Friday, April 3, 2020

ರವೀಂದ್ರ ಜಡೇಜಾರನ್ನು ಟೀಕಿಸಿದ್ದ ಕಾಮೆಂಟೇಟರ್ ಸಂಜಯ್​ ಮಾಂಜ್ರೇಕರ್​ಗೆ ಬಿಸಿಸಿಐ ಗೇಟ್​ಪಾಸ್!

0

ನವದೆಹಲಿ : 2019ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಐಸಿಸಿ ವರ್ಲ್ಡ್​ಕಪ್​ ವೇಳೆ ಟೀಮ್ ಇಂಡಿಯಾದ ಆಲ್​ರೌಂಡರ್ ರವೀಂದ್ರ ಜಡೇಜಾ ಅವರನ್ನು ಸಾಧಾರಣ ಆಟಗಾರ ಎಂದು ಟೀಕಿಸಿದ್ದ ಕಾಮೆಂಟೇಟರ್ ಸಂಜಯ್​ ಮಾಂಜ್ರೇಕರ್​ ಅವರಿಗೆ ಬಿಸಿಸಿಐ ಗೇಟ್​ಪಾಸ್ ನೀಡಿದೆ.
ಕಳೆದ ಮೂರು ಐಸಿಸಿ ವಿಶ್ವಕಪ್​ ಟೂರ್ನಿಗಳಲ್ಲಿಯೂ ಪಂದ್ಯ ವಿಶ್ಲೇಷಣೆಕಾರರಾಗಿ ಸೇವೆಸಲ್ಲಿಸಿದ್ದ ಮಾಂಜ್ರೇಕರ್ ಪಂದ್ಯ ವಿಶ್ಲೇಷಣೆಕಾರರಾಗಿ ದೀರ್ಘಕಾಲ ಕಾರ್ಯನಿರ್ವಹಿಸಿರುವ ಹಿರಿಮೆಗೂ ಪಾತ್ರರಾಗಿದ್ದಾರೆ.
ಧರ್ಮಶಾಲಾದಲ್ಲಿ ಮಾರ್ಚ್ 12ರಂದು ನಡೆಯಬೇಕಿದ್ದ ಮೊದಲ ಏಕದಿನ ಪಂದ್ಯದ ವೇಳೆ ಬಿಸಿಸಿಐ ಪ್ಯಾನಲ್ ವಿಶ್ಲೇಷಣಾಕಾರರಾಗಿ ಸುನೀಲ್ ಗವಸ್ಕಾರ್, ಎಲ್. ಶಿವರಾಮ್ ಕೃಷ್ಣನ್ ಹಾಗೂ ಮುರಳಿ ಕಾರ್ತಿಕ್ ಹಾಜರಿದ್ದರು. ಮಾಂಜ್ರೇಕರ್ ಇರಲಿಲ್ಲ. ಹೀಗಾಗಿ ಆ ಪಂದ್ಯಕ್ಕೆ ಮುನ್ನವೇ ಅವರಿಗೆ ಸಂದೇಶ ರವಾನೆಯಾಗಿತ್ತು ಎನ್ನಲಾಗಿದೆ.
ವಿಭಿನ್ನ ಶೈಲಿಯ ಕ್ರಿಕೆಟ್ ವಿಶ್ಲೇಷಣೆ ಮೂಲಕ ಜನಪ್ರಿಯತೆ ಪಡೆದಿದ್ದರೂ ಇತ್ತೀಚೆಗೆ ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಗಳಿಂದ ಪದೇ ಪದೇ ಸುದ್ದಿ ಆಗ್ತಿದ್ರು. ಅವರ ಕಾರ್ಯಶೈಲಿ ಬಿಸಿಸಿಐಗೆ ತೃಪ್ತಿತಂದಿರಲಿಲ್ಲ. ವಿಶ್ವಕಪ್ ಸಂದರ್ಭದಲ್ಲಿ ಜಡೇಜಾ ಅವರನ್ನು ಸಾಧಾರಣ ಆಟಗಾರ ಎಂದು ಟೀಕಿಸಿ ಸಾಕಷ್ಟು ಟ್ರೋಲ್​ಗೂ ಗುರಿಯಾಗಿದ್ದರು. ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್​ನಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ಜಡೇಜಾ ಮಾಂಜ್ರೆಕರ್​ಗೆ ತಿರುಗೇಟು ನೀಡಿದ್ರು. ಆಗ ಅವರು ಜಡೇಜಾರ ಕ್ಷಮೆಯಾಚಿಸಿದ್ರು.

IPL ನಡೆಯದಿದ್ರೆ ಬಿಸಿಸಿಐಗೆ 10 ಕೋಟಿ ರೂ ನಷ್ಟ..!

0

ಕೊರೋನಾ ಆತಂಕ ಹೆಚ್ಚಿರುವ ಹಿನ್ನೆಲೆಯಲ್ಲಿ ಮಾರ್ಚ್​​​ 29ರಿಂದ ಆರಂಭವಾಗಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಏಪ್ರಿಲ್ 15ಕ್ಕೆ ಮುಂದೂಡಲಾಗಿದೆ. ಪರಿಸ್ಥಿತಿ ಸುಧಾರಿಸದಿದ್ದರೆ ಅಂದಿನಿಂದ ಕೂಡ ನಡೆಯೋದು ಅನುಮಾನ. ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತ ಕ್ರಮವಾಗಿ ಐಪಿಎಲ್ ನಡೆಸದಂತೆ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಮನವಿ ಮಾಡಿವೆ ಎಂದು ತಿಳಿದುಬಂದಿದೆ.
ಕೊರೋನಾ ದೆಸೆಯಿಂದ 13ನೇ ಸೀಸನ್ ಐಪಿಎಲ್​ ರದ್ದಾದಲ್ಲಿ ಬಿಸಿಸಿಐಗೆ ಸುಮಾರು 10 ಕೋಟಿ ರೂ ನಷ್ಟವಾಗಲಿದೆ ಎಂದು ತಿಳಿದುಬಂದಿದೆ. ಇನ್ನು ಐಪಿಎಲ್ ಮುಂದೂಡಲ್ಪಟ್ಟಿರುವ ಬಗ್ಗೆ ಪ್ರತಿಕಿಯಿಸಿರುವ ಬಿಸಿಸಿಐ ಅಧ್ಯಕ್ಷ ‘‘ಸುರಕ್ಷತೆಗೆ ಮೊದಲ ಆದ್ಯತೆ. ಸದ್ಯಕ್ಕೆ ಐಪಿಎಲ್ ಮುಂದೂಡಿಕೆಗೆ ಬದ್ಧರಾಗಿದ್ದೇವೆ. ಮುಂದೇನಾಗುತ್ತೆ ಕಾದುನೋಡೋಣ” ಎಂದಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಉಳಿದೆರಡು ಪಂದ್ಯಗಳು ಕೊರೋನಾದಿಂದ ರದ್ದಾಗಿವೆ.

ರಾಯಲ್ ಚಾಲೆಂಜರ್ಸ್ ತಂಡದ ವೇಗಿ ಕೇನ್ ರಿಚರ್ಡ್​ಸನ್​ಗಿಲ್ಲ ಕೊರೋನಾ

0

ಸಿಡ್ನಿ: ಆಸ್ಟ್ರೇಲಿಯಾ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ತಂಡದ ವೇಗಿ ಕೇನ್ ರಿಚರ್ಡ್​ಸನ್​ಗೆ ಕೊರೋನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ಇದೀಗ ರಿಚರ್ಡ್​ಸನ್ ಅವರ ಮೆಡಿಕಲ್ ರಿಪೋರ್ಟ್ ಬಂದಿದ್ದು, ಸೋಂಕು ಇಲ್ಲ ಎಂಬುದು ಸಾಬೀತಾಗಿದೆ. 

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ರಿಚರ್ಡ್​ಸನ್ 14 ದಿನಗಳ ಬಳಿಕ ವಾಪಸ್ಸಾದವರೇ ಗಂಟಲು ಕೆರೆತ ಅಂತ ಆಸಿಸ್ ಮೆಡಿಕಲ್ ಸ್ಟಾಫ್​ಗೆ ಕಂಪ್ಲೆಂಟ್ ಮಾಡಿದ್ದರು. ಕೊರೋನಾ ಶಂಕೆ ವ್ಯಕ್ತವಾಗಿದ್ದರಿಂದ ಅವರನ್ನು ತಂಡದಿಂದ ದೂರ ಇರಿಸಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಈಗ ಬಂದಿರುವ ಮೆಡಿಕಲ್ ರಿಪೋರ್ಟ್​ನಲ್ಲಿ ಅವರಿಗೆ ಕೊರೋನಾ ಇಲ್ಲ ಎಂಬುದು ದೃಢಪಟ್ಟಿದೆ. ರಿಪೋರ್ಟ್ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ರಿಚರ್ಡ್​ಸನ್ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಸೇರಿದ್ದಾರೆ.

ರಾಯಲ್ ಚಾಲೆಂಜರ್ಸ್ ತಂಡದ ವೇಗಿ ಕೇನ್ ರಿಚರ್ಡ್​ಸನ್​ಗೆ ಕೊರೋನಾ ವೈರಸ್?

0

ಸಿಡ್ನಿ: ಆಸ್ಟ್ರೇಲಿಯಾ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ತಂಡದ ವೇಗಿ ಕೇನ್ ರಿಚರ್ಡ್​ಸನ್​ಗೆ ಕೊರೋನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದ ರಿಚರ್ಡ್​ಸನ್ 14 ದಿನಗಳ ಬಳಿಕ ವಾಪಸ್ಸಾದವರೇ ಗಂಟಲು ಕೆರೆತ ಅಂತ ಆಸಿಸ್ ಮೆಡಿಕಲ್ ಸ್ಟಾಫ್​ಗೆ ಕಂಪ್ಲೆಂಟ್ ಮಾಡಿದ್ದಾರೆ. ಇದೀಗ ಅವರನ್ನು ತಂಡದಿಂದ ದೂರ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರಿಪೋರ್ಟ್​ಗಾಗಿ ಕಾಯುತ್ತಿದ್ದಾರೆ. ರಿಪೋರ್ಟ್ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ವರದಿಯಲ್ಲಿ ಕೊರೋನಾ ಸೋಂಕು ಪಾಸಿಟಿವ್ ಬಂದರೆ ನ್ಯೂಜಿಲೆಂಡ್ ಸರಣಿ ಹಾಗೂ ಐಪಿಎಲ್​ನಿಂದ ದೂರ ಉಳಿಯಲಿದ್ದಾರೆ.

 

 

ಈ ಬಾರಿ ಸ್ಟೇಡಿಯಂನಲ್ಲಿ IPL ನೋಡೋಕಾಗಲ್ವಾ?

0

ನವದೆಹಲಿ: ಕೊರೋನಾ ವೈರಸ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್ ನಡೆಯುವುದೇ ಅನುಮಾನವಾಗಿದೆ. ಒಂದು ವೇಳೆ ನಿಗದಿಯಾದಂತೆ  ಐಪಿಎಲ್ ನಡೆಯಬೇಕಾದರೆ  ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಸಬೇಕು ಎಂದು ಕೇಂದ್ರ ಸರ್ಕಾರ ಆದೇಶ ನೀಡಿದೆ.

ಕೇಂದ್ರ ಕ್ರೀಡಾ ಕಾರ್ಯದರ್ಶಿ ರಾಧೆ ಶ್ಯಾಮ್  ಜುಲಾನಿಯಾ ಈ  ಬಗ್ಗೆ ಸ್ಪಷ್ಟನೆ ನೀಡಿದ್ದು, ‘ಕ್ರೀಡೆಯನ್ನು  ರದ್ದು ಪಡಿಸಲು ಅಥವಾ ಮುಂದೂಡಲು ಸಾಧ್ಯವಾಗದೇ ಇದ್ದರೆ ಮುಚ್ಚಿದ ಕ್ರೀಡಾಂಗಣದಲ್ಲಿ  ಆಯೋಜಿಸಬೇಕು.  ಈ ಮೂಲಕ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಸೇರದಂತೆ ನೋಡಿಕೊಳ್ಳಬೇಕಾಗಿದೆ. ಹಾಗಾಗಿ ಈ ಬಾರಿ ದೂರದರ್ಶನಗಳ ಮೂಲಕ ಮಾತ್ರ ಮ್ಯಾಚ್​ಗಳನ್ನು ನೋಡಬಹುದಾಗಿದೆ‘ ಎಂದಿದ್ದಾರೆ. 

ಬಿಸಿಸಿಐ ಹಾಗೂ ದೇಶದ ಇತರ ರಾಷ್ಟ್ರೀಯ ಒಕ್ಕೂಟಗಳಿಗೆ  ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಸಾರ್ವಜನಿಕ ಹಿತಾಸಕ್ತಿ  ಸಚಿವಾಲಯ ಆದೇಶ ಹೊರಡಿಸಿದೆ.  ಯಾವುದೇ ಕಾರಣಕ್ಕೂ ಜನರನನು ಒಗ್ಗೂಡಿಸಬಾರದು. IPL ನಡೆಸುವುದೇ ಆದರೆ  ಅಲ್ಲಿ ಪ್ರೇಕಕ್ಷಕರು ಇರಲೇ ಬಾರದು ಎಂದು ಕಟ್ಟುನಿಟ್ಟಾಗಿ ಹೇಳಿದೆ. ಆದೇಶವನ್ನು ಪಾಲಿಸದಿದ್ದಲ್ಲಿ  ಸಾಂಕ್ರಾಮಿಕ ರೋಗಗಳ  ತಡೆಗಟ್ಟುವಿಕೆಯ ಕಾಯಿದೆ 1897 ರ ಅಡಿಯಲ್ಲಿ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಬಿಸಿಸಿಐ ಮಾರ್ಚ್ 14 ರಂದು ಸಭೆ ಸೇರಲಿದ್ದು, ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

ಪಠಾಣ್, ಕೈಫ್​ ಬ್ಯಾಟಿಂಗ್​ ಅಬ್ಬರಕ್ಕೆ ಮಂಕಾದ ಲಂಕಾ..!

0

ಮುಂಬೈ : ರೋಡ್​ ಸೇಫ್ಟಿ ವರ್ಲ್ಡ್​​​​ ಸೀರೀಸ್​​ 2020 ಮೂಲಕ ವಿಶ್ವ ಕ್ರಿಕೆಟ್​​ನ ಮಾಜಿ ಸ್ಟಾರ್ ಆಟಗಾರರ ಅದ್ಭುತ ಆಟವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಸದಾವಕಾಶ ಕ್ರಿಕೆಟ್ ಅಭಿಮಾನಿಗಳಿಗೆ ಸಿಕ್ಕಿದೆ. ವೆಸ್ಟ್​ ಇಂಡೀಸ್ ವಿರುದ್ಧ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಳೆಯ ವೈಭವ ನೆನಪಿಸಿದ್ದರು. ನಿನ್ನೆ ಶ್ರೀಲಂಕಾ ಲೆಜೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಜಿ ಆಲ್​ರೌಂಡರ್ ಇರ್ಫಾನ್ ಪಠಾಣ್ ಮತ್ತು ಭಾರತದ ಜಾಂಟಿರೋಡ್ಸ್ ಖ್ಯಾತಿಯ ಮೊಹಮ್ಮದ್ ಕೈಫ್ ಗತವೈಭವ ನೆನಪಿಸಿದರು.
ಕೈಫ್ ಮತ್ತು ಪಠಾಣ್ ಆಟಕ್ಕೆ ಶ್ರೀಲಂಕಾ ಲೆಜೆಂಡ್ಸ್​ ಮಂಡಿಯೂರಿತು. ಕೈಫ್, ಪಠಾಣ್ ಬ್ಯಾಟಿಂಗ್ ಮತ್ತು ಮುನಾಫ್ ಪಟೇಲ್ ಮಾರಕ ಬೌಲಿಂಗ್​​ ಎದುರು ಲಂಕನ್ನರು ಮಂಕಾದರು.
ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್​ಗಳಲ್ಲಿ 138ರನ್ ಮಾಡಿತು. ನಾಯಕ ತಿಲಕರತ್ನೆ ದಿಲ್ಶಾನ್ (23) ಮತ್ತು ರೋಮೇಶ್ ಕಲುವಿತರಣ (23) ರನ್ ಗಳಿಸಿದ್ದೇ ಆ ತಂಡದ ಸದಸ್ಯರ ವೈಯಕ್ತಿಕ ಗರಿಷ್ಠ ಮೊತ್ತ. ಮುನಾಫ್ ಪಟೇಲ್ 19 ರನ್​ಗೆ 4 ವಿಕೆಟ್​ ಕಿತ್ತು ಲಂಕಾ ಬ್ಯಾಟ್ಸ್​ಮನ್​ಗಳನ್ನು ಸಿಂಹಸ್ವಪ್ನವಾಗಿ ಕಾಡಿದ್ರು.
ಸುಲಭ ಗುರಿ ಬೆನ್ನತ್ತಿದ ಭಾರತ ಲೆಜೆಂಡ್ಸ್​ ಆರಂಭದಲ್ಲೇ ಸಚಿನ್ ತೆಂಡೂಲ್ಕರ್ (0) ಮತ್ತು ಸೆಹ್ವಾಗ್ (3) ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಯುವರಾಜ್ ಸಿಂಗ್ ಕೂಡ ಅಬ್ಬರಿಸಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿದ ಕೈಫ್ 46ರನ್ ಕೊಡುಗೆ ನೀಡಿದ್ರು. ಆಕರ್ಷಕ ಅಜೇಯ ಅರ್ಧಶತಕ (ಅ57) ಗೆಲುವಿನ ದಡ ಸೇರಿಸಿದರು. 18.4 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಭಾರತ ಗುರಿ ತಲುಪಿತು. ಪಠಾಣ್ ಇನ್ನಿಂಗ್ಸಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್​ಗಳಿದ್ದವು.

ಮಹಿಳಾ IPL ಆರಂಭವಾಗುತ್ತಾ? ಗವಾಸ್ಕರ್ ಸಲಹೆಗೆ ಗಂಗೂಲಿ ಏನಂತಾರೆ?

0

ಮಹಿಳಾ ಕ್ರಿಕೆಟ್ ಬೆಳೆಯುತ್ತಿದೆ. ವಿಶ್ವಕ್ರಿಕೆಟ್​ನಲ್ಲಿ ಭಾರತೀಯ ಆಟಗಾರ್ತಿಯರು ಸೇರಿದಂತೆ ಅನೇಕ ಸ್ಟಾರ್ ಕ್ರಿಕೆಟಿಗರು ಉದಯಿಸುತ್ತಿದ್ದಾರೆ. ಭಾರತೀಯ ವನಿತೆಯರು ಟಿ20 ವಿಶ್ವಕಪ್​​ನಲ್ಲಿ ರನ್ನರಪ್ ಆಗಿ ಹೊರಹೊಮ್ಮಿದ ಬೆನ್ನಲ್ಲೇ ಇದೀಗ ಮಹಿಳಾ ಇಂಡಿಯನ್ ಪ್ರಿಮಿಯರ್ ಲೀಗ್ ಆಯೋಜನೆ ಬಗ್ಗೆ ಚಿಂತನೆ ನಡೆದಿದೆ.
ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಸುನೀಲ್ ಗವಾಸ್ಕರ್ 2021ರಿಂದ ಮಹಿಳಾ ಐಪಿಎಲ್ ಟೂರ್ನಿ ಆರಂಭಿಸುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಸಲಹೆ ನೀಡಿದ್ದಾರೆ.
ಭಾರತೀಯ ಮಹಿಳಾ ಕ್ರಿಕೆಟಲ್ಲಿ ಅತ್ಯುತ್ತಮ ಆಟಗಾರ್ತಿಯರಿದ್ದಾರೆ. ಮಹಿಳಾ ಐಪಿಎಲ್ ನಡೆದಲ್ಲಿ ಅವರಿಗೆ ಮತ್ತಷ್ಟು ಸಹಕಾರಿ ಆಗಲಿದೆ. ಹೊಸ ಪ್ರತಿಭೆಗಳ ಅನ್ವೇಷಣೆ ಮೂಲಕ ಮತ್ತಷ್ಟೂ ಬಲಿಷ್ಠ ರಾಷ್ಟ್ರೀಯ ತಂಡವನ್ನು ಕಟ್ಟಲು ಸಾಧ್ಯ ಎಂದು ಗವಾಸ್ಕರ್ ಹೇಳಿದ್ದಾರೆ.
ಈಗಾಗಲೇ ಆಸ್ಟ್ರೇಲಿಯಾ 5 ಬಾರಿ ಮಹಿಳಾ ಬಿಗ್​ ಬ್ಯಾಶ್​ ಲೀಗ್ ನಡೆಸಿ ಯಶಸ್ವಿಯಾಗಿದೆ. ಇಂಗ್ಲೆಂಡ್ ಕೂಡ ಕಿಯಾ ಸೂಪರ್ ಲೀಗ್ ಎಂಬ ಮಹಿಳಾ ಟಿ20 ಲೀಗನ್ನು 4ಬಾರಿ ಆಯೋಜಿಸಿ ಸೈ ಎನಿಸಿಕೊಂಡಿದೆ. ಹೀಗಾಗಿ ಭಾರತದಲ್ಲೂ ಮಹಿಳಾ ಕ್ರಿಕೆಟ್ ಲೀಗ್ ನಡೆಸಿದರೆ ಉತ್ತಮ ಎಂಬುದು ಗವಾಸ್ಕರ್ ಅಭಿಪ್ರಾಯ. ಈ ಸಲಹೆಗೆ ಬಿಗ್​ಬಾಸ್ ಸೌರವ್ ಗಂಗೂಲಿ ಏನಂತಾರೆ ಅನ್ನೋದು ಸದ್ಯದ ಕುತೂಹಲ.

ಸೌತ್ ಆಫ್ರಿಕಾ ವಿರುದ್ಧದ ಒಡಿಐಗೆ ಟೀಮ್ ಇಂಡಿಯಾ ಪ್ರಕಟ

0

ದಕ್ಷಿಣ ಆಫ್ರಿಕಾ ವಿರುದ್ಧ ತವರಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. ನೂತನ ಮುಖ್ಯಸ್ಥ ಸುನೀಲ್ ಜೋಶಿ ನೇತೃತ್ವದ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದೆ. ವಿರಾಟ್ ಕೊಹ್ಲಿ ವಿಶ್ರಾಂತಿ ಬಯಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅವರೇ ಸೌತ್ ಆಫ್ರಿಕಾ ವಿರುದ್ಧವೂ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯಗೊಂಡಿದ್ದ ಆರಂಭಿಕ ಬ್ಯಾಟ್ಸ್​ಮನ್ ಶಿಖರ್ ಧವನ್ ಮತ್ತು ಆಲ್​​ ರೌಂಡರ್ ಹಾರ್ದಿಕ್ ಪಾಂಡ್ಯ, ವೇಗಿ ಭುವನೇಶ್ವರ ಕುಮಾರ್ ಮರಳಿ ತಂಡ ಕೂಡಿ ಕೊಂಡಿದ್ದಾರೆ. ಗಾಯಗೊಂಡಿರುವ ರೋಹಿತ್ ಶರ್ಮಾ ತಂಡದಲ್ಲಿಲ್ಲ. 
ತಂಡ ಇಂತಿದೆ : ಶಿಖರ್ ಧವನ್, ಪೃಥ್ವಿ ಶಾ, ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್ ರಾಹುಲ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಯುಜುವೇಂದ್ರ ಚಹಲ್, ಜಸ್ಪ್ರೀತ್ ಬೂಮ್ರಾ, ನವದೀಪ್ ಸೈನಿ, ಕುಲದೀಪ್ ಯಾದವ್, ಶುಭ್​ಮನ್​ ಗಿಲ್.

ಚೊಚ್ಚಲ ಮಹಿಳಾ ಟಿ20 ವರ್ಲ್ಡ್​ಕಪ್ ಗೆಲ್ಲುವ ಕನಸು ಭಗ್ನ!

0

ಮೆಲ್ಬೋರ್ನ್ : ಮಹಿಳಾ ಟಿ20 ವಿಶ್ವಕಪ್​ ಫೈನಲ್​​ನಲ್ಲಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ ಮೆಗ್​ ಲ್ಯಾನಿಂಗ್ ಮುಂದಾಳತ್ವದ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದೆ. ಚೊಚ್ಚಲ ವಿಶ್ವಕಪ್​ ಎತ್ತಿ ಹಿಡಿಯುವ ಉತ್ಸಾಹದಲ್ಲಿದ್ದ ಭಾರತವನ್ನು 85ರನ್​ಗಳಿಂದ ಸೋಲಿಸಿದ ಆಸೀಸ್​ 5ನೇ ಹಾಗೂ ಸತತ 2ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ವಿಕೆಟ್​ ಕೀಪರ್ ಎಲಿಸಾ ಹೀಲಿ ( 75) ಮತ್ತು ಬೆತ್ ಮೂನಿ (ಅಜೇಯ 78)ರನ್​ಗಳ ಆಟದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 184ರನ್​ ಮಾಡಿತು. ಆರಂಭಿಕ ಈ ಜೋಡಿ ಮೊದಲ ವಿಕೆಟ್​ಗೆ 115ರನ್ ಜೊತೆಯಾಟ ಆಡಿ ಭಾರತೀಯ ಬೌಲರ್​ಗಳನ್ನು ಕಾಡಿದ್ರು.
ಗುರಿ ಬೆನ್ನತ್ತಿದ ಭಾರತದ ಪರ ಮಧ್ಯಮ ಕ್ರಮಾಂಕದಲ್ಲಿ ದೀಪ್ತಿಶರ್ಮಾ (33), ಕನ್ನಡತಿ ವೇದಾಕೃಷ್ಣಮೂರ್ತಿ (19) ಮತ್ತು ರಿಚಘೋಷ್ (18) ಬಿಟ್ರೆ ಬೇರೆ ಯಾರೂ ಸ್ವಲ್ಪಮಟ್ಟಿಗೆ ಹೋರಾಟ ತೋರಿದ್ದು ಬಿಟ್ಟರೆ ಬೇರ್ಯಾರು ಉತ್ತಮ ಆಟ ಆಡಲಿಲ್ಲ. ಅಂತಿಮವಾಗಿ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ ಆಲ್​ಔಟ್ ಆಗುವುದರೊಂದಿಗೆ ನಿರಾಸೆ ಮೂಡಿಸಿದ್ರು.

ಮರುಕಳಿಸಿದ ಗತವೈಭವ – ಸೆಹ್ವಾಗ್, ಸಚಿನ್ ಮೋಡಿ ; ಭಾರತ ಜಯಭೇರಿ..!

0

ಮುಂಬೈ : ಕ್ರಿಕೆಟ್​ನಲ್ಲಿ ಗತವೈಭವ ಮರುಕಳಿಸಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ಡ್ಯಾಶಿಂಗ್ ಓಪನರ್ ಸೆಹ್ವಾಗ್ ಅವರ ಅದ್ಬುತ ಬ್ಯಾಟಿಂಗ್ ನೆರವಿನಿಂದ ಭಾರತ ಲೆಜೆಂಡ್ಸ್​ ಆಸ್ಟ್ರೇಲಿಯಾ ಲೆಜೆಂಡ್ಸ್ ವಿರುದ್ಧ ನಡೆದ ರೋಡ್​​​ ಸೇಫ್ಟಿ ವರ್ಲ್​ ಸೀರಿಸ್​ ಟಿ20ಯ ಮೊದಲ ಪಂದ್ಯದಲ್ಲಿ ಜಯ ದಾಖಲಿಸಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಮ್ಯಾಚಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಡ್ಯಾರೆನ್ ಗಂಗಾ (32), ಶಿವನರೇನ್ ಚಂದ್ರಪಾಲ್ (61) ಉತ್ತಮ ಆಟದ ನೆರವಿನಿಂದ 8 ವಿಕೆಟ್ ಕಳೆದುಕೊಂಡು 150ರನ್ ಮಾಡಿತು. ಗುರಿ ಬೆನ್ನತ್ತಿದ ಭಾರತದ ಪರ ಸೆಹ್ವಾಗ್, ಸಚಿನ್ ಆರಂಭಿಕರಾಗಿ ಕಣಕ್ಕಿಳಿದ್ರು. ಸೆಹ್ವಾಗ್ 57 ಬಾಲ್​ಗಳಲ್ಲಿ ಅಜೇಯ 74 ಹಾಗೂ ಸಚಿನ್ 29 ಬಾಲ್​ಗಳಲ್ಲಿ 36ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು. ಮೊಹಮ್ಮದ್ ಕೈಫ್ 14 ಮತ್ತು ಯುವರಾಜ್ ಸಿಂಗ್ ಅಜೇಯ 10ರನ್ ಬಾರಿಸಿದ್ರು. 18.2 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿತಲುಪಿತು. ಸೆಹ್ವಾಗ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ್ರು.
ಇನ್ನು ಭಾರತದ ಪರ ಬೌಲಿಂಗ್​ನಲ್ಲಿ ಜಹೀರ್ ಖಾನ್, ಮುನಾಫ್ ಪಟೇಲ್, ಪ್ರಗ್ಯಾನ್​ ಓಜಾ ತಲಾ ಎರಡು ಹಾಗೂ ಇರ್ಫಾನ್ ಪಠಾಣ್​ 1 ವಿಕೆಟ್​ ಪಡೆದ್ರು.

Popular posts