ಲಂಡನ್ : ಇಂಗ್ಲೆಂಡ್ನಲ್ಲಿ ಭಾರತದ ‘ಹೀರೋ’ ಹವಾ..! ಅಲ್ಲಿನ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ `ಹೀರೋ’ನನ್ನು ಮೆಚ್ಚಿದ್ದಾರೆ..! ಯಾರು ಆ ‘ಹೀರೋ, ಇಂಗ್ಲೆಂಡ್ ಪ್ರಧಾನಿ ನಮ್ಮ `ಹೀರೋ’ನನ್ನು ಮೆಚ್ಚಿರೋದು ಯಾಕೆ ಗೊತ್ತಾ?
ಭಾರತದ ಆ ಹೀರೋ ಬೇರ್ಯಾರು ಅಲ್ಲ, ಪ್ರತಿಷ್ಠಿತ ಹೀರೋ ಸೈಕಲ್.. ! ಇಂಗ್ಲೆಂಡ್ ಪ್ರಧಾನಿ ಮೆಚ್ಚಿರೋದು ಕೂಡ ಇದೇ ಭಾರತದ `ಹೀರೋ’ನನ್ನು!
ಹೌದು, ಇಂಗ್ಲೆಂಡ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಏರಿ ಅಭಿಯಾನವೊಂದಕ್ಕೆ ಚಾಲನೆ ಕೊಟ್ಟಿದ್ದಾರೆ. ಕೊರೋನಾ ನಿಯಂತ್ರಣ, ಬೊಜ್ಜು ಕಮ್ಮಿ ಮಾಡಿಕೊಳ್ಳೋದು, ಆರೋಗ್ಯ ಮತ್ತು ಪರಿಸರ ಸಂಬಂಧಿ ಸವಾಲುಗಳಿಗೆ ಜಾಗೃತಿ ಮೂಡಿಸೋ ಸಲುವಾಗಿ ಅಲ್ಲಿನ ಸರ್ಕಾರ 2 ಬಿಲಿಯನ್ ಪೌಂಡ್ ಮೊತ್ತದ ಸೈಕಲಿಂಗ್ ಮತ್ತು ವಾಕಿಂಗ್ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನಕ್ಕೆ ಮಂಗಳವಾರ ಪ್ರಧಾನಿ ಬೋರಿಸ್ ಚಾಲನೆ ನೀಡಿದ್ದಾರೆ. ಅವರು ಹೀರೋ ವೈಕಿಂಗ್ ಪ್ರೋ ಸೈಕಲ್ ಏರಿ ನಾಟಿಂಗ್ಹ್ಯಾಮ್ನ ಬೀಸ್ಟನ್ನಲ್ಲಿರೋ ಹೆರಿಟೀಜ್ ಸೆಂಟರ್ಗೆ ತೆರಳಿದ್ರು.
ಸೈಕಲಿಂಗ್ ಅಭಿಯಾನಕ್ಕೆ ಚಾಲನೆ ನೀಡಲು ಜಾನ್ಸನ್ ಬಳಸಿರೋದು ಈ ವೈಕಿಂಗ್ ಪ್ರೋ ಸೈಕಲ್ . ಇದು ಭಾರತದ ಹೀರೋ ಮೋಟರ್ಸ್ ಕಂಪನಿ ಒಡೆತದಲ್ಲಿನ ಇನ್ಸಿಂಕ್ ಬ್ರ್ಯಾಂಡ್ನದ್ದಾಗಿದೆ. ಮ್ಯಾಚೆಂಸ್ಟರ್ನಲ್ಲಿ ಈ ಸೈಕಲ್ ವಿನ್ಯಾಸಗೊಳಿಸಲಾಗಿದೆ. ಹೀರೋ ಸೈಕಲ್ಸ್, ವೈಕಿಂಗ್, ರಿಡ್ಡಿಕ್ ಮತ್ತು ರೈಡೇಲ್ ಬ್ರ್ಯಾಂಡ್ಗಳನ್ನು ಬಳಸಿಕೊಂಡು ಇನ್ಸಿಂಕ್ ಬ್ರ್ಯಾಂಡ್ ನಡಿ ಮರು ವಿನ್ಯಾಸ ಮಾಡಲಾಗಿದೆ. ಬೋರಿಸ್ ಜಾನ್ಸನ್ ಏರಿದ ಸೈಕಲ್ ಮ್ಯಾಂಚೆಸ್ಟರ್ನ ಹೀರೋ ಸೈಕಲ್ಸ್ನ ಗ್ಲೋಬಲ್ ಡಿಸೈನ್ ಸೆಂಟರ್ನಲ್ಲಿ ವಿನ್ಯಾಸ ಮಾಡಿರೋ ಮೊದಲ ಬ್ರ್ಯಾಂಡ್ ಇದಾಗಿದೆ ಅಂತ ಸಂಸ್ಥೆ ತಿಳಿಸಿದೆ.