ಬೆಂಗಳೂರು: ಬಿಎಂಟಿಸಿಯು ಬೆಂಗಳೂರು ಪ್ರಯಾಣಿಕರಿಗೆ ಹೊಸ ವರ್ಷಕ್ಕೆ ಗುಡ್ ನ್ಯೂಸ್ ಕೊಟ್ಟಿದೆ. ಬಿಎಂಟಿಸಿ ಈಗಾಲೇ ವಜ್ರ ಬಸ್ ದರವನ್ನು ಇಳಿಕೆ ಮಾಡಿದೆ. ಅದರಂತೆ ಸಾಮಾನ್ಯ ಬಸ್ ಪಾಸ್ ದಾರರು, ವಜ್ರ, ವೋಲ್ವೋ ಬಸ್ ನಲ್ಲಿ ಉಚಿತ ಪ್ರಯಾಣವನ್ನು ಮಾಡಬಹುದು ಎಂದು ಹೇಳಿದೆ.
ಮಾಸಿಕ ಪಾಸ್ ಹೊಂದಿರುವವರು ಎಸಿ ಬಸ್ ನಲ್ಲಿ ಓಡಾಲು ಅವಕಾಶ ನೀಡಿದ ಬಿಎಂಟಿಸಿ. ಇನ್ನೂ ಮುಂದೆ ಭಾನುವಾರದಂದು ವಜ್ರ ಬಸ್ ನಲ್ಲಿ ಉಚಿತವಾಗಿ ಓಡಾಡಬಹುದು ಎಂದು ತಿಳಿಸಿದೆ. ಹಿರಿಯ ನಾಗರಿಕರಿಗೂ ಅವಕಾಶವನ್ನು ಕಲ್ಪಿಸಿದೆ.
ಇನ್ನೂ ವಾರದಲ್ಲಿ ಒಂದು ದಿನ ಮಾತ್ರ ಎಸಿ ಬಸ್ ನಲ್ಲಿ ಉಚಿತವಾಗಿ ಓಡಾಡಲು ಅವಕಾಶವನ್ನು ನೀಡಿದೆ. ಭಾನುವಾರದಂದು ವಜ್ರ, ವೋಲ್ವೊ ಬಸ್ ನಲ್ಒಇ ಪ್ರಯಾಣಿಸಲು ಅವಕಾಶ. ಜನವರಿ ತಿಂಗಳಿನಿಂದ ಭಾನುವಾರದಂದು ಫ್ರೀ ಟ್ರಿಪ್ ಗೆ ಅವಕಾಶವನ್ನು ನೀಡಿದೆ.