Sunday, May 29, 2022
Powertv Logo
Homeರಾಜ್ಯ1484 ಟ್ರೈನಿ ಚಾಲಕರು, ನಿರ್ವಾಹಕರ ವಜಾ ಮಾಡಲು ಮುಂದಾದ BMTC  

1484 ಟ್ರೈನಿ ಚಾಲಕರು, ನಿರ್ವಾಹಕರ ವಜಾ ಮಾಡಲು ಮುಂದಾದ BMTC  

ಬೆಂಗಳೂರು : ಸತತವಾಗಿ ಎರಡನೇ ದಿನಕ್ಕೆ ಕಾಲಿಟ್ಟಿರುವ ಮುಷ್ಕರ ಸದ್ಯದಲೇ ಮುಗಿಯುವಂತೆ ಕಾಣುತ್ತಿಲ್ಲ. ಸರ್ಕಾರ ಜಗ್ಗುತ್ತಿಲ್ಲ ನೌಕರರು ಬಗ್ಗುತ್ತಿಲ್ಲ. ಮುಷ್ಕರ ನಿರತ ಸಿಬ್ಬಂದಿಗೆ ಬಿಎಂಟಿಸಿ ಬಿಗ್ ಶಾಕ್ ನೀಡಿದೆ. ಮೊದಲ ಹಂತದಲ್ಲಿ ತರಬೇತಿ ಚಾಲಕರಿಗೆ ಗೇಟ್‌ಪಾಸ್ ನೀಡಿದ BMTC. 1484 ಟ್ರೈನಿ ಚಾಲಕರು, ನಿರ್ವಾಹಕರ ವಜಾಗೆ BMTC ಮುಂದಾಗಿದೆ. 

ಕೆಲಸಕ್ಕೆ ಗೈರಾದ ಟ್ರೈನಿ ಸಿಬ್ಬಂದಿ ಮೇಲೆ ಇಂದೇ ಶಿಸ್ತಿನ ಕ್ರಮವನ್ನು ಜರುಗಿಸಲು BMTC ನಿರ್ಧರಿಸಿದೆ. ಇಂದು 1484 ನೌಕರರಿಗೆ ಕಡ್ಡಾಯ ಹಾಜರಾತಿಗೆ ಸೂಚನೆ ನೀಡಿದ್ದ ಬಿಎಂಟಿಸಿ ಆದೇಶವನ್ನು ಗಾಳಿಗೆ ತೂರಿರುವ ಟ್ರೈನಿಗಳನ್ನು BMTC ವಜಾ ಮಾಡಲಿದೆ. ನಿಯಮದ ಪ್ರಕಾರ ಟ್ರೈನಿ ಸಿಬ್ಬಂದಿ ಮುಷ್ಕರದಲ್ಲಿ  ಭಾಗಿಯಾಗುವಂತಿಲ್ಲ ಹೀಗಾಗಿ ಟ್ರೈನಿ ಸಿಬ್ಬಂದಿಯನ್ನು ವಜಾ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಎಂಟಿಸಿ ಭದ್ರತೆ ಹಾಗೂ ಜಾಗೃತ ದಳದ ನಿರ್ದೇಶಕ ಅರುಣ್ ಮಾಹಿತಿ ನೀಡಿದ್ದಾರೆ. 

17 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments