ಬೆಂಗಳೂರು: ನಗರದ ಹೆಚ್ಬಿಆರ್ ಲೆಔಟ್ನಲ್ಲಿ ಬಾಲಕ ತನ್ನ ಮನೆಯ ಬಳಿ ಆಟ ಆಡುವಾಗ ಕಾಲು ಜಾರಿ ಮನೆಯ ಬಳಿ ಇದ್ದ ಬಾವಿಗೆ ಬಿದ್ದು ತನ್ನ ಪ್ರಾಣ ಕಳೆದು ಕೊಂಡಿದೆ.
ಅಶ್ವಿನ್ ಮೃತ ದುರ್ದೈವಿ. ನೆನ್ನೆ ಸಂಜೆ ಸುಮಾರು 5 ಗಂಟೆ ವೇಳೆ ಆಟವಾಡುತ್ತಿದ್ದಾಗ ಇದ್ದಕ್ಕಿದಂತೆ ಬಾಲಕ ನಾಪತ್ತೆಯಾಗಿದ್ದ. ನಂತರ ಈತನನ್ನು ಹುಡುಕುವ ಕಾರ್ಯದಲ್ಲಿ ಮನೆಯವರು ತೊಡಗಿದಾಗ, ಈತನ ಶವ ಹತ್ತಿರದಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದೆ. ಇನ್ನು ಈ ಬಾವಿಯ ಸುತ್ತ ಯಾವುದೇ ಕಟ್ಟೆ ಇಲ್ಲದಿರುವುದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.