ಅವರು ಕಾಫೀನೇ ಕುಡಿಯಲ್ಲ, ಇನ್ನು ಡ್ರಿಂಕ್ಸ್​ ಮಾಡ್ತಾರಾ..?

0
324

ಚಿಕ್ಕಮಗಳೂರು: ನನ್ನ ಪತಿ ಕಾಫೀನೇ ಕುಡಿಯಲ್ಲ, ಡ್ರಿಂಕ್ಸ್​ ಹೇಗೆ ಮಾಡ್ತಾರೆ ಅಂತ ಶಾಸಕ ಸಿ.ಟಿ ರವಿ ಪತ್ನಿ ಪಲ್ಲವಿ ಅವರು ಪ್ರಶ್ನಸಿದ್ದಾರೆ. ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅವರ ಕಾರು ಡಿಕ್ಕಿ ಹೊಡೆದ ಸಂದರ್ಭ ಶಾಸಕರು ಮದ್ಯ ಸೇವನೆ ಮಾಡಿದ್ರು ಎಂಬ ಆರೋಪಕ್ಕೆ ಪಲ್ಲವಿ ಅವರು ಪ್ರತಿಕ್ರಿಯಿಸಿದ್ದಾರೆ.

“ಸಿ.ಟಿ.ರವಿ ಮದ್ಯ ಸೇವಿಸಿದ್ದಾರೆ ಅನ್ನೋದು ಶುದ್ಧ ಸುಳ್ಳು. ಅವರು ಕಾಫೀನೇ ಕುಡಿಯಲ್ಲ. ಇನ್ನು ಹೇಗೆ ಡ್ರಿಂಕ್ಸ್​ ಮಾಡ್ರಾರೆ? ರವಿ ಅವರು ಡ್ರೈವ್ ಮಾಡೋದು ಬಿಟ್ಟು 15 ವರ್ಷಗಳಾಗಿವೆ. ಅವರಿಗೆ ಡ್ರೈವಿಂಗ್ ಮರೆತೇ ಹೋಗಿದೆ. ಇಬ್ಬರು ಯುವಕರು ಮೃತಪಟ್ಟಿರುವ ಸಂಗತಿ ಬೇಸರ ತಂದಿದೆ ಅಂತ ಪಲ್ಲವಿ ಅವರು ಹೇಳಿದ್ದಾರೆ. ಕುಣಿಗಲ್ ತಾಲೂಕಿನ ಆಲಪ್ಪನಗುಡ್ಡ ಬಳಿ ಶಾಸಕ ಸಿ.ಟಿ ರವಿ ಅವರ ಕಾರು ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

LEAVE A REPLY

Please enter your comment!
Please enter your name here