ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್, ಚೆನ್ನೈಸೂಪರ್ ಕಿಂಗ್ಸ್ನ ನಾಯಕ ಮಹೇಂದ್ರ ಸಿಂಗ್ ಧೋನಿ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ 2 ಮ್ಯಾಚ್ಗಳಿಂದ ವಿಶ್ರಾಂತಿ ಪಡೆಯೋ ಸಾಧ್ಯತೆ ಇದೆ. ಬೆನ್ನು ನೋವಿನಿಂದಲೇ ಆಡುತ್ತಿರುವ ಮಾಹಿ ಇಂದು ಮುಂಬೈ ವಿರುದ್ಧದ ಪಂದ್ಯದಲ್ಲಿ ತಮ್ಮ ಸಾರಥ್ಯದ ಚೆನ್ನೈ ಗೆಲುವಿನ ಕೇಕೆ ಹಾಕಿದರೆ, ಮುಂದಿನ ಎರಡು ಮ್ಯಾಚ್ಗಳಿಂದ ದೂರ ಉಳಿದು ರೆಸ್ಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಐಪಿಎಲ್ ಮುಗಿದ ಬಳಿಕ ಮೇ.30ರಿಂದ ಇಂಗ್ಲೆಂಡ್ನಲ್ಲಿ ವರ್ಲ್ಡ್ಕಪ್ ನಡೆಯಲಿದೆ. ಹೀಗಾಗಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆಟಗಾರರ ವರ್ಕ್ಲೋಡ್ ಅನ್ನು ಗಮನಿಸುತ್ತಿದೆ. ಧೋನಿ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವುದರಿಂದ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಎರಡು ಪಂದ್ಯಗಳಲ್ಲಿ ಧೋನಿ ಕಣಕ್ಕಿಳಿಯುವುದು ಡೌಟು. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಮ್ಯಾಚ್ ಬಳಿಕ ಧೋನಿ ತಮ್ಮ ಬೆನ್ನು ನೋವಿನ ಬಗ್ಗೆ ಮಾತಾಡಿದ್ದರು.
ಇನ್ನು ದಕ್ಷಿಣ ಆಫ್ರಿಕಾದ ವೇಗಿ ಡೇಲ್ಸ್ಟೇನ್ ಐಪಿಎಲ್ನಲ್ಲಿ ಆಡಿದ್ದು ಕೇವಲ ಎರಡೇ ಎರಡು ಮ್ಯಾಚ್ಗಳನ್ನು. ಆದರೆ, ಭುಜದ ನೋವಿನ ಸಮಸ್ಯೆಯಿಂದ ಅವರು ಟೂರ್ನಿಯಿಂದಲೇ ಹೊರಗುಳಿಯಬೇಕಾಗಿದೆ. ಇದು ಸೌತ್ಆಫ್ರಿಕಾಕ್ಕೆ ದೊಡ್ಡ ತಲೆನೋವಾಗಿದೆ. ಐಪಿಎಲ್ ಮತ್ತು ವರ್ಲ್ಕಪ್ ಅಂತ ಬಂದ್ರೆ, ಐಪಿಎಲ್ಗಿಂತಲೂ ವರ್ಲ್ಡ್ಕಪ್ ಮುಖ್ಯವಾಗುವುದರಿಂದ ಧೋನಿ ರೆಸ್ಟ್ ಮಾಡಲೇ ಬೇಕಾಗಿರೋದು ಅನಿವಾರ್ಯವೂ ಹೌದು.
ಧೋನಿ 2 ಮ್ಯಾಚ್ಗಳನ್ನು ಆಡೋದು ಡೌಟ್..! ಕಾರಣ ಏನ್ ಗೊತ್ತಾ?
ಚೆನ್ನೈಗೆ 5 ವಿಕೆಟ್ಗಳ ಭರ್ಜರಿ ಜಯ
ಕೋಲ್ಕತ್ತಾ : ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ದಿನೇಶ್ ಕಾರ್ತಿಕ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು 5 ವಿಕೆಟ್ ಗಳಿಂದ ಮಣಿಸಿದೆ.
ಈಡನ್ ಗಾರ್ಡನ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ತನ್ನ ಪಾಲಿನ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 161ರನ್ ಮಾಡಿತು. ಕ್ರಿಸ್ ಲೈನ್ 82 ರನ್ ಗಳಿಸಿ ಕೋಲ್ಕತ್ತಾ ಪರ ಉತ್ತಮ ಬ್ಯಾಟಿಂಗ್ ಮಾಡಿದ್ರು.
162ರನ್ಗಳ ಗುರಿ ಬೆನ್ನತ್ತಿದ ಚೆನ್ನೈ 19.4 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಚೆನ್ನೈ ಪರ ಸುರೇಶ್ ರೈನಾ ಅಜೇಯ 58, ರವೀಂದ್ರ ಜಡೇಜ ಅಜೇಯ 31ರನ್ ಗಳಿಸೋ ಮೂಲಕ ಚೆನ್ನೈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.
ಕನ್ನಡಿಗ ರಾಹುಲ್ ಭರ್ಜರಿ ಸೆಂಚುರಿ..!
ಮುಂಬೈ : ಕನ್ನಡಿಗ ಕೆ.ಎಲ್ ರಾಹುಲ್ ಭರ್ಜರಿ ಸೆಂಚುರಿ (ಅಜೇಯ 100) ಬಾರಿಸಿ ಮಿಂಚಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್ನಲ್ಲಿ ಟಾಸ್ ಗೆದ್ದ ಅತಿಥೇಯ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಅತಿಥೇಯರಿಂದ ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್ ಓಪನಿಂಗ್ ಬ್ಯಾಟ್ಸ್ಮನ್ ಗಳಾದ ಕೆ.ಎಲ್ ರಾಹುಲ್ (ಅಜೇಯ 100) ಮತ್ತು ಕ್ರಿಸ್ಗೇಲ್ (63) ಉತ್ತಮ ಆಟದ ನೆರವಿನಿಂದ 197ರನ್ಗಳಿಸಿ, ಮುಂಬೈಗೆ 198ರನ್ಗಳ ಗುರಿ ನೀಡಿದೆ.
ಕೆ.ಎಲ್ ರಾಹುಲ್ 64 ಎಸೆತಗಳಲ್ಲಿ ತಲಾ 6 ಸಿಕ್ಸರ್ ಮತ್ತು 6 ಬೌಂಡರಿ ಸಿಡಿಸಿ ವರ್ಲ್ಡ್ಕಪ್ಗೆ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
‘ವರ್ಲ್ಡ್ಕಪ್ಗೆ ವಿರಾಟ್ ಬದಲು ರೋಹಿತ್ ಕ್ಯಾಪ್ಟನ್ ಆಗಲಿ’ ..!
ಒಡಿಐ ವರ್ಲ್ಡ್ಕಪ್ಗೆ ವಿರಾಟ್ ಕೊಹ್ಲಿ ಅವರ ಬದಲು ಹಿಟ್ಮ್ಯಾನ್ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಲಿ ಅನ್ನೋ ಕೂಗು ಬಲವಾಗಿ ಕೇಳಿ ಬರ್ತಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡ್ತಾ ಇದೆ. ಅದರಲ್ಲೂ ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಕೇವಲ 136ರನ್ ಗಳಿಸಿದ್ದರೂ ಆ ಸ್ಕೋರ್ ಅನ್ನು ಡಿಫೈನ್ ಮಾಡಿಕೊಂಡು ಮುಂಬೈ ಗೆಲುವಿನ ಕೇಕೆ ಹಾಕಿತ್ತು.
ಇತ್ತ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳಪೆ ಪ್ರದರ್ಶನವನ್ನೇ ಮುಂದುವರೆಸಿದೆ. ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಆಡಿರೋ ಎಲ್ಲಾ 6 ಮ್ಯಾಚ್ಗಳಲ್ಲೂ ವಿರಾಟ್ ಪಡೆ ಸೋಲನುಭವಿಸಿದೆ. ಆದ್ದರಿಂದ ಟ್ವಿಟ್ಟಗರು ವರ್ಲ್ಡ್ಕಪ್ಗೆ ವಿರಾಟ್ ಬದಲು ರೋಹಿತ್ ಶರ್ಮಾ ಅವರನ್ನೇ ನಾಯಕನನ್ನಾಗಿ ಮಾಡಿ ಅಂತ ಒತ್ತಾಯಿಸುತ್ತಿದ್ದಾರೆ.
‘ಪಂದ್ಯಗಳನ್ನು ಹೇಗೆ ಗೆಲ್ಲಬೇಕು ಅನ್ನೋದು ರೋಹಿತ್ ಶರ್ಮಾಗೆ ಚೆನ್ನಾಗಿ ಗೊತ್ತಿದೆ. ವರ್ಲ್ಡ್ಕಪ್ಗೆ ಅವರನ್ನೇ ನಾಯಕನನ್ನಾಗಿ ಮಾಡಿ’ ಅಂತ ಕೆಲವು ಟ್ವಿಟ್ಟಿಗರು ಬಿಸಿಸಿಐಯನ್ನು ಮನವಿ ಮಾಡಿದ್ದಾರೆ.
6ನೇ ಮ್ಯಾಚ್ನಲ್ಲೂ ಕೊಹ್ಲಿ ಪಡೆಗೆ ಸೋಲು..!
ಬೆಂಗಳೂರು : ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ 6 ನೇ ಮ್ಯಾಚ್ನಲ್ಲೂ ಸೋತು ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿದೆ.
ತವರಿನಂಗಳ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತನ್ನ ಪಾಲಿನ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿತು. ನಾಯಕ ವಿರಾಟ್ ಕೊಹ್ಲಿ (41) ಮತ್ತು ಮೊಯೀನ್ ಅಲಿ (32) ತಂಡದ ಪರ ಅತೀ ಹೆಚ್ಚು ರನ್ಗಳಿಸಿದ ಆಟಗಾರರೆನಿಸಿದರು.
ಗುರಿ ಬೆನ್ನತ್ತಿದ ಡೆಲ್ಲಿ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತು. ಡೆಲ್ಲಿ ಪರ ನಾಯಕ ಶ್ರೇಯಸ್ ಅಯ್ಯರ್ 67 ರನ್ ಬಾರಿಸಿ ಮಿಂಚಿದ್ರು.
ತವರಿನಲ್ಲಿ ಮುಗ್ಗರಿಸಿದ ಎಸ್ಆರ್ಹೆಚ್
ಹೈದರಾಬಾದ್ : ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಭುವನೇಶ್ವರ್ ಕುಮಾರ್ ನೇತೃತ್ವದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಅದರ ತವರು ನೆಲದಲ್ಲೇ ಮಣಿಸಿದೆ.
ಹೈದರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 7 ವಿಕೆಟ್ ನಷ್ಟಕ್ಕೆ 136ರನ್ ಗಳಿಸಿತು. ಮುಂಬೈ ಪರ ಪೊಲಾರ್ಡ್ 46ರನ್ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಅನಿಸಿಕೊಂಡರು.
137 ರನ್ ಗುರಿ ಬೆನ್ನತ್ತಿದ ಎಸ್ಆರ್ಹೆಚ್ ಕೇವಲ 96ರನ್ಗಳಿಗೆ ಆಲೌಟ್ ಆಗುವುದರೊಂದಿಗೆ ಹೀನಾಯ ಸೋಲನುಭವಿಸಿತು. ಮುಂಬೈ ಪರ ಅಲ್ಜಾರಿ ಜೋಸೆಫ್ ಪದಾರ್ಪಣೆ ಪಂದ್ಯದಲ್ಲೇ 6 ವಿಕೆಟ್ ತೆಗೆದು ಮಿಂಚಿದ್ರು.
ಪಂಜಾಬ್ ಎದುರು ಚೆನ್ನೈಗೆ ‘ಸೂಪರ್’ ಗೆಲುವು..!
ಚೆನ್ನೈ : ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 22ರನ್ಗಳ ಸೂಪರ್ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ನಿಗದಿತ 20 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 160ರನ್ ಗಳಿಸಿತು. ಶೇನ್ ವ್ಯಾಟ್ಸನ್ 26, ಡುಪ್ಲೆಸಿಸ್ 54, ಸುರೇಶ್ ರೈನಾ 17, ನಾಯಕ ಧೋನಿ ಅಜೇಯ 37, ಅಂಬಟಿ ರಾಯುಡು ಅಜೇಯ 21ರನ್ ಗಳಿಸಿದರು.
161ರನ್ ಗುರಿ ಬೆನ್ನಟ್ಟಿದ ಪಂಜಾಬ್ 20 ಓವರ್ ಪೂರ್ಣಗೊಳಿಸಿದರೂ 5 ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 135ರನ್ಗಳನ್ನು ಮಾತ್ರ. ಕನ್ನಡಿಗ ಕೆ.ಎಲ್ ರಾಹುಲ್ (55) ಮತ್ತು ಸರ್ಫರಾಜ್ ಖಾನ್ (67) ಬಿಟ್ಟರೆ ಉಳಿದ ಯಾವ ಬ್ಯಾಟ್ಸ್ ಮನ್ ಗಳೂ ನಿರೀಕ್ಷಿತ ಪ್ರದರ್ಶನ ನೀಡದ ಪರಿಣಾಮ ಪಂಜಾಬ್ ಸೋಲುಂಡಿತು.
ಆರ್ಸಿಬಿಗೆ 4ನೇ ಸೋಲು, ಆರ್ಆರ್ಗೆ ಚೊಚ್ಚಲ ಗೆಲುವು..!
ಜೈಪುರ : ರಾಯಲ್ ಚಾಲೆಂಜರ್ಸ್ ಬೆಂಗಳೂರು 12ನೇ ಆವೃತ್ತಿಯ ತನ್ನ 4ನೇ ಮ್ಯಾಚ್ನಲ್ಲೂ ಸೋಲುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಕಳೆದ 3 ಮ್ಯಾಚ್ಗಳಲ್ಲಿ ಸೋತಿದ್ದ ರಾಜಸ್ಥಾನ್ ರಾಯಲ್ಸ್ ಆರ್ಸಿಬಿ ಎದುರು 7 ವಿಕೆಟ್ಗಳ ಗೆಲುವು ಪಡೆದು ಪ್ರಸಕ್ತ ಆವೃತ್ತಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿದೆ.
‘ಸೋತವರ ಕಾಳಗ’ಕ್ಕೆ ಸಾಕ್ಷಿಯಾಗಿದ್ದ ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್ನಲ್ಲಿ ಟಾಸ್ ಗೆದ್ದ ಅತಿಥೇಯ ರಾಜಸ್ಥಾನ್ ರಾಯಲ್ಸ್ ಪ್ರವಾಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿಗೆ ಕ್ಯಾಪ್ಟನ್ ವಿರಾಟ್ ಕೊಹ್ಲಿ (23), ಪಾರ್ಥಿವ್ ಪಟೇಲ್ (67) 49ರನ್ಗಳ ಆರಂಭಿಕ ಜೊತೆಯಾಟವನ್ನು ನೀಡಿದರು. ತಂಡದ ಮೊತ್ತ 49 ಆಗಿದ್ದಾಗ ವಿರಾಟ್ ಪೆವಿಲಿಯನ್ ಸೇರಿದರು. ನಂತರ ಬಂದ ಎ.ಬಿ ಡಿವಿಲಿಯರ್ಸ್ (13) ಮತ್ತು ಹೆಟ್ಮೇರ್ (1) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಸ್ಟೋಯಿನ್ಸ್ ಅಜೇಯ 31, ಮೊಯಿನ್ ಅಲಿ ಅಜೇಯ 18ರನ್ ಮಾಡಿದರು. ಅಂತಿಮವಾಗಿ ಆರ್ಸಿಬಿ ತನ್ನ ಪಾಲಿನ 20 ಓವರ್ಗಳಲ್ಲಿ 4 ವಿಕೆಟ್ಗೆ ಕೇವಲ 158ರನ್ಗಳಿಸಿತು.
ಆರ್ಆರ್ ಕೊನೆಯ ಎಸೆತದಲ್ಲಿ ಗೆಲುವಿನ ಕೇಕೆ ಹಾಕಿತು. ಕ್ಯಾಪ್ಟನ್ ಅಜಿಂಕ್ಯ ರಹಾನೆ 22, ಜೋಸ್ ಬಟ್ಲರ್ 59 ರನ್ಗಳಿಸಿ ಉತ್ತಮ ಆರಂಭ ನೀಡಿ ಪೆವಿಲಿಯನ್ ಸೇರಿದ್ರು. ಸ್ಟೀವನ್ ಸ್ಮಿತ್ 38 ರನ್ ಕೊಡುಗೆ ನೀಡಿದ್ರು. ರಾಹುಲ್ ತ್ರಿಪತಿ ಅಜೇಯ 34, ಸ್ಟ್ರೋಕ್ ಅಜೇಯ 1ರನ್ ಗಳಿಸಿ ಗೆಲುವಿನ ದಡ ಸೇರಿಸಿ ಸಂಭ್ರಮಿಸಿದ್ರು.
ಕೂಲ್ ಕ್ಯಾಪ್ಟನ್ ಪಡೆಗೆ ‘ಸೂಪರ್’ ಗೆಲುವು..!
ಚೆನ್ಮೈ : ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀರಸ ಪ್ರದರ್ಶನವನ್ನು ಮುಂದುವರೆಸಿದ್ದರೆ, ಅತ್ತ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ‘ಚಾಂಪಿಯನ್’ ಆಟವನ್ನು ಮುಂದುವರೆಸಿದೆ.
ರಾಜಸ್ಥಾನ್ ರಾಯಲ್ಸ್ ಎದುರಿನ ಮ್ಯಾಚ್ ನಲ್ಲಿ ಧೋನಿ ಪಡೆ ‘ಸೂಪರ್’ ಗೆಲುವು ಪಡೆದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಧೋನಿ ಅಬ್ಬರದ ಅರ್ಧಶತಕ (ಅಜೇಯ 75) ಹಾಗೂ ಸುರೇಶ್ ರೈನಾ (36), ಬ್ರಾವೋ (27) ಅವರ ಉತ್ತಮ ಆಟದ ನೆರವಿನಿಂದ ತನ್ನ ಪಾಲಿನ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 175 ರನ್ ಪೇರಿಸಿತು.
ಗುರಿ ಬೆನ್ನತ್ತಿದ ಆರ್ ಆರ್ ಗೆ ಉತ್ತಮ ಆರಂಭ ಸಿಗಲಿಲ್ಲ.ಆದರೆ, ಮಧ್ಯಮ ಕ್ರಮಾಂಕದಲ್ಲಿ ತ್ರಿಪತಿ (39), ಸ್ಮಿತ್ (28) ತಕ್ಕಮಟ್ಟಿನ ಆಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಅಂತಿಮ ಒಂದು ಹಂತದಲ್ಲಿ ಸ್ಟ್ರೋಕ್ (26 ಎಸೆತಗಳಲ್ಲಿ 46) ಮತ್ತು ಜೋಫ್ರಾ ಅರ್ಚರ್ ( 11 ಎಸೆತಗಳಲ್ಲಿ 24) ರನ್ ಗಳಿಸಿ ವಿಜಯಲಕ್ಷ್ಮಿಯನ್ನು ತಮ್ಮ ತಂಡದತ್ತ ಮುಖಮಾಡುವಂತೆ ಮಾಡಿದರಾದರೂ ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆರ್ ಆರ್ 8 ರನ್ ಗಳಿಂದ ಸೋಲುಂಡಿತು.
ಆರ್ಸಿಬಿಗೆ ಸತತ 3ನೇ ಸೋಲು..!
ಹೈದರಾಬಾದ್ : ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ 3ನೇ ಮ್ಯಾಚ್ನಲ್ಲೂ ಸೋಲುಂಡು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.
ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್ನಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಎದುರಾಳಿ ಸನ್ರೈಸರ್ಸ್ ಹೈದರಾಬಾದ್ ಅನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಮೊದಲು ಬ್ಯಾಟಿಂಗ್ಗೆ ಇಳಿದ ಹೈದರಬಾದ್ ಜಾನಿ ಬೈರ್ಸ್ಟ್ರೋ (114) ಮತ್ತು ಡೇವಿಡ್ ವಾರ್ನರ್ (ಅಜೇಯ 100) ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ ಬರೋಬ್ಬರಿ 231ರನ್ ಗಳಿಸಿತು.
ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್ಸಿಬಿ ತನ್ನ ಪಾಲಿನ 20 ಓವರ್ ಗಳಲ್ಲಿ ಇನ್ನೂ 1 ಎಸೆತ ಬಾಕಿ ಇರುವಂತೆಯೇ ಕೇವಲ 113ರನ್ ಗಳಿಗೆ ಆಲ್ಔಟ್ ಆಯ್ತು.