ಲಂಡನ್ : ಇಡೀ ವಿಶ್ವ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ. ಅನೇಕರು ತಮ್ಮ ಕೈಲಾದ ಸಹಾಯವನ್ನು ಮಾಡೋ ಮೂಲಕ ತಮ್ಮ ತಮ್ಮ ದೇಶಕ್ಕೆ, ದೇಶದ ಜನರಿಗಾಗಿ ತಮ್ಮದೇಯಾದ ಕೊಡುಗೆ ನೀಡ್ತಿದ್ದಾರೆ ಅನ್ನೋದು ನಿಜಕ್ಕೂ ಮೆಚ್ಚುವಂಥಾ ವಿಷ್ಯ.
ಹಾಗೆಯೇ ಇಂಗ್ಲೆಂಡ್ನಲ್ಲಿ ಶತಾಯುಷಿಯೊಬ್ಬರು £ 33 ಮಿಲಿಯನ್ (33 ಮಿಲಿಯನ್ ಪೌಂಡ್) ಅಂದ್ರೆ ಭಾರತೀಯ ರೂಪಾಯಿ ಲೆಕ್ಕಚಾರದಲ್ಲಿ ನೋಡೋದಾದ್ರೆ 307 ಕೋಟಿ ರೂ ಹಣವನ್ನು ಸಂಗ್ರಹಿಸಿ ಕೊಟ್ಟಿದ್ದಾರೆ..! ಶತಾಯುಷಿಯ ಸೇವೆಯನ್ನು ಮೆಚ್ಚಿದ ರಾಣಿ ಅವರಿಗೆ ಗೌರವ ನೀಡಿದ್ದಾರೆ.
ಹೌದು, ಏಪ್ರಿಲ್ನಲ್ಲಿ 100ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರೋ ಕ್ಯಾಪ್ಟನ್ ಸರ್ ಥಾಮಸ್ ಮೂರ್ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆರೋಗ್ಯ ಕಾರ್ಯಕರ್ತರಿಗಾಗಿ { ಯುಕೆ ರಾಷ್ಟ್ರೀಯ ಆರೋಗ್ಯ ಸೇವೆಗಾಗಿ (ಎನ್ಎಚ್ಎಸ್) } £ 33 ಮಿಲಿಯನ್(307 ಕೋಟಿ ರೂ) ಸಂಗ್ರಹಿಸಿ ನೀಡಿದ್ದಾರೆ. ಅದನ್ನು ಗುರುತಿಸಿರುವ ರಾಣಿ ಎಲಿಜಬೆತ್ II ಗೌರವ ಪ್ರದಾನ ಮಾಡಿದ್ದಾರೆ. ಈ ಬಗ್ಗೆ ಬಕಿಂಗ್ ಹ್ಯಾಮ್ ಅರಮನೆ ಟ್ವೀಟ್ ಮಾಡಿದೆ.