Thursday, October 6, 2022
Powertv Logo
Homeರಾಜ್ಯರಕ್ತದಾನ ಮಾಡಿ ಮಗುವನ್ನು ಬದುಕುಳಿಸಿದ ಯುವಕರು.

ರಕ್ತದಾನ ಮಾಡಿ ಮಗುವನ್ನು ಬದುಕುಳಿಸಿದ ಯುವಕರು.

ಧಾರವಾಡ : ಇಲ್ಲಿಯವರೆಗೆ ಕೇವಲ ಪ್ರಾರ್ಥನೆ ಸಲ್ಲಿಸಲು ಮಾತ್ರ ಬಳಕೆಯಾಗುತ್ತಿದ್ದ ಮಸೀದಿಯಲ್ಲಿ ಮಾನವೀಯ ಕಾರ್ಯವೊಂದು ನಡೆದಿದೆ. ಲಾಕ್ ಡೌನ್ ಸಂದರ್ಭದಲ್ಲಿ ರಕ್ತ ಬಂಡಾರಗಳಲ್ಲಿ ರಕ್ತದ ಕೊರತೆಯನ್ನು ಮನಗಂಡ ಮುಸ್ಲೀಂ ಯುವಕರು ಮಸೀದಿಯಲ್ಲಿ ಪಾರ್ಥನೆ ಮಾಡಿದ ಬಳಿಕ ರಕ್ತದಾನ ಮಾಡಿದ್ದಾರೆ. ಅಲ್ಲದೇ ರಕ್ತದ ಕೊರತೆಯಿಂದ ಬಳಲುತ್ತಿದ್ದ ಕೇವಲ 900 ಗ್ರಾಮ ತೂಕದ ಮಗುವಿಗೆ ರಕ್ತದಾನ ಮಾಡುವ ಮೂಲಕ ಆ ಮಗುವನ್ನು ಬದುಕುಳಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಕರೊನಾ ಭಯದ ಹಿನ್ನೆಲೆಯಲ್ಲಿ ರಕ್ತದಾನ ಮಾಡೋಕೆ ಜನ ಬರದೇ ಇರೋದಿಂದ್ರ ಹಾಗೂ ರಕ್ತದಾನ ಶಿಬಿರಗಳೇ ನಡೆಯದ ಕಾರಣ ರಕ್ತ ಭಂಡಾರಕ್ಕೆ ತುರ್ತು ರಕ್ತದ ಅವಶ್ಯಕತೆ ಎದುರಾಗಿತ್ತು. ಇದನ್ನು ಮನಗಂಡಿರುವ ಧಾರವಾಡದ ಜನತೆ ನಗರದ ಮಸೀದಿಯೊಂದರಲ್ಲಿಯೇ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಸಿ ಮಾನವೀಯ ಕಾರ್ಯ ಮಾಡಿದ್ದಾರೆ. ಧಾರವಾಡದ ಜಕನಿಭಾವಿ ಬಳಿಯ ಮಹಮ್ಮದ ಮಸೀದಿಯಲ್ಲಿಯೇ ಈ ರಕ್ತದಾನ ಕಾರ್ಯ ನಡೆದಿದೆ. ಜಿಲ್ಲಾ ಆಸ್ಪತ್ರೆಯ ರಕ್ತ ಭಂಡಾರದೊಂದಿಗೆ ಜಮಾತೆ ಅಹಲೆ ಹದೀಸ್ ಟ್ರಸ್ಟ್ ಕೈ ಜೋಡಿಸಿ ಈ ಕಾರ್ಯ ಮಾಡಿದೆ. ಮಸೀದಿಯ ಪ್ರಾಂಗಣದಲ್ಲಿಯೇ ರಕ್ತದಾನ ಶಿಬಿರ ನಡೆಸಲಾಗಿದ್ದು, ಸಾಕಷ್ಟು ಜನ ಇಲ್ಲಿಗೆ ಬಂದು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದಾರೆ. ಇನ್ನು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸಿರೋ ಒಂದು ಮಗು ಕೇವಲ 900 ಗ್ರಾಂ ಮಾತ್ರ ತೂಕವುಳ್ಳದ್ದಾಗಿತ್ತು. ಆ ಮಗುವಿಗೆ ತುರ್ತು ರಕ್ತದ ಅಗತ್ಯವೂ ಎದುರಾಗಿತ್ತು. ಆದರೆ ಆ ಮಗುವಿಗೆ ಓ ಪಾಸಿಟಿವ್ ರಕ್ತದ ಕೊರತೆ ಎದುರಾಗಿತ್ತು. ಇಲ್ಲಿ ನಡೆದ ರಕ್ತದಾನ ಶಿಬಿರದಿಂದ ಆ ಮಗುವಿನ ಜೀವ ಉಳಿಸುವುದಕ್ಕೂ ಸಹಾಯವಾಗಿದ್ದು, ಇಲ್ಲಿ ಪಡೆಯಲಾದ ರಕ್ತವನ್ನೇ ಬಳಸಿಕೊಂಡು ಆ ಮಗುವಿಗೆ ಚಿಕಿತ್ಸೆ ನೀಡುತ್ತೇವೆ ಅಂತಾ ಜಿಲ್ಲಾ ಆಸ್ಪತ್ರೆಯ ರಕ್ತ ಭಂಡಾರದ ಮುಖ್ಯಸ್ಥರು ಹೇಳಿದ್ದಾರೆ.
ಪ್ರಾರ್ಥನೆಗೆ ಸೀಮಿತವಾಗಿದ್ದ ಮಸೀದಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದ ಮುಸ್ಲ್ಮೀಂ ಯುವಕರು ರಕ್ತದಾನದಿಂದ ಮಗುವೊಂದನ್ನು ಬದುಕುಳಿಸಿದ್ದಾರೆ. ಈ ಯುವಕರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

-ಮುಸ್ತಾಫಾ ಕುನ್ನಿಭಾವಿ
ಧಾರವಾಡ

8 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments