ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಎರಡು ದಿನಗಳ ಭಾರತ ಪ್ರವಾಸ ಆರಂಭಿಸಿದ್ದಾರೆ. ಗುಜರಾತ್ನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಮಹಾತ್ಮ ಗಾಂಧಿ ಅವರ ಸಬರಮತಿ ಆಶ್ರಮಕ್ಕೆ ಮೊದಲು ಭೇಟಿ ನೀಡುವ ಮೂಲಕ ಪ್ರವಾಸದ ದಿನಚರಿ ಆರಂಭಿಸಿದ್ರು.
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಎರಡು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ.ಗುಜರಾತ್ನ ಅಹಮದಾಬಾದ್ಗೆ ಜಾನ್ಸನ್ ಆಗಮಿಸಿದ್ರು. ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಮತ್ತು ರಾಜ್ಯಪಾಲ ಆಚಾರ್ಯ ದೇವವ್ರತ್, ವಿವಿಧ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಭವ್ಯ ಸ್ವಾಗತ ನೀಡಿದರು. ವಿಮಾನ ನಿಲ್ದಾಣದಿಂದ ಅವರು ವಾಸ್ತವ್ಯ ಹೂಡಿರುವ ಅಹಮದಾಬಾದ್ನ ಹೋಟೆಲ್ ಇರುವ 4 ಕಿ.ಮೀ. ಉದ್ದಕ್ಕೂ ಅದ್ದೂರಿ ಸ್ವಾಗತ ನೀಡಲಾಯಿತು. ವಿಮಾನ ನಿಲ್ದಾಣದಲ್ಲಿ ಗುಜರಾತಿ ಸಾಂಪ್ರದಾಯಿಕ ನೃತ್ಯ ಮತ್ತು ಸಂಗೀತದೊಂದಿಗೆ ಸ್ವಾಗತಿಸಲಾಯಿತು.
ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಬೋರಿಸ್ ಜಾನ್ಸನ್ ಅವರು, ಚರಕವನ್ನು ತಿರುಗಿಸಿ ಖುಷಿಪಟ್ರು.
ಬಳಿಕ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಅವರು ಮಹಾತ್ಮ ಗಾಂಧಿ ಅವರನ್ನು ಸ್ಮರಿಸಿ ಅಭಿಪ್ರಾಯ ಬರೆದರು.
ಉದ್ಯಮಿ ಗೌತಮ್ ಅದಾನಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ರು. ಈಗಾಗಲೇ ಭಾರತದಲ್ಲಿ ಗ್ರೀನ್ ಎನರ್ಜಿಗೆ ಒತ್ತು ನೀಡಲಾಗ್ತಿದ್ದು, ಅದಾನಿ ಗ್ರೂಪ್ಗೆ ಬ್ರಿಟನ್ ಬಂಡವಾಳ ಬರುವ ಸಾಧ್ಯತೆ ದಟ್ಟವಾಗಿದೆ.. ಹಾಗಾಗಿ, ಗೌತಮ್ ಅದಾನಿ ಭೇಟಿ ಮಹತ್ವ ಪಡೆದುಕೊಂಡಿದೆ.
ಬಳಿಕ ಅವರು ವಡೋದರಾಕ್ಕೆ ತೆರಳಿ, ಬೃಹತ್ ಯಂತ್ರ ಸಂಸ್ಥೆ ಜೆಸಿಬಿಯ ಘಟಕವನ್ನು ವೀಕ್ಷಿಸಿದ್ರು. ಅಲ್ಲಿಂದ ಗಾಂಧಿನಗರದ ಗುಜರಾತ್ ಅಂತಾರಾಷ್ಟ್ರೀಯ ಹಣಕಾಸು ಟೆಕ್- ಸಿಟಿಗೆ ತೆರಳಿದ್ರು. ವಿಶೇಷ ಅಂದ್ರೆ, ದೇಶದಲ್ಲಿ ಜೆಸಿಬಿಗಳ ಗರ್ಜನೆ ಮಾಡ್ತಿವೆ.. ಜೊತೆಗೆ, ಗಲಭೆಕೋರರಿಗೆ ಬುಲ್ಟೋಜರ್ ಅಸ್ತ್ರ ಬಳಸಬೇಕು ಅಂತ ಚರ್ಚೆಯಾಗ್ತಿವೆ.. ಈಗಾಗಲೇ ಯೋಗಿ ಆದಿತ್ಯನಾಥ್, ಮಧ್ಯಪ್ರದೇಶ ಸರ್ಕಾರ ಮಾಡಿತೋರಿಸಿವೆ.. ಈ ಚರ್ಚೆಗಳ ಮಧ್ಯೆಯೇ ಜೆಸಿಬಿ ಏರಿದ್ರು ಬ್ರಿಟನ್ ಪ್ರಧಾನಿ.
ವ್ಯಾಪಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಪ್ರತಿಯಾಗಿ ಭಾರತಕ್ಕೆ ಇನ್ನಷ್ಟು ವೀಸಾಗಳನ್ನು ನೀಡುವ ಆಫರ್ಗೆ ಸಿದ್ದರಾಗಿರುವುದಾಗಿ ಜಾನ್ಸನ್ ಸುಳಿವು ಕೊಟ್ಟಿದ್ದಾರೆ. ನಾನು ಯಾವಾಗಲೂ ನನ್ನ ದೇಶಕ್ಕೆ ಬರುವ ಪ್ರತಿಭಾವಂತ ಜನರ ಪರವಾಗಿ ಇದ್ದೇನೆ ಹೇಳಿರೋದು ಭಾರತದೊಂದಿಗಿನ ವ್ಯಾಪಾರ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲು ಸಹಕಾರಿಯಾಗಲಿದೆ.
ಜಾನ್ಸನ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲಿದ್ದು, ಇಬ್ಬರೂ ರಕ್ಷಣೆ ಮತ್ತು ವ್ಯಾಪಾರ ಹಾಗೂ ಇತರೆ ವಿಚಾರಗಳ ಬಗ್ಗೆ ಚರ್ಚಿಸುವ ನಿರೀಕ್ಷೆ ಇದೆ. ಉಕ್ರೇನ್ ಮೇಲಿನ ರಷ್ಯಾ ದಾಳಿಯ ಕುರಿತಾಗಿ ವಿಶ್ವಸಂಸ್ಥೆಯಲ್ಲಿ ಭಾರತ ಪ್ರದರ್ಶಿಸಿರುವ ತಟಸ್ಥ ನಿಲುವಿನ ಬಗ್ಗೆಯಾಗಲೀ, ರಷ್ಯಾದ ತೈಲ ಆಮದನ್ನು ಹೆಚ್ಚಿಸುವ ನಿರ್ಧಾರದ ಕುರಿತಾಗಲೀ ಭಾರತಕ್ಕೆ ಬುದ್ಧಿವಾದ ಹೇಳಲು ಹೋಗಲ್ಲ ಎಂದಿರುವ ಬೋರಿಸ್, ಭಾರತದೊಂದಿಗೆ ಉತ್ತಮ ಸಂಬಂಧ ಹೊರತಾಗಿ, ಉಕ್ರೇನ್ – ರಷ್ಯಾ ಮಧ್ಯೆದಲ್ಲಿ ಭಾರತದ ನಿಲುವಿನ ಬಗ್ಗೆ ಪ್ರಶ್ನಿಸಲ್ಲ ಎಂದಿರೋದು ಕುತೂಹಲಕ್ಕೆ ಕಾರಣವಾಗಿದೆ. ಆದರೆ, ಮಾಸ್ಕೋ ಮೇಲಿನ ಅವಲಂಬನೆ ತಗ್ಗಿಸುವ ವಿಚಾರದಲ್ಲಿ ಭಾರತದ ಮನವೊಲಿಕೆ ಮಾಡುವ ಪ್ರಯತ್ನವಂತೂ ಮುಂದುವರೆಸಿದೆ.