿ ಡಿವಿಲಿಯರ್ಸ್​ ವಿಡಿಯೋ ಮೂಲಕ ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಸೋಲು-ಗೆಲುವಿನ ನಡುವೆಯೂ ಆರ್​ಸಿಬಿಯನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ಕಳೆದ ಮ್ಯಾಚ್​ ವೇಳೆ ಮಳೆಯನ್ನೂ ಲೆಕ್ಕಿಸದೇ ರಾತ್ರಿ 12 ಗಂಟೆ ಕಳೆದ್ರೂ ತಂಡವನ್ನು ಬೆಂಬಲಿಸಿದ್ದಕ್ಕೆ ನಾವು ಚಿರರುಣಿಗಳು ಅಂತ ಹೇಳಿದ್ದಾರೆ.
ಈ ಆವೃತ್ತಿಯ ಐಪಿಎಲ್​ ನಿರಾಸೆ ತಂದಿದೆ. ಕೈಲಾದ ಪ್ರಯತ್ನ ಮಾಡಿದ್ರೂ ರಿಸೆಲ್ಟ್ ಬೇರೇನೇ ಇತ್ತು. ಮುಂದಿನ ಸಲ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡ್ತೀವಿ ಅಂದಿದ್ದಾರೆ.

 

ಚೊಚ್ಚಲ ಟಿ20 ಮ್ಯಾಚ್​ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ್ದ ಭಾರತದ ಕ್ರಿಕೆಟಿಗ ನಿವೃತ್ತಿ..!

0

2001- 2007ರ ಅವಧಿಯಲ್ಲಿ ಟೀಮ್ ಇಂಡಿಯಾ ಪರ ಆಡಿದ್ದ ಆಲ್​ರೌಂಡರ್ ದಿನೇಶ್ ಮೋಂಗಿಯಾ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ. 2007ರ ಮೇ 12ರಂದು ಬಾಂಗ್ಲಾ ದೇಶದ ವಿರುದ್ಧ ಕೊನೆಯ ಒಡಿಐ ಆಡಿದ್ದ ಮೋಂಗಿಯಾ ಆ ನಂತರ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರ್ಲಿಲ್ಲ. ಕೊನೆಯ ಮ್ಯಾಚ್ ಆಡಿದ 12 ವರ್ಷದ ಬಳಿಕ ಇಂದು ಅವರು ನಿವೃತ್ತಿ ಘೋಷಿಸಿದ್ದಾರೆ.
1995ರಲ್ಲಿ ಅಂಡರ್ 19 ತಂಡದಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಅವರು, ಸತತ 6 ವರ್ಷಗಳ ಕಾಲ ದೇಶೀಯ ಟೂರ್ನಿಯಲ್ಲಿ ಅದ್ಭುತ ಸ್ಥಿರ ಪ್ರದರ್ಶನ ನೀಡಿ 2001ರಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. 2001ರ ಮಾರ್ಚ್​ 28ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಮುಖೇನ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಟ್ರಿ ಕೊಟ್ಟಿದ್ದರು. 2003ರ ವಿಶ್ವಕಪ್​ ತಂಡದ ಸದಸ್ಯರೂ ಆಗಿದ್ದರು. 
ಟೀಮ್ ಇಂಡಿಯಾ ಪರ ಒಟ್ಟು 57 ಒಡಿಐಗಳನ್ನು ಆಡಿರುವ ಮೋಂಗಿಯಾ 1 ಸೆಂಚುರಿ, 4 ಹಾಫ್​ ಸೆಂಚರಿ ಸಹಿತ 1230ರನ್​ಗಳಿಸಿದ್ದರು. 2002ರಲ್ಲಿ ಜಿಂಬಾಬ್ವೆ ವಿರುದ್ಧ ಇವರು ಸಿಡಿಸಿದ್ದ ಅಜೇಯ 159ರನ್​ ಸ್ಮರಣೀಯ ಇನ್ನಿಂಗ್ಸ್.
ಚೊಚ್ಚಲ ಟಿ20ಯಲ್ಲಿ ಅತೀ ಹೆಚ್ಚು ರನ್ :
2006ರಲ್ಲಿ ಸೌತ್​ಆಫ್ರಿಕಾ ವಿರುದ್ಧ ಭಾರತ ಆಡಿದ್ದ ಚೊಚ್ಚಲ ಟಿ20ಐನಲ್ಲಿ ಮೋಂಗಿಯಾ ಸ್ಥಾನ ಪಡೆದಿದ್ದರು. ಅದು ಅವರು ಆಡಿದ ಮೊದಲ ಹಾಗೂ ಕೊನೆಯ ಟಿ20ಐ ಕೂಡ. ಆ​ ಪಂದ್ಯದಲ್ಲಿ ಮೋಂಗಿಯಾ 38ರನ್ ಬಾರಿಸಿದ್ದರು. ಆ ಪಂದ್ಯದಲ್ಲಿ ಭಾರತ ಗೆದ್ದಿತ್ತು. 14 ವಿಕೆಟ್​​ ಕೂಡ ಕಿತ್ತಿದ್ದರು. 

ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್​ನಲ್ಲಿ ನಡೆದ ಮ್ಯಾಚ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸೌತ್​ ಆಫ್ರಿಕಾ 20 ಓವರ್​ಗಳಲ್ಲಿ 9 ವಿಕೆಟ್​ಗೆ 126ರನ್ ಮಾಡಿತ್ತು. ಗುರಿ ಬೆನ್ನತ್ತಿದ ಭಾರತ 19.5 ಓವರ್​ಗಳಲ್ಲಿ 4 ವಿಕೆಟ್​ಗೆ 127ರನ್ ಮಾಡುವ ಮೂಲಕ 6 ವಿಕೆಟ್​ಗಳ ಜಯ ದಾಖಲಿಸಿತ್ತು. ಭಾರತದ ಪರ ಕ್ಯಾಪ್ಟನ್ ವೀರೇಂದ್ರ ಸೇಹ್ವಾಗ್ 34, ಸಚಿನ್ ತೆಂಡೂಲ್ಕರ್ 10ರನ್ ಮಾಡಿದ್ದರು. ಧೋನಿ ಸಂಪಾದನೆ ಶೂನ್ಯ..! ದಿನೇಶ್ ಕಾರ್ತಿಕ್ ಅಜೇಯ 31 ರನ್ ಹಾಗೂ ಸುರೇಶ್ ರೈನಾ ಅಜೇಯ 3ರನ್ ಗಳಿಸಿದ್ದರು.

ದಿನೇಶ್ ಮೋಂಗಿಯಾ 45 ಬಾಲ್​ಗಳಲ್ಲಿ 38ರನ್ ಮಾಡಿದ್ದರು. ಇದು ಭಾರತದ ಪರ ಮಾತ್ರವಲ್ಲದೆ ಇಡೀ ಪಂದ್ಯದಲ್ಲಿ ಎರಡೂ ತಂಡದ ಬ್ಯಾಟ್ಸ್​ಮನ್​ಗಳ ಸ್ಕೋರ್​ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿತ್ತು. ದ.ಆಫ್ರಿಕಾ ಪರ ಮಾರ್ಕೆಲ್ ಗಳಿಸಿದ್ದ 27ರನ್ ಹೈಯಸ್ಟ್​​​ ಇಂಡಿವ್ಯೂಸಲ್ ಸ್ಕೋರ್.
ಆ ಪಂದ್ಯದಲ್ಲಿ ಮೋಂಗಿಯಾ ಅತ್ಯಧಿಕ ರನ್ ಬಾರಿಸಿದ್ದರೂ 28 ಬಾಲ್​ಗಳಲ್ಲಿ 31ರನ್​​ ಬಾರಿಸಿದ್ದ ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

Popular posts