Sunday, June 26, 2022
Powertv Logo
Homeರಾಜ್ಯಕ್ಯಾಬ್​ ಡ್ರೈವರ್​ನ ಕಿಡ್ನಾಪ್​ ಮಾಡಿ ಹಣ ದೋಚಿದ್ರು..!

ಕ್ಯಾಬ್​ ಡ್ರೈವರ್​ನ ಕಿಡ್ನಾಪ್​ ಮಾಡಿ ಹಣ ದೋಚಿದ್ರು..!

ರಾಮನಗರ: ಖಾಸಗಿ ಟ್ಯಾಕ್ಸಿಗಳಲ್ಲಿ ಪ್ರಯಾಣಿಕರ ಮೇಲೆ ದೌರ್ಜನ್ಯಗಳು ವರದಿಯಾಗುತ್ತವೆ. ಆದರೆ ಈಗ ಪ್ರಯಾಣಿಕರು ಟ್ಯಾಕ್ಸಿ ಚಾಲಕನನ್ನು ಕಿಡ್ನಾಪ್​ ಮಾಡಿ 20 ಸಾವಿರ ರು. ದೋಚಿರುವ ಘಟನೆ ಬೆಂಗಳೂರಿನಲ್ಲಿ ನಿನ್ನೆ ನಡೆದಿದೆ. ನಿನ್ನೆ ರಾತ್ರಿ ಅಡುಗೋಡಿಯಿಂದ ದೊಮ್ಮಸಂದ್ರಕ್ಕೆ ನಾಲ್ವರು ಕ್ಯಾಬ್​ ಬುಕ್​ ಮಾಡಿದ್ರು. ದರೋಡೆಕೋರರು ಕ್ಯಾಬ್ ಹತ್ತಿ ಡ್ರೈವರ್​ಗೆ ಚಾಕು ತೋರಿಸಿ ಹೆದರಿಸಿ ಇಡೀ ರಾತ್ರಿ ಬೆಂಗಳೂರು ಸುತ್ತಿಸಿದ್ದಾರೆ.

ಬೆಂಗಳೂರಿನಿಂದ ಬಿಡದಿ, ರಾಮನಗರ, ಚನ್ನಪಟ್ಟಣಕ್ಕೆ ಬಂದಿರುವ ದರೋಡೆಕೋರರು ಆನಂದ ಭವನ ಲಾಡ್ಜ್​​ನಲ್ಲಿ ಉಳಿದುಕೊಂಡಿದ್ದಾರೆ. ಚಾಲಕನ ಮೊಬೈಲ್ ನಿಂದ ಹೆಂಡಿತಿಗೆ ವಿಡಿಯೋ ಕಾಲ್ ಮಾಡಿಸಿದ್ದಾರೆ. ಕ್ಯಾಬ್​ ಡ್ರೈವರ್​ ಸೋಮಶೇಖರ್ ಕಿಟಿಕಿಯ ಮೂಲಕ ತಪ್ಪಿಸಿಕೊಂಡಿದ್ದಾರೆ. ಚನ್ನಪಟ್ಟಣ ಪುರ ಠಾಣೆಯಲ್ಲಿ ಚಾಲಕನ ವಿಚಾರಣೆ ನಡೆಸಲಾಗಿದೆ.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments