ಕ್ಯಾರೆಟ್​ ಎಷ್ಟೆಲ್ಲಾ ಉಪಕಾರಿ ಗೊತ್ತಾ..?

0
567

ಕ್ಯಾರೆಟ್ ಅಂದ ಕೂಡಲೇ ನಮಗೆ ನೆನಪಾಗೋದು ಕ್ಯಾರೆಟ್ ಹಲ್ವ, ಕ್ಯಾರೆಟ್​ ಪಲ್ಯ ಸೇರಿದಂತೆ ಕ್ಯಾರೆಟ್​ನಿಂದ ತಯಾರಿಸೋ ಹಲವು ಖಾದ್ಯಗಳು. ಕ್ಯಾರೆಟ್​​ನ್ನು ದಿನನಿತ್ಯದ ಅಡುಗೆಗೆ ಸಾಮಾನ್ಯವಾಗಿ ಬಳಸುತ್ತೇವೆ. ಇನ್ನು ಕೆಲವರಿಗೆ ಕ್ಯಾರೆಟ್ ಹಸಿಯಾಗಿ ತಿನ್ನೋಕೆ ಇಷ್ಟವಾಗುತ್ತೆ. ಇನ್ನೊಂದಷ್ಟು ಜನ ಕ್ಯಾರೆಟ್​ನ್ನು ಅಷ್ಟಾಗಿ ನೆಚ್ಚಿಕೊಳ್ಳುವುದಿಲ್ಲ. ಸಾಂಬಾರಿನಲ್ಲಿ ಸಿಕ್ಕರೂ ಎತ್ತಿಡುವವರೂ ಇದ್ದಾರೆ. ಹಾಗೇ ಊಟದ ಜೊತೆಗೆ ಸೇರಿಸಿ ತಿನ್ನುವವರೂ ಇದ್ದಾರೆ. ಅಂತೂ ಕ್ಯಾರೆಟ್​ ಬಾಯಿಗೆ ಎಷ್ಟು ರುಚಿಯೋ ಆರೋಗ್ಯಕ್ಕೂ ಅಷ್ಟೇ ಸಹಕಾರಿ.

ಕ್ಯಾರೆಟ್​​ನಿಂದ ಆಗುವ ಪ್ರಯೋಜನಗಳೇನು ಗೊತ್ತಾ..?

  • ಕ್ಯಾರೆಟ್​ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್​ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಜನ ವಿಟಮಿನ್​ ಕೊರತೆಯಿಂದ ಟ್ಯಾಬ್ಲೆಟ್​ಗಳ ಮೊರೆ ಹೋಗುತ್ತಿದ್ದಾರೆ. ಆದರೆ ದಿನಕ್ಕೆ ಒಂದು ಕ್ಯಾರೆಟ್ ಸೇವಿಸಿದರೂ ನಿಮ್ಮ ದೇಹಕ್ಕೆ ಅಗತ್ಯವಿರುವ ವಿಟಮಿನ್ ಪಡೆಯಬಹುದು. ಪ್ರತಿದಿನ ಒಂದು ಕ್ಯಾರೆಟ್ ಸೇವಿಸುವುದರಿಂದ ದೇಹಕ್ಕೆ ಬೇಕಾಗಿರುವ ವಿಟವಿನ್ ‘ಎ` ಅಂಶ ದೊರೆಯುತ್ತದೆ.
  • ಪ್ರತಿದಿನ ಒಂದು ಗ್ಲಾಸ್ ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಮತ್ತು ನೀವು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.

  • ಕ್ಯಾರೆಟ್ ಸೇವನೆ ಕ್ಯಾನ್ಸರ್​ಗೂ ಉತ್ತಮ ಮದ್ದು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬಲಿಯಾಗುತ್ತಿರುವುದು ಚೆಸ್ಟ್ ಕ್ಯಾನ್ಸರ್​​ಗೆ. ಕ್ಯಾರೆಟ್ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮತ್ತು ಈ ತರಹದ ಖಾಯಿಲೆಗಳಿಂದ ನಮ್ಮನ್ನು ದೂರವಿರಿಸುತ್ತದೆ.
  • ಎಲ್ಲರು ಹೆದರುವುದು ತ್ವಚೆಯ ಟ್ಯಾನ್​ಗೆ. ಕ್ಯಾರೆಟ್ ಸೇವನೆಯಿಂದ ಸೂರ್ಯನ ಕಿರಣದಿಂದ ತ್ವಚೆಗೆ ಆಗುವ ಡ್ಯಾಮೇಜ್ ಅನ್ನು ತಡೆಯಬಹುದು.
  • ಕ್ಯಾರೆಟ್ ಸೇವನೆ ತ್ವಚೆಗೆ ಮಾತ್ರವಲ್ಲ ಹೃದಯಕ್ಕೂ ತುಂಬಾ ಒಳ್ಳೆಯದು. ಕ್ಯಾರೆಟ್​​ನಲ್ಲಿ ಕೊಬ್ಬಿನ ಅಂಶವನ್ನು ಕರಗಿಸುವ ಶಕ್ತಿ ಇದೆ. ದೇಹದಲ್ಲಿರುವ ಅನಗತ್ಯ ಕೊಬ್ಬು ನಿವಾರಣೆಗೆ ಕ್ಯಾರೆಟ್ ಸಹಕಾರಿ. ಇದು ದೇಹದ ರಕ್ತ ಸಂಚಾರಕ್ಕೂ ಅನುಕೂಲಕರವಾಗಿದೆ.
  • ಪ್ರತಿದಿನ ಬೆಳಗ್ಗೆ ಕ್ಯಾರೆಟ್ ಸೇವನೆಯಿಂದ ನಿಮ್ಮ ಹಲ್ಲುಗಳು ಗಟ್ಟಿಯಾಗುತ್ತವೆ ಮತ್ತು ಒಸಡುಗಳು ಬಲಗೊಳ್ಳುತ್ತವೆ.

  • ಕ್ಯಾರೆಟ್​​ನಲ್ಲಿ ಕಬ್ಬಿಣ ಅಂಶ ಹೆಚ್ಚಾಗಿರುತ್ತದೆ. ಕ್ಯಾರೆಟ್​​ ಸೇವನೆ ಸ್ಟ್ರೋಕ್(ಪಾಶ್ವವಾಯು) ಆಗುವುದನ್ನೂ ತಡೆಯುತ್ತದೆ.

ಕ್ಯಾರೆಟ್​ ಜ್ಯೂಸ್​ ರುಚಿಸದಿದ್ದರೆ, ಅದನ್ನು ಚೆನ್ನಾಗಿ ತೊಳೆದು ಹಸಿಯಾಗಿಯೂ ಸೇವಿಸಬಹುದು. ಹಾಗೇ ಕ್ಯಾರೆಟ್​ ದೋಸೆ ಸೇರಿ, ಕ್ಯಾರೆಟ್​ ಹಲ್ವ, ಕ್ಯಾರೆಟ್​ ಪಲ್ಯ ಮೊದಲಾದವುಗಳನ್ನೂ ಹೆಚ್ಚಾಗಿ ಬಳಸಿ.

LEAVE A REPLY

Please enter your comment!
Please enter your name here