Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Sunday, September 22, 2019

ಧೋನಿ ಮೊದಲ ಹೆಜ್ಜೆ ಇಟ್ಟು ಇಂದಿಗೆ 12 ವರ್ಷ..!

0

ಮಹೇಂದ್ರ ಸಿಂಗ್ ಧೋನಿ… ಟೀಮ್ ಇಂಡಿಯಾ ಕಂಡ ಯಶಸ್ವಿ ನಾಯಕ..! ವಿಶ್ವ ಕ್ರಿಕೆಟ್ ಕಂಡ ಅದ್ಭುತ ಕ್ರಿಕೆಟಿಗ. ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ಧೋನಿ ವಿಶ್ವ ಸಾಮ್ರಾಟನಾಗಿ ಮೆರೆದಿದ್ದು ಕೂಡ ಈಗ ಇತಿಹಾಸ..! ಭಾರತೀಯ ಕ್ರಿಕೆಟಿಗೆ ಹೊಸ ಭಾಷ್ಯ ಬರೆದ ಮಾಹಿ ಆ ಇತಿಹಾಸ ಸೃಷ್ಟಿಸಲು ಇಟ್ಟ ಮೊದಲ ಹೆಜ್ಜೆಗಿಂದು 12 ವರ್ಷ..!
ಹೌದು, 2007ರ ಒಡಿಐ ವಿಶ್ವಕಪ್​ನಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದ ಭಾರತ ಮುಗ್ಗರಿಸಿತ್ತು. ಬಳಿಕ ನಡೆದ ಟಿ20 ವರ್ಲ್ಡ್​ಕಪ್​​​ನಿಂದ ದ್ರಾವಿಡ್ ಹೊರಗುಳಿದಿದ್ರು. ಅಷ್ಟೇ ಅಲ್ಲದೆ ಸಚಿನ್ ತೆಂಡೂಲ್ಕರ್, ಸೌರವ್​ ಗಂಗೂಲಿ ಕೂಡ ತಂಡದಲ್ಲಿರಲಿಲ್ಲ. ಮಹೇಂದ್ರ ಸಿಂಗ್ ಧೋನಿ ಯುವ ಕ್ರಿಕೆಟಿಗನ ನಾಯಕತ್ವದಲ್ಲಿ ಟೀಮ್ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್ ಆಡಲು ಸೌತ್ ಆಫ್ರಿಕಾಕ್ಕೆ ಹೋಯ್ತು.
ಧೋನಿ ನಾಯಕತ್ವದ ತಂಡ ಯುವಕರು ಮತ್ತು ಅನುಭವಿಗಳಿಂದ ಕೂಡಿತ್ತು. ಯುವರಾಜ್ ಸಿಂಗ್ ಉಪ ನಾಯಕನಾಗಿದ್ರು. ಗೌತಮ್ ಗಂಬೀರ್, ವೀರೇಂದ್ರ ಸೇಹ್ವಾಗ್​, ರೋಹಿತ್ ಶರ್ಮಾ, ಕನ್ನಡಿಗ ರಾಬಿನ್ ಉತ್ತಪ್ಪ, ದಿನೇಶ್ ಕಾರ್ತಿಕ್, ಅಜಿತ್ ಅಗರ್​ಕರ್, ಹರ್ಭಜನ್ ಸಿಂಗ್, ಜೋಗಿಂದರ್ ಶರ್ಮಾ, ಇರ್ಫಾನ್ ಪಠಾಣ್, ಯೂಸಫ್ ಪಠಾಣ್, ಪಿಯೂಷ್ ಚಾವ್ಲಾ, ಆರ್​.ಪಿ ಸಿಂಗ್, ಎಸ್​.ಶ್ರೀಶಾಂತ್ ಅವರನ್ನೊಳಗೊಂಡ ಪ್ರಬಲ ತಂಡವೇ ದಕ್ಷಿಣ ಆಫ್ರಿಕಾಕ್ಕೆ ತೆರಳಿತ್ತು. ಆದರೆ, ಒಡಿಐ ವಿಶ್ವಕಪ್​ನಲ್ಲೇ ಮುಗ್ಗರಿಸಿದ್ದ ಭಾರತ ಹೊಸದಾಗಿ ಆರಂಭವಾದ ಟಿ20 ಫಾರ್ಮೆಟ್​ಗೆ, ಅದೂ ದಕ್ಷಿಣ ಆಫ್ರಿಕಾ ಪಿಚ್​ಗಳಲ್ಲಿ ಹೊಂದಿಕೊಳ್ಳುತ್ತೆ ಅಂತ ಯಾರೂ ಊಹಿಸಿರಲಿಲ್ಲ. ಭಾರತ ವಿಶ್ವಕಪ್ ಗೆಲ್ಲುತ್ತೆ ಅಂತ ಯಾರೂ ಕೂಡ ನಿರೀಕ್ಷೆ ಮಾಡಿರ್ಲಿಲ್ಲ. ಆದರೆ, ಧೋನಿ & ಟೀಮ್ ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಠಿ ಮಾಡಿತ್ತು. ಆ ಇತಿಹಾಸ ಸೃಷ್ಠಿಸಲು ನಾಯಕನಾಗಿ ಧೋನಿ ಇಟ್ಟ ಮೊದಲ ಹೆಜ್ಜೆಗಿಂದ 12 ವರ್ಷ..!
2007ರ ಸೆಪ್ಟೆಂಬರ್ 14ರಂದು ಭಾರತ ಆ ಟೂರ್ನಿಯಲ್ಲಿ ಮೊದಲ ಮ್ಯಾಚ್ ಆಡಿತ್ತು. ಧೋನಿ ನಾಯಕತ್ವದ ಮೊದಲ ಪಂದ್ಯ ಕೂಡ ಅದಾಗಿತ್ತು. ಡರ್ಬನ್​ನ ಕಿಂಗ್ಸ್​ಮೇಡ್ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ಭಾರತಕ್ಕೆ ಮೊದಲು ಬ್ಯಾಟಿಂಗ್​ ಮಾಡುವಂತೆ ಆಹ್ವಾನಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕನ್ನಡಿಗ ರಾಬಿನ್ ಉತ್ತಪ್ಪ (50) ಮತ್ತು ಮೊದಲ ಬಾರಿ ತಂಡವನ್ನು ಮುನ್ನಡೆಸಿದ್ದ ನಾಯಕ ಧೋನಿ (33) ಆಟದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳ್ಕೊಂಡು 141ರನ್ ಮಾಡಿತ್ತು. ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನ್ ಕೂಡ 20 ಓವರ್​ಗಳಲ್ಲಿ 141 ರನ್ ಮಾಡಿದ್ದರಿಂದ ಮ್ಯಾಚ್​ ಟೈ ಆಯ್ತು. ಬಳಿಕ ಬಾಲ್​ ಔಟ್​ನಲ್ಲಿ ಭಾರತ ಗೆದ್ದುಬೀಗಿತು. ಧೋನಿ ನಾಯಕತ್ವದ ಚೊಚ್ಚಲ ಪಂದ್ಯದ ಗೆಲುವು ಅದಾಗಿತ್ತು. ಅಷ್ಟೇ ಅಲ್ಲದೆ ಭಾರತ ಟಿ20 ವಿಶ್ವಕಪ್ ಗೆಲ್ಲಲು ಇಟ್ಟ ಮೊದಲ ಗೆಲುವಿನ ಹೆಜ್ಜೆಯೂ ಅದೇ..! ನಂತರ ಟೂರ್ನಿಯುದ್ದಕ್ಕೂ ಉತ್ತಮ ಆಟವಾಡಿದ ಧೋನಿ ಟೀಮ್ ಸೆಪ್ಟೆಂಬರ್ 24ರಂದು ಜೊಹಾನ್ಸ್​ ಬರ್ಗ್​​ನದಲ್ಲಿ ನಡೆದ ಫೈನಲ್​ನಲ್ಲಿಯೂ ಅದೇ ಪಾಕಿಸ್ತಾನ ತಂಡವನ್ನು ಬಗ್ಗು ಬಡಿದು ಚೊಚ್ಚಲ ಟಿ20 ವರ್ಲ್ಡ್​​ಕಪ್​ಗೆ ಮುತ್ತಿಕ್ಕಿತು. ಅಲ್ಲಿಂದ ಶುರುವಾಗಿದ್ದು ವಿಶ್ವಕ್ರಿಕೆಟ್​ನಲ್ಲಿ ಯುವ ನಾಯಕ ಧೋನಿ ಶಕೆ ಆರಂಭವಾಯ್ತು..!

ಫಿರೋಜ್​ ಷಾ ಕೋಟ್ಲಾ ಸ್ಟೇಡಿಯಂಗೆ ಜೇಟ್ಲಿ, ಪ್ರೇಕ್ಷಕರ ಗ್ಯಾಲರಿಗೆ ಕೊಹ್ಲಿ ಹೆಸರು..!

0

ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂ ಹೆಸರು ಬದಲಾಗಿದೆ. ಕೋಟ್ಲಾ ಮೈದಾನಕ್ಕೆ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿಯವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ.
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ಜವಾಹಾರ್​​ಲಾಲ್​ ನೆಹರೂ ಕ್ರೀಡಾಂಗಣದ ವೇಟ್​​ಲಿಫ್ಟಿಂಗ್ ಹಾಲ್​ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫಿರೋಜ್ ಷಾ ಕೋಟ್ಲಾಗೆ ಅರುಣ್ ಜೇಟ್ಲಿ ಅವರ ಹೆಸರನ್ನಿಡಲಾಯಿತು. ಅದೇ ವೇಳೆ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗೆ ಟೀಮ್ ಇಂಡಿಯಾ ಕ್ಯಾಪ್ಟನ್ , ರನ್ ಮಷಿನ್ ವಿರಾಟ್​ ಕೊಹ್ಲಿ ಹೆಸರನ್ನಿಟ್ಟು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ, ಕ್ರೀಡಾ ಸಚಿವ ಕಿರಣ್ ರಿಜಿಜು ಮತ್ತಿತರರು ಉಪಸ್ಥಿತರಿದ್ದರು.

ರಾಹುಲ್​ -ಅನುಷ್ಕಾ ವಿರುದ್ಧ ಕಮೆಂಟ್ ಮಾಡಿದವನಿಗೆ ಜಾಡಿಸಿದ ಜಾಕ್ಸನ್..!

0

ಸೋಶಿಯಲ್ ಮೀಡಿಯಾದಲ್ಲಿ ಒಂದಿಷ್ಟು ಮಂದಿ ಇರ್ತಾರೆ…ತಾವು ಏನ್ ಪೋಸ್ಟ್ ಮಾಡ್ತಿದ್ದೀವಿ, ತಾವೇನು ಕಮೆಂಟ್ ಮಾಡ್ತಿದ್ದೀವಿ ಅನ್ನೋ ಪರಿಜ್ಞಾನ ಇರಲ್ಲ. ಒಟ್ರಾಶಿ ಮನಬಂದಂತೆ ಗೀಚೋರೇ ಹೆಚ್ಚು..! ಹೀಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ವಿರುದ್ಧ ನೆಟ್ಟಿಗನೊಬ್ಬ ಕಮೆಂಟ್ ಮಾಡಿದ್ದು, ಆ ಕಮೆಂಟ್​ಗೆ ಸೌರಾಷ್ಟ್ರ ಬ್ಯಾಟ್ಸ್​ಮನ್ ಶೆಲ್ಡನ್ ಜಾಕ್ಸನ್ ಜಾಡಿಸಿದ್ದಾರೆ..!
ರಣಜಿ ಟ್ರೋಫಿ ಫೈನಲ್​ನಲ್ಲಿ ಆಡಿದ್ರೂ ಕೂಡ ಸೌರಾಷ್ಟ್ರದ ಯಾವ್ದೇ ಆಟಗಾರನನ್ನು ಭಾರತ ಎ ಸೀರಿಸ್​ಗೆ ಆಯ್ಕೆ ಮಾಡ್ಲಿಲ್ಲ ಯಾಕೆ ಅಂತ ಬಿಸಿಸಿಐಯನ್ನು ಪ್ರಶ್ನಿಸಿ ಜಾಕ್ಸನ್ ಟ್ವೀಟ್ ಮಾಡಿದ್ರು. ಅಷ್ಟೇ ಅಲ್ದೆ ರಣಜಿಯಲ್ಲಿ ಸ್ಕೋರ್ ಮಾಡಿರೋ, ವಿಕೆಟ್​ ಪಡೆದವರ ಪಟ್ಟಿಯನ್ನು ಟ್ವಿಟರ್​ನಲ್ಲಿ ಶೇರ್ ಮಾಡಿ. ಆಯ್ಕೆಗೆ ಸೌರಾಷ್ಟ್ರ ಆಟಗಾರರತ್ತವೂ ಗಮನ ಹರಿಸುವಂತೆ ಹೇಳಿದ್ದರು.
ಈ ಟ್ವೀಟ್​ ಗೆ ಕಮೆಂಟ್ ಮಾಡಿದ್ದ ಸೂರ್ಯ ಅಡ್ವೋಕೇಟ್ ಎಂಬಾತ ‘ನೀವು ಕೆ.ಎಲ್ ರಾಹುಲ್ ಅವರಂತೆ ಅನುಷ್ಕಾ ಶರ್ಮಾ ಜೊತೆ ಸ್ನೇಹ ಬೆಳೆಸಿ ಅಂತ ಕಮೆಂಟ್ ಮಾಡಿದ್ದಾನೆ.. ಈ ಕಮೆಂಟ್​ ನೋಡಿದ ಜಾಕ್ಸನ್, ” ಸೂರ್ಯ, ನೀವು ವರ್ತಿಸುವುದನ್ನು ಮೊದಲು ಕಲಿಯಿರಿ. ಏನೇನೋ ಟ್ವೀಟ್ ಮಾಡೋದಲ್ಲ.. ಯೋಚ್ನೆ ಮಾಡಿ. ನಿಮ್ಮ ಟ್ವೀಟ್ ಸಂಬಂಧವೇ ಇಲ್ಲದ ಅನುಷ್ಕಾ ಮತ್ತು ರಾಹುಲ್​ಗೆ ಅಪಮಾನ ಮಾಡುವಂತಿದೆ. ಕ್ರಿಕೆಟ್ ವಿಷ್ಯಾದಲ್ಲಿ ಫ್ಯಾಮಿಲಿಯನ್ನು ತರ್ಬೇಡಿ” ಅಂತ ಬುದ್ಧಿಮಾತು ಹೇಳಿದ್ದಾರೆ.

 

ಟೆಸ್ಟ್​​ನಲ್ಲೂ ಹಿಟ್​ಮ್ಯಾನ್​ ರೋಹಿತ್​ ಓಪನರ್..?

0

ನವದೆಹಲಿ : ಆರಂಭಿಕ ಆಟಗಾರನಾಗಿ ಟಿ20, ಒಡಿಐನಲ್ಲಿ ಕ್ಲಿಕ್ ಆಗಿರುವ ಹಿಟ್​​ಮ್ಯಾನ್ ರೋಹಿತ್ ಶರ್ಮಾ ಟೆಸ್ಟ್​ನಲ್ಲೂ ಓಪನರ್ ಆಗಿ ಕಣಕ್ಕಿಳಿಯುವ ಸಾದ್ಯತೆ ಹೆಚ್ಚಿದೆ.
ಕನ್ನಡಿಗ ಕೆ.ಎಲ್​ ರಾಹುಲ್ ಓಪನರ್ ಆಗಿ ಟೆಸ್ಟ್​ನಲ್ಲಿ ರನ್​ ಕಲೆಹಾಕಲು ಮತ್ತೆ ಮತ್ತೆ ಎಡವುತ್ತಿದ್ದಾರೆ. ರಾಹುಲ್​ ಕ್ರೀಸ್​ನಲ್ಲಿ ಗಟ್ಟಿಯಾಗಿ ನೆಲೆನಿಂತು ತಂಡಕ್ಕೆ ಉತ್ತಮ ಅಡಿಪಾಯ ಹಾಕಲು ವಿಫಲರಾಗ್ತಿರುವ ಹಿನ್ನೆಲೆಯಲ್ಲಿ ಶರ್ಮಾ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲು ಚಿಂತನೆ ನಡೆದಿದೆ ಅಂತ ಬಿಸಿಸಿಐ ಮುಖ್ಯ ಆಯ್ಕೆದಾರ ಎಂಎಸ್​ಕೆ ಪ್ರಸಾದ್​ ತಿಳಿಸಿದ್ದಾರೆ.
ವಿಂಡೀಸ್​ ವಿರುದ್ಧದ ಎರಡು ಟೆಸ್ಟ್​ ಮ್ಯಾಚ್​ಗಳ ನಾಲ್ಕು ಇನ್ನಿಂಗ್ಸ್​​​ಗಳಲ್ಲಿ ಕ್ರಮವಾಗಿ 44, 38, 13 ಮತ್ತು 6ರನ್​ಗಳನ್ನು ಮಾತ್ರ ಗಳಿಸಿದ್ದರು. ಆದ್ದರಿಂದ ಉತ್ತಮ ಫಾರ್ಮ್​ನಲ್ಲಿರುವ ರೋಹಿತ್ ಶರ್ಮಾ ಅವರಿಗೆ ಮಣೆ ಹಾಕುವ ಬಗ್ಗೆ ಚಿಂತನೆ ನಡೆದಿದೆ. ವಿಂಡೀಸ್ ವಿರುದ್ಧ ಟೆಸ್ಟ್​ಗೆ ರೋಹಿತ್ ಆಯ್ಕೆಯಾಗಿದ್ದರೂ ಆಡುವ 11ರ ಬಳಗದಲ್ಲಿರಲಿಲ್ಲ.

ಬಾಂಗ್ಲಾ ವಿರುದ್ಧ ಐತಿಹಾಸಿಕ ಟೆಸ್ಟ್ ಜಯ ದಾಖಲಿಸಿದ ಅಫ್ಘಾನಿಸ್ತಾನ..!

0

ಕ್ರಿಕೆಟ್ ಶಿಶು ಅಂತ ಕರೆಸಿಕೊಳ್ಳುವ ಅಪ್ಘಾನಿಸ್ತಾನ ಬಾಂಗ್ಲಾ ಹುಲಿಗಳ ವಿರುದ್ಧ ನಡೆದ ಏಕೈಕ ಟೆಸ್ಟ್​​ನಲ್ಲಿ ಐತಿಹಾಸಿಕ ಜಯ ದಾಖಲಿಸಿ ಬೀಗಿದೆ.
ಬಾಂಗ್ಲಾದ ಜೊಹೂರ್ ಅಹ್ಮದ್ ಚೌಧರಿ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್​​ನಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಅಪ್ಘಾನಿಸ್ತಾನ ರಹಮತ್ ಶಾರರ ಸೆಂಚುರಿ ನೆರವಿನಿಂದ 342ರನ್ ಮಾಡಿತ್ತು. ಬಳಿಕ ತನ್ನ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸಿದ ಬಾಂಗ್ಲಾ ಹುಲಿಗಳು ಅಪ್ಘನ್ ಕ್ಯಾಪ್ಟನ್ ರಶೀದ್ ಖಾನ್ ದಾಳಿಗೆ ತತ್ತರಿಸಿ 205ರನ್​ಗಳಿಗೆ ಆಲ್​ಔಟ್ ಆದರು.
137ರನ್​ಗಳ ಮುನ್ನಡೆಯೊಂದಿಗೆ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಅಫ್ಘನ್​​ ಇಬ್ರಾಹಿಂ ಝದ್ರಾಸ್​ರವರ ಹಾಫ್​ ಸೆಂಚುರಿ (87)ರನ್​ಗಳ ನೆರವನಿಂದ 260ರನ್​ ಗಳಿಸಿತು. ಒಟ್ಟಾರೆ 397ರನ್​ ಗುರಿ ಬೆನ್ನತ್ತಿದ ಬಾಂಗ್ಲಾ ತನ್ನ ಸೆಕೆಂಡ್​ ಇನ್ನಿಂಗ್ಸ್​​ನಲ್ಲೂ ರಶೀದ್ ಖಾನ್​ ದಾಳಿಗೆ ನಲುಗಿ 173ರನ್​​ಗಳಿಗೆ ಆಲ್​ಔಟ್ ಆಯ್ತು. ಅಪ್ಘನ್ನರು ಬಾಂಗ್ಲಾ ವಿರುದ್ಧ 224ರನ್​ಗಳ ಐತಿಹಾಸ ಗೆಲುವು ಸಾಧಿಸಿತು. ಮೊದಲ ಇನ್ನಿಂಗ್ಸ್​ನಲ್ಲಿ 5 ಮತ್ತು ಸೆಕೆಂಡ್​ ಇನ್ನಿಂಗ್ಸ್​​ನಲ್ಲಿ 6 ವಿಕೆಟ್ ಕಿತ್ತ ಕ್ಯಾಪ್ಟನ್ ರಶೀದ್ ಖಾನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.

ಮೈದಾನದ ಸಿಬ್ಬಂದಿಗೆ ಸಂಭಾವನೆ ದಾನ ಮಾಡಿದ ಸಂಜು ಸ್ಯಾಮ್ಸನ್..!

0

ತಿರುವನಂತಪುರಂ : ಸಂಜು ಸ್ಯಾಮ್ಸನ್.. ಬಹುಶಃ ಈ ಹೆಸ್ರನ್ನು ಕೇಳಿರ್ತೀರಿ. ಭಾರತದ ಯುವ ಕ್ರಿಕೆಟಿಗ ಟೀಮ್ ಇಂಡಿಯಾ ಪ್ರವೇಶಿ, ಖಾಯಂ ಸ್ಥಾನ ಗಿಟ್ಟಿಸಿಕೊಳ್ಳಲು ರೆಡಿಯಾಗಿರುವ ಯಂಗ್ ಸ್ಟಾರ್..! ಐಪಿಎಲ್​ ನೋಡೋರಿಗಂತೂ ಸಂಜು ಗೊತ್ತೇ ಇರುತ್ತೆ. ಭರವಸೆಯ ಯುವ ಕ್ರಿಕೆಟಿಗ ಸಂಜು ಮಾನವೀಯತೆ ಮೆರೆದಿದ್ದಾರೆ.
ತನ್ನ ಸಂಭಾವನೆಯನ್ನು ಮೈದಾನದ ಸಿಬ್ಬಂದಿಗೆ ನೀಡಿದ್ದಾರೆ ಸಂಜು..! ಭಾರತ ಎ ತಂಡ ಮತ್ತು ದಕ್ಷಿಣ ಆಫ್ರಿಕಾ ಎ ತಂಡಗಳ ನಡುವೆ ನಡೆದ 5 ಮ್ಯಾಚ್​ಗಳ ಅನಧಿಕೃತ ಒಡಿಐ ಸರಣಿಯನ್ನು ಭಾರತ 4-1 ಅಂತರದಿಂದ ಜಯಸಿದೆ,
ಕೇರಳದಲ್ಲಿ ನಡೆದ ಮ್ಯಾಚ್​ಗಳಿಗೆ ಮಳೆ ಅಡ್ಡಿಯಾಗಿತ್ತು. ಆಗ ಕೆಲವು ಓವರ್​ಗಳನ್ನು ಕಡಿತ ಮಾಡಲಾಗಿತ್ತು. ಮ್ಯಾಚ್​ಗಳಿಗೆ ಮಳೆ ಅಡ್ಡಿ ಪಡಿಸಿದಾಗ ಸಿಬ್ಬಂದಿ ಉತ್ತಮ ಕೆಲಸ ನಿರ್ವಹಿಸಿದ್ದರು. ಇದನ್ನು ಮೆಚ್ಚಿದ ಸಂಜು ಸ್ಯಾಮ್ಸನ್ ಗ್ರೀನ್​ ಫೀಲ್ಡ್​ ಮೈದಾನದ ಸಿಬ್ಬಂದಿಗೆ ತನಗೆ ಸಿಕ್ಕ 1.5 ಲಕ್ಷ ರೂಗಳನ್ನು ನೀಡಿದ್ದಾರೆ. ಸಂಜು ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಂಡರ್​ 19 ಏಷ್ಯಾಕಪ್ : ಪಾಕ್ ವಿರುದ್ಧ ಸೆಂಚುರಿ ಸಿಡಿಸಿದ ಅರ್ಜುನ್, ತಿಲಕ್..!

0

ಕೊಲಂಬೋ : ಅಂಡರ್ 19 ಏಷ್ಯಾಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಅರ್ಜುನ್ ಆಜಾದ್ ಮತ್ತು ತಿಲಕ್​ ವರ್ಮಾರ ಭರ್ಜರಿ ಸೆಂಚುರಿ ನೆರವಿನಿಂದ 60ರನ್​ಗಳ ಅಧಿಕಾರಯುತ ಗೆಲುವು ಸಾಧಿಸಿದೆ.
ಶ್ರೀಲಂಕಾದ ಮೊರಾತುವಾದ ತೈರೊನ್ನೆ ಫೆರ್ನಾಂಡೋ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅರ್ಜುನ್ (121), ತಿಲಕ್ (110) ಶತಕದಿಂದ ಭಾರತ 9 ವಿಕೆಟ್ ಕಳೆದುಕೊಂಡು 305ರನ್ ಮಾಡಿತು. ಅರ್ಜುನ್ ಮತ್ತು ತಿಲಕ್ ಅಲ್ಲದೆ ಶಾಶ್ವತ್ ರಾವತ್ 18, ಅಥರ್ವ ಅಂಕೋಲೆಕರ್ 16, ಧೃವ್ ಜುರೇಲ್ 10ರನ್​ ಕೊಡುಗೆ ನೀಡಿದರು.
ಗುರಿ ಬೆನ್ನತ್ತಿದ್ದ ಪಾಕಿಸ್ತಾನ ರೊಹೈಲ್ ನಜೀರ್ ಶತಕದ ಹೊರತಾಗಿಯೂ ಸೋಲುಂಡಿತು. ನಜೀರ್ (117) ಮೊಹಮ್ಮದ್ ಹ್ಯಾರಿಸ್ (43) ಹೋರಾಟದ ನಡುವೆಯೂ 46.4 ಓವರ್​ ಮಾತ್ರ ಬ್ಯಾಟ್ ಮಾಡಲು ಶಕ್ತವಾಗಿ 245ರನ್​ಗಳಿಗೆ ಆಲ್​ಔಟ್​ ಆಯಿತು. ಇದರೊಂದಿಗೆ ಭಾರತ ಗೆದ್ದು ಬೀಗಿತು.

2025ಕ್ಕೆ ಕೊಹ್ಲಿ, ಧವನ್ ಪಾಕ್ ಪರ ಆಡ್ತಾರಂತೆ..!

0

ಪಾಕಿಸ್ತಾನ ಅಧಃಪತನಕ್ಕೆ ಹೋಗಿದ್ರೂ.. ಹುಚ್ಟಾಟ ಕಮ್ಮಿಯಾಗಿಲ್ಲ. ಇಡೀ ಭಾರತವನ್ನು ಪಾಕಿಸ್ತಾನವನ್ನಾಗಿ ಪರಿವರ್ತಿಸುವ ತಿರುಕನ ಕನಸನ್ನು ಪಾಕ್​ ಕಾಣುತ್ತಲೇ ಇದೆ..! ಅಕ್ಷರಶಃ ಭಿಕ್ಷುಕ ರಾಷ್ಟ್ರವಾಗಿರುವ ಪಾಕ್​ ಈಗ ಹುಚ್ಚು ಆ್ಯಡ್ ಮೂಲಕ ಸುದ್ದಿಯಾಗಿದೆ..! ಅದೆಂಥಾ ಹುಚ್ಚು ಕನಸು ಅಂತೀರಾ..? ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಆಟಗಾರ ಶಿಖರ್ ಧವನ್ ಪಾಕಿಸ್ತಾನ ಪರ ಆಡುತ್ತಾರೆ ಅನ್ನೋದು ಪಾಕ್​ನ ತಲೆಕೆಟ್ಟ ಜಾಹಿರಾತು..!
ಪಾಕಿಸ್ತಾನದ ಹೆಸರಾಂತ ಪ್ರತ್ರಕರ್ತೆ ನೈಲಾ ಇನಾಯತ್ ತಮ್ಮ ಟ್ಟಿಟರ್​ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. 2025ರಲ್ಲಿ ಶ್ರೀನಗರದಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಮ್ಯಾಚ್ ನಡೆಯುತ್ತೆ. ಆ ಮ್ಯಾಚ್​ನಲ್ಲಿ ವಿರಾಟ್​ ಕೊಹ್ಲಿ ಮತ್ತು ಶಿಖರ್ ಧವನ್ ಪಾಕಿಸ್ತಾನ ಪರ ಆಡುತ್ತಾರಂತೆ..! ಬಾಬರ್ ಆಜಂ ಮತ್ತು ಕೊಹ್ಲಿ ಓಪನಿಂಗ್ ಬರ್ತಾರೆ. ಆಗ ಪಾಕ್​ನ ಬಾಲಕಿಯೊಬ್ಬಳು ತನ್ನ ತಂದೆಗೆ ಈ ಸಲ ವಿರಾಟ್​ ಕೊಹ್ಲಿ ನಮ್ಮನ್ನು ಗೆಲ್ಲಿಸ್ತಾರೆ ಅಂದಿದ್ದಾರೆ. ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.. ಪಾಕ್ ಹುಚ್ಚತನಕ್ಕೆ ಏನೂ ಹೇಳಕ್ಕಾಗಲ್ಲ.. ಕಾಮಿಡಿ ಅಂತ ನಕ್ಕು ಬಿಡಣ..!

ಭಾರತ ತಂಡಕ್ಕೆ ಆಯ್ಕೆಯಾದ 15 ವರ್ಷದ ಕ್ರಿಕೆಟರ್..!

0

ಭಾರತ ತಂಡಕ್ಕೆ 15 ವರ್ಷದ ಕ್ರಿಕೆಟರ್ ಆಯ್ಕೆಯಾಗಿದ್ದಾರೆ. ಆದರೆ, ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾಕ್ಕಲ್ಲ… ಬದಲಿಗೆ ಹರ್ಮನ್​ ಪ್ರೀತ್ ನಾಯಕತ್ವದ ಭಾರತ ಮಹಿಳಾ ಟಿ20 ತಂಡಕ್ಕೆ..!
ಹೌದು, ಭಾರತ ಕ್ರಿಕೆಟ್ ಇತಿಹಾದಲ್ಲೇ ಇದು ಮೊದಲ ಬಾರಿಗೆ 15 ವರ್ಷದ ಮಹಿಳಾ ಕ್ರಿಕೆಟರ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹರಿಯಾಣದ ಯುವ ಆಟಗಾರ್ತಿ ಶಫಾಲಿ ವರ್ಮಾ ತಂಡದಲ್ಲಿ ಸ್ಥಾನ ಪಡೆದವರು. ಮಹಿಳಾ ಐಪಿಎಲ್​ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದ ಶಫಾಲಿ ರಾಷ್ಟ್ರೀಯ ತಂಡದಲ್ಲಿ ಅತೀ ಕಿರಿಯ ವಯಸ್ಸಲ್ಲೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸೀನಿಯರ್ ವುಮೆನ್ಸ್ ಟಿ-20ಯಲ್ಲಿ ನಾಗಲ್ಯಾಂಡ್​ ವಿರುದ್ಧ 56 ಬಾಲ್​ಗಳಲ್ಲಿ 128ರನ್ ಬಾರಿಸಿದ್ದರು ರೋಹ್ಟಕ್​ನ ಈ ಯುವ ಬ್ಯಾಟ್ಸ್​ವುಮೆನ್.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ರವರ ಅಪ್ಪಟ ಅಭಿಮಾನಿಯಾಗಿರುವ ಶಫಾಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಕಿರಿಯ ವಯಸ್ಸಲ್ಲೇ ರಾಷ್ಟ್ರೀಯ ತಂಡದಲ್ಲಿ ಸದ್ದು ಮಾಡಲು, ಖಾಯಂ ಸ್ಥಾನ ಹೊಂದಲು ಶಫಾಲಿ ಸಜ್ಜಾಗಿದ್ದಾರೆ.

ವಿರಾಟ್​ ಕೊಹ್ಲಿ ಹಾದಿಯೇ ಬೇರೆ ನನ್ನ ಹಾದಿಯೇ ಬೇರೆ ಎಂದಿದ್ದೇಕೆ ಉನ್ಮುಖ್ತ್​​ ಚಂದ್..?

0

ಟೀಮ್ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಯುವ ಕ್ರಿಕೆಟಿಗರ ನಡುವೆ ಭಾರೀ ಪೈಪೋಟಿ ನಡೀತಾ ಇದೆ. ಭಾರತದಲ್ಲಿ ಅನೇಕ ಪ್ರತಿಭಾವಂತ ಕ್ರಿಕೆಟಿಗರಿದ್ದು, ಎಲ್ಲರಿಗೂ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುವುದು ಕಷ್ಟ ಸಾಧ್ಯವೇ..ದೇಶಿ ಕ್ರಿಕೆಟಿನಲ್ಲಿ, ಅಂಡರ್ 19 ಭಾರತ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ ಟೀಮ್ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲಾಗದೆ ನಿರಾಸೆ ಅನುಭವಿಸಿರುವ ಕ್ರಿಕೆಟಿಗರು ಅನೇಕ.
ಅಂಥಾ ಪ್ರತಿಭಾವಂತ ಯುವ ಕ್ರಿಕೆಟಿಗರಲ್ಲಿ ಉನ್ಮುಖ್ತ್​ ಚಂದ್ ಪ್ರಮುಖರು. ಅವರು 2012ರ ಅಂಡರ್ 19 ವರ್ಲ್ಡ್​​​​​ಕಪ್​​ನಲ್ಲಿ ಭಾರತ ತಂಡವನ್ನು ಮುನ್ನೆಡಿಸಿ ಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್. ಉನ್ಮುಖ್ತ್​​​ ಚಂದ್ ವಿಶ್ವಕಪ್ ಗೆಲ್ಲಿಸಿಕೊಟ್ಟಾಗ ಮುಂದಿನ ದಿನಗಳಲ್ಲಿ ಖಂಡಿತಾ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಾರೆ. ವಿಶ್ವ ಕ್ರಿಕೆಟ್​ನಲ್ಲಿ ಕಮಾಲ್ ಮಾಡುತ್ತಾರೆ ಅಂತ ಕ್ರಿಕೆಟ್​ ದಿಗ್ಗಜರು ಭವಿಷ್ಯ ನುಡಿದಿದ್ದರು. ಆದರೆ ಉನ್ಮುಖ್ತ್ ಅಂಡರ್ 19​​ ವರ್ಲ್ಡ್​ಕಪ್​ ಗೆಲ್ಲಿಸಿಕೊಟ್ಟು 7 ವರ್ಷಗಳಾಗಿವೆ. ಇನ್ನೂ ಕೂಡ ಚಂದ್​ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಬಗ್ಗೆ ಅವರೀಗ ಮೌನ ಮುರಿದಿದ್ದಾರೆ.
‘ನಾನು ಅಂಡರ್-19 ವಿಶ್ವಕಪ್ ಗೆದ್ದು ಏಳು ವರ್ಷಗಳಾಗಿವೆ. ಆ 7 ವರ್ಷದ ಹಿಂದಿನದು ನಂಗೆ ಇಂದಿಗೂ ಅದ್ಭುತ ಕ್ಷಣ. ಅಂತಃ ದೊಡ್ಡ ಟೂರ್ನಮೆಂಟ್​ನಲ್ಲಿ ನನಗೆ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿತ್ತು. ಅಲ್ಲದೆ ಕಪ್ ಗೆದ್ದಿದ್ದೆವು. ಆ ಕ್ಷಣ ನನ್ನ ಹೃದಯದಲ್ಲಿ ಹಚ್ಚ ಹಸಿರಾಗಿರುತ್ತದೆ. ಆದರೆ. ಈಗ ಕಾಲ ಬದಲಾಗಿದೆ, ನಾವು ಮುಂದುವರೆಯಬೇಕು. ನಾನು ನನ್ನ ತಂಡಕ್ಕಾಗಿ, ದೇಶಕ್ಕಾಗಿ ಆಡಬೇಕು. ನನಗಿನ್ನೂ ಕೇವಲ 26 ವರ್ಷ. ಶ್ರಮವಹಿಸಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದೇ ಪಡೆಯುತ್ತೇನೆ. ಇದೇ ನನ್ನ ಕೊನೇ ಕನಸು. ಕೆಲವ್ರಿಗೆ ಅವಕಾಶ ಕೂಡಲೇ ಬಂದು ಬಿಡುತ್ತದೆ. ಇನ್ನು ಕೆಲವರು ಅವಕಾಶಕ್ಕೆ ಕಾಯಬೇಕು” ಅಂದಿದ್ದಾರೆ.
ಹಾಗೆಯೇ ನನ್ನ ಕ್ರಿಕೆಟ್ ಹಾದಿಯನ್ನು ಬೇರೆಯವರಿಗೆ ಹೋಲಿಸುವುದು ತಪ್ಪು. ವಿರಾಟ್ ಕೊಹ್ಲಿ, ಪೃಥ್ವಿ ಶಾ ಅವರಿಗೆ ಬೇಗನೆ ಟೀಂ ಇಂಡಿಯಾ ಬಾಗಿಲು ತೆರೆಯಿತು. ಆದರೆ ನಂಗೆ ಬೇಗ ಸಿಕ್ಕಿಲ್ಲ. ನಂಗೆ ನನ್ದೇಯಾದ ವಿಭಿನ್ನ ಹಾದಿ ಮತ್ತು ಹೆಸರಿಗೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸ್ತೀನಿ ಅಂತ ವಿಶ್ವಾಸದ ನುಡಿಗಳನ್ನಾಡಿದ್ದಾರೆ.

Popular posts