Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Sunday, February 24, 2019

ಐಪಿಎಲ್ ವೇಳಾಪಟ್ಟಿ ಪ್ರಕಟ ; ಫಸ್ಟ್ ಮ್ಯಾಚ್​ನಲ್ಲಿ ಆರ್​ಸಿಬಿಗೆ ಸಿಎಸ್​ಕೆ ಎದುರಾಳಿ..!

0

ಇಂಡಿಯನ್ ಪ್ರೀಮಿಯರ್ ಲೀಗ್​-2019, ಅಂದರೆ 12ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟವಾಗಿದೆ ಮಾರ್ಚ್​ 23ರಂದು ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣೆಸಲಿವೆ.
2008ರಲ್ಲಿ ಆರಂಭವಾದ ಐಪಿಎಲ್​ ಟೂರ್ನಿಯಲ್ಲಿ ಇದುವರೆಗೆ ಮುಂಬೈ ಹಾಗೂ ಚೆನ್ನೈ ತಲಾ 3 ಬಾರಿ ಚಾಂಪಿಯನ್ ಆಗಿವೆ. ಕೊಲ್ಕತ್ತಾ ಹಾಗೂ ಹೈದರಾಬಾದ್​ ( ಡೆಕ್ಕನ್ ಚಾರ್ಜಸ್ 1 + ಸನ್​ ರೈಸರ್ಸ್ 1) ತಲಾ 2 ಬಾರಿ, ರಾಜಸ್ಥಾನ್ ರಾಯಲ್ಸ್ 1 ಬಾರಿ ಚಾಂಪಿಯನ್ ಆಗಿವೆ. ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಬಲಾಢ್ಯ ತಂಡ ಅನಿಸಿಕೊಂಡಿದ್ರೂ ಇಲ್ಲಿಯವರೆಗೆ ಪ್ರಶಸ್ತಿಗೆ ಮುತ್ತಿಕ್ಕಿಲ್ಲ. ಈ ಬಾರಿಯಾದರೂ ಚಾಂಪಿಯಲ್ ಆಗಲಿ ಅನ್ನೋದು ಅಭಿಮಾನಿಗಳ ಆಶಯ.

2019ರ ಮೊದಲ ಎರಡು ವಾರಗಳ ವೇಳಾಪಟ್ಟಿ ಇಲ್ಲಿದೆ.

ಮಾರ್ಚ್ 23 – ಸಿಎಸ್‌ಕೆ VS ಆರ್‌ಸಿಬಿ
ಮಾರ್ಚ್ 24 – ಕೆಕೆಆರ್ VS ಎಸ್‌ಆರ್‌ಎಚ್‌ ಮತ್ತು ಮುಂಬೈ VS ದೆಹಲಿ
ಮಾರ್ಚ್ 25 – ಆರ್‌ಆರ್ VS ಪಂಜಾಬ್
ಮಾರ್ಚ್ 26 – ದೆಹಲಿ VS ಸಿಎಸ್‌ಕೆ
ಮಾರ್ಚ್ 27 – ಕೆಕೆಆರ್ VS ಪಂಜಾಬ್
ಮಾರ್ಚ್ 28 – ಆರ್‌ಸಿಬಿ VS ಮುಂಬೈ
ಮಾರ್ಚ್ 29 – ಎಸ್‌ಆರ್‌ಎಚ್‌ VS ಆರ್‌ಆರ್
ಮಾರ್ಚ್ 30 – ಪಂಜಾಬ್ VS ಮುಂಬೈ ಮತ್ತು ದೆಹಲಿ VS ಕೆಕೆಆರ್
ಮಾರ್ಚ್ 31 – ಎಸ್‌ಆರ್‌ಎಚ್‌ VS ಆರ್‌ಸಿಬಿ ಮತ್ತು ಸಿಎಸ್‌ಕೆ VS ಆರ್‌ಆರ್
ಏಪ್ರಿಲ್ 1 – ಪಂಜಾಬ್ VS ದೆಹಲಿ
ಏಪ್ರಿಲ್ 2 – ಆರ್‌ಆರ್ VS ಆರ್‌ಸಿಬಿ
ಏಪ್ರಿಲ್ 3 – ಮಂಬೈ VS ಸಿಎಸ್‌ಕೆ
ಏಪ್ರಿಲ್ 4 – ದೆಹಲಿ VS ಎಸ್‌ಆರ್‌ಎಚ್‌
ಏಪ್ರಿಲ್ 5 – ಆರ್‌ಸಿಬಿ VS ಕೆಕೆಆರ್

ರನೌಟ್​ ಆದ ಸಿಟ್ಟಿನಲ್ಲಿ ಬ್ಯಾಟ್​ನಿಂದ ಚೇರ್​ಗೆ ಹೊಡೆದ ಫಿಂಚ್..!

0

ಮೇಲ್ಬೋರ್ನ್​ : ಆಟ ಅಂದ್ರೆ ಸೋಲು-ಗೆಲುವು ಇದ್ದಿದ್ದೇ.. ಆಟಗಾರ ಅಂದ್ರೂ ಅಷ್ಟೇ ಕೆಲವೊಮ್ಮೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪರ್ಫಾರ್ಮೆನ್ಸ್ ಕೊಡಬಹುದು, ಮತ್ತೆ ಕೆಲವೊಮ್ಮೆ ಫೆಲ್ಯೂರ್ ಆಗಬಹುದು. ಗೆದ್ದಾಗ ಸಂಭ್ರಮಿಸ್ತೀವಿ.. ಸೋತಾಗ ಅದೇ ರೀತಿ ಕೆಟ್ಟದಾಗಿ ರಿಯಾಕ್ಟ್ ಮಾಡೋದು ಕೂಡ ಇದ್ದಿದ್ದೇ..!
ಇನ್ನು ಕ್ರಿಕೆಟ್ ವಿಷ್ಯಕ್ಕೆ ಬಂದ್ರೆ ಬ್ಯಾಟ್ಸ್​ಮನ್ ಒಳ್ಳೆಯ ಇನ್ನಿಂಗ್ಸ್ ಕಟ್ಟುತ್ತಿರುವಾಗ, ತಂಡಕ್ಕೆ ಆಧಾರವಾಗಿ ನಿಂತು ಬ್ಯಾಟ್​ ಬೀಸುತ್ತಿರುವಾಗ ಅನ್​ ಎಸ್ಪೆಕ್ಟೆಡ್​ ರೀತಿಯಲ್ಲಿ ಔಟ್ ಆಗಿ ಪೆವಿಲಿಯನ್ ಸೇರೋದು ಕೂಡ ಪಾರ್ಟ್​ ಆಫ್ ದಿ ಗೇಮ್ ಅಂತಲೇ ಹೇಳಬಹುದು. ಹೀಗೆ ತನ್ನದಲ್ಲದ ತಪ್ಪಿಗೆ ರನ್​ ಔಟ್ ಆದ ಆಸ್ಟ್ರೇಲಿಯಾ ಬ್ಯಾಟ್ಸ್​ನ್ ಆ್ಯರೋನ್ ಫಿಂಚ್ ತನ್ನ ಕೋಪವನ್ನು ಚೇರ್ ಮೇಲೆ ತೀರಿಸಿಕೊಂಡಿದ್ದಾರೆ.
2019ನೇ ಸಾಲಿನ ಬಿಗ್ ಬಾಷ್ ಲೀಗ್​ನ ಫೈನಲ್ ವೇಳೆ ಈ ಘಟನೆ ನಡೆದಿದೆ. ಮೇಲ್ಬೋರ್ನ್​ ಸ್ಟಾರ್ಸ್ ಮತ್ತು ಮೆಲ್ಬೋರ್ನ್​ ರೆನೆಗೇಡ್ಸ್ ತಂಡಗಳ ನಡುವೆ ನಡೆದ ಮ್ಯಾಚ್​ನಲ್ಲಿ ರೆನೆಗೇಡ್ಸ್ ತಂಡದ ಕ್ಯಾಪ್ಟನ್ ಫಿಂಚ್ ಈ ವರ್ತನೆ ತೋರಿದ್ದಾರೆ. ಅವರು ಮತ್ತು ಕ್ಯಾಮರೂನ್ ವೈಟ್​ ಸ್ಕ್ರೀಸ್​ನಲ್ಲಿದ್ದರು. ಎದುರಾಳಿ ತಂಡದ ಬೌಲರ್ ಜಾಕ್ಸನ್ ಬರ್ಡ್ ಎಸೆದ ಬಾಲ್ ಅನ್ನು ವೈಟ್​ ನೇರವಾಗಿ ಬಾರಿಸಿದ್ರು. ಆ ಬಾಲ್ ಬರ್ಡ್ ಕಾಲಿಗೆ ತಾಗಿ ಎದುರಿನ ವಿಕೆಟ್, ಅಂದ್ರೆ ಫಿಂಚ್ ಇದ್ದ ಬದಿಯ ವಿಕೆಟ್​ಗೆ ಬಡಿಯಿತು. ಆಗ ಸ್ಕ್ರೀಸ್​ ಬಿಟ್ಟಿದ್ದ ಫಿಂಚ್ ರನ್​ಔಟ್ ಆಗಿ ಪೆವಿಲಿಯನ್​ ಸೇರ ಬೇಕಾಯಿತು.
ಹೀಗೆ ರನ್​ ಔಟ್ ಆದ ಫಿಂಚ್ ಪೆವಿಲಯನ್ ಕಡೆ ಹೆಜ್ಜೆ ಹಾಕಿದ್ರು. ಅಲ್ಲಿದ್ದ ಚೇರ್ ಮೇಲೆ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದ್ರು..! ಬ್ಯಾಟ್​ನಿಂದ ಚೇರ್​ಗೆ ಬಾರಿಸಿದ್ರು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಇನ್ನು ಫಿಂಚ್ ನೇತೃತ್ವದ ರೆನೆಗೇಡ್ಸ್ ತಂಡವೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ

ಪಾಕ್​ ಸೂಪರ್​ ಲೀಗ್ ಪ್ರಸಾರಕ್ಕೆ ರಿಲಯನ್ಸ್ ಬ್ರೇಕ್..!

0

ನವದೆಹಲಿ : ಪಾಕಿಸ್ತಾನ್ ಸೂಪರ್ ಲೀಗ್​ (ಪಿಎಸ್​ಎಲ್​) ಪ್ರಸಾರಕ್ಕೆ ರಿಲಯನ್ಸ್ ಬ್ರೇಕ್ ಹಾಕಿದೆ.
ಪುಲ್ವಾಮ ದಾಳಿ ಹಿನ್ನೆಲೆಯಲ್ಲಿ ಪಾಕ್​ ವಿರುದ್ಧ ಐಎಂಜಿ ರಿಲಯನ್ಸ್ ಈ ನಡೆಯನ್ನು ಅನುಸರಿಸಿದೆ. ಐಪಿಎಲ್​ನಂತೆ ಪಾಕಿಸ್ತಾನದ ಕ್ರಿಕೆಟ್ ಲೀಗ್ ಈ ಪಿಎಸ್​ಎಲ್. ಸದ್ಯ ದುಬೈನಲ್ಲಿ ಈ ಟೂರ್ನಿ ನಡೆಯುತ್ತಿದೆ. ಟೂರ್ನಿಯ ಪ್ರಸಾರದ ಹಕ್ಕನ್ನು ಐಎಂಜಿ ರಿಲಯನ್ಸ್ ಹೊಂದಿತ್ತು. ಆದರೆ, ಇದೀಗ ರಿಲಯನ್ಸ್ ಪ್ರಸಾರಕ್ಕೆ ಬ್ರೇಕ್ ಹಾಕಿದ್ದು, ಹೊಸ ಬ್ರಾಡ್​ಕಾಸ್ಟ್​ ಪ್ರಡ್ಯೂಸರ್​ಗಾಗಿ ಹುಡುಕಾಟ ನಡೆಸುತ್ತಿದೆ. ಆದರೆ, ಪ್ರೊಡ್ಯಸೂರ್ ಅಷ್ಟು ಬೇಗ ಸಿಗೋದು ಕಷ್ಟ. ಆದ್ದರಿಂದ ಈ ಬಾರಿ ಪಿಎಸ್​ಎಲ್​ ಮ್ಯಾಚ್​ಗಳು ನಡೆಯೋದು ಅನುಮಾನ. ಇದರಿಂದ ಪಾಕಿಸ್ತಾನ್​ ಕ್ರಿಕೆಟ್​ ಬೋರ್ಡ್​ಗೆ ಭಾರೀ ನಷ್ಟವಾಗಿದೆ.

ವರ್ಲ್ಡ್​ಕಪ್​ಗೂ ಮುನ್ನ ಗೇಲ್​ ಕೊಟ್ರು ನಿವೃತ್ತಿ ಶಾಕ್..!

0

ವರ್ಲ್ಡ್​​ಕಪ್ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ನಡೆಯಲಿರುವ 2019ರ ಒಡಿಐ ವರ್ಲ್ಡ್​ಕಪ್ ಅನ್ನು ಇಡೀ ವಿಶ್ವ ಎದುರು ನೋಡುತ್ತಿದೆ. ಹೀಗಿರುವಾಗ ವೆಸ್ಟ್ಇಂಡೀಸ್​ನ ಹೊಡಿಬಡಿ ಬ್ಯಾಟ್ಸ್​ಮನ್, ಟಿ20 ಸ್ಪೆಷಲಿಸ್ಟ್ ಕ್ರಿಸ್​ಗೇಲ್ ತನ್ನ ಫ್ಯಾನ್ಸ್​ಗೆ ನಿವೃತ್ತಿ ಶಾಕ್ ನೀಡಿದ್ದಾರೆ.
ಹೌದು ಕ್ರಿಸ್​ ಗೇಲ್ 2019ರ ವರ್ಲ್ಡ್​ಕಪ್ ಬಳಿಕ ನಿವೃತ್ತಿಪಡೆಯಲಿದ್ದಾರೆ. ಸ್ವತಃ ಅವರೇ ಈ ಶಾಕಿಂಗ್​ ನ್ಯೂಸ್​ ಅನ್ನು ಅನೌನ್ಸ್ ಮಾಡಿದ್ದಾರೆ. ಬ್ರಿಯಾನ್ ಲಾರ ಬಳಿಕ ಏಕದಿನ ಕ್ರಿಕೆಟ್​ನಲ್ಲಿ ವೆಸ್ಟ್ ಇಂಡೀಸ್ ಪರ ಅತೀ ಹೆಚ್ಚು ರನ್ ಗಳಿಸಿರುವ ಖ್ಯಾತಿ 39 ವರ್ಷದ ಗೇಲ್ ಅವರದ್ದು. ಇವರು 10 ಸಾವಿರ ರನ್​ ಕ್ಲಬ್ ಸೇರಲು ಬೇಕಿರುವುದು ಇನ್ನು ಕೇವಲ 223 ರನ್ ಮಾತ್ರ, ಹೀಗಾಗಿ ವರ್ಲ್​ಕಪ್​ನಲ್ಲಿ ಈ ಕ್ಲಬ್​ಗೆ ಎಂಟ್ರಿಕೊಟ್ಟು ಬಳಿಕ ಗುಡ್​ಬೈ ಹೇಳಲಿದ್ದಾರೆ.
ಒಡಿಐನಲ್ಲಿ ಡಬಲ್​ ಸೆಂಚುರಿ ಸಿಡಿಸಿದ ವಿಂಡೀಸ್​ನ ಏಕಮಾತ್ರ ಪ್ಲೇಯರ್ ಈ ಕ್ರಿಸ್​ ಗೇಲ್. 1999ರಲ್ಲಿ ಭಾರತದ ವಿರುದ್ಧ ಆಡುವ ಮೂಲಕ ಒನ್​ ಡೇ ಇಂಟರ್ನ್ಯಾಷನಲ್​ಗೆ ಪದಾರ್ಪಣೆ ಮಾಡಿದ್ದರು.
ಈವರೆಗೆ ಒಟ್ಟು 284 ಮ್ಯಾಚ್​ಗಳನ್ನು ಆಡಿದ್ದಾರೆ. 36.98 ಸರಾಸರಿಯಲ್ಲಿ 9,727 ರನ್​ ಕಲೆಹಾಕಿದ್ದು, 23 ಶತಕ ಹಾಗೂ 49 ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಗೇಲ್​​ ಟಿ-20, ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್ ಈ ಮೂರು ಆವೃತ್ತಿಯಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

ಶ್ರೀಲಂಕಾ ಇಲ್ಲಿವರೆಗೆ ಗೆದ್ದಿರೋದು ಕೇವಲ ಎರಡೇ ಎರಡು ಟೆಸ್ಟ್ ಸೀರಿಸ್!

0

ಶ್ರೀಲಂಕಾ  ಗೆದ್ದಿರೋದು ಎರಡೇ ಎರಡು ಟೆಸ್ಟ್ ಸೀರಿಸ್..! ಇದನ್ನು ನಂಬೋಕೆ ಕಷ್ಟ ಆಗುತ್ತೆ ಅಲ್ವಾ? ಕಷ್ಟ ಆದ್ರೂ ಇದನ್ನು ನಂಬಲೇಬೇಕು.

ಆಸ್ಟ್ರೇಲಿಯಾ ಎದುರು ಶ್ರೀಲಂಕಾ ಒಟ್ಟು 12 ಟೆಸ್ಟ್ ಸರಣಿ ಆಡಿದೆ. ಈ 12ರಲ್ಲಿ 10ರಲ್ಲಿ ಆಸ್ಟ್ರೇಲಿಯಾನೇ ವಿನ್ ಆಗಿರೋದು. ಬರೀ ಎರಡೇ ಎರಡು ಟೆಸ್ಟ್ ಸೀರಿಸ್  ಶ್ರೀಲಂಕಾದವ್ರು ಗೆದ್ದಿರೋದು.

ಈ ಎರಡು ಟೀಂಗಳು 1983 ರಲ್ಲಿ ಫಸ್ಟ್ ಟೈಮ್ ಮುಖಾಮುಖಿ ಆಗಿದ್ವು. ಆಗ ಆಡಿದ ಒಂದೇ ಒಂದು ಪಂದ್ಯದಲ್ಲಿ ಶ್ರೀಲಂಕಾ ಸೋತಿತ್ತು. ಅದಾದ್ಮೇಲೆ 1988, 1989,  1990, 1992,  1996ರಲ್ಲಿ ನಡೆದ ಟೂರ್ನಿಗಳಲ್ಲೂ ಆಸೀಸ್ ಗೆದ್ದಿತ್ತು. 1999ರಲ್ಲಿ ನಡೆದಿದ್ದ 3 ಮ್ಯಾಚಿನ ಟೆಸ್ಟ್ ಸೀರಿಸ್ ಅನ್ನು ಶ್ರೀಲಂಕಾ 1-0 ಅಂತರದಲ್ಲಿ ವಶಪಡಿಸಿಕೊಂಡಿತ್ತು. ಇದು ಶ್ರೀಲಂಕಾ ಆಸೀಸ್ ಎದುರು ಗೆದ್ದ ಮೊದಲ ಟೆಸ್ಟ್ ಸೀರಿಸ್.

ಹ್ಞೂಂ, ಶ್ರೀಲಂಕಾ ಅಂತು ಇಂತು ಗೆಲ್ತು, ಇನ್ನು ಆಸೀಸ್ ಗೆ ಸಖತ್ ಫೈಟ್ ನೀಡುತ್ತೆ ಅಂತ ಅನ್ಕೊಂಡಿದ್ದ ಫ್ಯಾನ್ಸ್ ಅನ್ನ ಮತ್ತೆ ಶ್ರೀಲಂಕಾ ಪ್ಲೇಯರ್ಸ್ ನಿರಾಸೆಗೊಳಿಸಿದ್ರು. 2003, 2004, 2007, 2011, 2012 ರಲ್ಲಿ ನಡೆದ ಸೀರಿಸ್ ನಲ್ಲಿ ಶ್ರೀಲಂಕಾ ಸೋತು ಸುಣ್ಣವಾಗಿ ಬಿಟ್ಟಿತ್ತು.

ಇವ್ರೇನ್  ಆಸ್ಟ್ರೇಲಿಯಾ ಮೇಲೆ ಗೆಲ್ಲೋದೇ ಇಲ್ಲ ಅಂತ ಅಭಿಮಾನಿಗಳು ಡಿಸೈಡ್ ಮಾಡಿಬಿಟ್ಟಿದ್ರೇನೋ..? ಅಷ್ಟರಲ್ಲೇ 2016ರಲ್ಲಿ ಶ್ರೀಲಂಕಾ ತನ್ನ ಪವರ್ ತೋರಿಸ್ತು. ಆಸೀಸ್ ಎದುರು 3 ಪಂದ್ಯಗಳ ಟೆಸ್ಟ್ ಸೀರಿಸ್ ಅನ್ನು ಕ್ಲೀನ್ ಸ್ವೀಪ್ ಮಾಡಿ ರೆಕಾರ್ಡ್ ಮಾಡ್ತು.

ಹೀಗೆ ಇಲ್ಲಿ ತನಕ ಶ್ರೀಲಂಕಾ ಗೆದ್ದಿದ್ದು ಎರಡು ಬಾರಿ (1999-2016) ಮಾತ್ರ. ಈ ವರ್ಷ ಅಂದರೆ, 2019ರಲ್ಲಿ ನಡೆದ ಟೂರ್ನಿಯಲ್ಲೂ ಶ್ರೀಲಂಕಾ ಆಸೀಸ್​ ಎದುರು ಸೋತು ಸುಣ್ಣಾಗಿದೆ.

ಹುತಾತ್ಮ ಯೋಧರ ಮಕ್ಕಳ ಶಿಕ್ಷಣದ ಹೊಣೆ ನನ್ನದು ಅಂದ್ರು ಸೆಹ್ವಾಗ್..!

0

ನವದೆಹಲಿ : ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಮಕ್ಕಳ ಶಿಕ್ಷಣದ ಹೊಣೆಯನ್ನು ವಹಿಸಿಕೊಳ್ಳೋದಾಗಿ ಭರವಸೆ ನೀಡಿದ್ದಾರೆ.
‘ಹುತಾತ್ಮ ಯೋಧರಿಗಾಗಿ ನಾವೇನು ಮಾಡಿದ್ರೂ ಕಮ್ಮಿಯೇ. ನನ್ನಿಂದ ಸಣ್ಣ ಸಹಾಯವಾಗಲಿ ಅಂತ ವೀರ ಮರಣವನ್ನಪ್ಪಿದ ಎಲ್ಲಾ ಯೋಧರ ಮಕ್ಕಳ ಶಿಕ್ಷಣಕ್ಕೆ ಅಗತ್ಯ ನೆರವು ನೀಡುತ್ತೇನೆ” ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಓಪನರ್ ಸೆಹ್ವಾಗ್.
ಈ ಮೂಲಕ 40 ಯೋಧರ ಕುಟುಂಬಗಳಿಗೆ ಸೆಹ್ವಾಗ್ ಹಿರಿ ಮಗನ ಸ್ಥಾನದಲ್ಲಿ ನಿಂತಿದ್ದಾರೆ. ಪುಲ್ವಾಮಾ ದಾಳಿ ನಡೆದಾಗ ರಣಹೇಡಿಗಳ ಹೇಯಕೃತ್ಯಕ್ಕೆ ಕಿಡಿಕಾರಿದ್ದ ವೀರೇಂದ್ರ ಸೆಹ್ವಾಗ್ ಇಂದು ಟ್ವೀಟ್​ ಮೂಲಕ ಹುತಾತ್ಮರಾದ ಯೋಧರ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳೋದಾಗಿ ತಿಳಿಸಿದ್ದಾರೆ.

ನ್ಯೂಜಿಲೆಂಡ್​ಗೆ ತಿರುಗೇಟು ನೀಡಿದ ಭಾರತ

0

ಅಕ್ಲೆಂಡ್​ : ಟೀಮ್ ಇಂಡಿಯಾ ನ್ಯೂಜಿಲೆಂಡ್​ ವಿರುದ್ಧ ಮೊದಲ ಟಿ20 ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಅಕ್ಲೆಂಡ್​ ನ ಈಡನ್​ ಪಾರ್ಕ್​ನಲ್ಲಿ ನಡೆದ 2ನೇ ಟಿ20 ಮ್ಯಾಚ್​ನಲ್ಲಿ 7 ವಿಕೆಟ್​ಗಳ ಭರ್ಜರಿ ಜಯ ದಾಖಲಿಸೋ ಮೂಲಕ ರೋಹಿತ್ ಶರ್ಮಾ ನಾಯಕತ್ವದ ಇಂಡಿಯಾ ಸರಣಿಯನ್ನು ಸಮಬಲಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಯ್ತು.
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್​ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ಕಳ್ಕೊಂಡು 158 ರನ್​ಗಳನ್ನುಗಳಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾಕ್ಕೆ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ 79 ರನ್​ಗಳ ಜೊತೆಯಾಟವನ್ನು ನೀಡಿ ಉತ್ತಮ ಆರಂಭ ಒದಗಿಸಿದ್ರು.
ರೋಹಿತ್ (50) ಸ್ಫೋಟಕ ಅರ್ಧಶತಕಗಳಿಸಿ ಮಿಂಚಿದ್ರು. ಶಿಖರ್ ಧವನ್​ 30, ವಿಜಯ್ ಶಂಕರ್ 14, ರಿಷಭ್ ಪಂತ್ ಅಜೇಯ 40, ಧೋನಿ ಅಜೇಯ 20ರನ್ ಬಾರಿಸಿದ್ರು. 3 ವಿಕೆಟ್​ ಕಿತ್ತು ಅತಿಥೇಯರ ರನ್ ಓಟಕ್ಕೆ ಬ್ರೇಕ್ ಹಾಕಿದ ಕೃನಾಲ್​ ಪಾಂಡ್ಯ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ್ರು.

ಮಾನವೀಯತೆ ಮೆರೆದ ಕನ್ನಡಿಗ ಕೆ.ಎಲ್​ ರಾಹುಲ್​

0

ಟೀಮ್​ ಇಂಡಿಯಾ ಪ್ಲೇಯರ್​, ಕನ್ನಡಿಗ ಕೆ.ಎಲ್ ರಾಹುಲ್ ಭಾರತದ ಮಾಜಿ ಕ್ರಿಕೆಟಿಗರೊಬ್ಬರ ಕುಟುಂಬದ ನೆರವಿಗೆ ನಿಂತು ಮಾನವೀಯತೆ ಮೆರೆದಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಜೇಕಬ್ ಮಾರ್ಟಿನ್ ಅವರು ಅಪಘಾತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿದ್ದು, ಅವರ ಫ್ಯಾಮಿಲಿ ಇದೀಗ ಸಂಕಷ್ಟದಲ್ಲಿದೆ. ಇದನ್ನು ತಿಳಿದ 26 ವರ್ಷದ ಕ್ರಿಕೆಟಿಗ ಕೆ.ಎಲ್​ ರಾಹುಲ್ ಮನಸ್ಸು ಕರಗಿದೆ. ಮಾನವೀಯತೆ ಮೆರೆದಿರುವ ರಾಹುಲ್ ಜೇಕಬ್ ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ.
ತಾನು ಸಹಾಯ ಮಾಡಿದ್ದು ಯಾರಿಗೂ ಹೇಳಬಾರದು ಎಂದು ರಾಹುಲ್ ಜೇಕಬ್ ಅವರ ಕುಟುಂಬಕ್ಕೆ ಮನವಿ ಮಾಡಿದ್ದರಂತೆ. ಆದರೆ, ರಾಹುಲ್ ಅವರು ಮಾಡಿರೋ ಸಹಾಯವನ್ನು ಹೇಳದಿರಲು ಜೇಕಬ್ ಫ್ಯಾಮಿಲಿಯ ಮನಸ್ಸು ಒಪ್ಪಿಲ್ಲ. ರಾಹುಲ್ ತಮ್ಮ ಕುಟುಂಬಕ್ಕೆ ಸಹಾಯ ಮಾಡಿರೋದನ್ನು ಹೇಳಿಕೊಂಡಿದ್ದಾರೆ.ಇನ್ನು ರಾಹುಲ್ ಕೂಡ ನಮ್ಮ ಕುಟುಂಬದ ಸದಸ್ಯರು ಅಂತ ಜೇಕಬ್ ಪತ್ನಿ ಹೇಳಿದ್ದಾರೆ. ಆದರೆ, ರಾಹುಲ್ ಎಷ್ಟು ಹಣ ನೀಡಿದ್ದಾರೆ ಅನ್ನೋದು ಇನ್ನೂ ಗೊತ್ತಾಗಿಲ್ಲ.
ಜೇಕಬ್ ಅವರು ಹುಟ್ಟಿದ್ದು 1972ರ ಮೇ 11ರಂದು, ಬರೋಡದಲ್ಲಿ. ರೈಟ್​ ಹ್ಯಾಂಡ್​ ಬ್ಯಾಟ್ಸ್​ಮನ್ ಆಗಿದ್ದ ಜೇಕಬ್ ಮಾರ್ಟಿನ್​ ಅವರು 1999ರಲ್ಲಿ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದರು. ಸೌರವ್ ಗಂಗೂಲಿ ಅವರ ಕ್ಯಾಪ್ಟೆನ್ಸಿಯಲ್ಲಿ 5 ಮತ್ತು ಸಚಿನ್ ತೆಂಡೂಲ್ಕರ್ ಅವರ ನಾಯಕತ್ವದಲ್ಲಿ 5 ಮ್ಯಾಚ್​ಗಳನ್ನಾಡಿದ್ದರು. ಒಟ್ಟು 10 ಒಡಿಐನಿಂದ 22.57ರ ಸರಾಸರಿಯಲ್ಲಿ 158ರನ್ ಗಳಿಸಿದ್ದಾರೆ.
ಇನ್ನು ಇದೀಗ ಜೇಕಬ್ ಕುಟುಂಬಕ್ಕೆ ಕೆ.ಎಲ್ ರಾಹುಲ್ ಮಾತ್ರವಲ್ಲದೆ ಮಾಜಿ ಕ್ರಿಕೆಟಿಗರಾದ ಸೌರವ್​ ಗಂಗೂಲಿ​​​, ಸಚಿನ್ ತೆಂಡೂಲ್ಕರ್, ಟೀಮ್ ಇಂಡಿಯಾದ ಕೋಚ್ ರವಿಶಾಸ್ತ್ರಿ, ಯುವ ಆಟಗಾರ ಕೃನಾಲ್ ಪಾಂಡ್ಯ ಸೇರಿದಂತೆ ಹಲವರು ಸಹಾಯ ಮಾಡಿದ್ದಾರೆ.

ಗೆಲುವಿನ ಹಳಿಗೆ ಮರಳಿದ ರೋಹಿತ್​ ಪಡೆ

0

ನ್ಯೂಜಿಲೆಂಡ್​​ ವಿರುದ್ಧದ 4ನೇ ಏಕದಿನದಲ್ಲಿ ಹೀನಾಯ ಸೋಲುಂಡಿದ್ದ ಟೀಮ್​ಇಂಡಿಯಾ 5ನೇ ಮ್ಯಾಚ್​ ಜಯಿಸುವ ಮೂಲಕ ಗೆಲುವಿನ ಹಳಿಗೆ ಮರಳಿದೆ.

ವೆಲ್ಲಿಂಗ್ಟನ್​ನಲ್ಲಿ ನಡೆದ ಸರಣಿಯ ಕೊನೆಯ ಮ್ಯಾಚ್​ನಲ್ಲಿ ಭಾರತ 35 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಸರಣಿಯನ್ನು 4-1 ಅಂತರದಿಂದ ಗೆದ್ದು ಬೀಗಿದೆ.

ಪಂದ್ಯದಲ್ಲಿ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಟೀಮ್​ಇಂಡಿಯಾ 18 ರನ್​ಗಳಿಸುವಷ್ಟರಲ್ಲಿ 4 ವಿಕೆಟ್​​ ಕಳೆದುಕೊಂಡು ಆರಂಭಿಕ ವೈಫಲ್ಯ ಅನುಭವಿಸಿತು. ಆದ್ರೆ ಅಂಬಟಿ ರಾಯುಡು (90),ವಿಜಯ್​ ಶಂಕರ್ (45)​​ ಹಾಗೂ ಹಾರ್ದಿಕ್​ ಪಾಂಡ್ಯಾ(45) ಅವರ ಸಮಯೋಜಿತ ಬ್ಯಾಟಿಂಗ್​ ನೆರವಿನಿಂದ ಭಾರತ ಅಂತಿಮವಾಗಿ 252 ರನ್​ಗಳಿಸಿತು.

253 ರನ್​ಗಳ ಟಾರ್ಗೆಟ್​​ ಬೆನ್ನತ್ತಿದ ಅತಿಥೇಯರು ಭಾರತದ ಬೌಲಿಂಗ್​ ದಾಳಿ ಎದುರು ಮಂಕಾದರು. ಕಿವೀಸ್​ನ ಬ್ಯಾಟ್ಸ್​​ಮನ್​ಗಳು ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್​ ಪರೇಡ್​ ನಡೆಸಿದ್ರು. ಪರಿಣಾಮವಾಗಿ 44.1 ಓವರ್​ಗಳಲ್ಲಿ 217 ರನ್​ಗಳಿಗೆ ​ನ್ಯೂಜಿಲೆಂಡ್​​ ಆಲೌಟ್​​ ಆಯ್ತು. ​35 ರನ್​ಗಳ ಅಂತರದ ಜಯ ಸಾಧಿಸಿ ಟೀಮ್​ಇಂಡಿಯಾ ಗೆಲುವಿನ ಕೇಕೆ ಹಾಕಿತು. ಭಾರತದ ಪರ ಯಜುವೇಂದ್ರ ಚಹಲ್ 3, ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ತಲಾ 2, ಭುವನೇಶ್ವರ್ ಕುಮಾರ್​, ಕೇದಾರ್ ಜಾಧವ್ ತಲಾ 1 ವಿಕೆಟ್ ಪಡೆದರು. ಭರ್ಜರಿ ಬ್ಯಾಟಿಂಗ್​ ಮಾಡಿ 90 ರನ್​ ಸಿಡಿಸಿದ ಅಂಬಟಿ ರಾಯುಡು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದ್ರು. ಟೂರ್ನಿಯಲ್ಲಿ ಅತ್ಯುತ್ತಮ ಪದರ್ಶನ ನೀಡಿದ ಮೊಹಮ್ಮದ್ ಶಮಿ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದ್ರು. 

ಗೆಲುವಿನ ಅಲೆಯಲ್ಲಿ ಸೋಲುಂಡ ಟೀಮ್​ ಇಂಡಿಯಾ

0

ನ್ಯೂಜಿಲೆಂಡ್​ ವಿರುದ್ಧದ ಏಕದಿನ ಸರಣಿಯ ಮೊದಲ 3 ಪಂದ್ಯಗಳನ್ನು ಗೆದ್ದು ಬೀಗಿದ್ದ ಟೀಮ್​ಇಂಡಿಯಾ 4ನೇ ಏಕದಿನದಲ್ಲಿ ಮುಗ್ಗರಿಸಿದೆ. ಅತಿಥೇಯ ತಂಡದ ಶಿಸ್ತುಬದ್ಧ ಬೌಲಿಂಗ್​ ದಾಳಿಗೆ ತತ್ತರಿಸಿದ ಟೀಮ್​ಇಂಡಿಯಾ 4ನೇ ಏಕದಿನದಲ್ಲಿ ಸೋಲುಂಡಿದೆ. ಆಲ್​ರೌಂಡ್​ ಫರ್ಮಾರ್ಮೆನ್ಸ್ ನೀಡಿದ ನ್ಯೂಜಿಲೆಂಡ್ 8 ವಿಕೆಟ್​ಗಳ ಜಯ ಸಾಧಿಸಿದೆ. 

ಪಂದ್ಯದಲ್ಲಿ ಟಾಸ್​​ ಸೋತು ಬ್ಯಾಟಿಂಗ್​ಗಿಳಿದ ಟೀಮ್​ಇಂಡಿಯಾ ನೀರಸ ಪ್ರದರ್ಶನ ನೀಡಿತು. ಸ್ಪಿನ್ನರ್ ಯಜುವೇಂದ್ರ ಚಾಹಲ್ ದಾಖಲಿಸಿದ 18 ರನ್​ಗಳೇ ಭಾರತದ ಪರ ದಾಖಲಾದ ವ್ಯಕ್ತಿಗತ ಬೆಸ್ಟ್​​ ಸ್ಕೋರ್​ ಆಯ್ತು. ಕಿವೀಸ್​ ವೇಗಿಗಳಾದ ಟ್ರೆಂಟ್​ ಬೋಲ್ಟ್​​ ಹಾಗೂ ಕೋಲಿನ್​ ಗ್ರಾಂಡ್​​ಹೋಮ್​ ಬೌಲಿಂಗ್​ ದಾಳಿಗೆ ನಲುಗಿದ ಭಾರತ ಕೇವಲ 92 ರನ್​ಗಳಿಗೆ ಆಲೌಟ್​ ಆಯ್ತು. 93 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಅತಿಥೇಯ ಪಡೆ ಕೇವಲ 14.4 ಓವರ್​ಗಳಲ್ಲಿ 2 ವಿಕೆಟ್​​ ಕಳೆದುಕೊಂಡು ನಿರಾಯಾಸವಾಗಿ ಗುರಿ ತಲುಪಿತು. ಈ ಮೂಲಕ ಸರಣಿಯಲ್ಲಿ ನ್ಯೂಜಿಲೆಂಡ್​ ಮೊದಲ ಗೆಲುವು ದಾಖಲಿಸಿತು.  ಟ್ರೆಂಟ್​​ಬೋಲ್ಟ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

 

Popular posts