Home ಸಿನಿ ಪವರ್ ಶ್ರೀಮುರಳಿ ಬಿಟ್ಟು ಪುನೀತ್ ಕೈ ಹಿಡಿದ 'ಭರಾಟೆ' ಡೈರೆಕ್ಟರ್!

ಶ್ರೀಮುರಳಿ ಬಿಟ್ಟು ಪುನೀತ್ ಕೈ ಹಿಡಿದ ‘ಭರಾಟೆ’ ಡೈರೆಕ್ಟರ್!

ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್​ ಪೆನ್ ಬಿಟ್ಟು ಗನ್​ ಹಿಡಿಯುತ್ತಿದ್ದಾರೆ. ರಗ್ಬಿ ಅಂಗಳಿಂದ ಹೊಸ ಫೀಲ್ಡ್​ಗೆ ಎಂಟ್ರಿ ಕೊಡೋಕೆ ಅಪ್ಪು ತಯಾರಿ ನಡೆಸುತ್ತಿದ್ದಾರೆ. ‘ಭರಾಟೆ’ ಡೈರೆಕ್ಟರ್ ಚೇತನ್ ಕುಮಾರ್ ಅಪ್ಪು ಜೊತೆ ಸೇರಿ ‘ಭರ್ಜರಿ’ ಸಿನಿಮಾವೊಂದನ್ನು ಮಾಡಲು ಸಕಲ ಸನ್ನದ್ಧರಾಗಿದ್ದಾರೆ. ಅಪ್ಪು-ಚೇತನ್ ಕಾಂಬಿನೇಷನ್​​ನ ಮೂವಿ ಸೆಟ್ಟೇರೋಕೆ ರೆಡಿಯಾಗಿದೆ.

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಫ್ಯಾನ್ಸ್ ಸದ್ಯ ‘ಯುವರತ್ನ’ ಟೀಸರ್​ ನೋಡಿ ಕಳೆದೋಗಿದ್ದಾರೆ. ಯಾವಗಪ್ಪಾ ಸಿನಿಮಾ ರಿಲೀಸ್ ಆಗುತ್ತೆ ಅಂತ ಕಾಯ್ತಿದ್ದಾರೆ. ವರ್ಷಾರಂಭದಲ್ಲಿ ‘ ನಟಸಾರ್ವಭೌಮ’ ನಾಗಿ ಮಿಂಚಿದ್ದ ಅಪ್ಪು, ‘ಯುವರತ್ನ’ನಾಗಿ ಸದ್ದು ಮಾಡುವ ತವಕದಲ್ಲಿದ್ದಾರೆ. ‘ಯುವರತ್ನ’ನ ಪವರ್​ ಕಣ್ತುಂಬಿಕೊಳ್ಳುವ ಕಾತುರದಲ್ಲಿದ್ದಾರೆ ಅಭಿಮಾನಿಗಳು.

ಈ ನಡುವೆ ಫ್ಯಾನ್ಸ್​ಗೆ ಮತ್ತೊಂದು ಸ್ವೀಟ್ ನ್ಯೂಸ್ ಸಿಕ್ಕಿದೆ. ಅಪ್ಪು ಹೊಸ ಸಿನಿಮಾ ಶೂಟಿಂಗ್ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಸ್ಟಾರ್ ಡೈರೆಕ್ಟರ್ ಭರ್ಜರಿ ಚೇತನ್​​ ಕುಮಾರ್ ಆ್ಯಕ್ಷನ್ ಕಟ್ ಹೇಳಲಿರೋ ಸಿನಿಮಾ ಅದಾಗಿರೋದ್ರಿಂದ ನಿರೀಕ್ಷೆ ಸಿಕ್ಕಾಪಟ್ಟೆ ದೊಡ್ಡದಾಗಿಯೇ ಇದೆ. ಅಪ್ಪು- ಚೇತನ್ ಕಾಂಬಿನೇಷನ್​ನ ಆ ಸಿನಿಮಾ ಈಗಾಗಲೇ ಸಖತ್ ಸದ್ದು ಮಾಡ್ತಿದೆ..! ನೀವೂ ಕೂಡ ಆ ಸಿನಿಮಾದ ಮೋಶನ್ ಪೋಸ್ಟರ್ ನೋಡಿದ್ದೀರಿ. ನಿಮ್ಮ ಕುತೂಹಲವೂ ಗರಿಗೆದರಿದೆ.

ಹೌದು. ಪುನೀತ್ ರಾಜ್​ಕುಮಾರ್ ಮತ್ತು ಚೇತನ್ ಕಾಂಬಿನೇಷನ್​ನ ಹೊಸ ಮೂವಿ ಬಗ್ಗೆ ನಿಮ್ಗೆ ಈಗಾಗಲೇ ಗೊತ್ತಾಗಿದೆ. ಅಪ್ಪು-ಚೇತು ಜೋಡಿಯ ಹೊಸ ಸಿನಿಮಾ ‘ಜೇಮ್ಸ್’. ಅಪ್ಪು ಬರ್ತ್​ಡೇ ದಿನ, ಅಂದ್ರೆ ಮಾರ್ಚ್​ 17ರಂದು ಜೇಮ್ಸ್ ಮೋಷನ್ ಪೋಸ್ಟರ್ ರಿಲೀಸ್ ಆಗಿತ್ತು. ಪೋಸ್ಟರ್​ ನೋಡಿಯೇ ಫ್ಯಾನ್ಸ್ ಫಿದಾ ಆಗಿದ್ದಾರೆ.

ಪೋಸ್ಟರ್​ನಿಂದ ಗಮನ ಸೆಳೆದಿದ್ದ ‘ಜೇಮ್ಸ್’ ಸೆಟ್ಟೇರೋಕೆ ಇಷ್ಟು ದಿನ ಘಳಿಗೆ ಕೂಡಿ ಬಂದಿರ್ಲಿಲ್ಲ. ಒಂದ್ಕಡೆ ಸಂತೋಷ್ ಆನಂದ್​ ರಾಮ್​ ನಿರ್ದೇಶನದ ‘ಯುವರತ್ನ’ ಸಿನಿಮಾದಲ್ಲಿ ಅಪ್ಪು ಬ್ಯುಸಿ ಇದ್ದಾರೆ. ಇನ್ನೊಂದ್​ ಕಡೆ ಡೈರೆಕ್ಟರ್ ಚೇತನ್ ಕುಮಾರ್ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ ಭರಾಟೆ’ ಯಲ್ಲಿ ಬ್ಯುಸಿ. ಸದ್ಯದಲ್ಲೇ ಈ ಎರಡು ಸಿನಿಮಾ ಕೆಲಸ ಕಂಪ್ಲೀಟ್ ಆಗಲಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಈ ಎರಡೂ ಸಿನಿಮಾಗಳು ಶೀಘ್ರದಲ್ಲೇ ರಿಲೀಸ್ ಕೂಡ ಆಗುತ್ತಿವೆ. ಈಗ ಅಪ್ಪು-ಚೇತು ಹೊಸ ಪ್ರಾಜೆಕ್ಟ್ ಕೆಲಸಕ್ಕೆ ಕೈ ಹಾಕಲಿದ್ದಾರೆ.

ನವೆಂಬರ್​ನಲ್ಲಿ ಜೇಮ್ಸ್​ ಚಿತ್ರೀಕರಣ ಆರಂಭವಾಗಲಿದೆ. ಯುವರತ್ನ ಸಿನಿಮಾದಲ್ಲಿ ಕಾಲೇಜು ವಿದ್ಯಾರ್ಥಿಯಾಗಿ, ರಗ್ಬಿ ಆಟಗಾರನಾಗಿರುವ ಪುನೀತ್​ ರಾಜ್​​ಕುಮಾರ್ ಜೇಮ್ಸ್​ನಲ್ಲಿ ವಿಭಿನ್ನ ಗೆಟಪ್, ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದು, ಹಿಂದೆಂದೂ ಕಾಣದ ಪವರ್​ ಸ್ಟಾರ್​ ದರ್ಶನ ಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ.

ಬಹದ್ದೂರ್, ಭರ್ಜರಿ ಅಂಥಾ ಬಿಗ್ ಹಿಟ್ ಸಿನಿಮಾಗಳನ್ನು ನೀಡಿರುವ ಡೈರೆಕ್ಟರ್ ಚೇತನ್​ ಕುಮಾರ್​ ನಿರ್ದೇಶನದ ಭರಾಟೆ ಸಿನಿಮಾ ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಬಾಕ್ಸ್​ ಆಫೀಸಲ್ಲಿ ಈ ಸಿನಿಮಾ ಸಖತ್ ಸೌಂಡ್ ಮಾಡುವ ಎಲ್ಲಾ ಲಕ್ಷಣಗಳೂ ಕಂಡು ಬರ್ತಾ ಇವೆ.

ಇನ್ನು, ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ‘ಯುವರತ್ನ’ ಕೂಡ ಸಖತ್ ಸದ್ದು ಮಾಡ್ತಿದೆ. ರಿಲೀಸ್ ಆದ್ಮೇಲೆ ಬಾಕ್ಸ್​ ಆಫೀಸನ್ನು ಯುವರತ್ನ ಆಳುವ ಎಲ್ಲಾ ಲಕ್ಷಣಗಳು ಕಂಡುಬರ್ತಾ ಇವೆ. ಈ ಸ್ಟಾರ್ ಡೈರೆಕ್ಟರ್- ಸ್ಟಾರ್ ಆ್ಯಕ್ಟರ್ ಕಾಂಬಿನೇಷನ್​ನ ‘ಜೇಮ್ಸ್ ‘ ಶೂಟಿಂಗ್ ಅಖಾಡಕ್ಕೆ ಇಳಿಯುವ ಮುನ್ನವೇ ಭರ್ಜರಿ ಸೌಂಡು ಮಾಡ್ತಾ ಇದ್ದು, ನಮ್ ಕಡೆಯಿಂದಲೂ ಅಪ್ಪು- ಚೇತು ಅಂಡ್ ಟೀಮ್​ಗೆ ಶುಭಹಾರೈಕೆ.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments