Monday, May 23, 2022
Powertv Logo
Homeರಾಜ್ಯಬ್ರಹ್ಮೋಸ್ ಕ್ಷಿಪಣಿಯ 'ಡಬಲ್ ಹಿಟ್ ಪರೀಕ್ಷೆ ಯಶಸ್ವಿ

ಬ್ರಹ್ಮೋಸ್ ಕ್ಷಿಪಣಿಯ ‘ಡಬಲ್ ಹಿಟ್ ಪರೀಕ್ಷೆ ಯಶಸ್ವಿ

ಭಾರತದ ಬ್ರಹ್ಮೋಸ್ ಕ್ಷಿಪಣಿಯ ‘ಡಬಲ್ ಹಿಟ್’ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ನೌಕೆ ಮತ್ತು ಯುದ್ಧ ವಿಮಾನದ ಮೂಲಕ ಒಂದೇ ಗುರಿ ಧ್ವಂಸ ಮಾಡುವ ಪರೀಕ್ಷೆ ಯಶಸ್ವಿಯಾಗಿದೆ.

ಭಾರತೀಯ ವಾಯುಪಡೆ ಯುದ್ಧ ನೌಕೆ ಮತ್ತು ಯುದ್ಧ ವಿಮಾನ ಸುಖೋಯ್ 30 ಜೆಟ್ ನಿಂದ ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದ್ದು, ಎರಡೂ ಪರೀಕ್ಷೆಯಲ್ಲಿ ಒಂದೇ ಗುರಿ ನಿಗದಿ ಪಡಿಸಲಾಗಿತ್ತು. ಎರಡೂ ಮಾರ್ಗದಲ್ಲಿ ಒಂದೇ ಗುರಿಯನ್ನು ಧ್ವಂಸ ಮಾಡುವಲ್ಲಿ ಕ್ಷಿಪಣಿ ಯಶಸ್ವಿಯಾಗಿದೆ.

ಈಶಾನ್ಯ ಸಮುದ್ರ ತೀರದಲ್ಲಿ ಭಾರತೀಯ ನೌಕಾಪಡೆಯ ಸಹಕಾರದೊಂದಿಗೆ ಭಾರತೀಯ ವಾಯುಪಡೆ ಸುಖೋಯ್-30 ಜೆಟ್ ಯುದ್ಧ ವಿಮಾನದ ಮೂಲಕ ನಿಖರ ಗುರಿ ತಲುಪುವ ಪರೀಕ್ಷೆ ಮಾಡಿತ್ತು. ಈ ವೇಳೆ ಮೊದಲು ನೌಕಾ ಮಾರ್ಗವಾಗಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು. ಐಎನ್‌ಎಸ್ ಡೆಲ್ಲಿ ಯುದ್ಧನೌಕೆ ಮೂಲಕ ಕ್ಷಿಪಣಿ ಪ್ರಯೋಗ ಮಾಡಲಾಗಿದ್ದು, ಈ ವೇಳೆ ಕ್ಷಿಪಣಿಗೆ ಗುರಿಯಾಗಿ ಮತ್ತೊಂದು ನೌಕೆಯನ್ನು ನೀಡಲಾಗಿತ್ತು. ಮೊದಲ ಪರೀಕ್ಷೆಯಲ್ಲಿ ನೌಕೆಯನ್ನು ಹೊಡೆದುರುಳಿಸುವಲ್ಲಿ ಕ್ಷಿಪಣಿ ಯಶಸ್ವಿಯಾಗಿತ್ತು.

- Advertisment -

Most Popular

Recent Comments