Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Monday, January 20, 2020

ನಾಳೆಯಿಂದ ಸಿಸಿಎಲ್​ ಹಬ್ಬ – ಕಿಚ್ಚನ ನಾಯಕತ್ವವಿಲ್ಲದೆ ಕಣಕ್ಕಿಳಿಯುತ್ತಿದೆ ಕರ್ನಾಟಕ..!

0

ಸಿಸಿಎಲ್​ 7 ಸೀಸನ್​ಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಆರು ಸೀಸನ್​ನಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಸ್ಯಾಂಡಲ್​ವುಡ್​ನ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿ ಕೂಡ ಅದೇ ಉತ್ಸಾಹದಿಂದ ಕಣಕ್ಕೆ ಇಳಿಯಲಿದೆ. ಆದರೆ, ಈ ಬಾರಿ ಟೀಮ್​ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
ಸಿಸಿಎಲ್ ಅಂದ ತಕ್ಷಣ ಮೊದಲು ನೆನಪಾಗೋದು ಕರ್ನಾಟಕ ಬುಲ್ಡೋಜರ್ಸ್ ತಂಡ. ಯಾಕಂದ್ರೆ ಸ್ಯಾಂಡಲ್​​ವುಡ್​ ಟೀಮ್​ ಸಿಸಿಎಲ್​ ನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ . ಒಂದು ರೀತಿಯಲ್ಲಿ ಈ ಟೂರ್ನಿಯ ಬಿಗ್ ಬಾಸ್ ಅಂದ್ರೆ ತಪ್ಪಾಗಲಾರದು .
ಆದರೆ ಈ ಬಾರಿಯ ಕಿಚ್ಚನ ನಾಯಕತ್ವ ಇರೋದಿಲ್ಲ .ಬದಲಿಗೆ ಎರಡು ಇಲ್ಲವೇ ಮೂರನೇ ಕ್ರಮಾಂಕದಲ್ಲಿ ಕಿಚ್ಚ ಬ್ಯಾಟ್ ಬಿಸಲಿದ್ದಾರೆ. ಕ್ಯಾಪ್ಟನ್ ಶಿಪ್ ನಿಂದ ಕೆಳಗಿಳಿದಿರುವ ಕಿಚ್ಚ. ಆ ಜವಾಬ್ದಾರಿಯನ್ನು ಪ್ರದೀಪ್ ಅವರ ಹೆಗಲಿಗೇರಿಸಿದ್ದಾರೆ.
ಆರು ಸೀಸನ್ ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಮೂರು ಬಾರಿ ರನ್ನರ್ ಅಪ್ ಎರಡು ಬಾರಿ ಚಾಂಪಿಯನ್ ಆಗಿದೆ . ಆರೂ ಸೀಸನ್ ನಲ್ಲಿ ಸೆಮಿ ಫೈನಲ್ ಪ್ರವೇಶಸಿಸಿದ ಏಕೈಕ ತಂಡ ಕರ್ನಾಟಕ ಬುಲ್ಡೋಜರ್ಸ್ . ಸಿಸಿಎಲ್ ನಲ್ಲಿ ಬಲಿಷ್ಠ ತಂಡವಾಗಿ ಗುರಿತಿಸಿಕೊಂಡಿದೆ.
ಕರ್ನಾಟಕದ ಸ್ಟಾರ್ ಆಟಗಾರ ರಾಜೀವ್​ ಮೈದಾನದಲ್ಲಿ ರನ್ ಮಳೆ ಹರಿಸಬಲ್ಲರು . ಜೆಕೆ ಕೂಡ ಈಗ ತಂಡಕ್ಕೆ ಮರಳಿದ್ದಾರೆ , ಹಾಗಾಗಿ ತಂಡದ ಬೌಲಿಂಗ್ ಶಕ್ತಿ ಮತ್ತಷ್ಟು ಹೆಚ್ಚಿಸಿದೆ. ಒಂದು ಬೇಸರದ ಸಂಗತಿ ಅಂದ್ರೆ ಸಿಸಿಎಲ್ ನಲ್ಲಿ ತನ್ನದೇ ಛಾಪು ಮೂಡಿಸಿದ್ದ ಅಗಲಿದ ಧ್ರುವ ಶರ್ಮ ಅವ್ರನ್ನ ತಂಡ ಮಿಸ್ ಮಾಡ್ಕೊಳೋದ್ರಲ್ಲಿ ಯಾವುದೇ ಡೌಟಿಲ್ಲ.
ಕಳೆದ ಎಲ್ಲಾ ಸೀಸನ್ ನಲ್ಲಿ ಟಿ20 ಫಾರ್ಮ್ಯಾಟ್ ನಲ್ಲಿ ಟೂರ್ನಿ ಇತ್ತು . ಆದ್ರೆ, ಈ ಬಾರಿ ಹತ್ತು ಓವರ್ ಗಳು ಮಾತ್ರ ಇರಲಿವೆ . ಹಾಗೆಯೇ ಈ ಬಾರಿ ಲೀಗ್ ಹಂತ ಇರೋದಿಲ್ಲ ನಾಕೌಟ್ ಫಾರ್ಮ್ಯಾಟ್ ನಲ್ಲಿ ಟೂರ್ನಿ ನಡೆಯಲಿದೆ. ನಾಳೆಯಿಂದ ಚಂಡಿಗಢದಲ್ಲಿ ಟೂರ್ನಿ ಆರಂಭವಾಗಲಿದೆ. ಕರ್ನಾಟಕ ಪಂಜಾಬ್ ಡೆರ್ ಶೇರ್ ವಿರುದ್ಧ ಸೆಣೆಸಲಿದೆ.

ತಂಡಗಳು :
ಕರ್ನಾಟಕ ಬುಲ್ಡೋಜರ್ಸ್
ಬೋಜ್ಪುರಿ ಡಬಾಂಗ್ಸ್
ಮುಂಬೈ ಹೀರೋಸ್
ತೆಲುಗು ವಾರಿಯರ್ಸ್
ಬೆಂಗಾಲಿ ಟೈಗರ್ಸ್
ಪಂಜಾಬ್​ ಡಬ್​ ಶೇರ್

Popular posts