ಹುಬ್ಬಳ್ಳಿ- ಮುಂಬೈನಲ್ಲಿ ಬಾಂಬ್​ ಸ್ಫೋಟಿಸ್ತಾರಂತೆ – ಫೇಸ್​ಬುಕ್​ನಲ್ಲಿ ಕಿಡಿಗೇಡಿಗಳ ಆಘಾತಕಾರಿ ಪೋಸ್ಟ್​

0
256

ಶಿವಮೊಗ್ಗ : ಹುಬ್ಬಳ್ಳಿ ಮತ್ತು ಮುಂಬೈಯಲ್ಲಿ ಬಾಂಬ್ ಸ್ಫೋಟಿಸೋದಾಗಿ ಕಿಡಿಗೇಡಿಗಳು ಫೇಸ್​ಬುಕ್​ನಲ್ಲಿ ಆಘಾತಕಾರಿ ಪೋಸ್ಟ್​ವೊಂದನ್ನು ಮಾಡಿದ್ದಾರೆ.
ಹೌದು, ಇಡೀ ದೇಶವೇ ಪುಲ್ವಾಮಾ ದಾಳಿಗೆ ಪ್ರತೀಕಾರವನ್ನು ತೀರಿಸಿಕೊಳ್ಳಲು ಕಾಯುತ್ತಿದೆ. ಹುತಾತ್ಮರಾದ ಯೋಧರ ನೆನೆದು ಇಡೀ ದೇಶವೇ ಕಣ್ಣೀರಲ್ಲಿ ಕಾಲ ಕಳೆಯುತ್ತಿದೆ. ಈ ನಡುವೆ ಶಿವಮೊಗ್ಗ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕೆಡಿಸುವ ಯತ್ನ ನಡೆದಿದೆ.
ಜಿಲ್ಲೆಯ ಸಾಗರದಲ್ಲಿ ಸೌಹಾರ್ದತೆ ಕೆಡಿಸಿ, ಒಂದು ಕೋಮಿನ ವಿರುದ್ಧ ಗೂಬೆ ಕೂರಿಸುವ ಪ್ರಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮೊಹಮ್ಮದ್ ಅಬ್ದುಲ್ಲಾ ಎಐಎಂಐಎಂ ಹೆಸರಿನ ಫೇಸ್ ಬುಕ್ ಅಕೌಂಟ್​ನಲ್ಲಿ ಕಿಡಿಗೇಡಿಗಳು ಪೋಸ್ಟ್​ವೊಂದನ್ನು ಮಾಡಿದ್ದು, ಹುಬ್ಬಳ್ಳಿ ಮತ್ತು ಮುಂಬೈಯನ್ನು ಸ್ಫೋಟಿಸುವ ಬೆದರಿಕೆ ಒಡ್ಡಿದ್ದಾರೆ.
ಹುಬ್ಬಳ್ಳಿ ಹಾಗೂ ಮುಂಬೈ ನಗರದಲ್ಲಿ ಸ್ಫೋಟಿಸುವ ಬೆದರಿಕೆ ಒಡ್ಡಿದ್ದು, ವಿಡಿಯೋದಲ್ಲಿ ಅಶ್ಲೀಲ ಭಾಷೆ ಕೂಡ ಬಳಸಿದ್ದಾರೆ. ಸಾಗರ ತಾಲೂಕಿನ ಕನ್ನಡ ವಾಟಾಳ್ ಅಭಿಮಾನಿ ಬಳಗದ ಮುಖಂಡ ಜಮೀಲ್ ಸಾಗರ್ ಎಂಬುವವರು ಈ ಬಗ್ಗೆ ಸಾಗರ ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here