Tuesday, May 26, 2020

ರನೌಟ್​ ಆದ ಸಿಟ್ಟಿನಲ್ಲಿ ಬ್ಯಾಟ್​ನಿಂದ ಚೇರ್​ಗೆ ಹೊಡೆದ ಫಿಂಚ್..!

0

ಮೇಲ್ಬೋರ್ನ್​ : ಆಟ ಅಂದ್ರೆ ಸೋಲು-ಗೆಲುವು ಇದ್ದಿದ್ದೇ.. ಆಟಗಾರ ಅಂದ್ರೂ ಅಷ್ಟೇ ಕೆಲವೊಮ್ಮೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪರ್ಫಾರ್ಮೆನ್ಸ್ ಕೊಡಬಹುದು, ಮತ್ತೆ ಕೆಲವೊಮ್ಮೆ ಫೆಲ್ಯೂರ್ ಆಗಬಹುದು. ಗೆದ್ದಾಗ ಸಂಭ್ರಮಿಸ್ತೀವಿ.. ಸೋತಾಗ ಅದೇ ರೀತಿ ಕೆಟ್ಟದಾಗಿ ರಿಯಾಕ್ಟ್ ಮಾಡೋದು ಕೂಡ ಇದ್ದಿದ್ದೇ..!
ಇನ್ನು ಕ್ರಿಕೆಟ್ ವಿಷ್ಯಕ್ಕೆ ಬಂದ್ರೆ ಬ್ಯಾಟ್ಸ್​ಮನ್ ಒಳ್ಳೆಯ ಇನ್ನಿಂಗ್ಸ್ ಕಟ್ಟುತ್ತಿರುವಾಗ, ತಂಡಕ್ಕೆ ಆಧಾರವಾಗಿ ನಿಂತು ಬ್ಯಾಟ್​ ಬೀಸುತ್ತಿರುವಾಗ ಅನ್​ ಎಸ್ಪೆಕ್ಟೆಡ್​ ರೀತಿಯಲ್ಲಿ ಔಟ್ ಆಗಿ ಪೆವಿಲಿಯನ್ ಸೇರೋದು ಕೂಡ ಪಾರ್ಟ್​ ಆಫ್ ದಿ ಗೇಮ್ ಅಂತಲೇ ಹೇಳಬಹುದು. ಹೀಗೆ ತನ್ನದಲ್ಲದ ತಪ್ಪಿಗೆ ರನ್​ ಔಟ್ ಆದ ಆಸ್ಟ್ರೇಲಿಯಾ ಬ್ಯಾಟ್ಸ್​ನ್ ಆ್ಯರೋನ್ ಫಿಂಚ್ ತನ್ನ ಕೋಪವನ್ನು ಚೇರ್ ಮೇಲೆ ತೀರಿಸಿಕೊಂಡಿದ್ದಾರೆ.
2019ನೇ ಸಾಲಿನ ಬಿಗ್ ಬಾಷ್ ಲೀಗ್​ನ ಫೈನಲ್ ವೇಳೆ ಈ ಘಟನೆ ನಡೆದಿದೆ. ಮೇಲ್ಬೋರ್ನ್​ ಸ್ಟಾರ್ಸ್ ಮತ್ತು ಮೆಲ್ಬೋರ್ನ್​ ರೆನೆಗೇಡ್ಸ್ ತಂಡಗಳ ನಡುವೆ ನಡೆದ ಮ್ಯಾಚ್​ನಲ್ಲಿ ರೆನೆಗೇಡ್ಸ್ ತಂಡದ ಕ್ಯಾಪ್ಟನ್ ಫಿಂಚ್ ಈ ವರ್ತನೆ ತೋರಿದ್ದಾರೆ. ಅವರು ಮತ್ತು ಕ್ಯಾಮರೂನ್ ವೈಟ್​ ಸ್ಕ್ರೀಸ್​ನಲ್ಲಿದ್ದರು. ಎದುರಾಳಿ ತಂಡದ ಬೌಲರ್ ಜಾಕ್ಸನ್ ಬರ್ಡ್ ಎಸೆದ ಬಾಲ್ ಅನ್ನು ವೈಟ್​ ನೇರವಾಗಿ ಬಾರಿಸಿದ್ರು. ಆ ಬಾಲ್ ಬರ್ಡ್ ಕಾಲಿಗೆ ತಾಗಿ ಎದುರಿನ ವಿಕೆಟ್, ಅಂದ್ರೆ ಫಿಂಚ್ ಇದ್ದ ಬದಿಯ ವಿಕೆಟ್​ಗೆ ಬಡಿಯಿತು. ಆಗ ಸ್ಕ್ರೀಸ್​ ಬಿಟ್ಟಿದ್ದ ಫಿಂಚ್ ರನ್​ಔಟ್ ಆಗಿ ಪೆವಿಲಿಯನ್​ ಸೇರ ಬೇಕಾಯಿತು.
ಹೀಗೆ ರನ್​ ಔಟ್ ಆದ ಫಿಂಚ್ ಪೆವಿಲಯನ್ ಕಡೆ ಹೆಜ್ಜೆ ಹಾಕಿದ್ರು. ಅಲ್ಲಿದ್ದ ಚೇರ್ ಮೇಲೆ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದ್ರು..! ಬ್ಯಾಟ್​ನಿಂದ ಚೇರ್​ಗೆ ಬಾರಿಸಿದ್ರು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇನ್ನು ಫಿಂಚ್ ನೇತೃತ್ವದ ರೆನೆಗೇಡ್ಸ್ ತಂಡವೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ

ಪಾಕ್​ ಸೂಪರ್​ ಲೀಗ್ ಪ್ರಸಾರಕ್ಕೆ ರಿಲಯನ್ಸ್ ಬ್ರೇಕ್..!

0

ನವದೆಹಲಿ : ಪಾಕಿಸ್ತಾನ್ ಸೂಪರ್ ಲೀಗ್​ (ಪಿಎಸ್​ಎಲ್​) ಪ್ರಸಾರಕ್ಕೆ ರಿಲಯನ್ಸ್ ಬ್ರೇಕ್ ಹಾಕಿದೆ.
ಪುಲ್ವಾಮ ದಾಳಿ ಹಿನ್ನೆಲೆಯಲ್ಲಿ ಪಾಕ್​ ವಿರುದ್ಧ ಐಎಂಜಿ ರಿಲಯನ್ಸ್ ಈ ನಡೆಯನ್ನು ಅನುಸರಿಸಿದೆ. ಐಪಿಎಲ್​ನಂತೆ ಪಾಕಿಸ್ತಾನದ ಕ್ರಿಕೆಟ್ ಲೀಗ್ ಈ ಪಿಎಸ್​ಎಲ್. ಸದ್ಯ ದುಬೈನಲ್ಲಿ ಈ ಟೂರ್ನಿ ನಡೆಯುತ್ತಿದೆ. ಟೂರ್ನಿಯ ಪ್ರಸಾರದ ಹಕ್ಕನ್ನು ಐಎಂಜಿ ರಿಲಯನ್ಸ್ ಹೊಂದಿತ್ತು. ಆದರೆ, ಇದೀಗ ರಿಲಯನ್ಸ್ ಪ್ರಸಾರಕ್ಕೆ ಬ್ರೇಕ್ ಹಾಕಿದ್ದು, ಹೊಸ ಬ್ರಾಡ್​ಕಾಸ್ಟ್​ ಪ್ರಡ್ಯೂಸರ್​ಗಾಗಿ ಹುಡುಕಾಟ ನಡೆಸುತ್ತಿದೆ. ಆದರೆ, ಪ್ರೊಡ್ಯಸೂರ್ ಅಷ್ಟು ಬೇಗ ಸಿಗೋದು ಕಷ್ಟ. ಆದ್ದರಿಂದ ಈ ಬಾರಿ ಪಿಎಸ್​ಎಲ್​ ಮ್ಯಾಚ್​ಗಳು ನಡೆಯೋದು ಅನುಮಾನ. ಇದರಿಂದ ಪಾಕಿಸ್ತಾನ್​ ಕ್ರಿಕೆಟ್​ ಬೋರ್ಡ್​ಗೆ ಭಾರೀ ನಷ್ಟವಾಗಿದೆ.

ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ಹೊಣೆ ನನ್ನದು ಅಂದ್ರು ಸೆಹ್ವಾಗ್..!

