Sunday, June 26, 2022
Powertv Logo
Homeರಾಜ್ಯಬೂಸ್ಟರ್ ಡೋಸರ್ ಲಸಿಕೆ : ಸಚಿವ ಡಾ. ಸುಧಾಕರ್‌ ಸ್ಪಷ್ಟನೆ

ಬೂಸ್ಟರ್ ಡೋಸರ್ ಲಸಿಕೆ : ಸಚಿವ ಡಾ. ಸುಧಾಕರ್‌ ಸ್ಪಷ್ಟನೆ

ಬೆಂಗಳೂರು : ಬೂಸ್ಟರ್ ಡೋಸ್ ಲಸಿಕೆ ವಿಚಾರವಾಗಿ ಇದುವರೆಗೂ ಕೇಂದ್ರ ಸರಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಆರಂಭದಲ್ಲಿ ಕೊರೊನಾ ವಾರಿಯರ್ಸ್​ಗೆ ಬೂಸ್ಟರ್ ಡೋಸ್ ಲಸಿಕೆ ನೀಡಿ ಎಂದು ತಾಂತ್ರಿಕ ಸಮಿತಿ ಸಲಹೆ ನೀಡಿತ್ತು. ಆದರೆ ಇದುವರೆಗೂ ಕೇಂದ್ರ ಸರಕಾರ ಈ ಕುರಿತು ಯಾವುದೇ ನಿಲುವು ತೆಗೆದುಕೊಂಡಿಲ್ಲ. ಆದ್ದರಿಂದ ಇದರ ಬಗ್ಗೆ ರಾಜ್ಯ ಸರಕಾರ ಸಹ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಕೇಂದ್ರ ಸರಕಾರ ಹಾಗೂ ಐಸಿಎಂಆರ್ ಏಕರೂಪದ ಮಾರ್ಗಸೂಚಿ ಬಿಡುಗಡೆ ಮಾಡುತ್ತವೆ. ಅದರಂತೆ ನಾವು ಮುಂದುವರೆಯುತ್ತೇವೆ. ಅಗತ್ಯಬಿದ್ದರೆ ಲಾಕ್ ಡೌನ್ ತೀರ್ಮಾನ ತೆಗೆದುಕೊಳ್ಳುತ್ತೇವೆ, ಆದರೆ ಸದ್ಯಕ್ಕೆ ಲಾಕ್​ಡೌನ್​  ಪ್ರಸ್ತಾವನೆ ಇಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಆರೋಗ್ಯ ಸಚಿವ ಡಾಕ್ಟರ್ ಸುಧಾಕರ್ ಸ್ಪಷ್ಟನೆ ನೀಡಿದರು.

18 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments