ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ

0
790

ಮುಂಬೈ: ಕ್ಯಾನ್ನರ್​ನಿಂದ ಬಳಲುತ್ತಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್(53)ಇಂದು ಮುಂಬೈನ ಕೋಕಿಲ ಬೆನ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ನ್ಯೂರೋ ಎಂಡೋಕ್ರೈನ್​ ಟ್ಯೂಮರ್​ನಿಂದ ಬಳಲುತ್ತಿದ್ದ ಅವರು ಮಂಗಳವಾರ  ಇದ್ದಕ್ಕಿದ್ದಂತೆ ಅಸ್ವಸ್ಥರಾದ ಹಿನ್ನೆಲೆ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

2018 ರಲ್ಲಿ ಇರ್ಫಾನ್ ತನಗೆ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಇರುವುದನ್ನು  ಹಂಚಿಕೊಂಡಿದ್ದು, ಅದಕ್ಕೆ ಲಂಡನ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದರು.

ಇರ್ಫಾನ್ ಬಾಲಿವುಡ್​ನ ವಾರಿಯರ್, ಹಾಸಿಲ್, ಮಕ್ಬಲ್, ಪಾನ್ ಸಿಂಗ್ ತೋಮರ್, ರೋಗ್ ಹಾಗೂ ಲೈಫ್ ಆಫ್ ಪೈ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರ ಗಮನ ಸೆಳೆದಿದ್ದರು. ಇನ್ನು ಇತ್ತಿಚೆಗಷ್ಟೇ ಅವರ ‘ ಇಂಗ್ಲೀಷ್ ಮೀಡಿಯಂ‘ ಸಿನಿಮಾ ರಿಲೀಸ್ ಆಗಿತ್ತು.

LEAVE A REPLY

Please enter your comment!
Please enter your name here