4ನೇ ಬಾರಿ ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ವಚನ- ಇಲ್ಲಿದೆ ಬಿಎಸ್​ವೈ ನಡೆದು ಬಂದ ದಾರಿ..!

0
240

ಬೆಂಗಳೂರು : ಬಿ.ಎಸ್​ ಯಡಿಯೂರಪ್ಪನವರು 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಗದ್ದುಗೆ ಏರಿದ್ದಾರೆ.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಸ್​ವೈ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಜೂಭಾಯ್ ವಾಲಾರವರು ಪ್ರಮಾಣ ವಚನ ಬೋಧಿಸಿದರು.
ಈ ಹಿಂದೆ ಬಿಎಸ್​ವೈ 3 ಬಾರಿ ಸಿಎಂ ಆಗಿ ಅಧಿಕಾರ ನಿರ್ವಹಿಸಿದ್ದರು. ಮಂಡ್ಯ ಜಿಲ್ಲೆಯ ಕೆ.ಆರ್​ ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನಸಿದ ಯಡಿಯೂರಪ್ಪರವರು 1965ರಲ್ಲಿ ಆರ್​ಎಸ್​ಎಸ್ ಸೇರ್ಪಡೆಯಾದರು. ಶಿವಮೊಗ್ಗದ ಶಿಕಾರಿಪುರಕ್ಕೆ ಆಗಮಿಸಿ ಅಲ್ಲಿಂದ ರಾಜಕೀಯ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ್ರು. ಅಲ್ಲಿಂದ ನಿರಂತರ ಹೋರಾಟದ ಮೂಲಕ ಹಂತ ಹಂತವಾಗಿ ರಾಜಕೀಯ ಕ್ಷೇತ್ರದಲ್ಲಿ ಬೆಳೆದವರು.

2007ರಲ್ಲಿ ಮೊದಲ ಬಾರಿ ಸಿಎಂ ಆಗಿ ಅಧಿಕಾರವಹಿಸಿಕೊಂಡಿದ್ದರು. ಆಗ ಕೇವಲ 8 ದಿನ ಮಾತ್ರ ಮುಖ್ಯಮಂತ್ರಿ ಸ್ಥಾನದಲ್ಲಿದ್ದರು. (ನವೆಂಬರ್ 12ರಿಂದ ನವೆಂಬರ್ 19). 2008ರಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾದ ಬಿಎಸ್​ವೈ 3 ವರ್ಷ 2 ತಿಂಗಳ ಕಾಲ ಅಧಿಕಾರ ಗದ್ದುಗೆಯಲ್ಲಿದ್ದರು. (30 ಮೇ 2008 – 31 ಜುಲೈ 2011). ಬಳಿಕ 2018ರಲ್ಲಿ ಮೂರನೇ ಬಾರಿ ಸಿಎಂ ಆಗಿದ್ದ ಬಿಎಸ್​ವೈ ಕೇವಲ ಮೂರು ದಿನಗಳ ಕಾಲ ಅಧಿಕಾರದಲ್ಲಿದ್ದರು. (17 ಮೇ 2018 – 19 ಮೇ 2018) ಇದೀಗ ಇಂದು 4ನೇ ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.
ಬಿಎಸ್​ವೈ ನಡೆದು ಬಂದ ದಾರಿ

1943- ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನನ
1965- ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರವೇಶ..ಶಿವಮೊಗ್ಗ ಜಿಲ್ಲೆ ಶಿಕಾರಿಪುರಕ್ಕೆ ಆಗಮನ
1967- ವೈವಾಹಿಕ ಜೀವನಕ್ಕೆ ಪದಾರ್ಪಣೆ.
1970- ಆರ್​​ಎಸ್​​ಎಸ್​​​ನ ಶಿಕಾರಿಪುರ ತಾಲೂಕು ಕಾರ್ಯವಾಹರಾಗಿ ನೇಮಕ.
1972- ಜನಸಂಘದ ಶಿಕಾರಿಪುರ ತಾಲೂಕು ಅಧ್ಯಕ್ಷರಾಗಿ ನೇಮಕ
1975- ರಾಜಕೀಯ ಪ್ರವೇಶ, ಶಿಕಾರಿಪುರ ಪುರಸಭಾ ಸದಸ್ಯರಾಗಿ ಆಯ್ಕೆ
1975- ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ. 45 ದಿನಗಳ ಜೈಲು ವಾಸ
1977- ಶಿಕಾರಿಪುರ ಪುರಸಭಾ ಅಧ್ಯಕ್ಷರಾಗಿ ಆಯ್ಕೆ
1980- ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆ
1981- ಜೀತದಾಳು ವಿಮುಕ್ತಿ ಹೋರಾಟದ ನಾಯಕತ್ವ, ಪಾದಯಾತ್ರೆ.
1983- ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆಗೆ ಪ್ರವೇಶ
1985- ಬಿಜೆಪಿಯ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ
1988- ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ
1992- ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನಿಯೋಜನೆ
1994- ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ ಆಯ್ಕೆ
1998- ತಲಕಾವೇರಿಯಿಂದ ಕೆಆರ್​​​ಎಸ್​​​ವರೆಗೆ ರೈತ ಜಾಥಾ
2000- ವಿಧಾನ ಪರಿಷತ್​ಗೆ ಆಯ್ಕೆ
2003- ಬಗರ್​​​ಹುಕುಂ ರೈತರ ಜಮೀನು ಸಕ್ರಮಕ್ಕೆ ಆಗ್ರಹಿಸಿ ಶಿಕಾರಿಪುರದಿಂದ ಬೆಂಗಳೂರಿಗೆ ಪಾದಯಾತ್ರೆ
2004- 5ನೇ ಬಾರಿಗೆ ವಿಧಾನಸಭೆ ಪ್ರವೇಶ, ಪ್ರತಿಪಕ್ಷದ ನಾಯಕನಾಗಿ ಆಯ್ಕೆ
2006- ಉಪ ಮುಖ್ಯಮಂತ್ರಿ, ಹಣಕಾಸು ಮತ್ತು ಅಬಕಾರಿ ಖಾತೆ ನಿರ್ವಹಣೆ
2007- ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ, ಜೆಡಿಎಸ್​​​ನಿಂದ ಅಧಿಕಾರ ನಿರಾಕರಣೆ
2008- ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ
2011- ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ
2014- ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶ
2014- ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ
2016- ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಪುನರಾಯ್ಕೆ.

ಮುಖ್ಯಮಂತ್ರಿಯಾಗಿ ಬಿಎಸ್​ವೈ

2007 ರಲ್ಲಿ ಮೊದಲ ಬಾರಿ ಸಿಎಂ ಆಗಿದ್ದ ಬಿಎಸ್​ವೈ
ನ.12-2007 ರಿಂದ ನ.19-2007 ರವರೆಗೆ ಮುಖ್ಯಮಂತ್ರಿ
ಮೊದಲ ಬಾರಿ ಸಿಎಂ ಆಗಿ ಕೇವಲ 8 ದಿನ ಆಡಳಿತ
2008 ರಲ್ಲಿ ಎರಡನೇ ಬಾರಿ ಸಿಎಂ ಪಟ್ಟಕ್ಕೆ ಬಿಎಸ್​ವೈ
ಮೇ 30-2008 ರಿಂದ ಜುಲೈ 31-2011ರ ವರೆಗೆ ಸಿಎಂ
2ನೇ ಬಾರಿ ಸಿಎಂ ಆದಾಗ 3 ವರ್ಷ 2 ತಿಂಗಳು ಅಧಿಕಾರ
2018 ರಲ್ಲಿ ಮೂರನೇ ಬಾರಿ ಬಿಎಸ್​ವೈ ಮುಖ್ಯಮಂತ್ರಿ
ಮೇ 17-2018 ರಿಂದ ಮೇ 19-2018ರ ವರೆಗೆ ಸಿಎಂ
ಕೇವಲ ಮೂರು ದಿನಗಳ ಕಾಲ ಸಿಎಂ ಆಗಿದ್ದ ಬಿಎಸ್​ವೈ
ಇದೀಗ 4ನೇ ಬಾರಿ ಸಿಎಂ
ಜುಲೈ 26-2019 ರಿಂದ…..

LEAVE A REPLY

Please enter your comment!
Please enter your name here