0

ನವದೆಹಲಿ : ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಮಕ್ಕಳ ಶಿಕ್ಷಣದ ಹೊಣೆಯನ್ನು ವಹಿಸಿಕೊಳ್ಳೋದಾಗಿ ಭರವಸೆ ನೀಡಿದ್ದಾರೆ.
‘ಹುತಾತ್ಮ ಯೋಧರಿಗಾಗಿ ನಾವೇನು ಮಾಡಿದ್ರೂ ಕಮ್ಮಿಯೇ. ನನ್ನಿಂದ ಸಣ್ಣ ಸಹಾಯವಾಗಲಿ ಅಂತ ವೀರ ಮರಣವನ್ನಪ್ಪಿದ ಎಲ್ಲಾ ಯೋಧರ ಮಕ್ಕಳ ಶಿಕ್ಷಣಕ್ಕೆ ಅಗತ್ಯ ನೆರವು ನೀಡುತ್ತೇನೆ” ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಓಪನರ್ ಸೆಹ್ವಾಗ್.
ಈ ಮೂಲಕ 40 ಯೋಧರ ಕುಟುಂಬಗಳಿಗೆ ಸೆಹ್ವಾಗ್ ಹಿರಿ ಮಗನ ಸ್ಥಾನದಲ್ಲಿ ನಿಂತಿದ್ದಾರೆ. ಪುಲ್ವಾಮಾ ದಾಳಿ ನಡೆದಾಗ ರಣಹೇಡಿಗಳ ಹೇಯಕೃತ್ಯಕ್ಕೆ ಕಿಡಿಕಾರಿದ್ದ ವೀರೇಂದ್ರ ಸೆಹ್ವಾಗ್ ಇಂದು ಟ್ವೀಟ್​ ಮೂಲಕ ಹುತಾತ್ಮರಾದ ಯೋಧರ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳೋದಾಗಿ ತಿಳಿಸಿದ್ದಾರೆ.

ಕೇದಾರ್ ಜಾಧವ್ ಮಸ್ತ್​ ಡ್ಯಾನ್ಸ್

0

ಟೀಮ್​ ಇಂಡಿಯಾ ಆಲ್​ರೌಂಡರ್ ಕೇದಾರ್ ಜಾಧವ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸೀರಿಸ್ ಗೆದ್ದಿರೋ ಭಾರತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದೆ. ಶನಿವಾರ ಸಿಡ್ನಿಯಲ್ಲಿ ನಡೆದ ಫಸ್ಟ್ ಒಡಿಐನಲ್ಲಿ ಸೋತಿರುವ ವಿರಾಟ್ ಪಡೆ ಉಳಿದ ಎರಡೂ ಮ್ಯಾಚ್​ಗಳನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.
ಅಡಿಲೇಡ್ ನಲ್ಲಿ ನಡೆಯಲಿರುವ 2ನೇ ಮ್ಯಾಚ್​ಗಾಗಿ ಪ್ರಯಾಣ ಬೆಳೆಸಿದೆ. ಆಲ್​ ರೌಂಡರ್ ಕೇದಾರ್ ಜಾಧವ್ ವೈಸ್​ ಕ್ಯಾಪ್ಟನ್​ ರೋಹಿತ್ ಶರ್ಮಾ ಅವರ ಮುಂದೆಯೇ ಡ್ಯಾನ್ಸ್ ಮಾಡಿ ಜೊತೆಗಿದ್ದವರನ್ನೆಲ್ಲಾ ರಂಜಿಸಿದ್ದಾರೆ. ಈ ವಿಡಿಯೋವನ್ನು ಇಂಡಿಯಾ ಕ್ರಿಕೆಟ್​ ಟೀಮ್ ಟ್ವೀಟರ್ ನಲ್ಲಿ ಶೇರ್ ಮಾಡಲಾಗಿದೆ. ಕೇದಾರ್ ಸಕತ್ ಸ್ಟೆಪ್ ಹಾಕಿದ್ದಾರೆ.

ಅಳುತ್ತಲೇ ವಿದಾಯದ ಸುಳಿವು ನೀಡಿದ ಟೆನ್ನಿಸ್ ದಿಗ್ಗಜ

0

ವಿಶ್ವದ ಮಾಜಿ ನಂ.1 ಟೆನ್ನಿಸ್​​ ಪಟು ಆ್ಯಂಡಿ ಮರ್ರೆ ವೃತ್ತಿ ಜೀವನಕ್ಕೆ ಫುಲ್​ಸ್ಟಾಪ್​ ಇಡುವ ಸೂಚನೆ ನೀಡಿದ್ದಾರೆ. ಮುಂದಿನ ವಾರ ಆರಂಭವಾಗಲಿರುವ ಆಸ್ಟ್ರೇಲಿಯಾ ಓಪನ್​ ತಮ್ಮ ವೃತ್ತಿ ಬದಕನ್ನು ಕೊನೆಯ ಟೂರ್ನಿಯಾಗಲಿದೆ ಎಂದು ಮರ್ರೆ ತಿಳಿಸಿದ್ದಾರೆ. ಆದರೆ ಈ ವರ್ಷ ವಿಂಬಲ್ಡನ್​ನಲ್ಲಿ ಆಡಬೇಕೆಂಬ ಬಯಕೆಯೂ ಇದೆ ಅಂತ ಈ ಸಂದರ್ಭದಲ್ಲಿ ವ್ಯಕ್ತ ಪಡಿಸಿದ್ದಾರೆ.

ಈವರೆಗೂ 3 ಬಾರಿ ಗ್ರ್ಯಾಂಡ್​​ ಸ್ಲಾಮ್​ ಜಯಸಿರುವ ಮರ್ರೆ ತೀವ್ರ ಸೊಂಟ ನೋವಿನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅಭ್ಯಾಸ ನಡೆಸಲು ಸಹ ಆಗುತ್ತಿಲ್ಲ, ನಾನು ಸೀಮಿತ ಚಲನವಲನಗಳೊಂದಿಗೆ ಮಾತ್ರ ಆಡಲು ಸಾಧ್ಯ. ಸ್ಪರ್ಧೆ ಅಥವಾ ಕಠಿಣ ಅಭ್ಯಾಸ ಮಾಡಲು ನನಗೆ ಕೆಲ ಇತಿಮಿತಿಗಳಿವೆ ಎಂದು ಮರ್ರೆ ಹೇಳಿದರು.

ಗಾಯದ ಸಮಸ್ಯೆಯಿಂದ ಕಳೆದ ವರ್ಷದ ಆಸ್ಟ್ರೇಲಿಯನ್​ ಓಪನ್​ನಿಂದಲೂ ದೂರ ಉಳಿದಿದ್ದ ಮರ್ರೆ, ಬಳಿಕ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಸದ್ಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 230 ಸ್ಥಾನದಲ್ಲಿರುವ ಮರ್ರೆ ವೃತ್ತಿ ಜೀವನದಲ್ಲಿ 3 ಗ್ರ್ಯಾಂಡ್ ಸ್ಲ್ಯಾಂ ಜಯಿಸಿದ್ದಾರೆ. 2005ರಲ್ಲಿ ವೃತ್ತಿ ಬದುಕು ಆರಂಭಿಸಿದ ಮರ್ರೆ 2 ಬಾರಿ ಒಲಿಂಪಿಕ್‌ ಚಿನ್ನದ ಪದಕ, 45 ಎಟಿಪಿ ಪ್ರಶಸ್ತಿ, 2 ವಿಂಬಲ್ಡನ್​, 1 ಯುಎಸ್​​ ಓಪನ್​ ಪ್ರಶಸ್ತಿಗಳನ್ನು ಜಯಿಸಿದ್ದಾರೆ.

 

ಕಿಚಾಯಿಸಿದ ಪೈನ್ ಮನೆಗೇ ಹೋದ್ರು ರಿಷಭ್..!

0

ಟೀಮ್ ಇಂಡಿಯಾದ ಯುವ ಕ್ರಿಕೆಟಿಗ ರಿಷಭ್ ಪಂತ್ ತಮ್ಮನ್ನು ಕಿಚಾಯಿಸಿದ ಆಸ್ಟ್ರೇಲಿಯಾ ಕ್ಯಾಪ್ಟನ್​ ಟಿಮ್ ಪೈನ್ ಅವರ ಮನೆಗೆ ಹೋಗಿದ್ದಾರೆ..!
ಮೆಲ್ಬರ್ನ್​ ಟೆಸ್ಟ್​ ವೇಳೆ ರಿಷಭ್ ಪಂತ್ ಮತ್ತು ಟಿಮ್ ಪೈನ್​ ಮತ್ತು ರಿಷಭ್ ಪರಸ್ಪರ ಕಿಚಾಯಿಸಿಕೊಂಡಿದ್ದರು. ಮ್ಯಾಚ್​ ವೇಳೆ ಸ್ಲೆಡ್ಜಿಂಗ್​ ಮಾಡಿದ ಪೈನ್ , ಒಡಿಐಯಿಂದ ನೀನು ಹೊರ ಬಿದ್ದಿದ್ದೀಯ, ನಿನ್ನ ಜಾಗಕ್ಕೆ ಧೋನಿ ಬಂದಿದ್ದಾರೆ. ನೀನು ನನ್ ಮನೆಗೆ ಬಾ..ನಾನು ಮತ್ತು ನನ್ನ ಹೆಂಡ್ತಿ ಸಿನಿಮಾ ನೋಡೋಕೆ ಹೋದಾಗ ನೀನು ನನ್ನ ಮಕ್ಕಳನ್ನು ನೋಡಿಕೊಂಡಿರು ಅಂತ ಹೇಳಿದ್ರು. ನಂತರ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಪೈನ್​ ಬ್ಯಾಟಿಂಗ್​ ಮಾಡುವಾಗ ರಿಷಭ್ ಪೈನ್ ಅವರನ್ನು ಟೆಂಪರ್​ವರಿ ಕ್ಯಾಪ್ಟನ್ ಅಂತ ಕರೆದಿದ್ರು.
ಈಗ ಪಂಥ್ ಫೀಲ್ಡ್​ನಲ್ಲಿ ನಡೆದಿದ್ದು ಫೀಲ್ಡ್​ಗೇ ಸೀಮಿತವಾಗಿರ್ಲಿ ಅಂತ ಎಲ್ಲವನ್ನೂ ಮರೆತು ಪೈನ್​ ಮನೆಗೆ ಹೋಗಿ ಮಕ್ಕಳೊಂದಿಗೆ ಕಾಲ ಕಳೆದಿದ್ದಾರೆ. ಇದನ್ನು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಮಗಳ ಜೊತೆ ಧೋನಿ ತುಂಟಾಟ

0

ಸದ್ಯ ಮೈದಾನದಿಂದ ಹೊರಗುಳಿದು ವಿಶ್ರಾಂತಿಯಲ್ಲಿರುವ ಮಾಜಿ ನಾಯಕ ಎಮ್ ಎಸ್ ಧೋನಿ ಮಗಳು ಝೀವಾ ಜೊತೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಚೆನ್ನೈನ ಬೀಚ್‌ವೊಂದಕ್ಕೆ ತೆರಳಿದ್ದ ಧೋನಿ ಮಗಳೊಂದಿಗೆ ಮರಳಿನ ಆಟವಾಡಿದ್ದಾರೆ. ಆಟವಾಡುತ್ತಿರುವ ವಿಡಿಯೋವನ್ನ ಧೋನಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.
ತಾಯಿ ಮಕ್ಕಳ ಸಂಬಂಧ ಅದು ಅತಿ ಪವಿತ್ರ ಸಂಬಂಧ. ಆದ್ರೆ ತಂದೆ ಮಕ್ಕಳ ಸಂಬಂಧ ಅನ್ನೋದು ಅದೊಂದು ಪ್ರೀತಿಯ ಭಾವಪೂರ್ಣ ಸಂಬಂಧ. ಅದ್ರಲ್ಲೂ ಹೆಣ್ಣು ಮಕ್ಕಳಿಗೆ ಅಪ್ಪ ಅಂದ್ರೆ ಅದೇನೋ ಪ್ರೀತಿ, ಅದೇನೋ ಸಲಿಗೆ, ಮಗಳ ಪಾಲಿಗೆ ಪಾಲಿಗೆ ಅಪ್ಪನೇ ಹೀರೋ.. ಭಾರತದ ಹೆಮ್ಮೆಯ ಕ್ರಿಕೆಟಿಗ ಎಂಎಸ್​​ ಧೋನಿಗಂತೂ ಮಗಳೇ ಪ್ರಪಂಚ, ಮಗಳು ಅಂದ್ರೆ ಧೋನಿಗೆ ಜೀವಾ.
ಬಿಡುವು ಸಿಕ್ಕ ಸಮಯದಲ್ಲೆಲ್ಲಾ ಮಾಹಿ ಮಗಳ ಜೊತೆ ಮಗುವಾಗಿ ಬಿಡ್ತಾರೆ.. ಮಗುವಿನಂತೆ ಮಗಳ ಜೊತೆ ಆಟ ಆಡ್ತಾರೆ. ಅವರ ಈ ಪ್ರೀತಿಯ ಬಂಧವನ್ನು ನೋಡೋದೆ ಚೆಂದ.. ಅವರು ಮಗಳ ಜೊತೆ ಆಟ ಆಡೋ ವಿಡಿಯೋಗಳು ಆಗಾಗಾ ಸೋಷಿಯಲ್ ಮಿಡೀಯಾದಲ್ಲಿ ವೈರಲ್​ ಆಗ್ತಾನೇ ಇರುತ್ತೆ ಇದೀಗ ಮತ್ತೊಂದು ವಿಡಿಯೋ ವೈರಲ್​ ಆಗಿದೆ.
ಸದ್ಯಕ್ಕೆ ಧೋನಿ ಪತ್ನಿ ಸಾಕ್ಷಿ ಮತ್ತು ಮಗಳು ಝೀವಾಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಧೋನಿ ಕುಟುಂಬ ಸಮೇತರಾಗಿ ಚೆನ್ನೈ ಬೀಚ್‌ಗೆ ತೆರಳಿದ್ದರು. ಈ ವೇಳೆ ಝೀವಾಳೊಂದಿಗೆ ಮರಳಿನಲ್ಲಿ ಆಟವಾಡುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿದ್ದರು. ಈ ದೃಶ್ಯವನ್ನು ಧೋನಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಹುಲ್​ ದ್ರಾವಿಡ್​ಗೆ ಸಿಐಡಿ ಬಿಸಿ..!

0

ವಿಕ್ರಮ್​ ಇನ್ವೆಸ್ಟ್​ಮೆಂಟ್​ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕ್ರಿಕೆಟಿಗ ರಾಹುಲ್​ ದ್ರಾವಿಡ್​ ಗೆ ಸಿಐಡಿ ತನಿಖೆ ಬಿಸಿ ಮುಟ್ಟಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ದ್ರಾವಿಡ್​ ಸೇರಿದಂತೆ ಹಲವು ಕ್ರೀಡಾಪಟುಗಳ ಅಕೌಂಟ್​ ಫ್ರೀಜ್ ಮಾಡಲಾಗಿದೆ. ಒಟ್ಟಾರೆ ವಿಕ್ರಂ ಕಂಪನಿಯಿಂದ ದೊಡ್ಡದ ಮೊತ್ತ ಪಡೆದ 280 ಮಂದಿ ಬ್ಯಾಂಕ್​ ಫ್ರೀಜ್​ ಮಾಡಿದ್ದು, ಕರ್ನಾಟಕದ ಬಹುತೇಕ ಕ್ರೀಡಾಪಟುಗಳಿಗೆ ಕಂಪನಿ ವಂಚಿಸಿದೆ.
ವಿಕ್ರಂ ಇನ್ವೆಸ್ಟ್​ಮೆಂಟ್​, ವಿಕ್ರಂ ಗ್ಲೋಬಲ್​ ಸೆಲೂಷನ್ ಹೆಸರಲ್ಲಿ ಹಣ ಹೂಡಿಕೆ ಮಾಡಿದ್ದು, ರಾಘವೇಂದ್ರ ಶ್ರೀನಿವಾಸ್​ ಎಂಬಾತ ಕೋಟ್ಯಾಂತರ ರೂ ವಂಚಿಸಿದ್ದಾನೆ, ಹೂಡಿಕೆ ಹೆಸರಲ್ಲಿ ಕಂಪನಿ 417 ಕೋಟಿ ರೂಪಾಯಿ ಸಂಗ್ರಹ ಮಾಡಿತ್ತು ವಿಕ್ರಂ ಕಂಪನಿ. ಸಿಐಡಿ ಇದೀಗ 334 ಕೋಟಿ ರೂ ವಸೂಲಿ ಮಾಡಿದ್ದು, 562 ದೂರುಗಳ ಪೈಕಿ 26 ಎಫ್​ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ.
ರಾಹುಲ್ ದ್ರಾವಿಡ್​ ತನಗೆ ಮೋಸ ಆಗಿದೆ ಅಂತ ಸದಾಶಿವ ನಗರ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ದ್ರಾವಿಡ್​ ಹಲವು ಬಾರಿ ಹೂಡಿಕೆ ಮಾಡಿ ಲಾಭಾಂಶ ಪಡೆದಿದ್ದು, ತನಗೆ ಬರಬೇಕಾದ ಎಲ್ಲಾ ಹಣ ಕೊಡಿಸುವಂತೆ ದೂರಿನಲ್ಲಿ ಕೇಳಿದ್ದಾರೆ.

ಮೈದಾನದಲ್ಲೇ ಸಾವನ್ನಪ್ಪಿದ ಮುಂಬೈ ಕ್ರಿಕೆಟಿಗ

0

ಪಂದ್ಯ ನಡೆಯುತ್ತಿರುವಾಗ ಮೈದಾನದಲ್ಲೇ ಹೃದಯಾಘಾತದಿಂದ ಮುಂಬೈನ ಯುವ ಕ್ರಿಕೆಟರ್​​ ವೈಭವ್​ ಕೇಸರ್ಕರ್​ (24) ಮೃತ ಪಟ್ಟಿದ್ದಾರೆ.
ಮುಂಬೈನ ಭಡುಂಪ್​ ಏರಿಯಾದಲ್ಲಿ ನಡೆಯುತ್ತಿದ್ದ ಟೆನ್ನಿಸ್​​ ಬಾಲ್​ ಟೂರ್ನಮೆಂಟ್​ನ ಮ್ಯಾಚ್​ ವೇಳೆ ವೈಭವ್​ಗೆ ಎದೆನೋವು ಕಾಣಿಸಿಕೊಂಡಿತ್ತು. ಬಳಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆ ತಲುಪುವ ವೇಳೆಗಾಗಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಅತಿ ಹೆಚ್ಚು ಸೆಂಚುರಿ ಹೊಡೆದಿರೋ ಬ್ಯಾಟ್ಸ್​​ಮನ್ ಸಚಿನ್ ಅಲ್ವೇ ಅಲ್ಲ!

0

ಅತಿಹೆಚ್ಚು ಸೆಂಚುರಿ ಹೊಡೆದಿರೋ ಬ್ಯಾಟ್ಸ್​​ಮನ್  ಯಾರು ಅಂತ ಚಿಕ್ಕಮಕ್ಕಳಿಂದ ಹಿಡಿದು ಮುದುಕರವರೆಗೆ ಯಾರನ್ನ ಕೇಳಿದ್ರೂ ಹೇಳ್ತಾರೆ,  ಸಚಿನ್ ತೆಂಡೂಲ್ಕರ್ ಅಂತ.

ಸಚಿನ್ ಟೆಸ್ಟ್ ಹಾಗೂ ಒನ್ ಡೇ‌ ಮ್ಯಾಚ್ ನಿಂದ ಒಟ್ಟಾರೆ 100  ಸೆಂಚುರಿ ಮಾಡಿದ್ದಾರೆ. ಇದು ವರ್ಲ್ಡ್ ರೆಕಾರ್ಡ್ ಅಂತ ಎಲ್ರಿಗೂ ಗೊತ್ತಿದೆ. ಹೀಗಿದ್ರೂ ಸಚಿನ್ ಗಿಂತ ಹೆಚ್ಚು ಶತಕ ಬಾರಿಸಿದವರು ಇದ್ದಾರೆ ಅಂದ್ರೆ ಖಂಡಿತಾ ಯಾರೂ ನಂಬಲ್ಲ! ಆದ್ರೆ, ಸಚಿನ್ ಗಿಂತ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್ ಮನ್ ಇದ್ದಾರೆ!

ಹ್ಞೂಂ ಇದು ಫಸ್ಟ್ ಕ್ಲಾಸ್, ಅಂದ್ರೆ ಪ್ರಥಮ ದರ್ಜೆ ಕ್ರಿಕೆಟ್ ದಾಖಲೆ. ಇಂಗ್ಲೆಂಡ್  ಕ್ರಿಕೆಟಿಗ ಜಾಕ್ ಹೋಬ್ಸ್ 834 ಪ್ರಥಮ ದರ್ಜೆ ಮ್ಯಾಚ್ ಗಳನ್ನು ಆಡಿ ಒಟ್ಟಾರೆ  199 ಸೆಂಚುರಿ ಹೊಡೆದಿದ್ದಾರೆ. ಸಚಿನ್  310 ಪ್ರಥಮ ದರ್ಜೆ ಮ್ಯಾಚ್ ಗಳನ್ನು ಆಡಿದ್ದು, 81 ಸೆಂಚುರಿ ಮಾಡಿದ್ದಾರೆ. ಆದ್ದರಿಂದ ಹೈಯಸ್ಟ್ ಸೆಂಚುರಿ ಹೊಡೆದವರು ಸಚಿನ್ ಅಲ್ಲ ಹೋಬ್ಸ್!

Popular posts