ಲಂಡನ್ : ಕೊರೋನಾ ವೈರಸ್ ಸಾಕು ಪ್ರಾಣಿಗಳಿಗೂ ಹಬ್ಬುತ್ತಿದೆ. ಬ್ರಿಟನ್ನಲ್ಲಿ ಬೆಕ್ಕೊಂದಕ್ಕೆ ಕೊವಿಡ್ ಕಾಣಿಸಿಕೊಂಡಿದೆ. ಮನೆಯ ಮಾಲೀಕನಿಂದಲೇ ಅದಕ್ಕೆ ಸೋಂಕು ತಗುಲಿದೆ. ಮೊದಲು ಮಾಲೀಕನಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಬೆಕ್ಕಿಗೂ ಕಾಣಿಸಿಕೊಂಡಿದೆ. ಇದು ಬ್ರಿಟನ್ನಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣವಾಗಿದೆ.