ಬೆಂಗಳೂರು: ಲಾಕ್ಡೌನ್ 3.O ಕೊನೆಗೊಂಡಿದ್ದು, 4.O ಲಾಕ್ಡೌನ್ ಪ್ರಾರಂಭಗೊಂಡಿದೆ. ಈ ಬಾರಿಯ ಲಾಕ್ಡೌನ್ನಲ್ಲಿ ಬಿಎಂಟಿಸಿ ಬಸ್ಗಳ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಇಂದಿನಿಂದ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ನಗರದಲ್ಲಿ ಬಿಎಂಟಿಸಿ ಬಸ್ಗಳು ಸಂಚರಿಸಲಿವೆ.
ಬಿಎಂಟಿಸಿ ಬಸ್ನಲ್ಲಿ ಸಂಚರಿಸಲು ಬಯಸುವ ಪ್ರಯಾಣಿಕರಲ್ಲಿ ಪಾಸ್ ಕಡ್ಡಾಯವಾಗಿರಬೇಕು. ಪಾಸ್ ಇಲ್ಲವಾದಲ್ಲಿ ಬಸ್ನಲ್ಲಿ ಪ್ರಯಾಣಿಸಲು ಅವಕಾಶವಿಲ್ಲ. ಇದರ ಬಗ್ಗೆ ಮಾಹಿತಿ ನೀಡಿರುವ ಬಿಎಂಟಿಸಿ, ಪಾಸನ್ನು ಬಸ್ ಕಂಡಕ್ಟರ್ ಬಳಿಯೇ ಪಡೆದುಕೊಳ್ಳಬಹುದು. ವಾರದ ಪಾಸನ್ನು ಪಡೆಯಲು ಭಾವಚಿತ್ರವಿರುವ ಯಾವುದಾದರೂ ಗುರುತಿನ ಚೀಟಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಹಾಗೆಯೇ ಪಾಸ್ನ ದರವೂ ನಿಗದಿಯಾಗಿದ್ದು, ದಿನದ ಪಾಸ್ಗೆ 70 ರೂ. ಹಾಗೂ ವಾರದ ಪಾಸ್ಗೆ 300 ರೂ ನಿಗದಿ ಮಾಡಲಾಗಿದೆ. ಇನ್ನು ನಗರದಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಬಸ್ಗಳು ಸಂಚರಿಸಲಿವೆ ಎಂದು ತಿಳಿಸಿದೆ.