ದಾವಣಗೆರೆ: ಹಿಂಬಾಗಿಲು ಮುರಿದು ಅಪರ ಜಿಲ್ಲಾಧಿಕಾರಿ ಮನೆಯಲ್ಲಿ ಕಳ್ಳತನ ನಡೆದಿರುವ ಘಟನೆ ದಾವಣಗೆರೆ ನಗರದ ಎಸ್ ಎಸ್ ಲೇ ಔಟ್ 6 ನೇ ಕ್ರಾಸ್ ಇಂಡೋರ್ ಸ್ಟೇಡಿಯಂ ಬಳಿ ನಡೆದಿದೆ..
ದಾವಣಗೆರೆ ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಅವರ ಮನೆಯಲ್ಲಿ ಕಳ್ಳತನವಾಗಿದ್ದು, ಒಂದುವರೆ ಕೆಜಿ ಬೆಳ್ಳಿಯನ್ನ ಕಳ್ಳರು ಕದ್ದೋಯ್ದಿದ್ದಾರೆ. ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಅವರು ಹೊಸ ಮನೆಗೆ ಕೆಲ ಪೂಜೆಗೆ ಬಳಸುವ ವಸ್ತುಗಳನ್ನ ಶಿಫ್ಟ್ ಮಾಡಿದ್ದರು, ಹೊಸ ಮನೆಯಲ್ಲಿ ವಾಸವಿರದೆ ಹಳೇ ಮನೆಯಲ್ಲಿ ಬಂದು ಕಳೆದ ರಾತ್ರಿ ವಾಸವಾಗಿ ಇಂದು ಮುಂಜಾನೆ ಹೊಸ ಮನೆಗೆ ಹೋದಾಗ ಹೊಸ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ. ಸ್ಥಳಕ್ಕೆ ವಿದ್ಯಾನಗರ ಪಿಎಸ್ ಐ ರೂಪಾ ತೆಂಬದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.