Thursday, October 6, 2022
Powertv Logo
Home Blog

ಇಂದಿನಿಂದ ಆಫ್ರಿಕಾ ಭೇಟೆಯಾಡಲು ಭಾರತ ಸಜ್ಜು; ಪಂದ್ಯದ ರಿಪೋರ್ಟ್​ ಇಲ್ಲಿದೆ.!

ನವದೆಹಲಿ: ಭಾರತ-ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಇಂದಿನಿಂದ ಆರಂಭವಾಗಲಿದೆ.

ಲಖ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಮೈದಾನದಲ್ಲಿ ಭಾರತೀಯ ಕಾಲಮಾನ ಇಂದು ಮಧ್ಯಾಹ್ನ 1;30ಕ್ಕೆ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಲಿದ್ದು, ಎರಡನೇ ಪಂದ್ಯ ಅಕ್ಟೋಬರ್​​ 9 ರಂದು ರಾಂಚಿಯಲ್ಲಿ ಹಾಗೂ ಮೂರನೇ ಏಕದಿನ ಪಂದ್ಯ ಅ.11 ರಂದು ದೆಹಲಿಯಲ್ಲಿ ನಡೆಯಲಿವೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನ ಶಿಖರ್ ಧವನ್ ನಾಯಕನಾಗಿ ಮುನ್ನಡೆಸಲಿದ್ದಾರೆ. ಶ್ರೇಯಸ್ ಅಯ್ಯರ್ ಅವರಿಗೆ ಉಪನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. ಇನ್ನು ಈ ಪಂದ್ಯಕ್ಕೆ ಮಳೆಯ ಭೀತಿಯ ಕರಿನೆರಳು ಬೀರಿದೆ. ನಿನ್ನಿ ಈ ಮೈದಾನದಲ್ಲಿ ಮಳೆಯಾಗಿದ್ದು, ಗುರುವಾರ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ ಎಂದು ವರಿಯಾಗಿವೆ.

ಧವನ್​ ನಾಯಕನಲ್ಲದೇ ತಂಡದ ಪ್ರಮುಖ ಬ್ಯಾಟ್ಸ್​ಮನ್​ ಆಗಿ ಕಣಕ್ಕಿಳಿಯಲಿದ್ದಾರೆ. ಧವನ್ ಕಳೆದೆರಡು ವರ್ಷಗಳಲ್ಲಿ ಅತ್ಯಂತ ಸ್ಥಿರ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಾ ಬಂದಿರುವ ಆಟಗಾರರ ಪೈಕಿ ಒಬ್ಬರಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಭಾರತ ತಂಡ

ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ (ಉಪನಾಯಕ), ರಜತ್ ಪಾಟಿದಾರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್ , ರವಿ ಬಿಷ್ಣೋಯ್, ಮುಕೇಶ್ ಕುಮಾರ್, ಆವೇಶ್ ಖಾನ್, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.

ಮುಖೇಶ್​​ ಅಂಬಾನಿ ಕುಟುಂಬಕ್ಕೆ ಮತ್ತೆ ಜೀವ ಬೆದರಿಕೆ.!

0

ಮುಂಬೈ: ಇಂದು ಮುಂಬೈನ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಅಪರಿಚಿತ ವ್ಯಕ್ತಿಯೊಬ್ಬ ದೂರವಾಣಿ ಕರೆ ಮೂಲಕ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿವೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ಅವರ ಪತ್ನಿ ನೀತಾ ಅಂಬಾನಿ, ಮಕ್ಕಳಾದ ಆಕಾಶ್ ಅಂಬಾನಿ ಹಾಗೂ ಅನಂತ್ ಅಂಬಾನಿ ಅವರಿಗೆ ದೂರವಾಣಿ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಜೀವ ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ ಪೊಲೀಸರು ಕರೆ ಮಾಡಿದವರನ್ನ ಪರಿಶೀಲನೆ ಮಾಡುತ್ತಿದ್ದು, ಡಿಬಿ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೀಘ್ರದಲ್ಲೇ ಕರೆ ಮಾಡಿದವರನ್ನ ಪತ್ತೆ ಹಚ್ಚುವ ಕಾರ್ಯ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರಿದಿ ತಿಳಿಸಿವೆ.

ಕಳೆದ ಎರಡು ತಿಂಗಳ ಹಿಂದೆ ಇದೆ ರೀತಿಯಲ್ಲಿ ಅಂಬಾನಿ ಕುಟುಂಬಕ್ಕೆ ಅಪರಿಚಿತರು ಕರೆ ಮಾಡಿ ಕೊಲ್ಲುವುದಾಗಿ ಬೆದರಿಕೆವೊಡ್ಡಿದ್ದರು. ಈಗ ಮತ್ತೆ ಜೀವ ಬೆದರಿಕೆ ಹಾಕಲಾಗಿದೆ.

ನಟಿ ಶ್ರೀಲೀಲಾ ತಾಯಿ ಮತ್ತೊಂದು ಕಿರಿಕ್; FIR ದಾಖಲು

0

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ ಅವರ ತಾಯಿ ಮತ್ತೊಂದು ಕಿರಿಕ್ ಮಾಡಿಕೊಂಡ ಹಿನ್ನಲೆಯಲ್ಲಿ ಅವರ ಮೇಲೆ ಎಫ್​ಐಆರ್​ ದಾಖಲಾಗಿದೆ.

ಇತ್ತೀಚಿಗೆ ಬೆಂಗಳೂರಿನ ಅಲೆನ್ಸ್ ವಿವಿಗೆ ಅಕ್ರಮವಾಗಿ ನುಗ್ಗಿ ರೌಡಿಗಳಿಂದ ಧಾಂದಲೆ ಮಾಡಿದ್ದರು. ಅಲ್ಲದೇ, ಇಲ್ಲೊಬ್ಬ ಮಹಿಳೆ ಕಪಾಳ ಮೋಕ್ಷ ಮಾಡಿದ್ದರು. ಇದೆಲ್ಲಾ ಬೆಳವಣಿಗೆ ನಡುವೆ ಗಂಡನೆ ಮನೆಗೆ ಹೋಗಿ ನಟಿ ಶ್ರೀಲಿಲಾ ಅವರ ತಾಯಿ ಕಿರಿಕ್​ ಮಾಡಿಕೊಂಡಿದ್ದಾರೆ.

20 ವರ್ಷದಿಂದ ಗಂಡನಿಂದ ದೂರ ಇರುವ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಅವರು ತಮ್ಮ ಗಂಡನ ಮನೆಯ ಬೀಗ ಮುರಿದು ಅಕ್ರಮವಾಗಿ ಮನೆಯೊಳಗೆ ಪ್ರವೇಶ ಪಡೆದು ದಾಂಧಲೆ ಮಾಡಿದ್ದಾರೆ. ಸ್ವರ್ಣಲತಾ ಹಾಗೂ ಗಂಡನ ಡಿವೋರ್ಸ್ ಕೇಸ್ ಕೋರ್ಟ್ ನಲ್ಲಿ ಇರುವಾಗಲೇ ಮನೆಗೆ ನುಗ್ಗಿ ಧಾಂಧಲೆ ನಡೆಸಿದ್ದಾರೆ.

ಈ ಸಂಬಂಧ ನಟಿ ಶ್ರೀಲಿಲಾ ತಾಯಿ ಸ್ವರ್ಣಲತಾ ವಿರುದ್ಧ ಗಂಡ ಅಕ್ರಮವಾಗಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ಅಡುಗೋಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶಿವಮೊಗ್ಗ ನೂತನ SPಯಾಗಿ ಮಿಥುನ್ ಕುಮಾರ್ ಅಧಿಕಾರ ಸ್ವೀಕಾರ.!

0

ಶಿವಮೊಗ್ಗ : ಶಿವಮೊಗ್ಗ ಎಸ್.ಪಿ. ಲಕ್ಷ್ಮಿಪ್ರಸಾದ್ ವರ್ಗಾವಣೆ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ನೂತನ ಎಸ್.ಪಿ ಮಿಥುನ್ ಕುಮಾರ್ ಅವರು ಇಂದು ಅಧಿಕಾರ ಸ್ವೀಕಾರಿಸಿದರು.

2016 ಬ್ಯಾಚ್ ನ ಕರ್ನಾಟಕ ಕೇಡರ್ ನ ಅಧಿಕಾರಿಯಾಗಿರುವ ಜಿ.ಕೆ. ಮಿಥುನ್ ಕುಮಾರ್, ಈ ಹಿಂದೆ ಬೆಂಗಳೂರಿನಲ್ಲಿ ಸಿಐಡಿ ಎಸ್.ಪಿ.ಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಧಿಕಾರ ಹಸ್ತಾಂತರಿಸುತ್ತಿದ್ದಂತೆ ಎಸ್.ಪಿ. ಡಾ ಬಿ.ಎಂ. ಲಕ್ಷ್ಮೀಪ್ರಸಾದ್ ನಿರ್ಗಮಿತರಾದರು.

2021ರ ಎಪ್ರಿಲ್ ನಿಂದ ಶಿವಮೊಗ್ಗ ಎಸ್.ಪಿ. ಯಾಗಿ ಲಕ್ಷ್ಮೀಪ್ರಸಾದ್ ಕಾರ್ಯನಿರ್ವಹಿಸುತ್ತಿದ್ದರು. ಅ. 3 ರಂದು ಶಿವಮೊಗ್ಗ ಎಸ್.ಪಿ ಲಕ್ಷ್ಮೀಪ್ರಸಾದ್ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಹಿಜಾಬ್, ಕೋಮು ಗಲಾಟೆ, ಕಾನೂನು ಸುವ್ಯವಸ್ಥೆ ಸಮರ್ಥವಾಗಿ ಲಕ್ಷ್ಮೀಪ್ರಸಾದ್ ನಿಭಾಯಿಸಿದ್ದರು. ದೇಶದ ಗಮನ ಸೆಳೆದ ಶಂಕಿತ ಐಸಿಸ್ ಉಗ್ರರ ಪ್ರಕರಣ ಭೇದಿಸುವಲ್ಲಿ ಇವರು ಯಶಸ್ವಿಯಾಗಿದ್ದರು.

KCR ಇನ್ಮುಂದೆ ಭಾರತ್ ರಾಷ್ಟ್ರ ಸಮಿತಿ’ಯಲ್ಲಿ ದರ್ಬಾರ್​; ಹೆಚ್​ಡಿಕೆ ಹಾಜರು.!

0

ತೆಲಂಗಾಣ: ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರು ಇಂದು ಅಧಿಕೃತವಾಗಿ ಭಾರತ್ ರಾಷ್ಟ್ರ ಸಮಿತಿ ಪಕ್ಷವನ್ನ ಸ್ಥಾಪನೆ ಮಾಡಿದರು.

ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಪಕ್ಷ ಎದುರಿಸಲು ಎದುರಿಸಲು ಮುಂಬರುವ ‘ಮಿಷನ್ 2024’ ಚುನಾವಣೆ ಗುರಿಯಾಗಿಸಿಕೊಂಡು ಮೊದಲಿದ್ದ ಟಿಆರ್​ಎಸ್​(ತೆಲಂಗಾಣ ರಾಷ್ಟ್ರ ಸಮಿತಿ) ಪಕ್ಷವನ್ನ “ಭಾರತ್ ರಾಷ್ಟ್ರ ಸಮಿತಿ”ಪಕ್ಷವಾಗಿ ಮರುನಾಮಕರಣವನ್ನು ಇಂದು ಅಧಿಕೃತವಾಗಿ ಮಾಡಲಾಯಿತು.

ಇದಕ್ಕೂ ಮೊದಲು ಟಿಆರ್‌ಎಸ್ ಪಕ್ಷವನ್ನ ಭಾರತ ರಾಷ್ಟ್ರ ಸಮಿತಿಯಾಗಿ ಮರುನಾಮಕರಣ ಮಾಡುವ ನಿರ್ಧಾರವನ್ನು ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಟಿಆರ್‌ಎಸ್ ಮಹಾಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಇಂದು ಬೆಳಿಗ್ಗೆ ನಡೆದ ಸಾಮಾನ್ಯ ಮಂಡಳಿ ಸಭೆಯು ಕೆಸಿಆರ್ ಪಕ್ಷದ ಹೆಸರನ್ನು ತೆಲಂಗಾಣ ರಾಷ್ಟ್ರ ಸಮಿತಿಯಿಂದ ಭಾರತೀಯ ರಾಷ್ಟ್ರ ಸಮಿತಿ ಎಂದು ಬದಲಾಯಿಸುವ ನಿರ್ಣಯವನ್ನು ಅಂಗೀಕರಿಸಿತು. ಇದರಲ್ಲಿ ಜನತಾ ದಳ (ಜಾತ್ಯತೀತ) ನಾಯಕ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು ಭಾಗವಹಿಸಿದ್ದರು.

ಕಟ್ಟಿಗೆ ತರಲು ಹೋಗಿದ್ದ ಮಹಿಳೆ ಶವವಾಗಿ ಪತ್ತೆ.!

0

ಕಾರವಾರ; ಕಟ್ಟಿಗೆ ತರಲು ಹೋಗಿದ್ದ ವೇಳೆ ನಾಪತ್ತೆಯಾಗಿದ್ದ ಮಹಿಳೆ ಓರ್ವಳು ಇದೀಗ ಶವ ಕೊಳೆತ ಸ್ಥಿತಿಯಲ್ಲಿ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಂಗ್ರೆಯಲ್ಲಿ ಪತ್ತೆಯಾಗಿದೆ.

ಮಹಾದೇವಿ ದೇವಾಡಿಗ (57) ಮೃತ ಮಹಿಳೆಯಾಗಿದ್ದು, ಈಕೆ ಸೆಪ್ಟೆಂಬರ್ 17ರಂದು ಕಟ್ಟಿಗೆ ತರಲು ಬೆಂಗ್ರೆಯ ಅರಣ್ಯಕ್ಕೆ ಹೋಗಿದ್ದಳು ಎನ್ನಲಾಗಿದ್ದು, ಆಕೆ ಸಂಜೆ ಆದರು ಮನೆಗೆ ಬಾರದೆ ಇರುವುದರಿಂದ ಮಹಿಳೆಯ ಮನೆಯವರು ನಾಪತ್ತೆ ಆಗಿರುವ ಬಗ್ಗೆ ಸೆಪ್ಟೆಂಬರ್ 17ರಂದು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಳಿಕ ಪತ್ತೆ ಕಾರ್ಯ ನಡೆಸಿದ ಪೊಲೀಸರಿಗೆ ಇಂದು ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಹಿಳೆಗೆ ಬಿಪಿ ಹಾಗೂ ಶುಗರ್ ಖಾಯಿಲೆ ಒಳಗಾಗಿದ್ದಳು ಎನ್ನಲಾಗಿದ್ದು, ಇದರಿಂದಾಗಿ ಆಕೆ ಮೃತಪಟ್ಟಿರುವುದಾಗಿ ಹೇಳಗಾಗಿದೆ‌. ಈ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಅಧಿಕೃತವಾಗಿ ನೂತನ ಪಕ್ಷ ಘೋಷಣೆ ಮಾಡಲಿರುವ ಕೆಸಿಆರ್​

0

ತೆಲಂಗಾಣ:ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಅವರು ಇಂದು ತಮ್ಮ ಭಾರತ ರಾಷ್ಟ್ರ ಸಮಿತಿ ಪಕ್ಷವನ್ನು ಪ್ರಾರಂಭಿಸಲಿದ್ದಾರೆ.

ಪಕ್ಷದ ಪ್ರಾರಂಭಕ್ಕೆ ಮುಹೂರ್ತವನ್ನು ಇಂದು ಮಧ್ಯಾಹ್ನ 1:19 ಕ್ಕೆ ನಿಗದಿಪಡಿಸಲಾಗಿದೆ. ಇದನ್ನು ಭಾರತೀಯ ರಾಷ್ಟ್ರ ಸಮಿತಿ ಎಂದು ಕರೆಯುವ ಸಾಧ್ಯತೆಯಿದೆ ಹೇಳಲಾಗುತ್ತಿದೆ.

ಈ ಸಂಬಂಧವಾಗಿ ನಿನ್ನೆ ರಾತ್ರಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತೆಲಂಗಾಣಕ್ಕೆ ತೆರಳಿದ್ದು, ಇಂದು ನಡೆಯುವ ತೆಲಂಗಾಣದ ಕೆಸಿಆರ್ ಅವರ ನೂತನ ಪಕ್ಷದ ಅನಾವರಣದಲ್ಲಿ ಉಪಸ್ಥಿತರಿರಲಿದ್ದಾರೆ. ನಿನ್ನೆ ಹೈದರಾಬಾದ್‌ನಲ್ಲಿ ನಡೆದ ಟಿಆರ್‌ಎಸ್‌ನ ಸಾಮಾನ್ಯ ಸಭೆಯಲ್ಲಿ ಹೆಡಿಕೆ ತೆಲಂಗಾಣದ ಕೆಸಿಆರ್ ಅವರನ್ನು ಭೇಟಿ ಮಾಡಿದ್ದರು.

ಪೊಲೀಸ್​ ಠಾಣೆಯಲ್ಲಿ ಆಯುಧ ಪೂಜೆ; ಮುಸ್ಲಿಂ PSI ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ

0

ವಿಜಯಪುರ; ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಪೊಲೀಸ್ ಠಾಣೆಯ ನೂತನ ಪಿಎಸ್ಐ ಆರೀಫ ಮುಷಾಪುರಿ ಅವರು ವಿಜಯದಶಮಿಯ ಆಯುಧ ಪೂಜೆ ಹಿನ್ನೆಲೆ ಸ್ವತಃ ತಾವೇ ಶ್ವೇತ ವಸ್ತ್ರಧಾರಿಯಾಗಿ, ಹಣೆಗೆ ಕುಂಕುಮದ ತಿಲಕ ಇಟ್ಟುಕೊಂಡು, ಕುಂಬಳಕಾಯಿ ಒಡೆದು, ನಾಡದೇವಿಗೆ ಮಂಗಳಾರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಶೇಷತೆ ಮೆರೆದಿದ್ದಾರೆ. ಅಲ್ಲದೇ ಕೋಮು ಸೌಹಾರ್ದತೆಯ ಸಂದೇಶವನ್ನೂ ಸಾರಿ ಸಮಾಜದ ಗಮನ ಸೆಳೆದಿದ್ದಾರೆ.

ಬಂದೂಕುಗಳು, ವೈರಲೆಸ್ ಯಂತ್ರಗಳು, ಸಿಸಿ ಕ್ಯಾಮೆರಾ ಸಲಕರಣೆ, ಪೊಲೀಸ್ ವಾಹನಗಳು ಮುಂತಾದವುಗಳನ್ನು ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದ್ದು ಪಿಎಸ್ಐ ಆರೀಫ ಅವರ ಹೆಚ್ಚು ಜನಾಕರ್ಷಕವಾಗಿತ್ತು.

ಇನ್ನೂ ಠಾಣೆಯ ಮುಂದೆ ಸುಂದರವಾದ ರಂಗೋಲಿ ಬಿಡಿಸಿ, ಬಲೂನುಗಳಿಂದ ಅಲಂಕರಿಸಿ ತಳಿರು ತೋರಣ ಕಟ್ಟಿ ದೇವಸ್ಥಾನದಂತೆ ಬಿಂಬಿಸಿ ನೋಡುಗರಿಗೆ ಪೂಜ್ಯನೀಯ, ಗೌರವದ ಭಾವನೆ ಬರುವಂತೆ ಮಾಡಲಾಗಿತ್ತು. ಮುಸ್ಲಿಂ ಪಿಎಸ್ಐ ಒಬ್ಬರ ಈ ವಿಶೇಷ ಕಾಳಜಿ, ಆಚರಣೆ ಸಾಕಷ್ಟು ಗಮನ ಸೆಳೆದು ಇಡೀ ಪಟ್ಟಣದಾದ್ಯಂತ ಚರ್ಚೆಯ ವಿಷಯವಾಗಿತ್ತು.

ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಮವಸ್ತ್ರದಲ್ಲಿ, ಕರ್ತವ್ಯದಲ್ಲಿರದ ಸಿಬ್ಬಂದಿ ಶ್ವೇತವಸ್ತ್ರದಲ್ಲಿ, ಮಹಿಳಾ ಪೊಲೀಸ್, ಪುರುಷ ಪೊಲೀಸರ ಪತ್ನಿಯರು ಇಲಕಲ್ಲ ಸೀರೆ ತೊಟ್ಟು ಪಾಲ್ಗೊಂಡಿದ್ದು ವಿಶೇಷ ಮೆರುಗು ನೀಡಿತ್ತು. ಸಿಪಿಐ ಆನಂದ ವಾಘ್ಮೋಡೆ, ಎಸೈಗಳು ಎಲ್ಲ ರೀತಿಯ ಸಹಕಾರ ನೀಡಿ ಆಯುಧ ಪೂಜೆ ಸಂಪ್ರದಾಯಕ್ಕನುಗುಣವಾಗಿ ನಡೆಯುವಂತೆ ನೋಡಿಕೊಂಡರು.

ನಟಿಯಾಗಿ ಮತ್ತೆ ರಮ್ಯಾ ಎಂಟ್ರಿ; ಅಭಿಮಾನಿಗಳು ದಿಲ್​ಖುಷ್​​

ಬೆಂಗಳೂರು: ಸ್ಯಾಂಡಲ್​ವುಡ್​​ನ ಮೋಹಕ ತಾರೆ ನಟಿ ರಮ್ಯಾ ಅವರು ಕನ್ನಡ ಚಿತ್ರರಂಗಕ್ಕೆ ಮತ್ತೆ ರೀ ಎಂಟ್ರಿ ಕೊಡುತ್ತಿದ್ದಾರೆ. ರಮ್ಯಾ ಅಭಿಮಾನಿಗಳು ಹಲವು ದಿನಗಳಿಂದ ನಟಿಯಾಗಿ ಪರದೆ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದ ಫ್ಯಾನ್ಸ್​​ಗೆ ವಿಜಯದಶಮಿಯಂದು ಅವರು ಸಿಹಿಸುದ್ದಿ ನೀಡಿದ್ದಾರೆ.

ರಮ್ಯಾ ಅವರು ವಿಜಯದಶಮಿ ಹಬ್ಬಕ್ಕೆ ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಶುಭಾಶಯ ಕೋರಿ, ಮೊಟ್ಟ ಮೊದಲ ಬಾರಿಗೆ ಚಿತ್ರ ನಿರ್ಮಾಣ ಹಾಗೂ ಲೀಡ್​​ ರೂಲ್​ನಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಇನ್ನು ಈ ಸಿನಿಮಾವನ್ನ ರಾಜ್​ ಬಿ ಶೆಟ್ಟಿ ನಿರ್ದೇಶಿಸುತ್ತಿದ್ದು, ಆ್ಯಪಲ್ ಬಾಕ್ಸ್​​ ಸ್ಟುಡಿಯೋ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಈ ಸಿನಿಮಾದಲ್ಲಿ ನಟಿಸಲು ನಾನು ಕಾತುರಳಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.

 

ಲೋಕಲ್ ಟ್ರೈನ್​​ನಲ್ಲಿ ಸಾಮಾನ್ಯರಂತೆ​ ನಟ ಸೋನು ಸೂದ್ ಎಂಜಾಯ್​​.!

0

ಮುಂಬೈ: ಬಾಲಿವುಡ್ ನಟ ಸೋನು ಸೂದ್ ಒಂದಿಲ್ಲೊಂದು ಸಹಾಯ ಮಾಡೋ ಮೂಲಕ ಸುದ್ದಿಯಲ್ಲಿರುತ್ತಾರೆ. ಅವರ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದೆ. ಸೋನು ಸೂದ್ ಅವರು ಜನರ ಹೃದಯದಲ್ಲಿ ತಮ್ಮದೇ ಆದ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಅದರಂತೆ ಸೋನು ಸೂದ್​ ಅವರು ಈಗ ಕಾಮಾನ್​ ಮ್ಯಾನ್​ ಆಗಿ ಲೋಕಲ್ ಟ್ರೈನ್​​ನಲ್ಲಿ ತಿರುಗಾಡಿದ್ದಾರೆ.

ಹೌದು. ಈ ಬಗ್ಗೆ ಸೋನು ಸೂದ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ಸೋನು ಸೂದ್​ ಅವರು ಮುಂಬೈನ ಬೋಯ್ಸರ್ ರೈಲ್ವೆ ಸ್ಟೇಷನ್​​ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರಂತೆ ಸೋನು ಅವರು ಸೀಟಿನಲ್ಲಿ ಮಲಗಿರುವುದನ್ನು ಕಾಣಬಹುದು.

ಪ್ಲಾಟ್‌ಫಾರ್ಮ್‌ನಲ್ಲಿ ಸೀಟಿನಿಂದ ಮೇಲೆದ್ದು ಸೋನು ಸೂದ್, ಏಯ್ ಏನು, ಸಹೋದರರೇ ನೀವು ತೊಂದರೆ ಕೊಡುತ್ತೀರಾ ನಿಲ್ದಾಣದಲ್ಲಿಯೂ ಯಾರೂ ನಿಮ್ಮನ್ನು ಶಾಂತಿಯುತವಾಗಿ ಮಲಗಲು ಬಿಡುವುದಿಲ್ಲ ಎಂದು ಸೋನು ಸೂದ್ ಹೇಳಿದರು. ಈಗ ರಾತ್ರಿ 10 ಗಂಟೆಯಾಗಿದೆ ಶೂಟಿಂಗ್ ಮುಗಿಸಿ ವಾಪಸ್ಸಾಗಿದ್ದೇನೆ. ಈಗ ಮನೆಗೆ ಹೋಗಬೇಕು ಎಂದು ಈ ವಿಡಿಯೋದಲ್ಲಿ ಹೇಳಿದರು.

ಹೀಗೆ ಹೇಳಿದ ನಂತರ, ಸೋನು ಸೂದ್ ಮುಂಬೈನ ಚಲಿಸುವ ಲೋಕಲ್ ರೈಲಿನಲ್ಲಿ ಚಲಿಸಿದರು. ಎರಡು ರೈಲ್ವೆ ಒಳಗಡೆ ಎರಡು ಬದಿಯ ಸೀಟ್ ಹಿಡಿದುಕೊಂಡು ಎಂಜಾಯ್​ ಮಾಡಿದರು.  ಪ್ರಯಾಣಿಕರೊಂದಿಗೆ ಸೆಲ್ಫಿ ತೆಗೆದುಕೊಂಡ ಅವರು, ನಂತರ ನಿಲ್ದಾಣದಲ್ಲಿ ಇಳಿದು ನಿಲ್ದಾಣದಲ್ಲಿ ಅಳವಡಿಸಿದ್ದ ಕುಡಿಯುವ ನೀರನ್ನು ಕುಡಿದರು.

ಇನ್ನು ರೈಲ್ವೇ ನಿಲ್ದಾಣದಲ್ಲಿ ಅಳವಡಿಸಿದ್ದ ನೀರನ್ನು ನೀರು ಕುಡಿದ ಸೋನು ಸೂದ್, ಈ ನೀರಿನ ಮುಂದೆ ಯಾವುದೇ ಮಿನರಲ್ ವಾಟರ್ ಹಾಗೂ ಬಿಸ್ಲೇರಿ ನೀರಿಗಿಂತ ಈ ನೀರು ಕಡಿಮೆ ಇಲ್ಲ ಎಂದಿದ್ದಾರೆ.