Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Sunday, September 22, 2019

ವರ್ಲ್ಡ್​​ಕಪ್ ಇತಿಹಾಸದಲ್ಲೇ ಯಾರೂ ಮಾಡದ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ..!

0

ವಿಶ್ವಕಪ್​ನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ರನ್​ ಓಟಕ್ಕೆ ಬ್ರೇಕ್ ಹಾಕುವಲ್ಲಿ ಯಾವ ಎದುರಾಳಿ ಟೀಮ್​ನಿಂದಲೂ ಸಾಧ್ಯವಾಗ್ತಿಲ್ಲ. ರೋಹಿತ್ ಆರ್ಭಟ ಶ್ರೀಲಂಕಾ ವಿರುದ್ಧದ ಮ್ಯಾಚ್​ನಲ್ಲೂ ಮುಂದುವರೆದಿದೆ. ರೋಹಿತ್ ಲಂಕಾ ವಿರುದ್ಧ ಕೂಡ ಸೆಂಚುರಿ (103) ಸಿಡಿಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ರೋಹಿತ್ ಸಿಡಿಸಿದ 5ನೇ ಶತಕವಾಗಿದ್ದು, ಇದರೊಂದಿಗೆ ವಿಶ್ವಕಪ್ ಇತಿಹಾಸದಲ್ಲೇ ಒಂದೇ ಟೂರ್ನಿಯಲ್ಲಿ 5 ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಅನ್ನೋ ಕೀರ್ತಿಗೆ ರೋಹಿತ್ ಪಾತ್ರರಾಗಿದ್ದಾರೆ.
ಹೆಡಿಂಗ್ಲೆಯ ಲೀಡ್ಸ್​​​​​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮ್ಯಾಚ್​ನಲ್ಲಿ ರೋಹಿತ್ ಶತಕ ಬಾರಿಸಿದ್ದಾರೆ. ಟೂರ್ನಿಯಲ್ಲಿ ಒಟ್ಟಾರೆ 5ನೇ ಹಾಗೂ ಸತತ 3ನೇ ಶತಕ ಇದಾಗಿದೆ. ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಇಂಗ್ಲೆಂಡ್, ಬಾಂಗ್ಲಾ ವಿರುದ್ಧ ಸೆಂಚುರಿ ಹೊಡೆದಿದ್ದ ರೋಹಿತ್ ಲಂಕಾ ವಿರುದ್ಧವು ಭರ್ಜರಿ ಸೆಂಚುರಿ ಸಿಡಿಸಿದ್ದಾರೆ.
ಈ ಮೂಲಕ ಒಂದೇ ವಿಶ್ವಕಪ್ ಟೂರ್ನಿಯಲ್ಲಿ 5 ಸೆಂಚುರಿ ಬಾರಿಸಿದ ಕೀರ್ತಿಗೆ ಭಾಜನರಾದ ರೋಹಿತ್ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ರೆಕಾರ್ಡ್ ಬ್ರೇಕ್ ಮಾಡಿದ್ರು. 2015ರ ವಿಶ್ವಕಪ್​ನಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕಾರ 4 ಸೆಂಚುರಿ ಬಾರಿಸಿದ್ದರು. ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ 2003ರ ವಿಶ್ವಕಪ್​ನಲ್ಲಿ 3 ಸೆಂಚುರಿ ಬಾರಿಸಿದ್ದು ಭಾರತದ ಪರ ಇದುವರೆಗಿನ ದಾಖಲೆ ಆಗಿತ್ತು. ಆದರೆ, ಇಂಗ್ಲೆಂಡ್ ವಿರುದ್ಧದ ಮ್ಯಾಚ್​ನಲ್ಲಿ ರೋಹಿತ್ ಗಂಗೂಲಿ ದಾಖಲೆಯನ್ನು ಸರಿಗಟ್ಟಿದ್ದು, ಬಾಂಗ್ಲಾ ವಿರುದ್ಧವೂ ಸೆಂಚುರಿ ಬಾರಿಸಿ ಆ ದಾಖಲೆಯನ್ನು ಪುಡಿಗಟ್ಟಿದ್ದರು. ಈಗ ಲಂಕಾದ ಸಂಗಕ್ಕಾರ ದಾಖಲೆ ಉಡೀಸ್ ಮಾಡಿ ಒಂದೇ ವಿಶ್ವಕಪ್​ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ಕ್ರಿಕೆಟಿಗ ಅನ್ನೋ ವಿಶ್ವ ದಾಖಲೆ ಬರೆದಿದ್ದಾರೆ. 

ರೋಹಿತ್, ರಾಹುಲ್ ಶತಕ ವೈಭವ ; ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ವರ್ಲ್ಡ್​​ಕಪ್​​ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಚೊಚ್ಚಲ ಶತಕ..!

 

ಧೋನಿಯನ್ನು 7ನೇ ಕ್ರಮಾಂಕದಲ್ಲಿ ಆಡಿಸಿದ್ದಕ್ಕೆ ರವಿಶಾಸ್ತ್ರಿ ಕೊಟ್ಟ ಕಾರಣ ಏನ್ ಗೊತ್ತಾ?

0

ಲೀಗ್ ಮ್ಯಾಚ್​ಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ನಂಬರ್​ 1 ಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದ ಭಾರತ ಸೆಮೀಸ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ 18ರನ್​ಗಳಿಂದ ಸೋಲನುಭವಿಸಿ ನಿರಾಸೆ ಮೂಡಿಸಿದ್ದು ಈಗ ಇತಿಹಾಸ.
ನ್ಯೂಜಿಲೆಂಡ್ ನೀಡಿದ್ದ 240ರನ್​ಗಳ ಗುರಿ ಬೆನ್ನತ್ತುವಾಗ ಭಾರತ ಆರಂಭದಲ್ಲೇ ಎಡವಿತು. ಉಪ ನಾಯಕ ರೋಹಿತ್ ಶರ್ಮಾ (1), ಕನ್ನಡಿಗ ಕೆ,ಎಲ್​ ರಾಹುಲ್​ (1), ನಾಯಕ ವಿರಾಟ್ ಕೊಹ್ಲಿ (1) ಒಬ್ಬರ ಹಿಂದೊಬ್ಬರಂತೆ ಸ್ಕ್ರೀಸ್​ಗೆ ಇಳಿದ ಸ್ಪೀಡಲ್ಲೇ ಪೆವಿಲಿಯನ್ ಸೇರಿಕೊಂಡ್ರು. ಅವರ ಬೆನ್ನಲ್ಲೇ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಇಳಿದ ಅನುಭವಿ ಬ್ಯಾಟ್ಸ್​ಮನ್​ ದಿನೇಶ್ ಕಾರ್ತಿಕ್ 6ರನ್​ಗಳನ್ನಷ್ಟೇ ಮಾಡಿ ಔಟ್ ಆದ್ರು. ದಿನೇಶ್​ಗಿಂತಲೂ ಮೊದಲು, ಅಂದ್ರೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​​ಗಿಳಿದಿದ್ದ ಯುವ ಆಟಗಾರ ರಿಷಭ್ ಪಂತ್ (32), ದಿನೇಶ್ ಪೆವಿಲಿಯನ್ ಸೇರಿದ್ಮೇಲೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗೆ ಇಳಿದ ಹಾರ್ದಿಕ್ ಪಾಂಡ್ಯ (32) ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದ್ರೂ ದೊಡ್ಡ ಜೊತೆಯಾಟ ಈ ಇಬ್ರಿಂದ ಬರ್ಲಿಲ್ಲ. ನಂತರ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ (50) ಹಾಗೂ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಆಲ್​ರೌಂಡರ್ ರವೀಂದ್ರ ಜಡೇಜಾ (77) ಗೆಲ್ಲುವ ಆಸೆಯನ್ನು ಚಿಗುರಿಸಿದ್ದರು. ಅಂತಿಮ ಹಂತದಲ್ಲಿ ಅವರಿಬ್ಬರೂ ಔಟಾಗುವುದರೊಂದಿಗೆ ಭಾರತದ ಗೆಲುವಿನ ಆಸೆಯೂ ಕಮರಿತು.
ಭಾರತ ಸೋಲುತ್ತಿದ್ದಂತೆ ಕೆಲವರು ಧೋನಿಯನ್ನು ಟೀಕಿಸಲು ಆರಂಭಿಸಿದ್ದರು. ಮತ್ತೆ ಕೆಲವರು ಧೋನಿಯನ್ನು 5ನೇ ಕ್ರಮಾಂಕದಲ್ಲೇ ಬ್ಯಾಟಿಂಗ್​ಗೆ ಕಳುಹಿಸಬೇಕಿತ್ತು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿಸಿದ್ದು ತಪ್ಪಾಯ್ತು ಅಂತ ಕೆಂಡಮಂಡಲರಾಗಿದ್ದರು. ಇದೀಗ ರವಿಶಾಸ್ತ್ರಿ ಧೋನಿಯನ್ನು 7ನೇ ಸ್ಲಾಟ್​ನಲ್ಲಿ ಕಣಕ್ಕಿಳಿಸಿದ್ದು ಯಾಕಂತ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತಾಡಿರುವ ಶಾಸ್ತ್ರಿ,”ಧೋನಿ ವಿಕೆಟನ್ನು ಆರಂಭದಲ್ಲೇ ಕಳೆದುಕೊಳ್ಳೋಕೆ ಯಾರೂ ಬಯಸಿರಲಿಲ್ಲ. ಯಾಕಂದ್ರೆ ಧೋನಿ ಅದ್ಭುತ ಫಿನಿಶರ್. ಅವರ ಅನುಭವ ಇನ್ನಿಂಗ್ಸ್​ ಕೊನೆಯಲ್ಲಿ ನೆರವಿಗೆ ಬರಲಿದೆ. ಅವರನ್ನು 7ನೇ ಕ್ರಮಾಂಕದಲ್ಲಿ ಬಳಸಿಕೊಳ್ಳೋದ್ರಲ್ಲಿ ತಪ್ಪಿಲ್ಲ ಅಂತ ಇಡೀ ಟೀಮ್ ನಿರ್ಧಾರ ಮಾಡಿತ್ತು” ಎಂದಿದ್ದಾರೆ.
ಇನ್ನು ಈ ಯೋಜನೆಯೂ ಒಂದು ಹಂತದಲ್ಲಿ ಕ್ಲಿಕ್ ಆಗಿತ್ತು. ಧೋನಿ ಉತ್ತಮವಾಗಿಯೇ ಆಡಿದ್ರು. ಪರಿಸ್ಥಿತಿಯನ್ನು ಬದಲಾಯಿಸಿದ್ದರು. ಯಾವ ಬಾಲನ್ನು ಹೇಗೆ ಹೊಡೆಯ ಬೇಕು. ಕೊನೆಯ ಓವರ್​ನಲ್ಲಿ ಜಿಮ್ಮಿ ನೀಶಮ್​ ಬೌಲಿಂಗ್ ಮಾಡಲಿದ್ದು, ಆ ಓವರ್​​ಗೆ ಎಷ್ಟು ರನ್ ಬಾಕಿ ಉಳಿಸಿಕೊಳ್ಳ ಬೇಕೆನ್ನುವುದರ ಲೆಕ್ಕಾಚಾರವನ್ನು ಮಾಡಿಟ್ಟುಕೊಂಡಿದ್ದರು. ಅದೇ ರೀತಿ ಆಡ್ತಿದ್ರು. ಆದರೆ, ಅವರು ರನ್​ಔಟ್​ ಆಗಿದ್ದು ಬ್ಯಾಡ್​​​ಲಕ್ ಅಂತಲೂ ಶಾಸ್ತ್ರಿ ಹೇಳಿದ್ದಾರೆ.

ಭಾರತ ತಂಡಕ್ಕೆ ಆಯ್ಕೆಯಾದ 15 ವರ್ಷದ ಕ್ರಿಕೆಟರ್..!

0

ಭಾರತ ತಂಡಕ್ಕೆ 15 ವರ್ಷದ ಕ್ರಿಕೆಟರ್ ಆಯ್ಕೆಯಾಗಿದ್ದಾರೆ. ಆದರೆ, ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾಕ್ಕಲ್ಲ… ಬದಲಿಗೆ ಹರ್ಮನ್​ ಪ್ರೀತ್ ನಾಯಕತ್ವದ ಭಾರತ ಮಹಿಳಾ ಟಿ20 ತಂಡಕ್ಕೆ..!
ಹೌದು, ಭಾರತ ಕ್ರಿಕೆಟ್ ಇತಿಹಾದಲ್ಲೇ ಇದು ಮೊದಲ ಬಾರಿಗೆ 15 ವರ್ಷದ ಮಹಿಳಾ ಕ್ರಿಕೆಟರ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹರಿಯಾಣದ ಯುವ ಆಟಗಾರ್ತಿ ಶಫಾಲಿ ವರ್ಮಾ ತಂಡದಲ್ಲಿ ಸ್ಥಾನ ಪಡೆದವರು. ಮಹಿಳಾ ಐಪಿಎಲ್​ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದ ಶಫಾಲಿ ರಾಷ್ಟ್ರೀಯ ತಂಡದಲ್ಲಿ ಅತೀ ಕಿರಿಯ ವಯಸ್ಸಲ್ಲೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸೀನಿಯರ್ ವುಮೆನ್ಸ್ ಟಿ-20ಯಲ್ಲಿ ನಾಗಲ್ಯಾಂಡ್​ ವಿರುದ್ಧ 56 ಬಾಲ್​ಗಳಲ್ಲಿ 128ರನ್ ಬಾರಿಸಿದ್ದರು ರೋಹ್ಟಕ್​ನ ಈ ಯುವ ಬ್ಯಾಟ್ಸ್​ವುಮೆನ್.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ರವರ ಅಪ್ಪಟ ಅಭಿಮಾನಿಯಾಗಿರುವ ಶಫಾಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಕಿರಿಯ ವಯಸ್ಸಲ್ಲೇ ರಾಷ್ಟ್ರೀಯ ತಂಡದಲ್ಲಿ ಸದ್ದು ಮಾಡಲು, ಖಾಯಂ ಸ್ಥಾನ ಹೊಂದಲು ಶಫಾಲಿ ಸಜ್ಜಾಗಿದ್ದಾರೆ.

ಕೊನೆಗೂ ನನಸಾಯಿತು ರಿಷಬ್ ಪಂತ್ ಕನಸು..!

0

ಟೀಮ್​ ಇಂಡಿಯಾದ ಯುವ ಆಟಗಾರ ರಿಷಬ್ ಪಂತ್ ಅವರ ಕನಸು ಕೊನೆಗೂ ನನಸಾಗಿದೆ. ವಿಶ್ವಕಪ್​ನಲ್ಲಿ ಆಡಬೇಕು ಅನ್ನೋ ಯುವ ಕ್ರಿಕೆಟಿಗನ ಮಹದಾಸೆ ಇಂದು ಈಡೇರುತ್ತಿದೆ.

ಬರ್ಮಿಂಗ್​ಹ್ಯಾಮ್​ನ ಎಜ್​​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ಮ್ಯಾಚ್​ನಲ್ಲಿ ಆಡುವ 11ರ ಬಳಗದಲ್ಲಿ ರಿಷಬ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡು ಟೂರ್ನಿಯಿಂದ ಔಟ್ ಆದ ಹಿನ್ನೆಲೆಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಓಪನಿಂಗ್​ಗೆ ಫಿಕ್ಸ್ ಆಗಿದ್ದಾರೆ. ಧವನ್ ಹೊರಗುಳಿದಲ್ಲಿಂದ ರಾಹುಲ್ ಉಪನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸ್ತಿದ್ದಾರೆ. ಹೀಗಾಗಿ 4ನೇ ಕ್ರಮಾಂಕಕ್ಕೆ ಆಲ್​ ರೌಂಡರ್ ವಿಜಯ್ ಶಂಕರ್ ಅವಕಾಶ ಗಿಟ್ಟಿಸಿಕೊಂಡಿದ್ದರು. ಆದರೆ, ಅವರಿಂದ ನಿರೀಕ್ಷಿತ ಪ್ರದರ್ಶನ ಬಾರದ ಹಿನ್ನೆಲೆಯಲ್ಲಿ ಇಂದಿನ ಪಂದ್ಯಕ್ಕೆ ರಿಷಬ್​ಗೆ ಅವಕಾಶ ಕಲ್ಪಿಸಲಾಗಿದೆ.
ಇನ್ನು ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ವಿರಾಟ್​ ಕೊಹ್ಲಿಯಿಂದ 26 ವರ್ಷದ ದಾಖಲೆ ಉಡೀಸ್​​

0

ಟ್ರಿನಿಡಾ: ಟೀಂ ಇಂಡಿಯಾ ಕ್ಯಾಪ್ಟನ್​, ರನ್​ ಮೆಶಿನ್​ ವಿರಾಟ್​ ಕೊಹ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಈ ಮೂಲಕ 26 ವರ್ಷದ ಹಳೆಯ ದಾಖಲೆಯೊಂದು ಧೂಳಿಪಟವಾಗಿದೆ.

ಟ್ರಿನಿಡಾದ ಕ್ವೀನ್ಸ್​​ ಪಾರ್ಕ್​​ ಮೈದಾನದಲ್ಲಿ ನಡೆಯುತ್ತಿರುವ ವೆಸ್ಟ್​​ ಇಂಡೀಸ್​ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 19 ರನ್​​ ಗಳಿಸುತ್ತಿದ್ದಂತೇ, ಕೆರಿಬಿಯನ್​ ವಿರುದ್ಧ ಅವರ ಒಟ್ಟು ಗಳಿಕೆ 1931 ರನ್​​ಗಳಾಗಿದ್ದು ಹೀಗಾಗಿ ಅತೀ ಹೆಚ್ಚು ರನ್​​ ಬಾರಿಸಿರುವ ಆಟಗಾರ ಎನಿಸಿಕೊಂಡಿದ್ದಾರೆ. ಕೊಹ್ಲಿ 34ನೇ ಇನ್ನಿಂಗ್ಸ್​​ನಲ್ಲಿ ಈ ಸಾಧನೆಯನ್ನು ಮೆರೆದಿದ್ದು ಇಂಡೀಸ್​​ ವಿರುದ್ಧ ಅವರು 7 ಶತಕ, 10ಅರ್ಧ ಶತಕ ಸಿಡಿಸಿದ್ದಾರೆ. ಈ ಹಿಂದೆ ಪಾಕಿಸ್ತಾನದ ಮಾಜಿ ಆಟಗಾರ ಜಾವೇದ್​​ ಮಿಯಾಂದಾದ್​​ ವಿಂಡೀಸ್​​ ವಿರುದ್ಧ 64 ಇನ್ನಿಂಗ್ಸ್​​ಗಳಲ್ಲಿ 1 ಶತಕದೊಂದಿಗೆ 1930 ರನ್​​ಗಳಿಸಿದ್ದರು. ಈವರೆಗೆ ಅವರ ಸಾಧನೆಯನ್ನು ಯಾವೊಬ್ಬ ಆಟಗಾರನಿಗೂ ಸಾಧ್ಯವಾಗಿರಲಿಲ್ಲ. ಇದೀಗ ವಿರಾಟ್​​ ಕೊಹ್ಲಿ ಈ ಸಾಧನೆಯನ್ನು ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಆಲ್​ರೌಂಡರ್ ವಿಜಯ್​ಶಂಕರ್ ಕನಸು ನನಸಾಯ್ತು..!

0

ಆಲ್​ರೌಂಡರ್ ವಿಜಯ್ ಶಂಕರ್ ಅವರ ಕನಸು ನನಸಾಗಿದೆ. ವಿಶ್ವಕಪ್​ನಲ್ಲಿ ಆಡುವ ಅವರ ಮಹದಾಸೆ ಇಂದು ಈಡೇರುತ್ತಿದೆ. ಪ್ಲೇಯಿಂಗ್ ಇಲೆವೆನ್​ನಲ್ಲಿ ವಿಜಯ್ ಶಂಕರ್ ಅವರಿಗೆ ಅವಕಾಶ ಸಿಕ್ಕಿದೆ.
ಎಮರೇಟ್ಸ್ ಓಲ್ಡ್ ಟ್ರಾಫರ್ಡ್​ ಸ್ಟೇಡಿಯಂನಲ್ಲಿಂದು ಪಾಕ್ ವಿರುದ್ಧ ನಡೆಯಲಿರುವ ಮ್ಯಾಚ್​ನಲ್ಲಿ ವಿಜಯ್ ಶಂಕರ್ ಆಡಲಿದ್ದಾರೆ. ಆರಂಭಿಕ ಆಟಗಾರ ಶಿಖರ್ ಧವನ್ ಅವರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಆಡುವ 11ರ ಬಳಗದಲ್ಲಿ ವಿಜಯ್ ಗೆ ಅವಕಾಶ ಸಿಕ್ಕಿದೆ.
ಆಸೀಸ್​ ವಿರುದ್ಧದ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ್ದ ಧವನ್ ಅದೇ ಮ್ಯಾಚ್ ವೇಳೆ ಗಾಯಗೊಂಡಿದ್ದರು. ಹೀಗಾಗಿ ಧವನ್ ಬದಲಿಗೆ ಯಾರಿಗೆ ಚಾನ್ಸ್ ಸಿಗುತ್ತೆ ಅನ್ನೋ ಕುತೂಹಲವಿತ್ತು. ದಿನೇಶ್ ಕಾರ್ತಿಕ್ ಮತ್ತು ವಿಜಯ್ ಶಂಕರ್ ನಡುವೆ ಪೈಪೋಟಿ ಇತ್ತು. ಧವನ್ ಬದಲು ಕನ್ನಡಿಗ ಕೆ.ಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯೋದು ಪಕ್ಕಾ ಆಗಿದ್ರಿಂದ 4ನೇ ಕ್ರಮಾಂಕಕ್ಕೆ ಕಾರ್ತಿಕ್ ಆಯ್ಕೆ ಆಗುತ್ತಾರಾ? ವಿಜಯ್ ಶಂಕರ್ ಆಯ್ಕೆ ಆಗುತ್ತಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಕೊನೆಗೂ ವಿಜಯ್ ಶಂಕರ್ ಅವರು ಸ್ಥಾನ ಗಿಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ವಿರಾಟ್ ಪಡೆ ಮೊದಲು ಬ್ಯಾಟಿಂಗ್ ನಡೆಸಲಿದೆ.

ಡಬಲ್ ಸೆಂಚುರಿ ಸ್ಟಾರ್ ಈಗ ಸಿಕ್ಸರ್ ಕಿಂಗ್ – ರೋಹಿತ್​ ಶರ್ಮಾ ವಿಶ್ವ ದಾಖಲೆ..!

0

ಪ್ಲೋರಿಡಾ : ಡಬಲ್ ಸೆಂಚುರಿ ಸ್ಟಾರ್. ಟೀಮ್ ಇಂಡಿಯಾದ ಉಪ ನಾಯಕ ರೋಹಿತ್ ಶರ್ಮಾ ಮತ್ತೊಂದು ವಿಶ್ವ ದಾಖಲೆ ಮಾಡಿದ್ದಾರೆ.

ಅಮೆರಿಕಾದ ಪ್ಲೋರಿಡಾದ ಲಾಡರ್ ಹಿಲ್​ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಮ್ಯಾಚ್​ನಲ್ಲಿ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಇಂದಿನ ಮ್ಯಾಚ್​ನಲ್ಲಿ ರೋಹಿತ್ 3 ಸಿಕ್ಸರ್​​​ಗಳನ್ನು ಬಾರಿಸಿದ್ದಾರೆ. ಈ ಮೂಲಕ ಇಂಟರ್​ನ್ಯಾಷನಲ್ ಟಿ20ಯಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್​ಮನ್ ಅನ್ನೋ ದಾಖಲೆ ಬರೆದಿದ್ದಾರೆ.
ಭಾರತದ ಈ ಪ್ರವಾಸಕ್ಕೂ ಮುನ್ನೆ ವೆಸ್ಟ್ ಇಂಡೀಸ್​ನ ಕ್ರಿಸ್​ಗೇಲ್ 105 ಸಿಕ್ಸ್​ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರು. 103 ಸಿಕ್ಸರ್​ ಬಾರಿಸಿರೋ ನ್ಯೂಜಿಲೆಂಡ್​ನ ಮಾರ್ಟಿನ್ ಗಪ್ಟಿಲ್ 2ನೇ ಪ್ಲೇಸ್​ನಲ್ಲಿದ್ದರು. ಮೊದಲ ಮ್ಯಾಚ್​ನಲ್ಲಿ 2 ಸಿಕ್ಸರ್ ಬಾರಿಸಿದ್ದ ರೋಹಿತ್ ಶರ್ಮಾ 2ನೇ ಸ್ಥಾನಕ್ಕೆ ಜಿಗಿದಿದ್ದರು. ಈ ಮ್ಯಾಚ್​ನಲ್ಲಿ 2 ಸಿಕ್ಸ್ ಬಾರಿಸುತ್ತಿದ್ದಂತೆ ಸಿಕ್ಸರ್ ಕಿಂಗ್ ಪಟ್ಟ ಅಲಂಕರಿಸಿದರು. ಒಟ್ಟು 107 ಸಿಕ್ಸರ್​ ಗಳೊಂದಿಗೆ ಟಿ20ಐನಲ್ಲಿ ರೋಹಿತ್​  ಶರ್ಮಾ ಅತೀ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೆ ಬಂದಂತಾಗಿದೆ.
ಇನ್ನು ರೋಹಿತ್ ಶರ್ಮಾ 51 ಬಾಲ್​ಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ 67 ರನ್​ ಗಳಿಸಿ ಥಾಮಸ್​ಗೆ ವಿಕೆಟ್​​ ಒಪ್ಪಿಸಿದ್ರು.

ವಿರಾಟ್​ ಕೊಹ್ಲಿ ದಾಖಲೆ ಬ್ರೇಕ್​ ಮಾಡಿದ ರೋಹಿತ್ ಶರ್ಮಾ..!

ಸಚಿನ್, ಲಾರಾ ರೆಕಾರ್ಡ್ ಬ್ರೇಕ್​ ಮಾಡಿದ ಕ್ಯಾಪ್ಟನ್ ಕೊಹ್ಲಿ..!

0

ಟೀಮ್ ಇಂಡಿಯಾದ ನಾಯಕ, ವಿಶ್ವದ ನಂಬರ್ 1 ಬ್ಯಾಟ್ಸ್​ಮನ್ ವಿರಾಟ್​ ಕೊಹ್ಲಿ ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಮತ್ತು ವೆಸ್ಟ್ಇಂಡೀಸ್​ನ ಬ್ರಿಯಾನ್ ಲಾರಾ ಅವರ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಇತ್ತೀಚೆಗೆಷ್ಟೇ ಒಡಿಐನಲ್ಲಿ ಅತೀವೇಗವಾಗಿ 11 ಸಾವಿರ ರನ್ ಗಳಿಸಿದ ಬ್ಯಾಟ್ಸ್​ಮನ್​ ಅನ್ನೋ ಕೀರ್ತಿಗೆ ಭಾಜನರಾಗಿದ್ದ ರನ್​​ಮಷಿನ್ ಇಂದು ಅತೀ ವೇಗವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 20 ಸಾವಿರ ರನ್​ ಗಡಿ ದಾಟಿದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಸಚಿನ್ ಹಾಗೂ ಲಾರಾ ರೆಕಾರ್ಡ್ ಉಡೀಸ್ ಮಾಡಿದ್ದಾರೆ.
ಮ್ಯಾಂಚೆಸ್ಟರ್​ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮ್ಯಾಚ್​ನಲ್ಲಿ ಕೊಹ್ಲಿ ಈ ದಾಖಲೆ ನಿರ್ಮಿಸಿದ್ದಾರೆ.
ಇದುವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 77 ಟೆಸ್ಟ್​​ ಪಂದ್ಯಗಳನ್ನಾಡಿರುವ ವಿರಾಟ್​​, 25 ಶತಕ ಹಾಗೂ 20 ಅರ್ಧಶತಕಗಳ ನೆರವಿನಿಂದ 6613 ರನ್​, 232 ಏಕದಿನ ಪಂದ್ಯಗಳಲ್ಲಿ 41 ಶತಕ ಹಾಗೂ 53 ಹಾಫ್​ಸೆಂಚುರಿ ಸಹಿತ 11,087 ರನ್​, 67 ಟಿ-ಟ್ವೆಂಟಿ ಮ್ಯಾಚ್​ಗಳಲ್ಲಿ 20 ಅರ್ಧಶತಕದೊಂದಿಗೆ 2,263 ರನ್ ​ಗಳಿಸಿದ್ದರು. ಒಟ್ಟಾರೆ ಮೂರು ಫಾರ್ಮೇಟ್​ಗಳಿಂದ 20 ಸಾವಿರ ರನ್​ ಗಡಿದಾಟಲು ಕೊಹ್ಲಿಗೆ 37ರನ್​​ಗಳ ಅವಶ್ಯಕತೆ ಇತ್ತು. ಈ ಮ್ಯಾಚ್​ನಲ್ಲಿ ಕೊಹ್ಲಿ ಅದನ್ನು ಸಾಧಿಸಿದ್ದಾರೆ.
ಅತಿವೇಗವಾಗಿ ಇಂಟರ್​ನ್ಯಾಷನಲ್ ಕ್ರಿಕೆಟ್​​ನಲ್ಲಿ 20 ಸಾವಿರ ರನ್​ ಗಳಿಸಿದ ಆಟಗಾರ ಅನ್ನೋ ಶ್ರೇಯಕ್ಕೆ ಪಾತ್ರರಾಗುವುದಲ್ಲದೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 20 ಸಾವಿರ ರನ್​ ಸಿಡಿಸಿದ ವಿಶ್ವದ 12ನೇ ಹಾಗೂ ಭಾರತದ 3ನೇ ಬ್ಯಾಟ್ಸ್​ಮನ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಟೀಮ್​ಇಂಡಿಯಾ ಪರ ಕೊಹ್ಲಿಗೂ ಮೊದಲು ಮಾಸ್ಟರ್​ ಬ್ಲಾಸ್ಟರ್​​ ಸಚಿನ್​ ತೆಂಡೂಲ್ಕರ್​​, ರಾಹುಲ್​ ದ್ರಾವಿಡ್​ ಮಾತ್ರ ಈ ಸಾಧನೆ ಮಾಡಿದ್ದಾರೆ.
ಸಚಿನ್ ಮತ್ತು ಲಾರಾ 20 ಸಾವಿರ ರನ್​ಗಳಿಕೆಗೆ 453 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್​ 468 ಇನ್ನಿಂಗ್ಸ್​ಗಳಲ್ಲಿ ಈ ಮೈಲುಗಲ್ಲು ಸ್ಥಾಪಿಸಿದ್ದರು. ಕೊಹ್ಲಿ ಕೇವಲ 417 ಇನ್ನಿಂಗ್ಸ್ ಗಳಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ. 

ವರ್ಲ್ಡ್​​ಕಪ್​​ನಲ್ಲಿ ಭಾಗವಹಿಸೋ ಟೀಮ್​ಗಳೆಷ್ಟು? ಯಾವತ್ತು ಯಾವ ಮ್ಯಾಚು? ಯಾವ ಟೀಮ್​ನಲ್ಲಿ ಯಾರಿದ್ದಾರೆ?

