Home ರಾಜ್ಯ ಬೆಂಗಳೂರು ಪ್ರಯಾಣಿಕರ ಒತ್ತಾಯಕ್ಕೆ ಮಣಿದು ದಿನದ ಪಾಸ್ ದರ ಇಳಿಸಿದ ಬಿಎಂಟಿಸಿ

ಪ್ರಯಾಣಿಕರ ಒತ್ತಾಯಕ್ಕೆ ಮಣಿದು ದಿನದ ಪಾಸ್ ದರ ಇಳಿಸಿದ ಬಿಎಂಟಿಸಿ

ಬೆಂಗಳೂರು: ಲಾಕ್​ಡೌನ್ ಆದೇಶ ಸಡಿಲಿಸಿ ಬೆಂಗಳೂರಲ್ಲಿ ಬಿಎಂಟಿಸಿ ಬಸ್​ಗಳು ರಸ್ತೆಗಿಳಿದಿದೆ. ಆದರೆ ಪಾಸ್ ದರ ಹೆಚ್ಸಿಸಿದ್ದರಿಂದ ಸಾರ್ವಜನಿಕರು ಬಿಎಂಟಿಸಿ ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಬಿಎಂಟಿಸಿ ಪಾಸ್ ದರವನ್ನು ಇಳಿಸಲಾಗುವುದಾಗಿ ಬಿಎಂಟಿಸಿ ಅಧಿಕೃತ ಪ್ರಕಟಣೆಯನ್ನು ನೀಡಿದೆ.

ಬೆಂಗಳೂರಲ್ಲೂ ಕೊರೋನಾ ವೇಗವಾಗಿ ಹರಡುತ್ತಿರುವುದರಿಂದ ಬಿಎಂಟಿಸಿ ಬಸ್​ನಲ್ಲಿ ಟಿಕೆಟ್​ಗಳನ್ನು ನೀಡುವ ಬದಲಾಗಿ ಪಾಸ್​ಗಳನ್ನು ನೀಡಲಾಗುತ್ತಿದೆ. ಅದರಂತೆ ದಿನದ ಪಾಸ್​ ದರ 70 ರೂ, ವಾರದ ಪಾಸ್​ನ ದರ 300 ರೂಪಾಯಿ ಆಗಿತ್ತು. ಹಾಗಾಗಿ ಸಾರ್ವಜನಿಕರು ಪಾಸ್​ ದರವು ಹೆಚ್ಚಾಗಿದ್ದರಿಂದ ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೆ ಇದೀಗ ಬಿಎಂಟಿಸಿ ಪ್ರಯಾಣಿಕರ ಒತ್ತಾಯಕ್ಕೆ ಮಣಿದು ಪಾಸ್ ದರವನ್ನು​ ಇಳಿಸಿದ್ದು, 70 ರೂಪಾಯಿಗೆ ನೀಡುತ್ತಿದ್ದ ಪಾಸನ್ನು 50 ರೂಪಾಯಿಗೆ ನೀಡಲಾಗುತ್ತದೆ.

ಹಾಗಾಗಿ ನಾಳೆಯಿಂದ ಬಿಎಂಟಿಸಿಯಲ್ಲಿ ಆರು ಬಗೆಯ ಟಿಕೆಟ್​ಗಳನ್ನು ವಿತರಿಸಲಾಗುತ್ತಿದ್ದು, 5,10,15, 20 ರೂ ಹಾಗೂ 30 ರೂಪಾಯಿಗೆ ಟಿಕೆಟ್​ಗಳನ್ನು ವಿತರಿಸಲಾಗುತ್ತದೆ. ಈ ಟಿಕೆಟ್​ಗಳನ್ನು ಕಿಲೋಮೀಟರ್​ ಆಧಾರದ ಮೇಲೆ ನೀಡಲಾಗುತ್ತಿದ್ದು, 2 ಕಿಲೋಮೀಟರ್​ವರೆಗೆ 5 ರೂಪಾಯಿಯನ್ನು ನಿಗದಿ ಮಾಡಿದ್ದಾರೆ. ಇನ್ನು 3 ಕಿ.ಮೀ ನಿಂದ  4 ಕಿ.ಮೀ ವರೆಗೆ 10 ರೂಪಾಯಿ, 5 ಕಿಲೋ ಮೀಟರ್‌ನಿಂದ 6 ಕಿ.ಮೀಟರ್‌ವರೆಗೆ 15 ರೂ,  7 ಕಿಲೋ ಮೀಟರ್‌ನಿಂದ 14 ಕಿ.ಮೀ ವರೆಗೆ 20 ರೂ, 15 ಕಿಲೋ ಮೀಟರ್‌ನಿಂದ 40 ಕಿಲೋ ಮೀಟರ್‌ವರೆಗೆ 25 ರೂ ಹಾಗೂ 40 ಕಿ.ಮೀ ವರೆಗೆ ಹೆಚ್ಚಿನ ದೂರದ ಪ್ರಯಾಣಕ್ಕೆ 30 ರೂಪಾಯಿಯನ್ನು ನಿಗದಿಸಲಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್​ ವೀಕ್ಷಕರಾಗಿ ಬಂಗಾರೇಶ ಹಿರೇಮಠ ನೇಮಕ

ಬೆಂಗಳೂರು : ಬಾಗಲಕೋಟೆ ಜಿಲ್ಲಾ ಉಸ್ತುವಾರಿಯಾಗಿ ಕಾಂಗ್ರೆಸ್​ ವೀಕ್ಷಕರಾಗಿ ಬಂಗಾರೇಶ್ ಹಿರೇಮಠ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್​.ಎಂ.ರೇವಣ್ಣ, ಶಾಸಕ...

‘ಈ ಗ್ರಾಮದಲ್ಲಿ ಎಲ್ಲರಿಗೂ ಕಷಾಯ ಉಚಿತ’

ಗದಗ : ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ‌ ಪಂಚಾಯತಿಗಳು ಕೊರೋನಾ ನಿರ್ಮೂಲನೆಗೆ ಅತ್ಯುನ್ನತ ಹಾಗೂ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ...

‘ವಿಚಿತ್ರ ರೋಗಕ್ಕೆ ನವಜಾತ ಶಿಶು ಬಲಿ’

ಬೆಂಗಳೂರು : ಕೊರೋನಾದಿಂದ ಗುಣಮುಖವಾದ ಮಕ್ಕಳನ್ನು ಈಗ ಹೊಸದೊಂದು ರೋಗ ಕಾಡುತ್ತಿದೆ. ಪುಟ್ಟ ಮಕ್ಕಳಲ್ಲೇ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಈ ರೋಗಕ್ಕೆ ಚಿಕಿತ್ಸೆ ನೀಡಲು ಒಂದು ಮಗುವಿಗೆ...

ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ : ಕ್ಯಾಮ್ಸ್ ತೀರ್ಮಾನ

ಬೆಂಗಳೂರು : ಖಾಸಗಿ ಶಾಲಾ ಶುಲ್ಕದಲ್ಲಿ ಕಡಿತ ಮಾಡುವ ಪ್ರಮೇಯವೇ ಇಲ್ಲ. ಪೂರ್ತಿ ಶುಲ್ಕ ಕಟ್ಟಲೇ ಬೇಕು ಎಂದು ವರ್ಚುವಲ್ ಮೀಟಿಂಗ್ ನಲ್ಲಿ ಕ್ಯಾಮ್ಸ್ ತೀರ್ಮಾನ ಕೈಗೊಂಡಿದೆ. ವರ್ಚುವಲ್ ಮೀಟಿಂಗ್ ನಲ್ಲಿ 10ಕ್ಕೂ...

Recent Comments