Monday, May 25, 2020

ಸೆಮಿಫೈನಲ್​ಗೆ ಮನೀಷ್ ಪಾಂಡೆ ಪಡೆ

0

ಪ್ರಸಕ್ತ ಸಾಲಿನ ರಣಜಿಯಲ್ಲಿ ಕರ್ನಾಟಕ  ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್​​​ ಫೈನಲ್​ನಲ್ಲಿ​ ರಾಜಸ್ಥಾನವನ್ನು6 ವಿಕೆಟ್​​ಗಳಿಂದ ಮಣಿಸಿದ ಕರ್ನಾಟಕ ಗೆಲುವಿನ ಕೇಕೆ ಹಾಕಿದೆ.

ಗೆಲ್ಲಲು 184 ರನ್​ಗಳ ಗುರಿ ಪಡೆದಿದ್ದ ಮನೀಷ್​ ಪಾಂಡೆ ಬಳಗ 3 ವಿಕೆಟ್​​ ನಷ್ಟಕ್ಕೆ 45 ರನ್​​ಗಳೊಂದಿಗೆ ದಿನದಾಟ ಆರಂಭಿಸಿತು. ದಿನದಾಟದ ಆರಂಭದಲ್ಲೇ ನೈಟ್​ ವಾಚಮನ್​ ರೋನಿತ್​ ಮೋರೆ (8) ಔಟಾದ್ರು. ಬಳಿಕ ಜೊತೆಯಾದ ಕರುಣ್​ ನಾಯರ್​ ಹಾಗೂ ನಾಯಕ ಮನೀಷ್​​ ಪಾಂಡೆ ಜೋಡಿ ಅಮೋಘ ಜೊತೆಯಾಟವಾಡಿತು. ಮನೀಷ್​ ಪಾಂಡೆ ಅಜೇಯ 87 ರನ್​ ಸಿಡಿಸಿದ್ರೆ, ಕರುಣ್​ ನಾಯರ್​ ಅಜೇಯ 61 ರನ್​ಗಳನ್ನ ಕಲೆಹಾಕಿದ್ರು. ಬರೋಬ್ಬರಿ 129 ರನ್​ಗಳ ಜೊತೆಯಾಟವಾಡಿದ ಇವರು 47.5 ಓವರ್​ಗಳಲ್ಲಿ ತಂಡವನ್ನು ಗೆಲುವಿನ ದಡ ಸೆರಿಸಿದ್ರು.

ಇನ್ನು ಪಂದ್ಯದಲ್ಲಿ ಬೆಸ್ಟ್​​ ಫರ್ಪಾಮೆನ್ಸ್​​ ನೀಡಿದ ವಿನಯ್​ ಕುಮಾರ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಜಯದೊಂದಿಗೆ ಕರ್ನಾಟಕ ಅಂತಿಮ 4ರ ಸುತ್ತಿಗೆ ಪ್ರವೇಶ ಪಡೆದಿದ್ದು, ಇದೇ 24ರಂದು ನಡೆಯುವ ಸೆಮಿಫೈನಲ್​ ಪಂದ್ಯದಲ್ಲಿ ಸೌರಾಷ್ಟ್ರ ಅಥವಾ ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ.

ರಣಜಿ : ಡ್ರಾನಲ್ಲಿ ಅಂತ್ಯವಾದ ಕರ್ನಾಟಕ VS ವಿದರ್ಭ ಮ್ಯಾಚ್..!

0

ಪ್ರಸಕ್ತ ರಣಜಿ ಋತುವಿನ ಕರ್ನಾಟಕ ಮೊದಲ ಮ್ಯಾಚ್ ಡ್ರಾನಲ್ಲಿ ಅಂತ್ಯವಾಗಿದೆ. ಈ ಮ್ಯಾಚ್ ನಲ್ಲಿ ಕರ್ನಾಟಕ ಡ್ರಾ ಸಾಧಿಸಿದ್ರೂ ಮೊದಲ ಇನ್ನಿಂಗ್ಸ್​​ನಲ್ಲಿ ಮುನ್ನಡೆ ಪಡೆದಿದ್ರಿಂದ ​3 ಅಂಕಗಳನ್ನ ತನ್ನದಾಗಿಸಿಕೊಂಡಿದೆ.

ಟಾಸ್​ ಗೆದ್ದು ಇನ್ನಿಂಗ್ಸ್​ ಆರಂಭಿಸಿದ್ದ ವಿದರ್ಭ 307 ರನ್‌ ಗಳಿಗೆ ಆಲೌಟ್​ ಆಗಿತ್ತು. ಇದಕ್ಕೆ ಉತ್ತರವಾಗಿ ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಡಿ.ನಿಶ್ಚಲ್ ಹಾಗೂ ಶರತ್​ ಬಿ.ಆರ್​ ಅವರ ಅಮೋಘ ಸೆಂಚುರಿ ನೆರವಿನಿಂದ 378 ರನ್​ ಸಿಡಿಸಿ 71 ರನ್​ಗಳ ಮುನ್ನಡೆ ಪಡೆದುಕೊಂಡಿತ್ತು.
ದ್ವಿತೀಯ ಇನ್ನಿಂಗ್ಸ್​ನಲ್ಲಿ ಕರ್ನಾಟಕದ ಬೌಲಿಂಗ್​ ದಾಳಿಗೆ ಕುಸಿದ ಹಾಲಿ ಚಾಂಪಿಯನ್​​ ವಿದರ್ಭ 228 ರನ್​ಗಳಿಗೆ ಅಲೌಟ್​ ಆಯ್ತು. ಗೆಲುವಿಗೆ 158 ರನ್​ ಟಾರ್ಗೆಟ್​ ಪಡೆದ ಕರ್ನಾಟಕ 4ನೇ ದಿನದಾಟದಲ್ಲಿ 6 ವಿಕೆಟ್​ ನಷ್ಟಕ್ಕೆ 76 ರನ್​ ಸಿಡಿಸಿತು. ಈ ಮೂಲಕ ಮ್ಯಾಚ್ ಡ್ರಾ ಆಯಿತು. 9 ವಿಕೆಟ್​​ ಪಡೆದ ಜೆ.ಸುಚಿತ್ ಕರ್ನಾಟಕದ ಬೆಸ್ಟ್​ ಬೌಲರ್​ ಆಗಿ ಹೊರಹೊಮ್ಮಿದ್ರು.

Popular posts