0

ಇಂಗ್ಲೆಂಡ್ ಮತ್ತು ವೇಲ್ಸ್​ನಲ್ಲಿ ನಡೆಯಲಿರುವ ವರ್ಲ್ಡ್​ಕಪ್​ಗೆ ದಿನಗಣನೆ ಆರಂಭವಾಗಿದೆ. ಮೊನ್ನೆಯಷ್ಟೇ 51 ದಿನಗಳ ಐಪಿಎಲ್​ ಹಬ್ಬ ಮುಗಿದಿದೆ. ಇನ್ನು 15 ದಿನಗಳಲ್ಲಿ ವರ್ಲ್ಡ್​​ಕಪ್​​​ ಸಂಭ್ರಮ ಶುರುವಾಗುತ್ತಿದೆ. ಮೇ.30ರಿಂದ ಜುಲೈ 14ರವರೆಗೆ ವರ್ಲ್ಡ್​ಕಪ್ ಟೂರ್ನಿ ನಡೆಯುತ್ತೆ. ವಿಶ್ವ ಕ್ರಿಕೆಟ್​ನ 10 ಟೀಮ್​ಗಳು ವಿಶ್ವಕಪ್ ಎತ್ತಿ ಹಿಡಿಯಲು ಕ್ರಿಕೆಟ್ ಕಣದಲ್ಲಿ ಸೆಣೆಸಲಿವೆ.
ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್​ ಇಂಡೀಸ್​ ಮತ್ತು ಅಫ್ಘಾನಿಸ್ತಾನ ತಂಡಗಳು ಈ ಬಾರಿ ವರ್ಲ್ಡ್​ಕಪ್​ನಲ್ಲಿ ಆಡಲಿವೆ. ಮೇ.30ರಂದು ಉದ್ಘಾಟನಾ ಮ್ಯಾಚ್​​ ಮೇ.30ರಂದು ನಡೆಯಲಿದ್ದು, ಉದ್ಘಾಟನಾ ಮ್ಯಾಚ್​ನಲ್ಲಿ ಇಂಗ್ಲೆಂಡ್​ ಹಾಗೂ ದಕ್ಷಿಣ ಆಫ್ರಿಕಾ ಸೆಣೆಸಲಿವೆ.
ಅಭ್ಯಾಸ ಪಂದ್ಯಗಳ ವೇಳಾಪಟ್ಟಿ
ಮೇ.24 – ಪಾಕಿಸ್ತಾನ VS ಅಫ್ಘಾನಿಸ್ತಾನ (ಮಧ್ಯಾಹ್ನ 3 ಗಂಟೆಗೆ)
ಮೇ.24 – ಶ್ರೀಲಂಕಾ VS ದ.ಆಫ್ರಿಕಾ (ಮಧ್ಯಾಹ್ನ 3 ಗಂಟೆಗೆ)
ಮೇ.25 – ಇಂಗ್ಲೆಂಡ್​ VS ಆಸ್ಟ್ರೇಲಿಯಾ (ಮಧ್ಯಾಹ್ನ 3 ಗಂಟೆಗೆ)
ಮೇ.25 – ಭಾರತ VS ನ್ಯೂಜಿಲೆಂಡ್​ (ಮಧ್ಯಾಹ್ನ 3 ಗಂಟೆಗೆ)
ಮೇ.26 – ದ.ಆಫ್ರಿಕಾ VS ವೆಸ್ಟ್​ ಇಂಡೀಸ್​ (ಮಧ್ಯಾಹ್ನ 3 ಗಂಟೆಗೆ)
ಮೇ.26 : ಪಾಕಿಸ್ತಾನ VS ಬಾಂಗ್ಲಾದೇಶ (ಮಧ್ಯಾಹ್ನ 3 ಗಂಟೆಗೆ)
ಮೇ.27 : ಆಸ್ಟ್ರೇಲಿಯಾ VS ಶ್ರೀಲಂಕಾ (ಮಧ್ಯಾಹ್ನ 3 ಗಂಟೆಗೆ)

ಮೇ.27 ಅಫ್ಘಾನಿಸ್ತಾನ್ VS ಇಂಗ್ಲೆಂಡ್​ (ಮಧ್ಯಾಹ್ನ 3ಗಂಟೆಗೆ)

ಮೇ.28 : ವೆಸ್ಟ್​ ಇಂಡೀಸ್​ VS ನ್ಯೂಜಿಲೆಂಡ್ (ಮಧ್ಯಾಹ್ನ 3 ಗಂಟೆಗೆ)
ಮೇ 28 : ಬಾಂಗ್ಲಾದೇಶ VS ಭಾರತ (ಮಧ್ಯಾಹ್ನ 3 ಗಂಟೆಗೆ)

ವರ್ಲ್ಡ್​ಕಪ್​ 2019 ವೇಳಾಪಟ್ಟಿ
ಮೇ.30 : ಇಂಗ್ಲೆಂಡ್ VS ದ.ಆಫ್ರಿಕಾ ( ಮಧ್ಯಾಹ್ನ 3 ಗಂಟೆಗೆ)
ಮೇ.31 : ವೆಸ್ಟ್​​ ಇಂಡೀಸ್​ VS ಪಾಕಿಸ್ತಾನ ( ಮಧ್ಯಾಹ್ನ 3 ಗಂಟೆಗೆ)
ಜೂ.01 : ನ್ಯೂಜಿಲೆಂಡ್​​ VS ಶ್ರೀಲಂಕಾ ( ಮಧ್ಯಾಹ್ನ 3 ಗಂಟೆಗೆ)
ಜೂ.01 : ಅಫ್ಘಾನಿಸ್ತಾನ VS ಆಸ್ಟ್ರೇಲಿಯಾ (ಸಂಜೆ 6 ಗಂಟೆಗೆ)
ಜೂ.02 : ದ.ಆಫ್ರಿಕಾ VS ಬಾಂಗ್ಲಾದೇಶ (ಮಧ್ಯಾಹ್ನ 3 ಗಂಟೆಗೆ)
ಜೂ. 03 : ಇಂಗ್ಲೆಂಡ್ vs ಪಾಕಿಸ್ತಾನ ( ಮಧ್ಯಾಹ್ನ 3 ಗಂಟೆಗೆ)
ಜೂ. 04 : ಅಫ್ಘಾನಿಸ್ತಾನ vs ಶ್ರೀಲಂಕಾ (ಮಧ್ಯಾಹ್ನ 3 ಗಂಟೆಗೆ)
ಜೂ. 05 : ದ. ಆಫ್ರಿಕಾ vs ಭಾರತ (ಮಧ್ಯಾಹ್ನ 3 ಗಂಟೆಗೆ)
ಜೂ. 05 : ಬಾಂಗ್ಲಾದೇಶ vs ನ್ಯೂಜಿಲೆಂಡ್ ( ಸಂಜೆ 6 ಗಂಟೆಗೆ)
ಜೂ. 06 : ಆಸ್ಟ್ರೇಲಿಯಾ vs ವೆಸ್ಟ್​ ಇಂಡೀಸ್ (ಮಧ್ಯಾಹ್ನ 3 ಗಂಟೆಗೆ)
ಜೂ. 07 : ಪಾಕಿಸ್ತಾನ vs ಶ್ರೀಲಂಕಾ (ಮಧ್ಯಾಹ್ನ 3 ಗಂಟೆಗೆ)
ಜೂ. 08 : ಇಂಗ್ಲೆಂಡ್ vs ಬಾಂಗ್ಲಾದೇಶ (ಮಧ್ಯಾಹ್ನ 3 ಗಂಟೆಗೆ)
ಜೂ. 08 : ಅಫ್ಘಾನಿಸ್ತಾನ vs ನ್ಯೂಜಿಲೆಂಡ್ (ಸಂಜೆ 6 ಗಂಟೆಗೆ)
ಜೂ. 09 : ಭಾರತ vs ಆಸ್ಟ್ರೇಲಿಯಾ (ಮಧ್ಯಾಹ್ನ 3 ಗಂಟೆಗೆ)
ಜೂ. 10 : ದ. ಆಫ್ರಿಕಾ vs ವೆಸ್ಟ್​ ಇಂಡೀಸ್ (ಮಧ್ಯಾಹ್ನ 3 ಗಂಟೆಗೆ)
ಜೂ. 11 : ಬಾಂಗ್ಲಾದೇಶ vs ಶ್ರೀಲಂಕಾ (ಮಧ್ಯಾಹ್ನ 3 ಗಂಟೆಗೆ)
ಜೂ. 12 : ಆಸ್ಟ್ರೇಲಿಯಾ vs ಪಾಕಿಸ್ತಾನ (ಮಧ್ಯಾಹ್ನ 3 ಗಂಟೆಗೆ)
ಜೂ. 13 : ಭಾರತ vs ನ್ಯೂಜಿಲೆಂಡ್ (ಮಧ್ಯಾಹ್ನ 3 ಗಂಟೆಗೆ)
ಜೂ. 14 : ಇಂಗ್ಲೆಂಡ್ vs ವೆಸ್ಟ್ ಇಂಡೀಸ್ (ಮಧ್ಯಾಹ್ನ 3 ಗಂಟೆಗೆ)
ಜೂ. 15 : ಶ್ರೀಲಂಕಾ vs ಆಸ್ಟ್ರೇಲಿಯಾ (ಮಧ್ಯಾಹ್ನ 3 ಗಂಟೆಗೆ)
ಜೂ. 15 : ದ. ಆಫ್ರಿಕಾ vs ಅಫ್ಘಾನಿಸ್ತಾನ (ಸಂಜೆ 6 ಗಂಟೆಗೆ)
ಜೂ. 16 : ಭಾರತ vs ಪಾಕಿಸ್ತಾನ (ಮಧ್ಯಾಹ್ನ 3 ಗಂಟೆಗೆ)
ಜೂ. 17 : ವೆಸ್ಟ್​ ಇಂಡೀಸ್ vs ಬಾಂಗ್ಲಾದೇಶ (ಮಧ್ಯಾಹ್ನ 3 ಗಂಟೆಗೆ)
ಜೂ. 18 : ಇಂಗ್ಲೆಂಡ್ vs ಅಫ್ಘಾನಿಸ್ತಾನ (ಮಧ್ಯಾಹ್ನ 3 ಗಂಟೆಗೆ)
ಜೂ. 19 : ನ್ಯೂಜಿಲೆಂಡ್ vs ದ. ಅಫ್ರಿಕಾ (ಮಧ್ಯಾಹ್ನ 3 ಗಂಟೆಗೆ)
ಜೂ. 20 : ಆಸ್ಟ್ರೇಲಿಯಾ vs ಬಾಂಗ್ಲಾದೇಶ (ಮಧ್ಯಾಹ್ನ 3 ಗಂಟೆಗೆ)
ಜೂ. 21 : ಇಂಗ್ಲೆಂಡ್ vs ಶ್ರೀಲಂಕಾ (ಮಧ್ಯಾಹ್ನ 3 ಗಂಟೆಗೆ)
ಜೂ. 22 : ಭಾರತ vs ಅಫ್ಘಾನಿಸ್ತಾನ (ಮಧ್ಯಾಹ್ನ 3 ಗಂಟೆಗೆ)
ಜೂ. 22 : ವೆಸ್ಟ್​ ಇಂಡೀಸ್ vs ನ್ಯೂಜಿಲೆಂಡ್ (ಸಂಜೆ 6 ಗಂಟೆಗೆ)
ಜೂ. 23: ಪಾಕಿಸ್ತಾನ vs ದ. ಆಫ್ರಿಕಾ (ಮಧ್ಯಾಹ್ನ 3 ಗಂಟೆಗೆ)
ಜೂ. 24: ಬಾಂಗ್ಲಾದೇಶ vs ಅಫ್ಘಾನಿಸ್ತಾನ (ಮಧ್ಯಾಹ್ನ 3 ಗಂಟೆಗೆ)
ಜೂ. 25 : ಇಂಗ್ಲೆಂಡ್ vs ಆಸ್ಟ್ರೇಲಿಯಾ (ಮಧ್ಯಾಹ್ನ 3 ಗಂಟೆಗೆ)
ಜೂ. 26 : ನ್ಯೂಜಿಲೆಂಡ್ vs ಪಾಕಿಸ್ತಾನ (ಮಧ್ಯಾಹ್ನ 3 ಗಂಟೆಗೆ)
ಜೂ. 27 : ವೆಸ್ಟ್​ ಇಂಡೀಸ್ vs ಭಾರತ (ಮಧ್ಯಾಹ್ನ 3 ಗಂಟೆಗೆ)
ಜೂ. 28 : ಶ್ರೀಲಂಕಾ vs ದ. ಆಫ್ರಿಕಾ (ಮಧ್ಯಾಹ್ನ 3 ಗಂಟೆಗೆ)
ಜೂ. 29 : ಪಾಕಿಸ್ತಾನ vs ಅಫ್ಘಾನಿಸ್ತಾನ (ಮಧ್ಯಾಹ್ನ 3 ಗಂಟೆಗೆ)
ಜೂ. 29 : ನ್ಯೂಜಿಲೆಂಡ್ vs ಆಸ್ಟ್ರೇಲಿಯಾ (ಸಂಜೆ 6 ಗಂಟೆಗೆ)
ಜೂ. 30 : ಇಂಗ್ಲೆಂಡ್ vs ಭಾರತ (ಮಧ್ಯಾಹ್ನ 3 ಗಂಟೆಗೆ)
ಜು. 01 : ಶ್ರೀಲಂಕಾ vs ವೆಸ್ಟ್ ಇಂಡೀಸ್ (ಮಧ್ಯಾಹ್ನ 3 ಗಂಟೆಗೆ)
ಜು. 02 : ಬಾಂಗ್ಲಾದೇಶ vs ಭಾರತ (ಮಧ್ಯಾಹ್ನ 3 ಗಂಟೆಗೆ)
ಜು. 03 : ಇಂಗ್ಲೆಂಡ್ vs ನ್ಯೂಜಿಲೆಂಡ್ (ಮಧ್ಯಾಹ್ನ 3 ಗಂಟೆಗೆ)
ಜು. 04 : ಅಫ್ಘಾನಿಸ್ತಾನ vs ವೆಸ್ಟ್​ ಇಂಡೀಸ್ (ಮಧ್ಯಾಹ್ನ 3 ಗಂಟೆಗೆ)
ಜು. 05 : ಪಾಕಿಸ್ತಾನ vs ಬಾಂಗ್ಲಾದೇಶ (ಮಧ್ಯಾಹ್ನ 3 ಗಂಟೆಗೆ)
ಜು. 06 : ಶ್ರೀಲಂಕಾ vs ಭಾರತ (ಮಧ್ಯಾಹ್ನ 3 ಗಂಟೆಗೆ)
ಜು. 06 : ಆಸ್ಟ್ರೇಲಿಯಾ vs ದ. ಅಫ್ರಿಕಾ (ಸಂಜೆ 6 ಗಂಟೆಗೆ)
ಜು. 09 : ಮೊದಲ ಸೆಮಿ ಫೈನಲ್ (ಮಧ್ಯಾಹ್ನ 3 ಗಂಟೆಗೆ)
ಜು. 11 : ಎರಡನೇ ಸೆಮಿ ಫೈನಲ್ (ಮಧ್ಯಾಹ್ನ 3 ಗಂಟೆಗೆ)
ಜು. 14 : ಫೈನಲ್​ (ಮಧ್ಯಾಹ್ನ 3 ಗಂಟೆಗೆ)
==
ತಂಡಗಳು
ಭಾರತ : ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ- ನಾಯಕ), ಶಿಖರ್ ಧವನ್, ಕೆ ಎಲ್ ರಾಹುಲ್, ಎಂ ಎಸ್ ಧೋನಿ, ದಿನೇಶ್ ಕಾರ್ತಿಕ್ , ವಿಜಯ್ ಶಂಕರ್ ,ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಕೇದರ್ ಜಾಧವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ , ಜಸ್​ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಯುಜುವೇಂದ್ರ ಚಾಹಲ್.
==
ನ್ಯೂಜಿಲೆಂಡ್​ : ಕೇನ್ ವಿಲಿಯಮ್ಸ್ (ನಾಯಕ) , ರಾಸ್ ಟೇಲರ್ , ಮಾರ್ಟಿನ್ ಗಪ್ಟಿಲ್ , ಕಾಲಿನ್ ಮುನ್ರೊ , ಮಿಚೆಲ್ ಸ್ಯಾಂಟನರ್, ಕಾಲಿನ್ ಡಿ ಗ್ರ್ಯಾಂಡ್​ಹೋಮ್, ಜೇಮ್ಸ್​​ ನೀಶಮ್ , ಟಾಮ್ ಲಾಥಮ್ , ಟಾಮ್ ಬ್ಲಂಡೆಲ್ , ಹೆನ್ರಿ ನಿಕೋಲ್ಸ್​​ , ಇಶ್ ಸೋಧಿ, ಲೂಕಿ ಫರ್ಗುಸನ್, ಟಿಮ್ ಸೌಧಿ , ಟ್ರೆಂಟ್ ಬೌಲ್ಟ್, ಮ್ಯಾಟ್ ಹೆನ್ರಿ
==
ಆಸ್ಟ್ರೇಲಿಯಾ : ಆ್ಯರೋನ್ ಫಿಂಚ್ (ನಾಯಕ), ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಉಸ್ಮನ್ ಖ್ವಾಜಾ, ಶಾನ್ ಮಾರ್ಶ್​​, ಗ್ಲೆನ್ ಮ್ಯಾಕ್ಸ್​ವೆಲ್​, ಮಾರ್ಕಸ್ ಸ್ಟಾಯಿನಿಸ್, ಅಲೆಕ್ಸ್​ ಕ್ಯಾರಿ ,ಪ್ಯಾಟ್ ಕಮಿನ್ಸ್​, ಮಿಚೆಲ್ ಸ್ಟಾರ್ಕ್​, ನೇಥನ್ ಲ್ಯಾನ್, ಆ್ಯಡಂ ಜಂಪಾ, ಜೇಸನ್ ಬೆಹ್ರೆನ್​​ಡಾರ್ಫ್​, ನೇಥನ್ ಕಲ್ಟರ್ ನೈಲ್ ಜ್ಯೋ ರಿಚರ್ಡಸನ್
==
ಬಾಂಗ್ಲಾದೇಶ : ಮುಶ್ರಫೆ ಮೊರ್ತಾಜ (ನಾಯಕ), ಶಕಿಬ್ ಅಲ್ ಹಸನ್ (ಉಪ- ನಾಯಕ), ತಮಿಮ್ ಇಖ್ಬಾಲ್ , ಸೌಮ್ಯಾ ಸರ್ಕಾರ್, ಸಬ್ಬರ್ ರೆಹ್ಮಾನ್, ಮುಷ್ಫೀಕರ್ ರಹೀಮ್​​, ಲಿಟನ್ ದಾಸ್, ಮೊಹಮ್ಮದ್ ಮಿಥುನ್, ಮೊಹಮ್ಮದುಲ್ಲ, ಮೆಹಿದಿ ಹಸನ್, ಮೊಹಮ್ಮದ್ ಸೈಫುದ್ದಿನ್, ಮೊಸದ್ದಿಕ್ ಹೊಸೈನ್, ಅಬು ಜಯೇದ್, ರುಬೆಲ್ ಹೊಸೈನ್. ಮುಸ್ತಫಿಜುರ್ ರೆಹ್ಮಾನ್
==
ಇಂಗ್ಲೆಂಡ್ ತಂಡ: ಇಯಾನ್ ಮಾರ್ಗನ್ (ನಾಯಕ), ಜೇಸನ್ ರಾಯ್, ಜೋ ರೂಟ್, ಅಲೆಕ್ಸ್​ ಹೇಲ್ಸ್​, ಜಾನಿ ಬೈರ್​ಸ್ಟೋ, ಜಾಸ್ ಬಟ್ಲರ್, ಮೊಯೀನ್ ಅಲಿ, ಬೆನ್ ಸ್ಟೋಕ್ಸ್​, ಟಾಮ್ ಕುರ್ರನ್ , ಜೋ ಡೆನ್ಲಿ, ಡೇವಿಡ್ ವಿಲ್ಲೆ, ಕ್ರಿಸ್ ವೋಕ್ಸ್​ ,ಲ್ಯಾಮ್ ಪ್ಲಂಕೆಟ್, ಆದಿಲ್ ರಶೀದ್, ಮಾರ್ಕ್​ ವುಡ್. ಜೆ. ಆರ್ಚರ್. 
==
ಶ್ರೀಲಂಕಾ : ದಿಮಿತ್ ಕರುಣರತ್ನೆ (ನಾಯಕ), ಅವಿಷ್ಕ ಫೆರ್ನಾಂಡೊ, ಲಹಿರು ತಿರುಮನ್ನೆ, ಕುಸಲ್ ಮೆಂಡಿಸ್, ಕುಸಲ್ ಪೆರೇರ್​, ಆ್ಯಂಜಲೋ ಮ್ಯಾಥ್ಯೂಸ್, ಧನಂಜಯ್ ಡಿ ಸಿಲ್ವಾ, ಜೀವನ್ ಮೆಂಡಿಸ್, ಮಿಲಿಂಡಾ ಸಿರಿವರ್ದನೆ ,ತಿಸಾರ ಪೆರೇರಾ,ಇಸುರು ಉದನಾ, ಸುರಂಗ ಲಕ್ಮಲ್ ,ನುವನ್ ಪ್ರದೀಪ್ ,ಜೆಫ್ರಿ ವಂದರ್ಸೆ, ಲಸಿತ್ ಮಲಿಂಗಾ
==

