ಸಿ.ಟಿ.ರವಿ ಕಾರು ಅಪಘಾತ ಪ್ರಕರಣದಲ್ಲಿ ಬಲವಂತದ ಸಂಧಾನ..?

0
355

ಮಂಡ್ಯ: ಸಿ.ಟಿ.ರವಿ ಕಾರು ಅಪಘಾತದಲ್ಲಿ ಇಬ್ಬರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ಎಎಸ್​​ಪಿ ಎ.ಆರ್.ಬಲರಾಮೇಗೌಡ ಅವರ ಮನೆಯಲ್ಲಿ ಸಂಧಾನ ನಡೆದಿದೆ. ಮೃತರ ಕುಟುಂಬ ಬಲವಂತವಾಗಿಯೇ ಸಂಧಾನಕ್ಕೆ ಒಪ್ಪಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ.

ಮೃತರ ಕುಟುಂಬಕ್ಕೆ ತಲಾ ಎರಡೂವರೆ ಲಕ್ಷ ರೂಪಾಯಿ ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಬಲರಾಮೇಗೌಡರ ಪತ್ನಿ ಸುಷ್ಮಾಗೌಡ ಅವರಿಗೆ ಸೇರಿದ ಸ್ಕಾರ್ಪಿಯೋ ಕಾರಿನಲ್ಲಿ ಮೃತರು ಪ್ರಯಾಣಿಸಿದ್ದರು. ಮೃತ ಶಶಿಕುಮಾರ್ ಹಾಗೂ ಸುನಿಲ್ ಗೌಡ ಅವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲು ಸಂಧಾನ ಮಾತುಕತೆ ನಡೆದಿದೆ. ‘ಫೆ.19ರಂದು ಕುಣಿಗಲ್ ಬಳಿ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅವರ ಕಾರು ಡಿಕ್ಕಿ ಹೊಡೆದು ರಸ್ತೆಬದಿಯಲ್ಲಿದ್ದ ಇಬ್ಬರು ಮೃತಪಟ್ಟಿದ್ದರು.

LEAVE A REPLY

Please enter your comment!
Please enter your name here