ದಾವಣಗೆರೆ : ಕಮಿಷನ್ ಆರೋಪ ಮಾಡಿದ ದಿಂಗಾಲೇಶ್ವರ ಶ್ರೀಗಳ ವಿರುದ್ಧ ದಾವಣಗೆರೆಯಲ್ಲಿ ಮಾಜಿ ಸಿಎಂ ಬಿ ಎಸ್ ವೈ ಕಿಡಿಕಾಡಿದ್ದಾರೆ.
ಪೀಠಾಧಿಪತಿಯಾಗಿದ್ದುಕೊಂಡು ಈ ರೀತಿ ಹೇಳಿಕೆ ಸರಿಯಲ್ಲ. ಮಠಾಧಿಪತಿಯಾಗಿದ್ದುಕೊಂಡು ಈ ರೀತಿ ಹೇಳಿಕೆ ಶೋಭೆ ತರುವಂತದ್ದಲ್ಲ. ಯಾರು ಕಮಿಷನ್ ಕೇಳಿದ್ದಾರೆ. ಯಾರು ಕೊಟ್ಟಿದ್ದಾರೆ ಹೇಳಲಿ. ಈ ಬಗ್ಗೆ ತನಿಖೆ ನಡೆಸಲಾಗುತ್ತೆ. ಹುಬ್ಬಳ್ಳಿಯಲ್ಲಿ 6.30ಕ್ಕೆ ಘಟನೆ ನಡೆದಿದೆ. 7.30 ಹಿರೇಮಠ್ ಎನ್ನುವವನನ್ನ ಬಂಧನ ಮಾಡಿದ್ದೇವೆ ಎಂದರು.
ಸಾವಿರಾರು ಮುಸ್ಲಿಂ ಸಮಾಜದವರು ಪೊಲೀಸರ ಮೇಲೆ ಅಂಗಡಿ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಪಿಎಸ್ ಐ ತಲೆಗೆ ಹೊಡೆದಿದ್ದಾರೆ. ಕಾಂಗ್ರೆಸ್ ಸ್ನೇಹಿತರು ಅಮಾಯಕರನ್ನು ಬಂಧಿಸಬೇಡಿ ಎಂದಿದ್ದಾರೆ. ಯಾರು ಅಮಾಯಕರು ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ಮಾಡಿದವರು ಅಮಾಯಕರಾ. ಕಾಂಗ್ರೆಸ್ ಪಕ್ಷ ಗಲಭೆಗೆ ಪ್ರೋತ್ಸಾಹ ನೀಡುತ್ತಿದೆ. ಸಿದ್ದರಾಮಯ್ಯ ಹೇಳಿಕೆ ಶೋಭೆ ತರುವಂತದಲ್ಲ. ಸ್ಥಳಕ್ಕೆ ಹೋಗಿ ವಾಸ್ತಾವಿಕ ಸ್ಥಿತಿ ತಿಳಿದು ಮಾತನಾಡಲಿ ಎಂದು ಬಿ ಎಸ್ ವೈ ಕಿಡಿಕಾಡಿದ್ದಾರೆ