Saturday, May 28, 2022
Powertv Logo
Homeರಾಜ್ಯಕುಂಕುಮ ಇಟ್ಟವರ ಕಂಡ್ರೆ ಸಿದ್ದರಾಮಯ್ಯಗೆ ಹೆದರಿಕೆ : ಸಿ ಟಿ ರವಿ

ಕುಂಕುಮ ಇಟ್ಟವರ ಕಂಡ್ರೆ ಸಿದ್ದರಾಮಯ್ಯಗೆ ಹೆದರಿಕೆ : ಸಿ ಟಿ ರವಿ

ದೇವನಹಳ್ಳಿ: ಸಿದ್ದರಾಮಯ್ಯ ಹೇಳ್ತಾರೆ ನಾನು ಹಿಂದೂ ಅಂತ. ಆದರೆ, ಅವರಿಗೆ ಕೇಸರಿ ಟೋಪಿ ಮಾತ್ರ ಬೇಡ ಎಂದು ವಿರೋಧ ಪಕ್ಷದ ನಾಯಕನಿಗೆ ಸಿ ಟಿ ರವಿ ವ್ಯಂಗ್ಯವಾಡಿದರು.

ದೇವನಹಳ್ಳಿಯಲ್ಲಿಂದು ಮಾತನಾಡಿದ ಅವರು ಸಿದ್ದರಾಮಯ್ಯ ಹೇಳ್ತಾರೆ ನಾನು ಹಿಂದೂ ಅಂತ. ಆದರೆ, ಕೇಸರಿ ಟೋಪಿ ಹಾಕೋಕೆ ಬಂದಾಗ ಏನು ಮಾಡಿದ್ರು..? ಕಿತ್ತಾಕಿದ್ರು..!. ಕುಂಕುಮ ಇಟ್ಟವರ ಕಂಡರೆ ಹೆದರಿಕೆ ಆಗುತ್ತಂತೆ. ನಮ್ಮ ತಾಯಂದಿರು ಕುಂಕಮ‌ ಇಡ್ತಾರೋ ಇಲ್ವಾ..? ಕುಂಕಮ‌ ಇಟ್ಟವರು ಯಾರಾದ್ರೂ ಬಾಂಬ್ ಹಾಕಿದ್ರಾ..? ಬಾಂಬ್ ಹಾಕೋವರು ಯಾರು ಅಂದರೆ ಟೋಪಿ ಹಾಕಿದವರು..!! ಅಂತ ಸನ್ನೆ ಮಾಡಿ ತೋರಿಸಿದರು.

ಇನ್ನು ಟೋಪಿ ಕಂಡ್ರೆ ಸಿದ್ದರಾಮಯ್ಯಗೆ ಬಹಳ ಪ್ರೀತಿ. ಕೇಸರಿ ಪೇಟಾ ತೊಟ್ಟವರು ಯಾರು ಬಾಂಬ್ ಹಾಕಲಿಲ್ಲ. ಕೇಸರಿ ಶಾಲು ಹಾಕಿದವರು ಭಾರತ್ ಮಾತಾ ಕೀ ಜೈ ಅಂದರು. ಕೆಲವರಿಗೆ ಪ್ರಧಾನಿ ಮೋದಿ ಕೋಡೋ ಯೋಜನೆಗಳು ಬೇಕು. ಇನ್ನು ಕೆಲವರಿಗೆ ಮೋದಿ ಬೇಡ ಮೋದಿಗೆ ವೋಟು ಹಾಕೋದು ಬೇಡ. ಹಾಗು ಉಪ್ಪು ತಿಂದವರು ಮನೆಗೆ ಮೋಸ ಮಾಡ್ತಾರಾ..? ಉಪ್ಪು ತಿಂದು ದ್ರೋಹ ಮಾಡ್ತಾರೆ ಅಂದ್ರೆ ಏನ್ ಹೇಳಬೇಕು ಎಂದು ಕಿಡಿಕಾರಿದರು.

ಅದುವಲ್ಲದೇ ದೇಶದಲ್ಲಿ ಭಯೋತ್ಪಾದಕರಿಗೆ ಬಿರಿಯಾನಿ ತಿನಿಸೋ ಕಾಲ‌ ಇತ್ತು. ತಿನಿಸಬೇಕಾ ಬಿರಿಯಾನಿನಾ..? ಈಗ ಬಿರಿಯಾನಿ ಗಿರಿಯಾನಿ ಇಲ್ಲ ಎಂದರು. ಈಗ ಯಾರಾದ್ರೂ ಬಾಲ ಬಿಚ್ಚಿದ್ರೇ ಜೆಸಿಬಿ ಹೋಗುತ್ತದೆ. ಬುಲ್ಡೋಜರ್ ಹೋಗುತ್ತೆ…? ಸರಿನೋ ತಪ್ಪೋ..?ಎಂದು ಬಿಜೆಪಿ ಕಾರ್ಯಕರ್ತರಿಗೆ ಸಿ ಟಿ ರವಿ ಪ್ರಶ್ನೆ ಮಾಡಿದರು.

ಅಲ್ಲದೇ ಭಯೋತ್ಪಾದನೆ ಮಾಡುವವರಿಗೆ ಬಿರಿಯಾನಿ ತಿನಿಸಲ್ಲ. ಬಂದೂಕಿನಿಂದ ದಾಳಿ ಮಾಡುವವರಿಗೆ ಸೈನಿಕರ ಬಂದೂಕಿನಿಂದಲೇ ಉತ್ತರ ಕೊಡ್ತೀವಿ. ಬಾಲ ಬಿಚ್ಚಿದ್ರೇ ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ಕೊಡ್ತೇವೆ ಎಂದು ಪ್ರತಿಕ್ರಿಯಿಸಿದರು.

- Advertisment -

Most Popular

Recent Comments