Tuesday, September 27, 2022
Powertv Logo
Homeಸಿನಿಮಾಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ವಿಧಿವಶ

ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ವಿಧಿವಶ

ಬೆಂಗಳೂರು : ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಬುಲೆಟ್​ ಪ್ರಕಾಶ್​ ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಒಂದೆರಡು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬುಲೆಟ್​ ಪ್ರಕಾಶ್​ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

44 ವರ್ಷ ವಯಸ್ಸಿನ ಬುಲೆಟ್​ ಪ್ರಕಾಶ್ ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಕೆಲವು ಸಮಯದಿಂದ ಅವರಿಗೆ ಡಯಾಲಿಸಿಸ್​​ ಮಾಡಲಾಗುತ್ತಿತ್ತು, ಕೆಲವು ದಿನಗಳ ಹಿಂದೆ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡ ಅವರಿಗೆ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಲೆಟ್​ ಪ್ರಕಾಶ್​ ಇಂದು ತಮ್ಮ ಕೊನೆಯುಸಿರೆಳೆದಿದ್ದಾರೆ.

ಹಾಸ್ಯ ನಟನೆಯಿಂದ ಮನೆಮಾತಾಗಿದ್ದ ಬುಲೆಟ್ ಪ್ರಕಾಶ್​ ತಮ್ಮ ವಿಶೇಷ ನಟನೆಯಿಂದ ಕನ್ನಡಿಗರ ಮನೆಮಾತಾಗಿದ್ದರು. ಹಲವಾರು ಖ್ಯಾತ ನಟರೊಂದಿಗೆ ನಟಿಸಿದ್ದ ಬುಲೆಟ್​ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಬುಲೆಟ್​ ಪ್ರಕಾಶ್​ ಅವರ ಅಗಲುವಿಕೆ ಕರ್ನಾಟಕ ಸಿನಿ ಜಗತ್ತಿಗೆ ತುಂಬಲಾರದ ನಷ್ಟ ಎಂದು ಸಿನಿ ರಂಗದ ಹಿರಿಯ ಕಲಾವಿದರು ಅಭಿಪ್ರಾಯಪಟ್ಟರು.

16 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments