Sunday, June 26, 2022
Powertv Logo
Homeರಾಜ್ಯಚಿನ್ನಮ್ಮ ಲಂಚ ಪ್ರಕರಣ; ತನಿಖೆ ಮುಕ್ತಾಯ

ಚಿನ್ನಮ್ಮ ಲಂಚ ಪ್ರಕರಣ; ತನಿಖೆ ಮುಕ್ತಾಯ

ಬೆಂಗಳೂರು: ಜಯಲಲಿತಾ ಆಪ್ತೆ ಚಿನ್ನಮ್ಮ ಅಂದರೆ ಶಶಿಕಲಾರಿಂದ ಲಂಚ ಪಡೆದ ಆರೋಪದ ತನಿಖೆ ಇದೀಗ ಪೂರ್ಣಗೊಂಡಿದೆ. ಜೈಲಿನಲ್ಲಿ ಜಯಲಲಿತಾ ಆಪ್ತೆ ಶಶಿಕಲಾರಿಗೆ ಸಕಲ ಸೌಕರ್ಯ ಕಲ್ಪಿಸಲು ಲಂಚ ಪಡೆದ ಪ್ರಕರಣವನ್ನು ಹೈಕೋರ್ಟ್​ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆಸಿತ್ತು. ಇದೀಗ ಅಧಿಕಾರಿಗಳ ವಿರುದ್ಧದ ತನಿಖೆ ಪೂರ್ಣಗೊಂಡಿದೆ. ಪ್ರಾಸಿಕ್ಯೂಷನ್​ಗಾಗಿ ಪೂರ್ವಾನುಮತಿ ನೀಡುವುದು ಬಾಕಿಯಿದೆ.

ಲಂಚ ಪ್ರಕರಣದ ಕಡತವನ್ನು ಗೃಹ ಸಚಿವರಿಗೆ ರವಾನಿಸಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆ.19 ರಡಿ ಪ್ರಾಸಿಕ್ಯೂಷನ್​ಗಾಗಿ ಸರ್ಕಾರದ ಪೂರ್ವಾನುಮತಿ ಅಗತ್ಯ. ಹೈಕೋರ್ಟ್​ಗೆ ಸರ್ಕಾರಿ ವಕೀಲರು ಈ ರೀತಿ ಹೇಳಿಕೆ ನೀಡಿದ ನಂತರ ಹೈಕೋರ್ಟ್​ 2 ವಾರದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶ ನೀಡಿದೆ. ಇಲ್ಲವಾದರೆ ಗೃಹ ಕಾರ್ಯದರ್ಶಿ ಹಾಜರಾಗಬೇಕು ಎಂದು ಹೈಕೋರ್ಟ್​ ವಿಭಾಗೀಯ ಪೀಠ ಸೂಚನೆ ನೀಡಿದೆ. ಲಂಚ ಪ್ರಕರಣದ ತನಿಖೆ ವಿಳಂಬ ಕುರಿತಾಗಿ  ಕೆ.ಎಸ್.ಗೀತಾ ಪಿಐಎಲ್ ಸಲ್ಲಿಸಿದ್ದರು.

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments