ಟಿಕೆಟ್ ತಪ್ಪಿದ್ದಕ್ಕೆ ಆರ್ ಶಂಕರ್ ಹೀಗನ್ನೋದಾ?! ಬೆಂಬಲಿಗರು ಫುಲ್ ಗರಂ!

0
1030

ಬೆಂಗಳೂರು : ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದ್ದ ರಾಣೆಬೆನ್ನೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊನೇ ಕ್ಷಣದಲ್ಲಿ ಅಚ್ಚರಿ ಅಭ್ಯರ್ಥಿ ಪಾಲಾಗಿದೆ!
ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ 17ಮಂದಿ ಶಾಸಕರಲ್ಲಿ ಒಬ್ಬರಾಗಿರೋ ಅನರ್ಹ ಶಾಸಕ ಆರ್ . ಶಂಕರ್ ಕೈ ಬಿಟ್ಟು ಬಿಜೆಪಿ ಅರುಣ್ ಕುಮಾರ್ ಪೂಜಾರ್ ಅವರಿಗೆ ಟಿಕೆಟ್ ನೀಡಿದೆ. ಈ ಅಚ್ಚರಿ ಆಯ್ಕೆ ಬೆನ್ನಲ್ಲೇ ಆರ್ ಶಂಕರ್ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ.

ಕೊನೇ ಕ್ಷಣದಲ್ಲಿ ರಾಣೆಬೆನ್ನೂರಿಗೆ ಅಚ್ಚರಿಯ ಅಭ್ಯರ್ಥಿ ಆಯ್ಕೆ – ಬಿಜೆಪಿಯ ಈ ರಣಕಲಿ ಯಾರು ಗೊತ್ತಾ?

ಒಂದೆಡೆ ಬೆಂಬಲಿಗರು ಆಕ್ರೋಶ ಹೊರಹಾಕುತ್ತಿದ್ದರೆ, ಅತ್ತ ಆರ್ ಶಂಕರ್ ಸಿಎಂ ಯಡಿಯೂರಪ್ಪ ಮನವೊಲಿಕೆಗೆ ಆರ್ ಶಂಕರ್ ಮಣಿದಿದ್ದಾರೆ. ತಮ್ಮ  ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಗೆ ಬೆಂಬಲ ನೀಡ್ತೀನಿ. ಪಕ್ಷದ ತೀರ್ಮಾನದಂತೆ ಕೆಲಸ ಮಾಡ್ಬೇಕಾಗುತ್ತದೆ. ಈ‌ ಹಿಂದೆಯೂ ಎರಡ್ಮೂರು ಸಲ ತ್ಯಾಗ ಮಾಡಿದ್ದೇನೆ. ಈಗ ತ್ಯಾಗ ಮಾಡೋದ್ರಲ್ಲಿ ದೊಡ್ಡದೇನಿಲ್ಲ ಎಂದು ಶಂಕರ್ ಹೇಳಿದ್ದಾರೆ. ಅಲ್ಲದೆ
ಎಲ್ಲರೂ ಮಂತ್ರಿಯಾಗುವಾಗ ನೀನೂ ಮಂತ್ರಿಯಾಗುವೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದಿದ್ದಾರೆ.
ಶಂಕರ್ ಈ ಹೇಳಿಕೆಯಿಂದ ಬೆಂಬಲಿಗರು ಸಿಟ್ಟಾಗಿದ್ದು, ಅವರ ವಿರುದ್ಧ ತಿರುಗಿಬಿದ್ದಿದ್ದಾರೆ.

LEAVE A REPLY

Please enter your comment!
Please enter your name here