Friday, October 7, 2022
Powertv Logo
Homeಕ್ರೀಡೆ`ಭಾರತ ರತ್ನ' ಪುರಸ್ಕೃತಳಾಗುವುದು ನನ್ನ ಕನಸೆಂದ ಮೇರಿ ಕೋಮ್

`ಭಾರತ ರತ್ನ’ ಪುರಸ್ಕೃತಳಾಗುವುದು ನನ್ನ ಕನಸೆಂದ ಮೇರಿ ಕೋಮ್

ಹೊಸದಿಲ್ಲಿ: ಬಾಕ್ಸಿಂಗ್ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಮೇರಿ ಕೋಮ್​  2020ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದು, ಈ ಗೌರವಕ್ಕೆ ಪಾತ್ರರಾದ ಮೊದಲ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಖುಷಿಯಲ್ಲಿ ಮಾತಾಡಿರೋ ಅವರು,  “ ನಂಗೆ ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿ ಲಭಿಸಿರೋದು ತುಂಬಾ ಖುಷಿ ಕೊಟ್ಟಿದೆ. ಇನ್ನು ಭಾರತ ರತ್ನ ಪಡೆಯೋದು ನನ್ನ ಮುಂದಿನ ಕನಸು. ಒಂದಲ್ಲ ಒಂದು ದಿನ ಆ ಪ್ರಶಸ್ತಿ ಪಡಿತೀನಿ. ಆ ನಂಬಿಕೆ ನಂಗಿದೆ” ಎಂದು ಆತ್ಮವಿಶ್ವಾಸದ ನುಡಿಗಳನ್ನಾಡಿದ್ದಾರೆ.  

ಸದ್ಯಕ್ಕೆ ಮುಂಬರುವ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಉತ್ತಮ ಪ್ರದರ್ಶನ ತೋರಬೇಕು ಅನ್ನೋದು ನನ್ನ ಗುರಿ. ಅದಕ್ಕಾಗಿ ಕಠಿಣ ಅಭ್ಯಾಸವನ್ನು ಮಾಡ್ತಿದ್ದೀನಿ ಅಂತ ತಿಳಿಸಿದ್ದಾರೆ. 

6 ಬಾರಿ ವಿಶ್ವ ಚಾಂಪಿಯನ್ ಆದ ಮಹಿಳಾ ಬಾಕ್ಸರ್ ಮೇರಿ ಕೋಮ್ ಒಟ್ಟು 8 ಪದಕಗಳನ್ನು ಗೆದ್ದಿದ್ದಾರೆ. ಅದರಲ್ಲಿ 6 ಚಿನ್ನದ ಪದಕ, 1 ಬೆಳ್ಳಿ ಹಾಗೂ 1 ಕಂಚಿನ ಪದಕ ಸೇರಿವೆ. ಅಷ್ಟೆ ಅಲ್ಲ ಅವರು 2006 ರಲ್ಲಿ ಪದ್ಮಶ್ರೀ ಪ್ರಶಸ್ತಿ  ಹಾಗೂ 2013 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

8 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments