Monday, August 15, 2022
Powertv Logo
Homeರಾಜ್ಯಬಿಎಸ್​ವೈಗೆ 15 ಸೀಟ್ ಗೆಲ್ಲುವ ವಿಶ್ವಾಸ

ಬಿಎಸ್​ವೈಗೆ 15 ಸೀಟ್ ಗೆಲ್ಲುವ ವಿಶ್ವಾಸ

ಹುಬ್ಬಳ್ಳಿ: ನಾಳೆ ವಿಧಾನ ಪರಿಷತ್ ಫಲಿತಾಂಶ ಹಿನ್ನಲೆಯಲ್ಲಿ ನಾವು 15 ಸೀಟ್ ಗಳನ್ನ ಕನಿಷ್ಠ ಗೆಲ್ಲುತ್ತೇವೆ,ಇದರಿಂದ ವಿಧಾನ ಪರಿಷತ್ ನಲ್ಲಿ ನಮಗೆ ಬಹುಮತ ಸಾಬೀತು ಆಗುತ್ತೆ ಎಂದು ಮಾಜಿ ಸಿಎಮ್ ಬಿಎಸ್ ಯಡಿಯೂರಪ್ಪ ಹೇಳಿದರು.

ನಗರದಲ್ಲಿಂದು ಮಾತಾನಾಡಿದ ಅವರು,ವಿಧಾನ ಪರಿಷತ್ ಚುನಾವಣೆ  ನಮಗಿರುವ ಬಹುಮತವನ್ನು ಸಾಬೀತು ಮಾಡುತ್ತದೆ. ಜನ ನಮಗೆ ಆಶೀರ್ವಾದ ಮಾಡ್ತಾರೆ ಅನ್ನೋ ವಿಶ್ವಾಸ ಇದೆ. ಬೆಳಗಾವಿ ಅಧಿವೇಶನದಲ್ಲಿ ಹಲವು ತೀರ್ಮನಗಳು ಆಗುತ್ತವೆ, ಅಲ್ಲದೆ ಮತಾಂತರ ಕಾಯ್ದೆ ನಿಷೇಧ ಜಾರಿ ಬಿಲ್ ಪಾಸ್ ಆಗುವ ಸಾದ್ಯತೆ ಇದೆ ಎಂದರು. ಇನ್ನೂ ಮತಾಂತರಕ್ಕೆ ಕಾಂಗ್ರೆಸ್ ವಿರೋಧ ಇದ್ದೆ ಇರುತ್ತೆ ಆದರೆ ನಮ್ಮ ಅಪೇಕ್ಷೆ ನಿಷೇಧ ಮಾಡುವುದಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಮತಾಂತರ ಕಾಯ್ದೆ ನಿಷೇಧ ಜಾರಿ ಆಗಿದೆ ಎಂದರು.

ಅಧಿವೇಶನ ಮುಗಿಯುವ ಕೆಲ ಎರಡು ಮೂರು ದಿನಗಳ ಒಳಗೆ ಕಾಯ್ದೆ ಜಾರಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕೇವಲ ನನ್ನ ಅಭಿಪ್ರಾಯ ಅಷ್ಟೇ ಅಲ್ಲ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ.  ಆಡಳಿತ ಪಕ್ಷದವರು ಸೇರಿದಂತೆ ಸಂಸತ್ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆಯಲಾಗಿದೆ ಎಂದರು.

ಬಸವರಾಜ ಬೊಮ್ಮಾಯಿಗೆ ಬಿಜೆಪಿ ನಾಯಕರಿಂದ ಸಹಕಾರ ಸಿಗುತ್ತಿಲ್ಲ ಎನ್ನುವ ರಾಯರೆಡ್ಡಿ ಹೇಳಿಕೆ ವಿಚಾರಕ್ಕೆ ಮಾತಾನಾಡಿದ ಅವರು,ಅದರಲ್ಲಿ ಸತ್ಯಾಂಶ ಇಲ್ಲ,ಎಲ್ಲ ರೀತಿಯ ಸಹಕಾರ ಸಿಗುತ್ತಿದೆ ಬಿಜೆಪಿಯಲ್ಲಿ ಅವರ ಅವಧಿಯನ್ನ ಬೊಮ್ಮಾಯಿ ಪೂರ್ಣಗೊಳಿಸುತ್ತಾರೆ ಎಂದರು.

6 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments