ಬೆಂಗಳೂರು: ಕೊರೋನಾ ವೈರಸ್ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ನಾಳೆ ಜನತಾ ಕರ್ಫ್ಯೂಗೆ ಕರೆ ಕೊಟ್ಟಿದ್ದಾರೆ. ಹಾಗಾಗಿ ಬೆಂಗಳೂರಿನಲ್ಲೂ ಕೊರೋನಾ ವೈರಸ್ ತಡೆಯುವ ಸಲುವಾಗಿ ಕರ್ಫ್ಯೂ ಜಾರಿಯಾಗಲಿದ್ದು, ನಾಳೆ ಬೆಳಗ್ಗೆಯಿಂದ ಸಂಜೆಯವರೆಗೂ ಬೆಂಗಳೂರು ಸ್ತಬ್ಧವಾಗಲಿದೆ. ಇನ್ನು ಕರ್ಫ್ಯೂ ಇರುವ ಹಿನ್ನೆಲೆ ನಾಳೆ ಬೆಂಗಳೂರಲ್ಲಿ ಏನಿರುತ್ತೆ, ಏನಿರಲ್ಲ ಎಂಬುದನ್ನು ನೋಡೋಣ.
ನಾಳೆ ಬೆಂಗಳೂರಲ್ಲಿ ಏನಿರಲ್ಲ….
- ನಾಳೆ ಆಟೋ, ಟ್ಯಾಕ್ಸಿ, ಓಲಾ, ಉಬರ್, ಯಾವುದೇ ಕ್ಯಾಬ್ಗಳು ರಸ್ತೆಗಿಳಿಯಲ್ಲ.
- ಹೋಟೆಲ್ ಮಾಲೀಕರು ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದಾರೆ. ಹಾಗಾಗಿ ನಾಳೆ ಯಾವುದೇ ಹೋಟೆಲ್ಗಳು ಓಪನ್ ಇರುವುದಿಲ್ಲ.
- ನಮ್ಮ ಮೆಟ್ರೋ ಸೇವೆ ಮುಂಜಾನೆಯಿಂದಲೇ ಇರುವುದಿಲ್ಲ.
- ಬಾರ್, ಪಬ್ ಹಾಗೂ ರೆಸ್ಟೋರೆಂಟ್ಗಳು ಬಂದ್ ಆಗಲಿವೆ.
- ಎಪಿಎಂಸಿ, ಕೆ.ಆರ್ ಮಾರುಕಟ್ಟೆ ಸೇರಿದಂತೆ ಇನ್ನಿತರ ಮಾರುಕಟ್ಟೆಗಳು ನಾಳೆ ಕಾರ್ಯನಿರ್ವಹಿಸುವುದಿಲ್ಲ.
- ಬೆಂಗಳೂರಿನಲ್ಲಿ ಬಹುತೇಕ ಕೈಗಾರಿಕೆಗಳು ಬಂದ್.
- ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳು ಬಂದ್ ಆಗಲಿವೆ.
- ಆಭರಣ ಮಳಿಗೆಗಳು ಇರಲ್ಲ. ಜೊತೆಗೆ ಚಿಕ್ಕಪೇಟೆ ಬಟ್ಟೆ ಅಂಗಡಿಗಳು ಕೂಡಾ ನಾಳೆ ಕದ ತೆರೆಯುವುದಿಲ್ಲ.
- ಇನ್ನು ಬೀದಿ ಬದಿ ವ್ಯಾಪಾರ, ಅಂಗಡಿ ಮುಂಗಟ್ಟುಗಳು ಕ್ಲೋಸ್ ಇರಲಿವೆ.
- ಹೋಲ್ಸೇಲ್ ಬಟ್ಟೆ ವ್ಯಾಪಾರ ಬಂದ್.
- ಶಾಲಾ- ಕಾಲೇಜು , ಶೈಕ್ಷಣಿಕ ಸಂಸ್ಥೆಗಳು ಕಾರ್ಯನಿರ್ವಹಿಸಲ್ಲ.
- ಮಾಲ್, ಸೂಪರ್ ಮಾರ್ಕೆಟ್ಗಳು ಸಂಪೂರ್ಣ ಬಂದ್ ಆಗಲಿವೆ.
- ಇನ್ನು ದೇಶಾದ್ಯಂತ ಪ್ಯಾಸೆಂಜರ್ ರೈಲು, ಎಕ್ಸ್ಪ್ರೆಸ್ ರೈಲು, ಇಂಟರ್ ಸಿಟಿ ಸೇರಿದಂತೆ ಇತರೆ ರೈಲುಗಳು ಸೇವೆಯೂ ನಾಳೆ ಇರುವುದಿಲ್ಲ.
- ಕನಿಷ್ಠ ಮಟ್ಟದಲ್ಲಿ ಮಾತ್ರ ಬಸ್ಗಳ ಕಾರ್ಯಾಚರಣೆ ಮಾಡಲು ಕೆಎಸ್ಆರ್ಟಿಸಿ ಆದೇಶ ನೀಡಿದೆ.
- ಜನದಟ್ಟಣೆಗೆ ಅನುಗುಣವಾಗಿ ಬಿಎಂಟಿಸಿ ಬಸ್ಗಳು ಓಡಾಟ ನಡೆಸಲಿದೆ.
- ಖಾಸಗಿ ಬಸ್ಗಳ ಓಡಾಟ ಇರುವುದು ಅನುಮಾನ
- ರಾಜ್ಯದ್ಯಾಂತ ಲಾರಿ ಸಂಚಾರ ನಾಳೆ ಸ್ತಬ್ಧವಾಗಲಿದೆ.
ಏನಿರುತ್ತೆ…
ಅಗತ್ಯ ವಸ್ತುಗಳಾದ ಹಾಲು, ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆ, ಆ್ಯಂಬುಲೆನ್ಸ್, ಅಗ್ನಿಶಾಮಕ ದಳ ಹಾಗೂ ಪೆಟ್ರೋಲ್, ಡೀಸೆಲ್ ಬಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.