ದ. ಆಫ್ರಿಕಾ : ಫಾಫ್ ಡುಪ್ಲೆಸಿಸ್ (ನಾಯಕ) , ಆ್ಯಡಂ ಮರ್​​ಕ್ರಂ , ಕ್ವಿಂಟನ್ ಡಿಕಾಕ್ , ಹಶೀಮ್ ಆಮ್ಲಾ ,ರಸ್ಸಿ ವಾನ್ ಡೆರ್ ಡಸ್ಸೆನ್,ಡೇವಿಡ್ ಮಿಲ್ಲರ್, ಅಂಡಿಲ್ ಫೆಹ್ಲುಕ್ವೇವೊ, ಜೆಪಿ ಡುಮಿನಿ, ಡ್ವೇನಿ ಪ್ರೆಟೋರಿಯಸ್, ಡೇಲ್ ಸ್ಟೇನ್ , ಕಗಿಸೊ ರಬಾಡ, ಲುಂಗಿ ಎನ್​ಗಿಡಿ, ಆನ್ರಿಚ್ ನಾರ್ಟ್ಜೆ ಇಮ್ರಾನ್ ತಾಹಿರ್, ತಬ್ರೈಜ್ ಶಮ್ಸಿ
==
ಪಾಕಿಸ್ತಾನ : ಸರ್ಫರಾಜ್ ಅಹ್ಮದ್ (ನಾಯಕ), ಫಕರ್ ಜಮಾನ್, ಇಮಾಮ್ ಉಲ್ ಹಖ್, ಅಬಿದ್ ಅಲಿ , ಬಾಬರ್ ಅಜಾಮ್, ಶೋಯೆಬ್ ಮಲ್ಲಿಕ್ , ಮೊಹಮ್ಮದ್ ಹಫೀಜ್, ಹ್ಯಾರಿಸ್ ಸೊಹೈಲ್, ಶಬಾದ್ ಖಾನ್, ಇಮಾದ್ ವಾಸಿಮ್, ಫಹಿಮ್ ಅಶ್ರಫ್​, ಹಸನ್ ಅಲಿ, ಶಹೀನ್ ಶಾ ಆಫ್ರೀದಿ, ಜುನೈದ್ ಖಾನ್, ಮೊಹಮ್ಮದ್ ಹಸ್​​ನೈನ್

==
ಅಫ್ಗಾನಿಸ್ತಾನ : ಗುಲ್ಬದಿನ್ ನೈಬ್ (ನಾಯಕ) , ಅಸ್ಗರ್ ಅಫ್ಗನ್, ಹಶ್ಮತುಲ್ಲಾ ಶಾಹಿದಿ, ಹಜ್ರತುಲ್ಲಾ ಜಜಾಯ್ , ನಜೀಬುಲ್ಲಾ ಜದ್ರನ್, ನೂರ್ ಅಲಿ ಜದ್ರನ್ ,ರೆಹ್ಮತ್ ಶಾ, ಸಮಿಉಲ್ಲಾ ಶೆನ್ವರಿ, ಮೊಹಮ್ಮದ್ ನಬಿ , ಮೊಹಮ್ಮದ್ ಶೆಹ್ಜಾದ್, ಮುಜೀದ್ ಉರ್ ರೆಹ್ಮಾನ್, ದವ್ಲತ್ ಜದ್ರನ್ , ಹಮಿದ್ ಹಸನ್, ರಶೀದ್ ಖಾನ್, ಅಫ್ತಾಬ್ ಅಲಮ್
==

ವೆಸ್ಟ್​ ಇಂಡೀಸ್ : ಜೇಸನ್ ಹೋಲ್ಡರ್ (ನಾಯಕ) , ಶಿಮ್ರೋನ್ ಹೆಟ್ಮೇರ್ ,ಶಾಹ್ ಹೋಪ್ , ಡ್ಯಾರೆನ್ ಬ್ರಾವೋ, ಎವಿನ್ ಲೆವಿಸ್, ಫಾಬಿನ್ ಅಲೆನ್, ಕಾರ್ಲೊಸ್ ಬ್ರಾಥ್​​ವೈಟ್, ಕ್ರಿಸ್ ಗೇಲ್, ಆಂಡ್ರೋ ರಸೆಲ್, ನಿಕೋಲಸ್ ಪೂರನ್, ಒಶಾನೆ ಥೋಮಸ್ , ಕೀಮರ್ ರೋಚ್ , ಶನ್ನೂನ್ ಗ್ಯಾಬ್ರಿಯಲ್, ಶೆಲ್ಡನ್ ಕಟ್ರೆಲ್, ಆಶ್ಲೆ ನರ್ಸ್​

ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ..! ವಿಶ್ವಕಪ್ ನಲ್ಲಿ ನಮ್ದೇ ಹವಾ ಅಂತ ಸಾರಿದ ಕೊಹ್ಲಿ ಬಾಯ್ಸ್..!

0

ಬದ್ಧವೈರಿ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತೆ ಜಯಭೇರಿ ಬಾರಿಸಿದೆ. ಈ ಮೂಲಕ ವಿಶ್ವಕಪ್​​​​ ಟೂರ್ನಿಗಳಲ್ಲಿ 7ನೇ ಬಾರಿ ಪಾಕ್ ಮಣಿಸಿ ಅಜೇಯ ದಾಖಲೆ ಉಳಿಸಿಕೊಂಡಿದೆ. ಜೊತೆಗೆ ಚಾಂಪಿಯನ್ಸ್ ಟ್ರೋಫಿ ಫೈನಲ್​​​ನಲ್ಲಿ ಅನುಭವಿಸಿದ್ದ ಸೋಲಿಗೆ ಭರ್ಜರಿಯಾಗಿಯೇ ಸೇಡು ತೀರಿಸಿಕೊಂಡಿದೆ.
ಭಾರತ ಗೆದ್ದೇ ಗೆಲ್ಲುತ್ತೆ ಎಂದು ಸಮಸ್ತ ಭಾರತ ಸಾರಿ ಹೇಳುತ್ತಿತ್ತು. ವಿಶ್ವಕಪ್​​​ನಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಗೆಲುವಿನ ಅಜೇಯ ದಾಖಲೆ ಉಳಿಸಿಕೊಂಡಿದೆ. ವಿಶ್ವಕಪ್​​​​​​ನಲ್ಲಿ 7ನೇ ಬಾರಿಯೂ ಪಾಕಿಸ್ತಾನವನ್ನ ಸೋಲಿಸಿ ನಮ್ದೇ ಹವಾ ಅಂತಾ ಸಾರಿ ಹೇಳಿದೆ.
ಪಾಕಿಸ್ತಾನ ನಾಯಕ ಸರ್ಫರಾಜ್​ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಷ್ಟೇ ಬಂತು. ಆಮೇಲಿಂದ ಟೀಮ್ ಇಂಡಿಯಾದ್ದೇ ಗುಡುಗು-ಸಿಡಿಲು-ಮಿಂಚು. ಮಳೆರಾಯನ ಆತಂಕದ ನಡುವೆಯೂ ಬ್ಲೂ ಬಾಯ್ಸ್​​​​​​, ಬಿಂದಾಸ್ ಬ್ಯಾಟಿಂಗ್ ಮಾಡಿದ್ರು. ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್​​.ರಾಹುಲ್ ಜಬರ್ದಸ್ತ್​ ಜೊತೆಯಾಟವಾಡಿದ್ರು. ಮೊದಲ ವಿಕೆಟ್​​​ಗೆ 136 ರನ್​​ಗಳು ಹರಿದುಬಂದ್ವು.
ಕೆ.ಎಲ್​​.ರಾಹುಲ್ ತಾಳ್ಮೆಯ 57 ರನ್ ಗಳಿಸಿ ಔಟಾದ್ರು.
ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 85 ಎಸೆತಗಳಲ್ಲಿ ಶತಕ ಬಾರಿಸಿದ್ರು. ಇದರೊಂದಿಗೆ ಒಂಡೇಯಲ್ಲಿ 24ನೇ, ಈ ವಿಶ್ವಕಪ್​​​​ನಲ್ಲಿ 2ನೇ ಸೆಂಚುರಿ ಸಿಡಿಸಿದ್ರು. ಅಂತಿಮವಾಗಿ 140 ರನ್ ಗಳಿಸಿ ಔಟಾದ್ರು.
ಕ್ಯಾಪ್ಟನ್ ವಿರಾಟ್ ಕೊಹ್ಲಿ ರಿಸ್ಕಿಲ್ಲದೇ ಬ್ಯಾಟಿಂಗ್ ಮಾಡಿ 51ನೇ ಹಾಫ್ ಸೆಂಚುರಿ ಸಿಡಿಸಿದ್ರು. ಇದೇ ವೇಳೆ ಒಂಡೇ ಕ್ರಿಕೆಟ್​​ನಲ್ಲಿ 11 ಸಾವಿರ ರನ್ ಗಳಿಸಿದ್ರು. ಕೇವಲ 222 ಇನ್ನಿಂಗ್ಸ್​​​​ಗಳಲ್ಲಿ ಈ ಸಾಧನೆ ಮಾಡಿ ವಿಶ್ವದಾಖಲೆ ಬರೆದ್ರು.
ಹಾರ್ದಿಕ್ ಪಾಂಡ್ಯ ಶಾರ್ಟ್ & ಸ್ವೀಟಾಗಿ 26 ರನ್ ಗಳಿಸಿದ್ರೆ, ಉಳಿದವರು ಅಲ್ಪಸ್ವಲ್ಪ ಕಾಣಿಕೆ ನೀಡಿ ಟೀಮ್ ಇಂಡಿಯಾ ಬೃಹತ್ ಮೊತ್ತ ಪೇರಿಸಲು ನೆರವಾದ್ರು. ಭಾರತ 50 ಓವರ್​​​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 336 ರನ್ ಜಮಾಯಿಸ್ತು.
ಚಾಲೆಂಜಿಂಗ್ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನಕ್ಕೆ ವಿಜಯ್ ಶಂಕರ್​​​ ಮೊದಲ ಶಾಕ್ ನೀಡಿದ್ರು. ಇಮಾಮ್ ಉಲ್ ಹಕ್ ಕೇವಲ 7 ರನ್ ಗಳಿಸಿ ಔಟಾದ್ರು. ಆರಂಭಿಕ ಶಾಕ್ ನಂತರ ಪಾಕಿಸ್ತಾನಕ್ಕೆ ಫಖರ್ ಜಮಾನ್ ( 62)ಹಾಗೂ ಬಾಬರ್ ಅಜಂ (48) ಚೇತರಿಕೆ ನೀಡಿದ್ರು.ಆದರೆ ತಮ್ಮ ತಂಡವನ್ನು ಗೆಲುವಿನತ್ತ ಕೊಂಡಯ್ಯಲು ಆಗಲಿಲ್ಲ. ಮಳೆ ಅಡ್ಡಿಪಡಿಸಿದ್ರಿಂದ ವಾಸಿಂ 46 ,ರನ್ ಗಳಿಸಿ ಅಜೇಯರಾಗಿ ಉಳಿದ್ರು.
ಮಳೆಯಿಂದಾಗಿ 40 ಓವರ್ ಗಳಿಗೆ ಪಾಕ್ 302 ರನ್ ಮಾಡಬೇಕೆಂದು ಗುರಿ ನೀಡಲಾಯ್ತು. ಪಾಕ್ 40 ಓವರ್ ಗೆ 6 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು. ಅಂತಿಮವಾಗಿ ಡಿಎಲ್ ಎಸ್ ಮೆತೆಡ್ ಅನುಸಾರ ಭಾರತ 89 ರನ್ ಗಳಿಂದ ಗೆದ್ದು ಬೀಗಿತು.

Popular posts