ಶಿವಮೊಗ್ಗ : ಕಂಬವೊಂದಕ್ಕೆ ಕಟ್ಟಿದ್ದ ದಾರಕ್ಕೆ ಸಿಲುಕಿ ನರಳಾಡುತ್ತಿದ್ದ ಪಾರಿವಾಳವೊಂದನ್ನು ರಕ್ಷಿಸಿ ಯುವಕನೊಬ್ಬ ಮಾನವೀಯತೆ ಮೆರೆದಿದ್ದಾನೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬಸವೇಶ್ವರ ಸರ್ಕಲ್ ನಲ್ಲಿರುವ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ದಾರಕ್ಕೆ ಸಿಲುಕಿದ ಪಾರಿವಾಳವೊಂದು ಅತ್ತ ಹಾರಲು ಆಗದೇ, ನಿಲ್ಲಲೂ ಆಗದೇ. ಹಲವಾರು ತಾಸುಗಳಿಂದ ಒದ್ದಾಡುತ್ತಿತ್ತು. ಅನೇಕರು ಇದನ್ನು ಕಂಡೂ ಕಾಣದವರಂತೆ ತೆರಳುತ್ತಿದ್ದರು, ಈ ವೇಳೆಗೆ ಆಗಮಿಸಿದ ಯುವಕನೊಬ್ಬ ಕೂಡಲೇ ಲೈಟ್ ಕಂಬವನ್ನೇರಿ ಪಾರಿವಾಳವನ್ನು ಹಗ್ಗದಿಂದ ಬಿಡುಗಡೆಗೊಳಿಸಿ ಮಾನವೀಯತೆ ಮೆರೆದಿದ್ದಾನೆ. ಯುವಕನ ಈ ಸಾಹಸ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಮತ್ತು ಯುವಕನ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಪಾರಿವಾಳ ರಕ್ಷಿಸಿ ಮಾನವೀಯತೆ ಮೆರೆದ ಯುವಕ
ಪಾರಿವಾಳ ರಕ್ಷಿಸಿ ಮಾನವೀಯತೆ ಮೆರೆದ ಯುವಕhttps://www.powertvnews.in/boy-saves-pigeon-life/
Posted by Powertvnews on Monday, December 2, 2019