Home ರಾಜ್ಯ ಬೆಂಗಳೂರು ಬಡವರ ಸಹಾಯಕ್ಕೆ ನಿಂತ ಶಾಸಕ ರಾಮಲಿಂಗಾ ರೆಡ್ಡಿ

ಬಡವರ ಸಹಾಯಕ್ಕೆ ನಿಂತ ಶಾಸಕ ರಾಮಲಿಂಗಾ ರೆಡ್ಡಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹರಡದಂತೆ ಲಾಕ್​ಡೌನ್ ಆದೇಶವಿರುವ ಹಿನ್ನೆಲೆ ಬಡವರು ಆಹಾರಕ್ಕಾಗಿ ಪರದಾಡುವಂತಾಗಿದೆ. ಅಂಥವರ ಸಹಾಯಕ್ಕೆ ಅನೇಕರು ಮುಂದೆ ಬರುತ್ತಿದ್ದಾರೆ. ಇದೀಗ ಶಾಸಕ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಬಿಟಿಎಂ ಕೊರೋನಾ ವಿರೋಧಿ ಪಡೆಯವರು ನೆರವನ್ನು ನೀಡುತ್ತಿದ್ದಾರೆ.

ರಾಮಲಿಂಗಾ ರೆಡ್ಡಿ, ಕಾರ್ಪೋರೇಟರ್​ಗಳು, ಮಾಜಿ ಕಾರ್ಪೊರೇಟರ್​ಗಳು ಹಾಗೂ ಇತರ ಮುಖಂಡರ ಮೂಲಕ ಒಟ್ಟು 37,660 ಆಹಾರದ ಪೊಟ್ಟಣಗಳನ್ನು ತಯಾರಿಸಿ ಶುಕ್ರವಾರ ನಗರದ ಹಲವು ವಾರ್ಡ್​ಗಳಲ್ಲಿ ಹಂಚುತ್ತಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೆ ಸಾವಿರಾರು ಆಹಾರದ ಪೊಟ್ಟಣಗಳನ್ನು ಅವರು ಹಂಚಿದ್ದು, ಅದರ ವಿವರಗಳು ಈ ಕೆಳಗಿನಂತಿವೆ.

ಲಕ್ಕಸಂದ್ರದ 20ನೇ ಕ್ರಾಸ್​ನಲ್ಲಿಒಟ್ಟು 1,200 ಪ್ಯಾಕೆಟ್​ಗಳನ್ನು ಹಂಚಿದ್ದಾರೆ. ಅಂತೆಯೇ ಚಂದ್ರಪ್ಪ ನಗರದಲ್ಲಿ 700 ಪ್ಯಾಕೆಟ್​ಗಳನ್ನು ನೀಡಿದ್ದಾರೆ. ಎಸ್​.ಆರ್ ನಗರ 400 ಪ್ಯಾಕೆಟ್​ಗಳು, ಪುಖ್ರಾಜ್ ಲೇಔಟ್​ನಲ್ಲಿ 500, ನಂಜಪ್ಪ ಲೇಔಟ್ 2,000, ಅಯ್ಯಪ್ಪ ಗಾರ್ಡನ್ 100, ಪೋತಲಪ್ಪ ಗಾರ್ಡನ್ 200 ಪ್ಯಾಕೆಟ್, ಈರಮ್ಮ ಲೇಔಟ್​ನಲ್ಲಿ 50 ಆಹಾರ ಪೊಟ್ಟಣಗಳನ್ನು ನೀಡಿದ್ದಾರೆ.

ಜಕ್ಕಸಂದ್ರ ವಾರ್ಡ್​ನ ಸಾಯಿಬಾಬ ದೇವಸ್ಥಾನದ ಬಳಿ 1,000 ಪ್ಯಾಕೆಟ್​ಗಳು, ಎಲ್ಲಮ್ಮ ದೇವಸ್ಥಾನ ಬಳಿ 800 ಪ್ಯಾಕೆಟ್​, ವೆಂಕಟಪುರದಲ್ಲಿ 600, ಹಾಗೂ ಬುರಿಯಲ್ ಗ್ರೌಂಡ್​ನಲ್ಲಿ 200 ಪ್ಯಾಕೆಟ್​ಗಳನ್ನು ನೀಡಿದ್ದರು.

ಬಿಟಿಎಂ ವಾರ್ಡ್​ನ ಜಿ.ಡಿ ಮಾರ ಸ್ಲಂಗೆ 2000 ಪ್ಯಾಕೆಟ್​ಗಳನ್ನು ನೀಡಿದ್ದಾರೆ. ಮದೀನ ನಗರದ ಮುಖ್ಯ ರಸ್ತೆಯಲ್ಲಿ 200 ಪ್ಯಾಕೆಟ್​ಗಳು ಹಾಗೂ 1ನೇ ಕ್ರಾಸ್​ನಲ್ಲಿ 100 ಪ್ಯಾಕೆಟ್​ಗಳನ್ನು ಹಂಚಿದ್ದಾರೆ. ನಂಜಪ್ಪ ಲೇಔಟ್​ನಲ್ಲಿ 100, ಇಡಬ್ಲ್ಯೂಎಸ್ 100 ಹಾಗೂ ಮಹಾದೇಶ್ವರ ಬಸ್ ನಿಲ್ದಾಣದ ಬಳಿ100, ಎನ್​.ಎಸ್ ಪಾಳ್ಯ ಸರ್ಕಲ್​ನಲ್ಲಿ 800 ಹಾಗೂ ಚರ್ಚ್ ಬಳಿ 1000 ಪ್ಯಾಕೆಟ್​ಗಳನ್ನು ನೀಡಿದ್ದಾರೆ.

ಇನ್ನು ಅಡುಗೋಡಿ ವಾರ್ಡ್​ನ ಸಮುದಾಯ ಭವನದ ಬಳಿ 1,000, ಕಾರ್ಪೋರೇಷನ್ ಬ್ಯಾಂಕ್ ಬಳಿ 200, ಶಿವ ಥಿಯೇಟರ್ ಬಳಿ 260 ಪ್ಯಾಕೆಟ್​ಗಳನ್ನು ನೀಡಲಾಗಿದೆ. ಸಾಯಿಬಾಬ ದೇವಸ್ಥಾನದ ಬಳಿ 200 ಹಾಗೂ ಕರುಮಾರಿಯಮ್ಮ ದೇವಸ್ಥಾನದ ಬಳಿ 500 ಆಹಾರದ ಪೊಟ್ಟಣಗಳನ್ನುಹಂಚಿದ್ದಾರೆ. ಕಂಬಿ ಬಾಬು ಟೀಮ್ ಶಾಸ್ತ್ರಿ ನಗರದಲ್ಲಿ 800 ಪ್ಯಾಕೆಟ್​ಗಳು, 1ನೇ ಮೈನ್, 4ನೇ ಕ್ರಾಸ್​ನಲ್ಲಿ 400 ಪ್ಯಾಕೆಟ್​, 12 ನೇ ಮೈನ್ ಶಿವ ಹಟ್ಸ್​ನಲ್ಲಿ 1,000, ಮುತ್ತು ಮಾರಿಯಮ್ಮ ದೇವಸ್ಥಾನದ ಬಳಿ 1,000, ಕಮ್ಯುನಿಟಿ ಹಾಲ್​ ಬಳಿ 600, ಇನ್ನು ರಾಧಾ, ಸಾಯಿರಾ ಹಾಗೂ ಲಲಿತಾ ಟೀಮ್​ 200 ಆಹಾರದ ಪ್ಯಾಕೆಟ್​ಗಳನ್ನು ನೀಡಿದ್ದಾರೆ. 7ನೇ ಮೈನ್, 7ನೇ ಕ್ರಾಸ್​ನಲ್ಲಿ ಬಾಲಣ್ಣ ಟೀಮ್ 200 ಪ್ಯಾಕೆಟ್​ಗಳನ್ನು ಹಂಚಿದ್ದಾರೆ.

ಈಜಿಪುರ ವಾರ್ಡ್​ನ ಇಂದಿರಾ ಗಾಂಧಿ ಸ್ಲಂನಲ್ಲಿ 800 ಪ್ಯಾಕೆಟ್​ಗಳನ್ನು ಹಂಚಿದ್ದಾರೆ. ನ್ಯಾಷನಲ್ ಗೇಮ್ಸ್ ವಿಲೇಜ್ 100, ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ 100, ರಂಗಪ್ಪ ಗಾರ್ಡನ್ 300, ಆರ್​ಆರ್​ ರೋಡ್​ನ ಸೂಂದರಿ ಮೆಮೋರಿಯಲ್ ಸ್ಕೂಲ್ ಬಳಿ 300 ಪ್ಯಾಕೆಟ್, ಬೀನಿ ಬ್ರಿಡ್ಜ್ ಬಳಿ 300, ಶ್ರಿರಾಮ್ ದೇವಸ್ಥಾನ ಬಳಿ 300, ರಾಮಚಂದ್ರ ಆಫೀಸ್ ಬಳಿಯ ಅಶ್ವತ್ಥ ಕಟ್ಟೆಯಲ್ಲಿ 500 ಪ್ಯಾಕೆಟ್​ಗಳನ್ನು ಹಂಚಿದ್ದಾರೆ. ಎವರೆಸ್ಟ್ ಸ್ಕೂಲ್ ಬಳಿ 100, ಮುನೇಶ್ವರ ದೇವಸ್ಥಾನದ ಬಳಿ 200 ಪ್ಯಾಕೆಟ್, ವಿಜಿಎಸ್ ಲೇಔಟ್​ನಲ್ಲಿ 200 ಹಾಗೂ ಎಲ್​. ಮುನಿಯಪ್ಪ ಕಂಪೌಂಡ್ 300, ಶ್ರೀನಿವಾಗಿಲು ಬಳಿ ಎಲ್ಲಮ್ಮ ದೇವಸ್ಥಾನದಲ್ಲಿ 300, ಎಂಎಂ ಗಾರ್ಡನ್ 400 ಪ್ಯಾಕೆಟ್​ಗಳು ಹಾಗೂ ನಿರ್ಗುಣ ಮಂದಿರದಲ್ಲಿ 200 ಜನರಿಗೆ ಆಹಾರವನ್ನು ನೀಡಿದ್ದಾರೆ.

ಮಡಿವಾಳ ವಾರ್ಡ್​ನ ಹಲವರಿಗೆ ಆಹಾರದ ಪೊಟ್ಟಣಗಳನ್ನು ಹಂಚಿದ್ದು, ಅಲ್ಲಿನ  ಸೋಮೇಶ್ವರ ದೇವಸ್ಥಾನದಲ್ಲಿ1,500 ಪ್ಯಾಕೆಟ್​ಗಳನ್ನು ನೀಡಿದ್ದಾರೆ. ವಿಪಿ ರೋಡ್​ನಲ್ಲಿ 300, ಮದ್ದೂರಮ್ಮ ಕಾಲೋನಿಯಲ್ಲಿರುವ ದೇವಸ್ಥಾನದ ಬಳಿ 300, ತಾವರೆಕೆರೆ  ಸರ್ಕಲ್​ನಲ್ಲಿ 450, ಗುಂಡುತೋಪಿನ ಸಮುದಾಯ ಭವನದ ಬಳಿ 1,000 ಪ್ಯಾಕೆಟ್​ಗಳನ್ನು ಹಂಚಿದ್ದಾರೆ. ಇನ್ನು ಗೋಪಿನಾಥ್ ರೆಡ್ಡಿಯವರ ತಂಡದಿಂದ  ವೆಂಕಟೇಶ್ವರ ಲೇಔಟ್​ನಲ್ಲಿ 300 ಆಹಾರದ ಪೊಟ್ಟಣಗಳನ್ನು ಹಂಚಿದ್ದಾರೆ.

ಸುದ್ದುಗುಂಟೆಪಾಳ್ಯ ವಾರ್ಡ್​ನ ವೆಂಕಟೇಶ್ವರ ಲೇಔಟ್​ನ 5ನೇ ಕ್ರಾಸ್​ನಲ್ಲಿ 800 ಪ್ಯಾಕೆಟ್​ಗಳನ್ನು ಹಂಚಿದ್ದಾರೆ. ಭೋವಿ ಕಾಲೋನಿಯ ಅಂಗನವಾಡಿಯಲ್ಲಿ 550 ಪ್ಯಾಕೆಟ್​ಗಳನ್ನು ನೀಡಿದ್ದಾರೆ. ಎಕೆ ಕಾಲೋನಿ ಸರ್ಕಲ್​ನಲ್ಲಿ 450, ಬಾಲಾಜಿ ನಗರದಲ್ಲಿ 450, ಮಾರುತಿ ನಗರದ ಶ್ರೀನಿವಾಸ ದೇವಸ್ಥಾನ ಬಳಿ 225 ಆಹಾರದ ಪೊಟ್ಟಣಗಳನ್ನು ಹಂಚಿದ್ದಾರೆ.

ಇನ್ನು ಚಿನ್ನಮ್ಮ ಲೇಔಟ್ ಸರ್ಕಲ್ 225, ಬಾಲಾಜಿ ನಗರದಲ್ಲಿ 400, ಚಿಕ್ಕ ಅಡುಗೋಡಿ ಹತ್ತಿರದ  ವೆಂಕಟೇಶ್ವರ ದೇವಸ್ಥಾನದಲ್ಲಿ 700, ಬೃಂದಾವನ್ ನಗರ 300, ಕೃಷ್ಣಮೂರ್ತಿ ಲೇಔಟ್ ​900, ಸೈಂಟ್ ಆಂಥೋನಿ ಚರ್ಚ್ ಬಳಿ 650 ಪ್ಯಾಕೆಟ್​ಗಳನ್ನು ನೀಡಲಾಗಿದೆ.

ಕೋರಮಂಗಲ ವಾರ್ಡ್​ನ ಡಾ. ಅಂಬೆಡ್ಕರ್ ಭವನದಲ್ಲಿ ವೆಂಕಟೇಶ್ ಟೀಮ್​ನಿಂದ 1,200 ಪ್ಯಾಕೆಟ್​ಗಳನ್ನು ನೀಡಿದ್ದಾರೆ. ಅಶೋಕ್ ರೆಡ್ಡಿ ಟೀಮ್​ನಿಂದ 1,000 ಪ್ಯಾಕೆಟ್ಸ್, ಕತಾಳಿ ಪಾಳ್ಯ 300, ಸಿದ್ದಾರ್ಥ ನಗರ 700 ಹಂಚಿದ್ದಾರೆ. ಇನ್ನು ಕಾರ್ತಿಕ್ ರೆಡ್ಡಿ ಟೀಮ್​ನಿಂದ ಮಹಾಲಿಂಗೇಶ್ವರ ಬಡಾವಣೆಯಲ್ಲಿ 1,000 ಪ್ಯಾಕೆಟ್​ಗಳನ್ನು ಹಂಚಿದ್ದಾರೆ. ನಡುಬೀದಿ ಕೋರಮಂಗಲದಲ್ಲಿ ಸುಧಾಕರ್ ರೆಡ್ಡಿ, ನಂದ, ರಾಮಾ ರೆಡ್ಡಿ, ಶ್ರೀದರ್, ಪದ್ಮಯ್ಯ, ಹೇಮಂತ್, ರವಿ, ಉದಯ್, ರಾಘವೇಂದ್ರ, ಕುಮಾರ್, ನಂಜ, ಗೋವಿಂದ ರಾಜು ಅವರ ಟೀಮ್​ 850 ಆಹಾರದ ಪ್ಯಾಕೆಟ್​ಗಳನ್ನು ಹಂಚಿ ಬಡವರ ಹಸಿವು ನೀಗಿಸುವಲ್ಲಿ ನೆರವಾಗಿದ್ದಾರೆ.

ಇನ್ನು ಶೇಖರ್ ರೆಡ್ಡಿ, ದರ್ಶನ್ ಕೃಷ್ಣ ರೆಡ್ಡಿ, ಹೇಮಂತ್ ಅವರ ಟೀಮ್ ಕತಾಳಿ ಪಾಳ್ಯದಲ್ಲಿ 1,100 ಪ್ಯಾಕೆಟ್ಸ್ ಹಂಚಿದ್ದಾರೆ.

ಕೊರೋನಾದಿಂದ ಸಮಸ್ಯೆಗೆ ಒಳಗಾದವರಿಗೆ ಸಹಾಯ ಮಾಡಿದ ಎಲ್ಲಾ ಸ್ವಯಂ ಸೇವಕರಿಗೂ ಶಾಸಕ ರಾಮಲಿಂಗ ರೆಡ್ಡಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಇನ್ನು ಯಾರಿಗಾದರೂ ಊಟದ ಅವಶ್ಯಕತೆ ಇದ್ದಲ್ಲಿ ಶಾಸಕರಿಗೆ ತಿಳಿಸಲು +91 9945984444 ಈ ಸಹಾಯವಾಣಿಯನ್ನು ಸಂಪರ್ಕಿಸಿ.

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments